ಸೋನು ಶ್ರೀನಿವಾಸ್ ಗೌಡ ಒಂದಲ್ಲಾ ಒಂದು ವಿಷಯದಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಇವರ ಬಗ್ಗೆ ಒಂದಲ್ಲಾ ಒಂದು ಚರ್ಚೆಗಳು ಆಗುತ್ತಲೇ ಇರುತ್ತದೆ. ಸೋನು ಶ್ರೀನಿವಾಸ್ ಗೌಡ ಅವರು ಇನ್ಸ್ಟಾಗ್ರಾಮ್ ಹಾಗೂ ಬೇರೆ ಎಲ್ಲಾ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್, ರೀಲ್ಸ್, ಫೋಟೋಸ್ ಇದೆಲ್ಲವನ್ನು ಕೂಡ ಶೇರ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಇವರು ಸೀರೆ ಧರಿಸಿ ಹೊಸದಾಗಿ ಫೋಟೋಶೂಟ್ ಮಾಡಿಸಿ, ಅವುಗಳನ್ನು ಶೇರ್ ಮಾಡಿದ್ದು, ಆ ಫೋಟೋಸ್ ಎಲ್ಲವೂ ಸಿಕ್ಕಾಪಟ್ಟೆ ವೈರಲ್ ಆಗಿದೆ, ಜೊತೆಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಹೌದು, ಸೋನು ಶ್ರೀನಿವಾಸ್ ಗೌಡ ಹಲವು ಸಾರಿ ಮಾಡರ್ನ್ ಡ್ರೆಸ್ ಗಳಲ್ಲ8 ಫೋಟೋಸ್ ಅಪ್ಲೋಡ್ ಮಾಡಿರುವುದು ಕಾಮನ್, ಆದರೆ ಸೀರೆಯಲ್ಲಿ ಪೋಸ್ಟ್ ಮಾಡಿರುವುದು ಅಪರೂಪ. ಆದರೆ ಸೋನು ಅವರಿಗೆ ಸೀರೆ ಅಂದ್ರೆ ತುಂಬಾ ಇಷ್ಟ ಅಂತೆ. ಸೀರೆಯನ್ನ ತುಂಬಾ ಇಷ್ಟಪಟ್ಟು ಉಟ್ಟುಕೊಳ್ಳುತ್ತಾರಂತೆ. ಇತ್ತೀಚೆಗೆ ಸೋನು ಸೀರೆ ಧರಿಸಿ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಅವುಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಸ್ ಗೆ ಕ್ಯಾಪ್ಶನ್ ಸಹ ವಿಭಿನ್ನವಾಗಿ ಕೊಟ್ಟಿದ್ದು, ಈ ಫೋಟೋಗಳು ನಿಮಗೆ ಇಷ್ಟ ಆಯ್ತಾ ಎಂದು ನೆಟ್ಟಿಗರನ್ನು ಪ್ರಶ್ನೆ ಕೇಳಿ, ಕ್ಯಾಪ್ಶನ್ ಬರೆದಿದ್ದಾರೆ ಸೋನು ಶ್ರೀನಿವಾಸ್ ಗೌಡ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಸೀರೆಯನ್ನು ಸುಮ್ಮನೆ ಹಾಗೆ ಧರಿಸಿಲ್ಲ, ಸೀರೆಯನ್ನು ಸಹ ಟ್ರೆಂಡಿ ಆಗಿ, ಗ್ಲಾಮರಸ್ ಆಗಿ ಧರಿಸಿದ್ದಾರೆ. ಅಷ್ಟೇ ಹಾಟ್ ಆಗಿ ಫೋಟೋಸ್ ಗಳಿಗೆ ಪೋಸ್ ನೀಡಿದ್ದಾರೆ. ಇನ್ನು ಈ ಫೋಟೋಸ್ ನೋಡಿದ ನೆಟ್ಟಿಗರು, ಕೆಲವರು ಪಾಸಿಟಿವ್ ಆಗಿ ಕಾಮೆಂಟ್ಸ್ ಬರೆಯುತ್ತಿದ್ದರೆ, ಇನ್ನು ಕೆಲವರು ನೆಗಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ಸೋನು ಅವರ ಫೋಟೋಸ್ ವೈರಲ್ ಆಗಿರುವುದಂತೂ ನಿಜ. ಈ ರೀತಿಯಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಸೋನು ಶ್ರೀನಿವಾಸ್ ಗೌಡ ಅವರ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಈಗ ಸೀರೆ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ ಸೋನು, ಇತ್ತೀಚೆಗೆ ಚೆನ್ನಾಗಿ ಪೋಸ್ಟ್ ಕೂಡ ಮಾಡುತ್ತಿದ್ದಾರೆ.
ಇನ್ನು ಸೋನು ಶ್ರೀನಿವಾಸ್ ಗೌಡ ಟಿಕ್ ಟಾಕ್ ಇಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಇವರ ಟಿಕ್ ಟಾಕ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಬಳಿಕ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ವೈರಲ್ ಆಗಿದ್ದರು, ಇವರು ಅನೇಕ ಸಾರಿ ಟ್ರೋಲ್ ಕೂಡ ಆಗಿದ್ದಿದೆ. ಇನ್ನು ಸೋಶಿಯಲ್ ಮೀಡಿಯಾ ಇಂದ ಫೇಮಸ್ ಆಗಿಯೇ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಗೂ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್ ನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು ಸೋನು, ಆದರೆ ಇವರು ಟಿವಿ ಸೀಸನ್ ಗೆ ಬರಲಿಲ್ಲ. ಓಟಿಟಿ ಸೀಸನ್ ನಲ್ಲಿ ಫಿನಲಿಸ್ಟ್ ಆಗಿ ಎಲಿಮಿನೇಟ್ ಆಗಿದ್ದರು.
ಹೀಗೆ ಸೋನು ಶ್ರೀನಿವಾಸ್ ಅವರಿಗೆ ಬಿಗ್ ಬಾಸ್ ಇಂದ ಜನಪ್ರಿಯತೆ ಹೆಚ್ಚಾಯಿತು. ಬಳಿಕ ಕೆಲವು ಕಾರಣಕ್ಕೆ ಟ್ರೋಲ್ ಆಗಿದ್ದರು ಸಹ, ಕಷ್ಟದಲ್ಲಿರುವ ಒಂದು ಮಗುವನ್ನು ದತ್ತು ಪಡೆದು, ಸಮಾಜಕ್ಕೆ ಮಾದರಿ ಆಗಿದ್ದರು. ಆ ಮಗುವನ್ನು ಸಹ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದು, ಒಂದಲ್ಲಾ ಒಂದು ವಿಷಯವನ್ನು ಶೇರ್ ಮಾಡುತ್ತಾರೆ. ಪೋಸ್ಟ್, ರೀಲ್ಸ್ ಶೇರ್ ಮಾಡುವ ಮೂಲಕ ಜನರಿಗೆ ಮನರಂಜನೆಯನ್ನು ಸಹ ನೀಡುತ್ತಾ ಇರುತ್ತಾರೆ.