ಚಿಕ್ಕಬಳ್ಳಾಪುರ ರಾಜಕೀಯದಲ್ಲಿ ಹೊಸ ವಿವಾದ! ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ಕಾಂಗ್ರೆಸ್ನಿಂದ ಎರಡು ಬಾರಿ, ಬಿಜೆಪಿ ಪಕ್ಷದಿಂದ ಒಮ್ಮೆ ಶಾಸಕರಾಗಿ, ನಂತರ ಸಂಸದರಾಗಿದ್ದಾರೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರ ರಾಜಕೀಯ ಹಸ್ತಕ್ಷೇಪ ಹಾಗೂ ವರ್ತನೆಯೇ ಅವರ ಸೋಲಿಗೆ ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು. ಸೋಲಿನ ಬಳಿಕ, ಅವರು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಪಡೆದು ಗೆಲುವು ಸಾಧಿಸಿದರು. ಆದರೆ ಇದೀಗ, ಚಿಕ್ಕಬಳ್ಳಾಪುರ ರಾಜಕೀಯದಲ್ಲಿ ಮತ್ತೆ ತಾಂಡವ ನಡೆಸುತ್ತಿದ್ದು, ಅವರ ಸೇಡಿನ ರಾಜಕಾರಣ ಹಾಗೂ ಬಿಜೆಪಿ ಪಕ್ಷದಲ್ಲಿ ಮೂಲೆಗುಂಪಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಜಿಲ್ಲೆಯಲ್ಲಿನ ಬಿಜೆಪಿ ಅಧ್ಯಕ್ಷರ ನೇಮಕಾತಿ ವಿವಾದ ಇದಕ್ಕೆ ಮತ್ತಷ್ಟು ಉತ್ತೇಜನ ನೀಡಿದೆ.

ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಸಂದೀಪ್ ರೆಡ್ಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು.. ಆದ್ರೆ ಸಂದೀಪ್ ರೆಡ್ಡಿ ಜಿಲ್ಲಾಧ್ಯಕ್ಷರಾಗೋದು ಸುಧಾಕರ್ ಅವರಿಗೆ ಇಷ್ಟವೇ ಇರಲಿಲ್ಲ.. ಹೀಗಾಗಿ ಸಂದೀಪ್ ರೆಡ್ಡಿ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಸುಧಾಕರ್ ತಿರುಗಿ ಬಿದ್ದಿದ್ದರು.. ಸುದ್ದಿಗೋಷ್ಠಿ ಕರೆದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅದೂ ಕೂಡಾ ವಿಜಯೇಂದ್ರ ವಿರುದ್ಧವೇ ಮಾತನಾಡಿದ್ದರು.. ಸಿದ್ದರಾಮಯ್ಯ ಅವರು ಬಿಜೆಪಿಗೆ ಹೋಗಬೇಡ, ಅಲ್ಲಿ ಬಳಸಿಕೊಂಡು ಮೂಲೆಗುಂಪು ಮಾಡುತ್ತಾರೆ ಎಂದು ಹೇಳಿದ್ದರು. ಆದರೂ ನಾನು ಬಿಜೆಪಿಗೆ ಹೋದೆ. ಯಡಿಯೂರಪ್ಪ ಅವರನ್ನು ಸಿಎಂ ಮಾಡಿದೆವು. ಆದ್ರೆ ಈಗ ನಮ್ಮನ್ನೇ ಮೂಲೆಗುಂಪು ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದರು. ಹೀಗಿರುವಾಗಲೇ ಸುಧಾಕರ್ ಅವರು ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡಿ ಸಂದೀಪ್ ರೆಡ್ಡಿ ನೇಮಕವನ್ನು ತಡೆಹಿಡಿಯುವಂತೆ ಮಾಡಿದ್ದಾರೆ.. ಹೈಕಮಾಂಡ್ ಮಟ್ಟದಲ್ಲೇನೋ ಸುಧಾಕರ್ ಅವರ ಆಟ ನಡೆದಿದೆ.. ಆದ್ರೆ ಸ್ಥಳೀಯವಾಗಿ ಸುಧಾಕರ್ ಅವರು ಮತ್ತೆ ಮುಖಂಡರ ವಿರೋಧ ಕಟ್ಟುಕೊಳ್ಳುತ್ತಿರುವಂತೆ ಕಾಣುತ್ತಿದೆ.. ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಯುವ ಬಿಜೆಪಿ ಮುಖಂಡರು ಸುಧಾಕರ್ ನಡೆಯನ್ನು ವಿರೋಧ ಮಾಡಿದ್ದಾರೆ.. ಬಾಗೇಪಲ್ಲಿಯ ಗೂಳೂರು ಲಕ್ಷ್ಮೀನಾರಾಯಣ ಸೇರಿದಂತೆ ಹಲವರು ಫೇಸ್ಬುಕ್ ಪೇಜ್ಗಳಲ್ಲಿ ಸುಧಾಕರ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಸುಧಾಕರ್ ಅವರಿಂದಲೇ ಬಿಜೆಪಿ ಪಕ್ಷ ಚಿಕ್ಕಬಳ್ಳಾಪುರದಲ್ಲಿ ಹಾಳಾಗುತ್ತಿದೆ ಎಂಬ ದಾಟಿಯಲ್ಲಿ ಮಾತನಾಡಿದ್ದಾರೆ..
ಇನ್ನು ಸಂದೀಪ್ ರೆಡ್ಡಿ ಕೂಡಾ ಇತ್ತೀಚಿನ ದಿನಗಳಲ್ಲಿ ಚಿಕ್ಕಬಳ್ಳಾಪುರದಲ್ಲಿ ಸಮಾಜ ಸೇವೆಯ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ.. ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.. ಅವರಿಗೆ ಆರ್ಎಸ್ಎಸ್ ನಂಟಿದೆ.. ಒಂದಷ್ಟು ಯುವ ಸಮೂಹವನ್ನು ಸಂಘಟಿಸಿದ್ದಾರೆ.. ಅವರದೇ ಆದ ಬೆಂಬಲಿಗರ ಪಡೆ ಇದೆ.. ಹೀಗಾಗಿ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವೇಳೆ ಹೆಚ್ಚಿನ ಮುಖಂಡರು ಅವರ ಪರವಾಗಿ ಒಲವು ತೋರಿಸಿದ್ದರು.. ಇದೇ ಕಾರಣಕ್ಕೆ ಸಂದೀಪ್ ರೆಡ್ಡಿಯವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿತ್ತು ಎನ್ನಲಾಗಿದೆ.. ಆದ್ರೆ ವಿಜಯೇಂದ್ರ ಅವರೇ ಸಂದೀಪ್ ರೆಡ್ಡಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದಾರೆ.. ನಮ್ಮ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡಿಲ್ಲ ಅಂತ ಸುಧಾಕರ್ ಆರೋಪ ಮಾಡಿದ್ದರು.. ಇನ್ನು ಜಿಲ್ಲಾಧ್ಯಕ್ಷರ ನೇಮಕಕ್ಕೆ ತಡೆ ತರುತ್ತಿದ್ದಂತೆ ಸಂದೀಪ್ ರೆಡ್ಡಿಯವರು ಸುಧಾಕರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.. ಸುಧಾಕರ್ ಅವರು ಕೊವಿಡ್ ಸಮಯದಲ್ಲಿ ಮಾಡಿದ ಹಗರಣ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಗುಡುಗಿಸಿದ್ದಾರೆ.. ಬಿಜೆಪಿ ಪಕ್ಷದಲ್ಲಿ ಬಣ ರಾಜಕೀಯ ಹೆಚ್ಚಾಗಿದೆ ಅನ್ನೋದಕ್ಕೆ ಇದೇ ಸಾಕ್ಷಿಯಾಗಿದೆ..

ಹಾಗೆ ನೋಡಿದರೆ ಸುಧಾಕರ್ ಅವರು ಒಳ್ಳೆಯ ಕೆಲಸಗಾರ.. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಕೇಂದ್ರವಾಗಿ ಎರಡೂವರೆ ದಶಕ ಕಳೆದರೂ ಯಾವುದೇ ಅಭಿವೃದ್ಧಿ ಕಂಡಿರಲಿಲ್ಲ.. ಆದ್ರೆ ಸುಧಾಕರ್ ಶಾಸಕರಾದ ಮೇಲೆ ಹಲವಾರು ಅಭಿವೃದ್ಧಿ ಕೆಲಸಗಳು ನಡೆದವು.. ಚಿಕ್ಕಬಳ್ಳಾಪುರ ನಗರ ಈಗಹ ಸಾಕಷ್ಟು ಅಭಿವೃದ್ಧಿ ಕಂಡಿದೆ.. ಮೂಲಭೂತ ಸೌಕರ್ಯಗಳು ಚೆನ್ನಾಗಿ ಆಗಿವೆ.. ಸರ್ಕಾರಿ ಕಚೇರಿಗಳು ತಲೆ ಎತ್ತಿವೆ.. ಕಾಲೇಜುಗಳು, ಬಸ್ ಸ್ಟ್ಯಾಂಡ್ ಎಲ್ಲಾ ಹೊಸದಾಗಿ ಆಗಿವೆ.. ಎಚ್ಎನ್ ವ್ಯಾಲಿ ನೀರು ತಂದು ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.. ಹೀಗಾಗಿ ನೂರಾರು ಕೋಟಿ ರೂಪಾಯಿ ಕೆಲಸಗಳನ್ನು ಮಾಡಿಸಿದ್ದಾರೆ.. ಹೀಗಾಗಿ ಸುಧಾಕರ್ಗೆ ಒಳ್ಳೆಯ ವರ್ಚಸ್ಸು ಇದೆ.. ಆದ್ರೆ ಅವರ ವರ್ತನೆ ಸರಿಯಿಲ್ಲ, ಸೇಡಿನ ರಾಜಕೀಯ ಮಾಡುತ್ತಾರೆ ಎಂಬ ಅಪವಾದವೂ ಅವರ ವಿರುದ್ಧ ಇದೆ. ಈ ಕಾರಣಕ್ಕಾಗಿಯೇ ಸುಧಾಕರ್ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಮಾನ್ಯ ಯುವಕನ ವಿರುದ್ಧ ಸೋಲಿಸಲಾಗಿತ್ತು.. ಮತ್ತೊಂದು ಚಾನ್ಸ್ ಎನ್ನುವ ರೀತಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸುಧಾಕರ್ ಅವರನ್ನು ಗೆಲ್ಲಿಸಲಾಗಿತ್ತು.. ಅಭಿವೃದ್ಧಿ ಕೆಲಸಗಳ ವಿಚಾರದಲ್ಲಿ ಸುಧಾಕರ್ ಈಗಲೂ ಮುಂದಿದ್ದಾರೆ.. ಆದ್ರೆ ವಿವಾದಗಳಿಂದಾಗಿ ಮತ್ತೆ ಅವರ ವಿರುದ್ಧ ಅಸಮಾಧಾನಗಳು ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ..

ಸಂದೀಪ್ ರೆಡ್ಡಿ ಜಿಲ್ಲಾಧ್ಯಕ್ಷರಾಗೋದು ಬಿಜೆಪಿಯ ಬಹುತೇಕ ಸ್ಥಳೀಯ ನಾಯಕರಿಗೆ ಇಷ್ಟವಿತ್ತು.. ಆದ್ರೆ ಸುಧಾಕರ್ ಅವರು ಮಾತ್ರ ಸಂದೀಪ್ ರೆಡ್ಡಿ ಆಯ್ಕೆ ವಿರೋಧಿಸಿ ತಡೆ ತರಲು ಕಾರಣರಾಗಿದ್ದಾರೆ.. ಹೀಗಿರುವಾಗಲೇ ಸ್ಥಳೀಯ ಹಲವಾರು ಮುಖಂಡರು ಸಂದೀಪ್ ರೆಡ್ಡಿ ಪರವಾಗಿ ಧ್ವನಿ ಎತ್ತಿದ್ದಾರೆ.. ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕೂಡಾ ಸಂದೀಪ್ ರೆಡ್ಡಿ ಪರವಾಗಿ ಮಾತನಾಡಿದ್ದಾರೆ.. ಇತ್ತ ಸುಧಾಕರ್ ಕೂಡಾ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.. ಇಷ್ಟು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರುತ್ತಿದ್ದ ಸುಧಾಕರ್ ಈಗ ಕಾಂಗ್ರೆಸ್ ನಾಯಕರ ಪರವಾಗಿ ಮಾತನಾಡುತ್ತಿದ್ದಾರೆ.. ಸಿದ್ದರಾಮಯ್ಯ ಅವರ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ.. ಇನ್ನು ಸಚಿವರಾದ ಸುಧಾಕರರೆಡ್ಡಿ ಜೊತೆ ಅವರು ಜಗಳ ಮಾಡಿಕೊಂಡಿದ್ದರು.. ಇದೀಗ ಅವರ ಜೊತೆಯೇ ವೇದಿಕೆ ಹಂಚಿಕೊಂಡು ಅವರ ಪರವಾದ ಮಾತುಗಳನ್ನು ಆಡುತ್ತಿದ್ದಾರೆ.. ಇದನ್ನು ನೋಡಿದರೆ ಸುಧಾಕರ್ ಅವರು ಮತ್ತೆ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಂತೆ ಕಾಣುತ್ತಿದೆ.. ಆದ್ರೆ ಕಾಂಗ್ರೆಸ್ ಪಕ್ಷ ಸುಧಾಕರ್ ಅವರನ್ನು ಪಕ್ಷಕ್ಕೆ ವಾಪಸ್ ಬರಮಾಡಿಕೊಳ್ಳುತ್ತಾ ಅನ್ನೋದೇ ಪ್ರಶ್ನೆ.