ಪ್ರತಿಯೊಬ್ಬರ ಮನೆಯಲ್ಲೂ ಕೂಡ ಮಕ್ಕಳು ವಿದ್ಯಾವಂತರಾಗಬೇಕು ಬುದ್ದಿವಂತರಾಗಬೇಕು ಎನ್ನುವ ತವಕ ಎಲ್ಲರಲ್ಲೂ ಇದ್ದೆ ಇರುತ್ತೆ. ಇದು ತುಂಬಾ ಮುಖ್ಯ ಕೂಡ ಹೌದು ಯಾಕಂದ್ರೆ, ವಿದ್ಯಾಭ್ಯಾಸ ಎನ್ನುವಂತದ್ದು ಯಾರು ಕರೆಯಲಾಗದಂತ ಸಂಪತ್ತು. ಬಹಳ ದೊಡ್ಡ ಸಂಪತ್ತು, ನೀವು ಗಳಿಸಿದಂತ ವಿದ್ಯೆಯನ್ನ ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ. ಹಾಗೇ ನಷ್ಟ ಮಾಡಲು ಕೂಡ ಸಾಧ್ಯವಿಲ್ಲದ ಸಂಪತ್ತು ಎಂದರೆ ಅದು ವಿದ್ಯೆ ಮಾತ್ರ. ಹಾಗಾಗಿ ಇದು ಎಲ್ಲರಿಗೂ ಬೇಕೆ ಬೇಕು. ಹಾಗಾಗಿ ನಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎನ್ನುವ ಕನಸನ್ನ ಕಾಣುತ್ತಾರೆ. ಆದರೆ ಏನೋ ಮನೆಯಲ್ಲಿ ಮಕ್ಕಳು ಚೆನ್ನಾಗಿ ಓದಲ್ಲ, ಓದೋ ಕಡೆಗೆ ಗಮನಕೊಡಲ್ಲ ಎನ್ನುವ ಅನೇಕ ಮಾತುಗಳು ಕೇಳಿ ಬರುತ್ತದೆ.
ಓದಿದ್ರೆ ಜ್ಞಾಪಕ ಇರಲ್ಲಾ ಒಬ್ಬ ಒಬ್ಬರದ್ದು ಒಂದು ಒಂದು ಸಮಸ್ಯೆ, ಇನ್ನೂ ಕೆಲವರಿಗೆ ವಿದ್ಯಾವಂತರು ಚೆನ್ನಾಗಿ ಓದುತ್ತಾರೆ, ಬರೀತಾರೆ ಮಾರ್ಕ್ಸ್ ತಕೊಳ್ತಾರೆ. ಆದರೆ ಏನೋ ಲೋಪ, ಯಾವುದೋ ಒಂದು ಹಂತದವರಿಗೆ ಚೆನ್ನಾಗಿ ಓದುತ್ತಾರೆ. ನಂತರ ದಿಡೀರ್ ಮಾರ್ಕ್ಸ್ ಕಮ್ಮಿ ಆಗುತ್ತೆ, ಎಸ್. ಎಸ್. ಎಲ್. ಸಿ ವರೆಗೂ ಚೆನ್ನಾಗಿದ್ದ ನಂತರ ದಿಡೀರ್ ಕಮ್ಮಿ ಮಾರ್ಕ್ಸ್ ತಗೆದುಕೊಳ್ಳುತ್ತಿದ್ದಾನೆ ಎನ್ನುವ ಮಾತುಗಳು ಪೋಷಕರಿಂದ ಕೇಳಿ ಬರುತ್ತದೆ. ತುಂಬಾ ಚೆನ್ನಾಗಿ ಓದುತ್ತಿದ್ದ ಹುಡುಗ ಒಮ್ಮೆಲೇ ಕಮ್ಮಿ ಮಾರ್ಕ್ಸ್ ತಗೆಯುತ್ತಾನೆ.
ಇದೆ ಸಂದರ್ಭದಲ್ಲಿ ಎಲ್ಲರೂ ಕೇಳುತ್ತಾರೆ ನಿಮ್ಮ ಜಾತಕ ತೋರಿಸಿದ್ದೀರಾ,ಮುನ್ನೇಚರಿಕೆಯಾಗಿ ನೋಡಿಕೊಂಡಿದ್ದಾರ, ಅದಕ್ಕೆ ಏನಾದರೂ ಪರಿಹಾರ ಮಾಡಬೇಕಾ, ಅದಕ್ಕೆ ಪರಿಹಾರ ಮಾಡಿಕೊಂಡಾಗ ಮಾತ್ರ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಿಗಲು ಸಾಧ್ಯ. ನಾವು ರಸ್ತೆಯಲ್ಲಿ ಹೋಗುವಾಗ ಆ ಕಡೆ ರೋಡ್ ಚೆನ್ನಾಗಿದೆ ಆ ರಸ್ತೆಯಲ್ಲೇ ಹೋಗೋಣ ಅಂದುಕೊಂಡು ಹೇಗೆ ಹೋಗ್ತಿವೋ ಹಾಗೇ ನೋಡ್ಕೊಂಡು ಮುಂದಕ್ಕೆ ಹೆಜ್ಜೆಯನ್ನ ಇಡಬೇಕು. ಅದೇ ರೀತಿ ವಿದ್ಯಾಭ್ಯಾಸ ಮಾಡಬೇಕಾದ್ರು ಕೂಡ ನಮ್ಮ ಮಗುವಿನ ಜೀವನದ ವಿದ್ಯಾಭ್ಯಾಸ ಸಮಯದಲ್ಲಿ ಸಮಸ್ಯೆ ಆಗಬಾರದು ಎನ್ನುವ ಕಾರಣ ಅನೇಕ ಪರಿಹಾರಗಳನ್ನು ನಾವು ಮಾಡಿಕೊಳ್ಳಬೇಕಾಗುತ್ತೆ.
ಒಂದು ಮಗುವಿಗೆ ಕುರು ದೆಸೆ ಅವನ ಜಾತಕದಲ್ಲಿ ನಡೆಯುತ್ತಿರುತ್ತೆ ಅವಾಗ ಆತ ಚೆನ್ನಾಗಿ ಓದುತಿರುತ್ತಾನೆ. ಯಾವಾಗ ಆ ದೆಸೆ ಬದಲಾಗಿ ಮುಂಬರುವ ದಿನಗಳಲ್ಲಿ ವಿದ್ಯಾಭ್ಯಾಸಗಳಲ್ಲಿ ಹಿಂದೆ ಉಳಿಯುತ್ತಾರೆ. ಇದೆ ಕಾರಣ ಜಾತಕವನ್ನ ಆಗಾಗ ಓದಿಸಿ ಮುಂಬರುವ ಬುಕ್ತಿ ಹಾಗೂ ದೆಸೆ ಯಾವುದು ಎನ್ನುವುದರ ಬಗ್ಗೆ ಯೋಚಿಸಿ ಪರಿಹಾರವನ್ನು ಕಂಡು ಹುಡುಕಿಕೊಳ್ಳಬೇಕು. ಜಾತಕದಲ್ಲಿ ನಾವು ವಿದ್ಯಾ ಸ್ಥಾನವನ್ನ ನೋಡುತ್ತೇವೆ, ಗುರುವಿನ ಸ್ಥಾನವನ್ನ ನೋಡುತ್ತೇವೆ, ಬುಧನ ಸ್ಥಾನವನ್ನ ನೋಡುತ್ತೇವೆ, ಗುರು ಎಲ್ಲಿದ್ದಾನೆ, ಬುಧ ಎಲ್ಲಿದ್ದಾನೆ.
ಬುಧ ಬುದ್ದಿ ಕಾರಕನಾಗಿರುತ್ತಾನೆ, ಗುರು ಜ್ಞಾನ ಕಾರಕ ಗುರು ಒಲಿದರೆ ಈ ಭೂಮಿಯಲ್ಲಿ ಎಷ್ಟು ವಿಧ್ಯೆಯನ್ನು ಬೇಕಾದ್ರು ಆತ ಕಲಿಯಬಹುದು. ಹಾಗೇ ಇವರ ಸ್ಥಾನಬಲವನ್ನ ನೋಡಿಕೊಳ್ಳಬೇಕು. ಎಷ್ಟೋ ಜನಕ್ಕೆ ವಿದ್ಯಾ ಕಾಲದಲ್ಲಿ ಶುಕ್ರ ದೆಸೆ ಬಂದು ಹೊರಟು ಹೋಗುತ್ತೆ, ಶುಕ್ರ ದೆಸೆ ಸಂಪಾದನೆ ಕಾಲದಲ್ಲಿ ಇದ್ರೆ ಒಳ್ಳೇದು, ಹಾಗೂ ವಿದ್ಯಾಭ್ಯಾಸ ಕಾಲದಲ್ಲಿ ಗುರುವಿನ ದೆಸೆ ಒಳ್ಳೆಯದಾಗಿದ್ರೆ ವಿದ್ಯೆಗೆ ತುಂಬಾ ಒಳ್ಳೆಯದು. ಕೆಲವರಿಗೆ ಎಸ್. ಎಸ್. ಎಲ್. ಸಿ ಒರೆಗೂ ಕಡಿಮೆ ಅಂಕ ತೆಗೆಯುತ್ತಿರುತ್ತಾರೆ. ಅಲ್ಲಿಂದ ಪಿಯುಸಿಗೆ ಬಂದ ಮೇಲೆ ಒಳ್ಳೆಯ ಅಂಕವನ್ನ ಪಡೆಯುತ್ತಾರೆ. ಇವೆಲ್ಲ ನಾವು ಪ್ರತಿನಿತ್ಯ ಕಾಣುವ ಘಟನೆ ಇದಕೆಲ್ಲ ಕಾರಣ ಗ್ರಹಗಳು, ಹಾಗಾಗಿ ವಿದ್ಯಾಸ್ಥಾನದ ಗ್ರಹವನ್ನ ನೋಡಿಕೊಂಡು ಪರಿಹಾರ ಮಾಡಿಕೊಳ್ಳಬೇಕು.