ಜೀಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್ ಶೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಶೋನಲ್ಲಿ ವಿವಿಧ ಸ್ಪರ್ಧಿಗಳು ತಮ್ಮ ಜೋಡಿಗಳ ಜೊತೆಗೆ ಚೆನ್ನಾಗಿ ಪರ್ಫಾರ್ಮ್ ಮಾಡೋ ಪ್ರಯತ್ನ ಮಾಡುತ್ತಿದ್ದಾರೆ. ಶೋನಲ್ಲಿ ಜಡ್ಜ್ ಗಳಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಇದ್ದಾರೆ. ಶೋ ಶುರುವಾಗಿ ಕೆಲವೇ ವಾರಗಳಲ್ಲಿ ಒಳ್ಳೆಯ ಕ್ರೇಜ್ ಸೃಷ್ಟಿಸಿದೆ. ಭರ್ಜರಿ ಬ್ಯಾಚುಲರ್ಸ್ ಹೊಸ ಸೀಸನ್ ನ ಹೈಲೈಟ್ ಡ್ರೋನ್ ಪ್ರತಾಪ್ ಎಂದರು ತಪ್ಪಲ್ಲ. ಬಿಗ್ ಬಾಸ್ ನಂತರ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಡ್ರೋನ್ ಪ್ರತಾಪ್ ಕಾಣಿಸಿಕೊಂಡರು ಸಹ ಆ ಶೋನಲ್ಲಿ ಹೇಳಿಕೊಳ್ಳುವಂಥ ಯಶಸ್ಸು ಸಿಗಲಿಲ್ಲ. ಆದರೆ ಭರ್ಜರಿ ಬ್ಯಾಚುಲರ್ಸ್ ಶೋ ಇಂದ ಡ್ರೋನ್ ಪ್ರತಾಪ್ ಅವರಿಗೆ ಮತ್ತೆ ಕ್ರೇಜ್ ಶುರುವಾಗಿದೆ. ಈ ವಾರ ಡ್ರೋನ್ ಪ್ರತಾಪ್ ಮಾಡಿರುವ ಕೆಲಸಕ್ಕೆ ರವಿಚಂದ್ರನ್ ಅವರು ಸಹ ಶಾಕ್ ಆಗಿದ್ದಾರೆ..
ಡ್ರೋನ್ ಪ್ರತಾಪ್ ಅವರು ಇದೀಗ ಎಲ್ಲರ ಫೇವರೆಟ್ ಆಗಿದ್ದಾರೆ. ಒಂದು ಕಾಲದಲ್ಲಿ ಇಡೀ ರಾಜ್ಯದ ಜನತೆ ಈತನನ್ನ ಅವಮಾನಿಸಿತ್ತು. ರಾಜ್ಯದ ಜನತೆಗೆ ಮೋಸ ಮಾಡಿಬಿಟ್ಟ ಎಂದು ಪ್ರತಿಯೊಬ್ಬರು ಸಹ ಡ್ರೋನ್ ಪ್ರತಾಪ್ ಗೆ ಚೆನ್ನಾಗಿ ಬೈದಿದ್ದರು. ಆದರೆ ಬಿಗ್ ಬಾಸ್ ಶೋ ಇಂದ ಇವರ ಬಗ್ಗೆ ಇದ್ದ ಅಭಿಪ್ರಾಯ ಬದಲಾಗಿ ಹೋಯಿತು. ನಿಜಕ್ಕೂ ಡ್ರೋನ್ ಪ್ರತಾಪ್ ವ್ಯಕ್ತಿತ್ವ ಹೇಗೆ ಎಂದು ಗೊತ್ತಾಗಿದ್ದು ಬಿಗ್ ಬಾಸ್ ಶೋ ಇಂದ. ಈ ಹುಡುಗ ಎಷ್ಟು ಸಾಧು ಸ್ವಭಾವದ ಹುಡುಗ, ಯಾರ ಮೇಲೂ ಕೋಪ ಮಾಡಿಕೊಳ್ಳೋದಿಲ್ಲ ಎನ್ನುವುದು ಅರ್ಥವಾಗಿತ್ತು. ಬಿಗ್ ಬಾಸ್ ಮನೆಯ ಒಳಗೆ ಕೂಡ ಒಳಗಿದ್ದ ಸ್ಪರ್ಧಿಗಳು ಅವಮಾನ ಮಾಡಿದರು ಸಹ, ಡ್ರೋನ್ ಪ್ರತಾಪ್ ದೃತಿಗೆಡಲಿಲ್ಲ. ತಮ್ಮ ಆಟವನ್ನು ತಾವು ಆಡುತ್ತಾ ಹೋದರು. ಇದರಿಂದ ಅವರಿಗೆ ಒಳ್ಳೆಯ ಜನಪ್ರಿಯತೆ ಸಿಕ್ಕಿತು.

ಜನರ ಸಪೋರ್ಟ್ ಕೂಡ ಹೆಚ್ಚಾಗಿಯೇ ಸಿಕ್ಕಿತು. ಒಳಗೆ ಡ್ರೋನ್ ಪ್ರತಾಪ್ ಉತ್ತಮವಾಗಿ ಪರ್ಫಾರ್ಮ್ ಮಾಡುತ್ತಾ ಹೋದರೆ, ಹೊರಗಿನ ಜನರು ಪ್ರತಾಪ್ ಗೆ ಸಪೋರ್ಟ್ ಮಾಡುತ್ತಾ ಹೋದರು. ಒಳ್ಳೆತನದ ಜೊತೆಗೆ ಬುದ್ಧಿವಂತಿಕೆಯನ್ನು ಸಹ ಉಪಯೋಗಿಸಿ ಎಲ್ಲಾ ಟಾಸ್ಕ್ ಗಳನ್ನು ಆಡುತ್ತಿದ್ದರು ಪ್ರತಾಪ್. ಇದರಿಂದಲೇ ಜನರಿಗೆ ಇವರು ತುಂಬಾ ಇಷ್ಟವಾಗಿತ್ತು. ತಮ್ಮ ಪರಿಶ್ರಮದಿಂದ ಡ್ರೋನ್ ಪ್ರತಾಪ್ ಬಿಗ್ ಬಾಸ್ ಶೋನ ರನ್ನರ್ ಅಪ್ ಆದರು. ಇದರಿಂದ ಜನರಿಗೆ ಸಹ ಬಹಳ ಇಷ್ಟವಾಗಿತ್ತು. ಹೊರಗಡೆ ಬಂದ ನಂತರ ಕೂಡ ಡ್ರೋನ್ ಪ್ರತಾಪ್ ಹಲವು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಇದ್ದಾರೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದ್ದಾರೆ. ಇದರಿಂದ ಜನರು ಡ್ರೋನ್ ಪ್ರತಾಪ್ ರಿಗೆ ಮೆಚ್ಚುಗೆ ಸೂಚಿಸಿದ್ದರು. ಅಂಧ ಗಾಯಕಿ ಮಂಜಮ್ಮ ಕುಟುಂಬಕ್ಕೆ ಸಹ ಸಹಾಯ ಮಾಡಿದ್ದರು..
ಗಿಚ್ಚಿ ಗಿಲಿ ಗಿಲಿ ಶೋ ನಲ್ಲಿ ಕಾಮಿಡಿ ಮಾಡುವ ಪ್ರಯತ್ನ ಅಂದುಕೊಂಡ ಹಾಗೆ ಆಗಲಿಲ್ಲ. ಆದರೆ ಇದೀಗ ಡ್ರೋನ್ ಪ್ರತಾಪ್ ಗೆ ಬಿಗ್ ಬಾಸ್ ನಂತರ ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಒಳ್ಳೆಯ ಹೆಸರು ಮತ್ತು ಜನಪ್ರಿಯತೆ ಎಲ್ಲವೂ ಸಿಕ್ಕಿದೆ. ಈ ಶೋನಲ್ಲಿ ಡ್ರೋನ್ ಪ್ರತಾಪ್ ಅವರಿಗೆ ಮೆಂಟರ್ ಆಗಿ ಸಿಕ್ಕಿರುವುದು ಮಹಾನಟಿ ಶೋ ಖ್ಯಾತಿಯ ಗಗನಾ. ಇವರಿಬ್ಬರ ಜೋಡಿ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟವಾಗಿದೆ. ಕಳೆದ ವಾರ ಗಗನಾ ಗೆ ಡ್ರೋನ್ ಪ್ರತಾಪ್ ಕೊಟ್ಟ ಸರ್ಪ್ರೈಸ್ ಜನರ ಮನಸ್ಸಿಗೆ ಸಂತೋಷ ತಂದಿತ್ತು. ತಾನು ಡ್ರೋನ್ ಪ್ರತಾಪ್, ಗಗನಾ ಏನು ಎಂದು ಕೇಳಿದ್ದಕ್ಕೆ ಹೆಲಿಕಾಪ್ಟರ್ ಗಗನಾ ಎನ್ನುತ್ತಾರೆ. ಗಗನಾ ಆ ರೀತಿ ಹೇಳಿ, ಗಗನಾ ಆಸೆಯನ್ನು ನೆರವೇರಿಸಬೇಕು ಎನ್ನುವ ಕಾರಣಕ್ಕೆ ಡ್ರೋನ್ ಪ್ರತಾಪ್ ಗಗನಾ ಅವರಿಗೆ ಬಿಗ್ ಸರ್ಪ್ರೈಸ್ ಕೊಟ್ಟರು. ಗಗನಾ ಅವರಿಗಾಗಿ ಹೆಲಿಕಾಪ್ಟರ್ ಅನ್ನೇ ತರಿಸಿದರು ಪ್ರತಾಪ್.
ಹೆಲಿಕಾಪ್ಟರ್ ನಲ್ಲಿ ಒಂದು ರೌಂಡ್ ಕರೆದುಕೊಂಡು ಹೋಗಿ, 200 ಅಡಿ ಎತ್ತರಕ್ಕೆ ಹೋಗಿ, ಗಗನಾ ಅವರಿಗೆ ಅರಿಶಿನ ಕುಂಕುಮ ಕೊಟ್ಟಿದ್ದರು. ಈ ಒಂದು ಕ್ಷಣ ಗಗನಾ ಅವರಿಗೆ ಮಾತ್ರವಲ್ಲದೇ ಜಡ್ಜ್ ಗಳು ಹಾಗೂ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಡ್ರೋನ್ ಪ್ರತಾಪ್ ಅವರ ಮೆಂಟರ್ ಆಗಿರುವುದಕ್ಕೆ ನಾನು ಲಕ್ಕಿ ಎಂದು ಹೇಳಿದ್ದರು ಗಗನಾ. ಇನ್ನು ಈ ವಾರ ಗಗನಾ ಅವರಿಗೆ ಏನು ಸರ್ಪ್ರೈಸ್ ಇಲ್ಲ. ಆದರೆ ಈ ವಾರ ವಿಶೇಷವಾದ ರೌಂಡ್ ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿದ್ದು, ಎಲ್ಲಾ ಸ್ಪರ್ಧಿಗಳು ಕೆಲವು ಅದ್ಭುತವಾದ ದೃಶ್ಯಗಳನ್ನು ರೀ ಕ್ರಿಯೇಟ್ ಮಾಡಿದ್ದಾರೆ. ಅದೇ ರೀತಿ ಡ್ರೋನ್ ಪ್ರತಾಪ್ ಮತ್ತು ಗಗನಾ ಇಬ್ಬರು ಕೂಡ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರಾಮಾಚಾರಿ ಸಿನಿಮಾದ ದೃಶ್ಯವನ್ನು ರೀಕ್ರಿಯೇಟ್ ಮಾಡಿದ್ದಾರೆ. ಈ ದೃಶ್ಯದಲ್ಲಿ ಇವರಿಬ್ಬರ ಅಭಿನಯ ರವಿಚಂದ್ರನ್ ಅವರಿಗೆ ಕೂಡ ತುಂಬಾ ಇಷ್ಟವಾಗಿದೆ.
ರಾಮಾಚಾರಿ ಸಿನಿಮಾ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹಾಗೂ ಮಾಲಾಶ್ರೀ ಅವರು ನಟಿಸಿದ ಸಿನಿಮಾ ಇದು. ಅಪ್ಪಟ ಹಳ್ಳಿಸೊಗಡಿನ ಈ ಸಿನಿಮಾ ಇವತ್ತಿಗು ಎವರ್ ಗ್ರೀನ್. ಈ ಸಿನಿಮಾದ ಹಾಡುಗಳು ಹಾಗೂ ದೃಶ್ಯಗಳು ಎಲ್ಲವೂ ಸಹ ಜನರಿಗೆ ತುಂಬಾ ಇಷ್ಟವಾಗಿದೆ. ರಾಮಾಚಾರಿ ಸಿನಿಮಾದ ಐಕಾನಿಕ್ ಸೀನ್ ಗಳಲ್ಲಿ ಒಂದು ರವಿಚಂದ್ರನ್ ಅವರು ಮಾಲಾಶ್ರೀ ಅವರಿಗೆ ತಾಳಿ ಕಟ್ಟುವ ದೃಶ್ಯ. ಈ ಒಂದು ದೃಶ್ಯ ಇಡೀ ಸಿನಿಮಾದ ಹೈಲೈಟ್ ಎಂದು ಹೇಳಿದರು ಖಂಡಿತ ತಪ್ಪಲ್ಲ. ಈ ಸೂಪರ್ ದೃಶ್ಯವನ್ನು ಡ್ರೋನ್ ಪ್ರತಾಪ್ ಹಾಗೂ ಗಗನಾ ರೀಕ್ರಿಯೇಟ್ ಮಾಡಿದ್ದಾರೆ. ರವಿಚಂದ್ರನ್ ಅವರ ಹಾಗೆಯೇ ಬಹಳ ಮುಗ್ಧನ ಹಾಗೆ ಡ್ರೋನ್ ಪ್ರತಾಪ್ ಕಾಣಿಸಿಕೊಂಡಿದ್ದು, ಈ ದೃಶ್ಯದ ಒಂದು ಪ್ರೊಮೋವನ್ನ ಜೀಕನ್ನಡ ವಾಹಿನಿ ಶೇರ್ ಮಾಡಿಕೊಂಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಈ ವಿಡಿಯೋ ವೈರಲ್ ಆಗುವುದಕ್ಕೆ ಶುರುವಾಗಿದೆ. ಡ್ರೋನ್ ಪ್ರತಾಪ್ ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ. ಇನ್ನು ರವಿಚಂದ್ರನ್ ಅವರು ಮತ್ತು ರಚಿತಾ ರಾಮ್ ಅವರು ಇಬ್ಬರು ಸಹ ಡ್ರೋನ್ ಪ್ರತಾಪ್ ಆಕ್ಟಿಂಗ್ ನೋಡಿ ಮೆಚ್ಚಿಕೊಂಡಿದ್ದು, ಈ ಸಂಚಿಕೆ ವಾಹಿನಿಯಲ್ಲಿ ಪ್ರಸಾರವಾದ ನಂತರ ಜನರಿಗೆ ಇನ್ನು ಹೆಚ್ಚಿಗೆ ಇಷ್ಟ ಆಗುವುದರಲ್ಲಿ ಸಂಶಯವಿಲ್ಲ. ಡ್ರೋನ್ ಪ್ರತಾಪ್ ಅವರು ಈಗ ಜನರಿಗೆ ಹೆಚ್ಚು ಇಷ್ಟ ಆಗುವುದಕ್ಕೆ ಶುರುವಾಗಿದ್ದು, ಜನರಿಗೆ ಕೂಡ ಪ್ರತಾಪ್ ಗಗನ ಜೋಡಿ ಮೆಚ್ಚುಗೆಯಾಗಿದೆ. ಈ ಸೀಸನ್ ನಲ್ಲಿ ಡ್ರೋನ್ ಪ್ರತಾಪ್ ಅವರೇ ಗೆಲ್ಲಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಎಲ್ಲರೂ ಅಂದುಕೊಂಡ ಹಾಗೆ ಇದು ನಡೆಯುತ್ತಾ ಎಂದು ಕಾದು ನೋಡಬೇಕಿದೆ.