ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಈ ಹೆಸರನ್ನ ಕೇಳಿದರೆ ನಾವು ಭಾವುಕರಾಗುತ್ತೇವೆ. ಅಪ್ಪು ಅವರು ಇಹಲೋಕ ತ್ ತ್ಯಜಿಸಿ 3 ವರ್ಷ ಆಗಿದೆ. ಆದರೆ ಇವತ್ತಿಗೂ ಕೂಡ ಅಪ್ಪು ಅವರ ಬಗ್ಗೆ ಅಭಿಮಾನಿಗಳಿಗೆ ಇರುವ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಅಪ್ಪು ಅವರನ್ನು ಕಂಡರೆ ಅಷ್ಟೇ ಪ್ರೀತಿ, ಗೌರವ ಹಾಗೂ ಅಭಿಮಾನ ಎಲ್ಲರಲ್ಲೂ ಇದೆ. ಅಪ್ಪು ಅವರು ಇಹಲೋಕ ತ್ಯಜಿಸಿದ ದಿವಸ ಅವರ ನೇತ್ರಗಳನ್ನು ತೆಗೆದುಕೊಂಡು ಹೋಗಲಾಯಿತು. ಅವುಗಳನ್ನು ದಾನವಾಗಿ ಪಡೆದು, ಬದುಕು ಕಟ್ಟಿಕೊಂಡ ಆ ನಾಲ್ವರು ಯಾರು ಗೊತ್ತಾ? ಈ ಮಾಹಿತಿಯನ್ನು ಖುದ್ದು ವೈದ್ಯರು ರಿವೀಲ್ ಮಾಡಿದ್ದಾರೆ..
ಪುನೀತ್ ರಾಜ್ ಕುಮಾರ್ ಅವರನ್ನು ಕಂಡರೆ ಎಲ್ಲಾ ಅಭಿಮಾನಿಗಳಿಗೂ ಅಷ್ಟು ಕ್ರೇಜ್ ಇದ್ದಿದ್ದು, ಅವರ ಅಭಿನಯ, ಡ್ಯಾನ್ಸ್, ಫೈಟ್, ಫಿಟ್ನೆಸ್ ಈ ಕಾರಣಗಳಿಗೆ ಮಾತ್ರವಲ್ಲ. ಅವರ ಒಳ್ಳೆತನಕ್ಕೆ ಹಲವರು ಫಿದಾ ಆಗಿದ್ದರು. ಪುನೀತ್ ರಾಜ್ ಕುಮಾರ್ ಅವರು ಅದೆಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಎನ್ನುವುದು ಹೆಚ್ಚಿನ ಜನರಿಗೆ ಗೊತ್ತಾಗಿದ್ದೆ, ಅವರು ವಿಧಿವಶರಾದಮೇಲೆ. ಅಪ್ಪು ಅವರು ಹೋದ ನಂತರ ಅವರಿಂದ ಸಹಾಯ ಪಡೆದ ಅದೆಷ್ಟೋ ಜನರು ಅಪ್ಪು ಅವರಿಂದ ಸಿಕ್ಕ ಸಹಾಯದ ಬಗ್ಗೆ ತಾವಾಗಿಯೇ ಮೀಡಿಯಾ ಮುಂದೆ ಬಂದು ಮಾತನಾಡಿದರು.

ಆಗಲೇ ಎಲ್ಲರಿಗೂ ಗೊತ್ತಾಗಿದ್ದು, ಅಪ್ಪು ಅವರಿಂದ ಎಷ್ಟು ಜನಕ್ಕೆ ಸಹಾಯ ಆಗಿದೆ ಎಂದು. ಅಪ್ಪು ಅವರು ಒಂದು ರೀತಿ, ಬಲಗೈಯಿಂದ ಮಾಡಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವಂತೆ ಬದುಕಿದವರು. ಅವರಿಂದ ಅದೆಷ್ಟೋ ಸಾವಿರ ಕುಟುಂಬಗಳಿಗೆ ಬೆಳಕು ಸಿಕ್ಕಿದೆ. ಹಲವರ ಆರೋಗ್ಯಕ್ಕೆ ಸಹಾಯ ಮಾಡಿದ್ದಾರೆ, ಮಕ್ಕಳ ಓದಿಗೆ ಸಹಾಯ ಮಾಡಿದ್ದಾರೆ, ಜೀವನ ಸಾಗಿಸಲು ಸಹಾಯ ಮಾಡಿದ್ದಾರೆ. ಅಪ್ಪು ಅವರು ಮಾಡಿರುವ ಸಹಾಯಗಳು ಒಂದೇ ಎರಡೇ.. ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಇದ್ದಾಗ ಮಾತ್ರವಲ್ಲ, ಹೋದಮೇಲೆ ಕೂಡ ಅಪ್ಪು ಅವರು ನಾಲ್ವರ ಬಾಳಿಗೆ ಬೆಳಕಾಗಿ ಹಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ನೇತ್ರದಾನದ ಬಗ್ಗೆ ಪ್ರಚಾರ ಮಾಡಿದ್ದರು, ತಾವು ಕೂಡ ನೇತ್ರದಾನ ಮಾಡಿದರು. ಅಪ್ಪು ಅವರು ಹೋದ ದಿವಸ ನಾರಾಯಣ ನೇತ್ರಾಲಯದವರು ಬಂದು ಅಪ್ಪು ಅವರ ನೇತ್ರಗಳನ್ನು ತೆಗೆದುಕೊಂಡು ಹೋಗಿದ್ದರು. ಅಪ್ಪು ಅವರ 2 ಕಣ್ಣುಗಳಿಂದ, ದೃಷ್ಟಿ ಕಳೆದುಕೊಂಡಿದ್ದ ನಾಲ್ವರಿಗೆ ದೃಷ್ಟಿ ಸಿಕ್ಕಿದೆ. ಹೌದು, ಅಪ್ಪು ಅವರಿಂದ ನಾಲ್ವರ ಬದುಕಿಗೆ ಬೆಳಕು ಬಂದಿದೆ..
ಇದನ್ನು ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ಅವರು ಮಾತನಾಡಿದ್ದು, ಅಪ್ಪು ಅವರ ನೇತ್ರಗಳನ್ನು ನಾಲ್ವರಿಗೆ ನೀಡಲು ಮೈಕ್ರೊಸರ್ಜರಿ ಸಹಾಯ ಮಾಡಿತು ಎಂದು ಹೇಳಿದ್ದಾರೆ. ಕಾರ್ನಿಯಾ ಇಂದ ಈ ರೀತಿ ಮೈಕ್ರೊಸರ್ಜರಿ ಮಾಡಿ, ನಾಲ್ವರಿಗೆ ಅಪ್ಪು ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಒಟ್ಟಿನಲ್ಲಿ ಈ ಪುಣ್ಯಾತ್ಮ ಇದ್ದಾಗಲು ಎಲ್ಲರಿಗು ಸಹಾಯ ಮಾಡಿ, ಹೋದ ನಂತರ ಕೂಡ ಇನ್ನಷ್ಟು ಜನರ ಬದುಕಿಗೆ ಬೆಳಕಾಗಿದ್ದಾರೆ. ಬದುಕಿದರೆ ಅಪ್ಪು ಅವರ ಥರ ಬದುಕಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಇನ್ನು ಎಷ್ಟೇ ವರ್ಷಗಳು ಕಳೆದರೂ ಸಹ ಅಪ್ಪು ಅವರ ಬಗ್ಗೆ ಇರುವ ಪ್ರೀತಿ ಆಗಲಿ, ಅಭಿಮಾನ ಆಗಲಿ ಕಡಿಮೆ ಅಂತೂ ಆಗುವುದಿಲ್ಲ.