ಕಾಲಿವುಡ್ ನಲ್ಲಿ ‘ಲೇಡಿ ಸೂಪರ್ ಸ್ಟಾರ್’ ಎಂದೇ ಪ್ರಸಿದ್ಧಿ ಪಡೆದಿರುವ ನಟಿ ಎಂದರೆ “ನಯನತಾರ”. ಈ ನಟಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 19ವರ್ಷಗಳು ಕಳೆದಿವೆ.ಸಿನಿಮಾ ರಂಗಕ್ಕೆ ಬಂದು ದಶಕಗಳು ಕಳೆದಿದ್ದರು ಇಂದಿಗೂ ಬಹಳ ಬೇಡಿಕೆಯನ್ನು ಇಟ್ಟಿದ್ದಾರೆ. ಈ ನಟಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಮಲಯಾಳಂ ನ ‘ಮನಸ್ಸಿನಕ್ಕರೆ’ ಸಿನಿಮಾ ಮೂಲಕ.ಅದೊಂದು ಸಿನಿಮಾ ದಿಂದ ಪರಿಚಯ ಮಾಡಿಕೊಂಡು ಈ ನಟಿ ಇದೀಗ ಮಲಯಾಳಂ ಅಲ್ಲದೆ ಕನ್ನಡ,ತೆಲಗು,ತಮಿಳು ಹಾಗೂ ಹಿಂದಿಯಲ್ಲೂ ಕೂಡ ನಟಿಸಿದ್ದಾರೆ.

ಸದ್ಯದಲ್ಲಿ ಈ ನಟಿ ಸಾಕಷ್ಟು ಸಿನಿಮಾಗಳಲ್ಲಿ ಬ್ಯಸಿ ಇದ್ದಾರೆ.ಕೆಲ ತಿಂಗಳ ಹಿಂದೆ ತಮ್ಮ ದೀರ್ಘಕಾಲದ ಸ್ನೇಹಿತನಾಗಿದ್ದ ಹಾಗೂ ಕಾಲಿವುಡ್ ನ ನಿರ್ದೇಶಕ “ವಿಜ್ಞೆಶ್ ಶಿವನ್” ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಅದ್ರ ಬೆನ್ನಲ್ಲೇ ಸರೋಗೆಸಿ ಮೂಲಕ ಅವಳಿ ಮಕ್ಕಳಿಗೂ ಕೂಡ ಪೋಷಕರಾಗಿದ್ದಾರೆ.ನಯನಾ ಅವರು ಮದುವೆಯಾದ ಸಮಯದಿಂದಲು ಕೂಡ ಒಂದಲ್ಲಾ ಒಂದು ಸಮಸ್ಯೆಗೂ ಹಾಗೂ ವಿವಾದಗಳಿಗೂ ಕೊಡ ಸಿಲುಕುತ್ತಲೇ ಬಂದಿದ್ದಾರೆ.ಮದುವೆಯಾದ ಮಾರನೇ ದಿನವೇ ತಿರುಪತಿಗೆ ತೆರಳಿದ್ದರು.ಅಲ್ಲಿ ಪಾದರಕ್ಷೆ ಧರಿಸಿದ್ದ ಕಾರಣದಿಂದ ಆಪಾದನೆಗಳಿಗೆ ಸಿಲುಕಿದ್ದರು.
ಆ ನಂತರ ಎಲ್ಲರಿಗೂ ಕ್ಷಮೆ ಕೇಳುವ ಮುಕಾಂತರ ಎಲ್ಲಾ ಸಮಸ್ಯೆ ಬಗೇಹರಿಸಿಕೊಂಡರು.ಆ ನಂತರ ತಮ್ಮ ಪತಿ ಮಾಡಿದ ಅಡಿಗೆ ತಿಂದು ನಯನತಾರ ಆಸ್ಪತ್ರೆ ಪಾಲದರು. ಆ ನಂತರ ಈ ನಟಿ ಚಿತ್ರರಂಗ ಬಿಡುತ್ತಾರೆ ವ್ಯವಹಾರದ ಬಗ್ಗೆ ಗಮನ ಹರಿಸುತ್ತಾರೆ ಎಂದು ನಾನಾ ರೀತಿ ಗಾಳಿ ಸುದ್ದಿ ಕೊಡ ಹಬ್ಬಿತ್ತು.ಇದೀಗ ತಮ್ಮ ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿದ್ದ ಈ ದಂಪತಿಗಳಿಗೆ ತಮಿಳುನಾಡಿನ ಸರ್ಕಾರ ಶಾಕ್ ನೀಡಿತ್ತು. ಸರೋಗೆಸಿ ಪ್ರಕಾರ ಮಗು ಪಡೆದುಕೊಳ್ಳಲು ಅದ್ರದ್ದೇ ಆದ ನಿಯಮಗಳಿವೆ ಆದರೆ ಈ ಜೋಡಿ ಅದೆಲ್ಲವನ್ನು ಮೀರಿದ್ದಾರೆ ಎಂದು ವರದಿಯಾಗಿತ್ತು.
ಆದರೆ ಅದಕ್ಕೂ ಕೊಡ ಸ್ಪಷ್ಟತೆ ಕೊಟ್ಟು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡ್ರು.ಹೀಗೆ ಒಂದಲ್ಲಾ ಒಂದು ವಿಚಾರವಾಗಿ ನಯನತಾರ ಚಿತ್ರರಂಗದಲ್ಲಿ ಸದ್ದು ಮಾಡುತ್ತಲೇ ಇದ್ದಾರೆ.ಸದ್ಯದಲ್ಲಿ ನಯನತಾರ ಸದ್ದು ಮಾಡುತ್ತಿರುವುದು ತಮ್ಮ ಹಳೇ ಲವ್ ಅಪೇರ್ ಮುಕಾಂತರ.ಹೌದು ವಿಜ್ಞೆಶ್ ಅವರನ್ನು ಮದುವೆಯಾಗುವ ಮುನ್ನ ನಯನತಾರ ಅವರು ಇಬ್ಬರು ಸೆಲಬ್ರೆಟಿಗಳನ್ನು ಪ್ರತಿಸಿದ್ದ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ.ತಮ್ಮ ಸಿನಿಮಾ ಪಯಣದಲ್ಲಿ ಸಹ ಕಲವಿದನಾಗಿದ್ದ “ಸಿಂಬು” ಅವರೂಟ್ಟಿಗೆ ಪ್ರೀತಿಸಿ ಮದುವೆಯ ಹಂತದ ವರೆಗೂ ಬಂದಿದ್ದರು.ಆದರೆ ಕೆಲ ವಿಡಿಯೋ ಲೀಕ್ ಅದ ಬಳಿಕ ಈ ಜೋಡಿ ಬ್ರೇಕಪ್ ಮಾಡಿಕೊಂಡರು.
ಆ ನಂತರ ಈ ನಟಿ ಮತ್ತೆ ಲವ್ ನಲ್ಲಿ ಬಿದ್ದಿದ್ದು “ಡಾನ್ಸ್ ನ ಮಹಾ ಗುರು” ಎಂದು ಹೆಸರು ಪಡೆದಿರುವ “ಪ್ರಭುದೇವ”.ಇನ್ನು ನಯನತಾರ ಅವರು ಕ್ರಿಶ್ಚಿಯನ್ ಕುಟುಂಬದವರು.ಪ್ರಭುದೇವ ಅವರನ್ನು ಮದುವೆಯಾಗುವ ಸಲುವಾಗಿ ಹಿಂದೂ ಆಗಿ ಪರಿವರ್ತನೆ ಮಾಡಿಕೊಂಡರು.ಆದರೆ ವಿಧಿ ಲಿಕಿತವೇ ಬೇರೆ ಇದ್ದಿದ್ದರಿಂದ ಇವರಿಬ್ಬರ ಸಂಭಧವೂ ಕೊಡ ಅರ್ಧಕ್ಕೆ ಮುರಿದುಬಿತ್ತು.ಹೀಗೆ ನಾನಾ ಆರೊಪ ಹಾಗೂ ವಿವಾದಾಗಳಿಗೆ ಸಿಲುಕುತ್ತಿರುವ ನಯನತಾರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ.