ಸತ್ಯ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಬಹಳ ಫೇಮಸ್ ಆದವರು ನಟಿ ಗೌತಮಿ ಜಾಧವ್. ಇವರು ಮೊದಲಿಗೆ ಹಲವು ಧಾರಾವಾಹಿಗಳು ಮತ್ತು ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು ಸಹ, ಗೌತಮಿ ಅವರಿಗೆ ಒಳ್ಳೆಯ ಹೆಸರು ಮತ್ತು ಜನಪ್ರಿಯತೆ ಹಾಗೂ ಹೆಚ್ಚು ಜನರ ಪ್ರೀತಿ ಸಿಕ್ಕಿದ್ದು, ಸತ್ಯ ಧಾರಾವಾಹಿಯ ಮೂಲಕ. ಸತ್ಯ ಧಾರಾವಾಹಿ ಮುಗಿದ ಮೇಲೆ ಗೌತಮಿ ಅವರು ಇನ್ಯಾವ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಶುರುವಾಗಿತ್ತು. ಆದರೆ ಬಿಗ್ ಬಾಸ್ ಗೆ ಬರುವ ಮೂಲಕ ಗೌತಮಿ ಹೊಸ ಅಧ್ಯಾಯ ಶುರು ಮಾಡಿದರು. ಗೌತಮಿ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ, ಆದರೆ ಇವರ ಪತಿ ಅಭಿಷೇಕ್ ಯಾರು ಗೊತ್ತಾ?

ಗೌತಮಿ ಅವರು ಮೂಲತಃ ಮರಾಠಿ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಆದರೂ ಕನ್ನಡ ಭಾಷೆಯನ್ನು ಅದ್ಭುತವಾಗಿ ಮಾತನಾಡುತ್ತಾರೆ. ಗೌತಮಿ ಜಾಧವ್ ಅವರು ಮನೆಯಲ್ಲಿ ಮಾತಾಡೋದು ಮರಾಠಿ ಭಾಷೆಯನ್ನೇ. ಸತ್ಯ ಧಾರಾವಾಹಿಗಿಂತ ಮೊದಲು ಗೌತಮಿ ಅವರು ಕಿನಾರೆ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಾಗಪಂಚಮಿ ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ಸಹ ನಟಿಸಿದ್ದಾರೆ. ಪ್ರಸ್ತುತ ಬಿಗ್ ನಾಸ್ ಮನೆಯಲ್ಲಿ ಗೌತಮಿ ಅವರ ಹವಾ ಜೋರಾಗಿದೆ. ಮಂಜು ಅವರ ಜೊತೆಗೆ ಫ್ರೆಂಡ್ಶಿಪ್ ಇಂದ, ತಮ್ಮ ಆಟದ ಶೈಲಿಯಿಂದ ಗೌತಮಿ ಅವರು ಗುರುತಿಸಿಕೊಂಡಿದ್ದಾರೆ..
ಈ ವಾರ ಇರುವ ಫ್ಯಾಮಿಲಿ ರೌಂಡ್ ನಲ್ಲಿ ಗೌತಮಿ ಜಾಧವ್ ಅವರಿಗಾಗಿ ಅವರ ಪತಿ ಅಭಿಷೇಕ್ ಕಾಸರಗೋಡ್ ಅವರು ಬಂದಿದ್ದರು. ಅಭಿಷೇಕ್ ಅವರು ಯಾರು ಎಂದು ಹಲವರಿಗೆ ಗೊತ್ತಿಲ್ಲ, ಇವರು ಕನ್ನಡದ ಖ್ಯಾತ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡ್ ಅವರ ಮಗ. ಅಭಿಷೇಕ್ ಅವರು ಕನ್ನಡ ಚಿತ್ರರಂಗದ ಖ್ಯಾತ ಛಾಯಾಗ್ರಾಹಕರಲ್ಲಿ ಒಬ್ಬರು. ಛಾಯಾಗ್ರಹಣ ಓದಿರುವ ಇವರು ಹಲವು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದಾರೆ. ಈಗ ಛಾಯಾಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ. ಆಪರೇಷನ್ ಅಲಮೇಲಮ್ಮ, ಪೆಪೇ, ಕಿನಾರೆ, ಅನಂತು ವರ್ಸಸ್ ನುಸ್ರತ್, ಕೃಷ್ಣ ಟಾಕೀಸ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಛಾಯಾಗ್ರಹಕರಾಗಿ ಕೆಲಸ ಮಾಡಿದ್ದಾರೆ..

ಅಭಿಶೇಕ್ ಹಾಗೂ ಗೌತಮಿ ಅವರದ್ದು ಲವ್ ಮ್ಯಾರೇಜ್ ಎಂದು ತಿಳಿದುಬಂದಿದೆ. ಕಿನಾರೆ ಸಿನಿಮಾದ ನಾಯಕಿ ಆಗಿದ್ದವರು ಗೌತಮಿ, ಇದೆ ಸಿನಿಮಾಗೆ ಕೆಲಸ ಮಾಡಿದವರು ಅಭಿಷೇಕ್. ಇವರಿಬ್ಬರದ್ದು ಆಗಿನಿಂದ ಲವ್ ಶುರುವಾಗಿತ್ತು. 3 ವರ್ಷಗಳ ಕಾಲ ಪ್ರೀತಿ ಮಾಡಿದ ಈ ಜೋಡಿ, 2019ರ ಡಿಸೆಂಬರ್ 31ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಮದುವೆಗೆ ಕಿಚ್ಚ ಸುದೀಪ್ ಅವರು, ಅನಂತ್ ನಾಗ್ ಅವರು, ರಮೇಶ್ ಅರವಿಂದ್ ಅವರು ಸೇರಿದಂತೆ ಚಂದನವನದ ಅನೇಕ ಕಲಾವಿದರು ಬಂದು ಹರಸಿ ಆಶೀರ್ವದಿಸಿದ್ದಾರೆ..
ಗೌತಮಿ ಹಾಗೂ ಅಭಿಶೇಕ್ ಅವರ ಮದುವೆಯಾಗಿ 5 ವರ್ಷ ತುಂಬಿದೆ. ಈ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಬಿಗ್ ಬಾಸ್ ಮನೆಯೊಳಗೆ ಆಚರಿಸಿಕೊಂಡಿದ್ದಾರೆ ಗೌತಮಿ ಮತ್ತು ಅಭಿಷೇಕ್ ದಂಪತಿ. ಇದು ಬಹಳ ವಿಶೇಷವಾದ ಘಳಿಗೆ. ಬಿಗ್ ಬಾಸ್ ಮನೆಯೊಳಗೆ ಬರ್ತ್ ಡೇ ಸೆಲೆಬ್ರೇಷನ್ ಆಗಿದೆ, ಆದರೆ ಮದುವೆ ವಾರ್ಷಿಕೋತ್ಸವದ ಸೆಲೆಬ್ರೇಷನ್ ನಡೆದಿರುವುದು ಇದೇ ಮೊದಲು. ಗಂಡನನ್ನು ಬಿಗ್ ಬಾಸ್ ಮನೆಯ ಒಳಗೆ ನೋಡಿ ಬಹಳ ಸಂತೋಷದಿಂದ ಭಾವುಕರಾದರು ಗೌತಮಿ. ಇವರಿಬ್ಬರ ಜೋಡಿ ಬಹಳ ಚೆನ್ನಾಗಿದ್ದು, ಅಭಿಮಾನಿಗಳು ಸಹ ಈ ಜೋಡಿ ಹೀಗೆ ಇರಲಿ ಎಂದು ವಿಶ್ ಮಾಡಿದ್ದಾರೆ..