ನಟ ಡಾಲಿ ಧನಂಜಯ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನಮಾನ ಗಳಿಸಿಕೊಂಡಿದ್ದಾರೆ. ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಟಗರು ಸಿನಿಮಾದ ಡಾಲಿ ಪಾತ್ರ ಇವರಿಗೆ ದೊಡ್ಡ ಹೆಸರು ಮತ್ತು ಜನಪ್ರಿಯತೆ ಎರಡನ್ನು ತಂದುಕೊಟ್ಟಿತು. ಇದೀಗ ಇವರು ವೈಯಕ್ತಿಕ ಜೀವನದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮದುವೆಗೆ ಸಿದ್ಧವಾಗಿರುವ ಡಾಲಿ ಧನಂಜಯ್ ಅವರು ತಮ್ಮ ಭಾವಿ ಪತ್ನಿಯನ್ನು ಕರ್ನಾಟಕದ ಜನತೆಗೆ ಪರಿಚಯಿಸಿದ್ದಾರೆ.
ಇಂದು ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬ ಕೂಡ ನಡೆಯುತ್ತಿದೆ. ಈ ಸಂತೋಷದ ಸಮಯದಲ್ಲಿ ನಟ ಡಾಲಿ ಧನಂಜಯ್ ಅವರು ತಾವು ಮದುವೆ ಆಗುತ್ತಿರುವ ಹುಡುಗಿಯನ್ನು ಕನ್ನಡ ಜನತೆಗೆ ಪರಿಚಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಜೊತೆಗಿರುವ ವಿಡಿಯೋ ಒಂದನ್ನು ಶೇರ್ ಮಾಡಿ, ತಮ್ಮ ಮದುವೆಗೆ ಎಲ್ಲರೂ ಬರಬೇಕು ಎಂದು ಕರ್ನಾಟಕದ ಜನತೆಯನ್ನು ಆಹ್ವಾನಿಸಿದ್ದಾರೆ.

“ಪ್ರೀತಿಯ ಕರುನಾಡಿಗೆ, ನನ್ನಿಚ್ಚಿಯಂತೆ, ಕುಟುಂಬ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸಧ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆ ಇಡುತ್ತಿದ್ದೇನೆ. ಪ್ರೀತಿ ಆಶೀರ್ವಾದವಿರಲಿ. ಮದುವೆಗೆ ಕರೀತಿನಿ, ಎಲ್ಲಾ ಬಂದು ಊಟ ಮಾಡಿಕೊಂಡು ಹೋಗ್ಬೇಕು. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು.. ನಾನು ಧನ್ಯ.. ಇಂತಿ ನಿಮ್ಮವ, ಧನಂಜಯ..” ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ ಧನಂಜಯ್.
ಇಷ್ಟು ವರ್ಷ ಸಿಂಗಲ್ ಆಗಿದ್ದ ಧನಂಜಯ್ ಅವರಿಗೆ ಬಹಳಷ್ಟು ಜನರು ಇದೇ ಪ್ರಶ್ನೆಯನ್ನು ಕೇಳುತ್ತಲೇ ಇದ್ದರು. ಮದುವೆ ಯಾವಾಗ, ಹುಡುಗಿ ಯಾರು ಎಂದು.. ಕೊನೆಗೂ ಧನಂಜಯ್ ಅವರ ಮದುವೆ ಸಮಯ ಬಂದಿದೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಡಾಲಿ. ಈ ಸುದ್ದು ಕೇಳಿ ಅವರಿಗೆ ಶುಭಾಷಯಗಳ ಸುರಿಮಳೆಯೇ ಹರಿದು ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ.

ಇನ್ನು ಧನಂಜಯ್ ಅವರು ಮದುವೆ ಆಗುತ್ತಿರುವ ಹುಡುಗಿಯ ಬಗ್ಗೆ ಹೇಳುವುದಾದರೆ, ಇವರ ಹೆಸರು ಧನ್ಯತಾ ಗೌರಕ್ಲರ್, ವೃತ್ತಿಯಲ್ಲಿ ವೈದ್ಯೆ ಆಗಿದ್ದಾರೆ. ಗೈನಕಾಲಜಿಸ್ಟ್ ಹಾಗೂ ಐವಿಎಫ್ ಸ್ಪೆಷಲಿಸ್ಟ್ ಆಗಿದ್ದಾರೆ ಧನ್ಯಾ. ಇವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಅನೇಕ ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಧನಂಜಯ್ ಅವರಿಗೆ ಒಳ್ಳೆಯ ಜೋಡಿ ಆಗಿದ್ದಾರೆ ಧನ್ಯಾ.