ತಮ್ಮದೇ ಆದ ವಿಶಿಷ್ಟ ವರ್ಚಸ್ಸಿನ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಂತಹ ನಟ ತೆರೆಯ ಮೇಲೆ ಅಬ್ಬರಿಸಿ ಬೇರದ್ದೇ ರೀತಿಯ ವರ್ಚಸ್ಸನ್ನು ಬೆಳೆಸಿಕೊಂಡವರು ಟೈಗರ್ ಪ್ರಭಾಕರ್ ಅವರು. ಟೈಗರ್ ಎಂಬ ಹೆಸರು ಕೇಳುತ್ತಿದ್ದ ಹಾಗೆ ಕನ್ನಡದ ಕಡಕ್ ಖಳ ನಟ ಪ್ರಭಾಕರವರ ಹೆಸರು ನಮ್ಮೆಲ್ಲರ ಬಾಯಿಗೆ ಸಹಜವಾಗಿ ಬಂದುಬಿಡುತ್ತದೆ. ಆದರೆ ಇವರ ಹೆಸರಿನ ಮುಂದೆ ಟೈಗರ್ ಎಂಬ ಹೆಸರು ಹೇಗೆ ಸೇರಿಕೊಳ್ತು ಎಂಬ ಪ್ರಶ್ನೆ ಇನ್ನೂ ಹಲವಾರು ಜನರನ್ನು ಕಾಡುತ್ತದೆ. ಪ್ರಭಾಕರ್ ಎತ್ತರ, ದೈತ್ಯ ದೇಹ, ಕಂಚಿನ ಧ್ವನಿ, ಚಿರತೆಯಂತಹ ಕಣ್ಣುಗಳು ಆಕ್ಷನ್ ಸೀನ್ಗಳಿಗೆ ಹೇಳಿ ಮಾಡಿಸಿದಂತಿದ್ದವು.

ಈ ಎಲ್ಲ ಗುಣಗಳು ಅವರಿಗೆ ವರದಾನವಾಗಿ ಸಿನಿಮಾ ರಂಗದಲ್ಲಿ ಯಶಸ್ಸು ಕಾಣುವಂತೆ ಮಾಡಿತು. ಯಾರೀ ಸಾಕ್ಷಿ’ ಸಿನಿಮಾದಲ್ಲಿ ಅವರು ನಿಭಾಯಿಸಿದ್ದ ಟೈಗರ್ ಹೆಸರಿನ ಪಾತ್ರ ಎಷ್ಟು ಜನಪ್ರಿಯತೆ ನೀಡಿತೆಂದರೆ, ಕನ್ನಡ ಚಿತ್ರರಂಗದಲ್ಲಿ ‘ಟೈಗರ್’ ಪ್ರಭಾಕರ್ ಎಂದೇ ಗುರುತಿಸುವಂತೆ ಮಾಡಿತು. ಅದ್ಭುತ ನಟನ ಹೆಸರಿನ ಮುಂದೆ ಟೈಗರ್ ಎಂಬ ಹೆಸರು ಬರಲು ಕಾರಣವಾದ ವ್ಯಕ್ತಿಯೇ ಡಾಕ್ಟರ್ ರಾಜಕುಮಾರ್. ಹೌದು ಗೆಳೆಯರೇ ಅಣ್ಣಾವ್ರ ಆ ಒಂದು ಸಿನಿಮಾದ ಮೂಲಕ ಪ್ರಭಾಕರ್ ಅವರಿಗೆ ಟೈಗರ್ ಎಂಬ ಹೆಸರು ಬಂತು ಎಂದರೆ ತಪ್ಪಾಗಲಾರದು.
ಪ್ರಭಾಕರ್ ಡಾಕ್ಟರ್ ರಾಜಕುಮಾರ್ ಅವರೊಂದಿಗೆ ಮಯೂರ, ಗಂಧದಗುಡಿ, ಹಾವಿನ ಹೆಡೆ, ಶಂಕರ್ ಗುರು ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಮತ್ತಷ್ಟು ಸಿನಿಮಾದಲ್ಲಿ ಅಣ್ಣಾವ್ರ ಅಂಗನಾಯಕನಾಗಿಯೂ ಹಾಗೂ ಹೇಳಿದ ಕೆಲಸವನ್ನು ಚಾಚು ತಪ್ಪದೇ ಮಾಡುವಂತಹ ಸೇವಕನಾಗಿಯು ಕಾಣಿಸಿಕೊಂಡಿದ್ದಾರೆ. ಹೀಗಿರುವಾಗ 1978ನೇ ಇಸವಿಯಲ್ಲಿ ತೆರೆಕಂಡಂತಹ ಶಂಕರ್ ಗುರು ಎಂಬ ಸಿನಿಮಾದ ಮೂಲಕ ನಟ ಪ್ರಭಾಕರ್ ಅವರಿಗೆ ಟೈಗರ್ ಎಂಬ ಹೆಸರು ಸಿಕ್ತು ಎಂದರೆ ತಪ್ಪಾಗಲಾರದು.