ಮನುಷ್ಯ ಆಧುನಿಕ ಪ್ರಪಂಚದ ಅಮಲಿನಲ್ಲಿ ಅನೇಕ ಶಾರೀರಿಕ ಹಾಗೂ ಮಾನಸಿಕ ಒತ್ತಡಗಳಿಗೆ ಸಿಲುಕಿ ಬಿಡುತ್ತಾನೆ. ಈ ಒತ್ತಡಗಳಿಂದ ಹೊರಬರಬೇಕಾದರೆ ಅವನಿಗೆ ವಿಶ್ರಾಂತಿ ಅತ್ಯಗತ್ಯ. ಇದೇ ಕಾರಣ ಅನೇಕರು ಮಸಾಜ್ ಗಳಿಗೆ ಮೊರೆ ಹೋಗುತ್ತಾರೆ. ಸಾಮಾನ್ಯವಾಗಿ ನಾವು ಎಣ್ಣೆ ಮಸಾಜ್ ನ್ನು ದೇಹದ ನಾನಾ ಭಾಗಗಳಿಗೆ ಮಾಡುವುದನ್ನ ಕೇಳಿದ್ದೇವೆ. ಆದರೆ ಪಾದಕ್ಕೆ ಎಣ್ಣೆ ಮಸಾಜ್ ಮಾಡುವುದರಿಂದ ಯಾವುದೆಲ್ಲ ಪ್ರಯೋಜನವಾಗುತ್ತದೆ ಎಂದು ನಾವು ನಿಮಗೆ ಹೇಳುತ್ತೇವೆ.ಅಭ್ಯಂಗ ಅಥವಾ ಎಣ್ಣೆ ಮಸಾಜ್ ನಮ್ಮ ದೇಹಕ್ಕೆ ಒಂದೊಳ್ಳೆ ಚಿಕಿತ್ಸೆ ಇದ್ದ ಹಾಗೆ, ದೇಹವನ್ನು ಸದೃಢವಾಗಿಸಲು ಅಭ್ಯಂಗ ತುಂಬಾನೇ ಸಹಕಾರಿ. ಹಾಗೇ ಕಾಲುಗಳಿಗೆ ಎಣ್ಣೆ ಮಸಾಜ್ ಯಾಕೆ ಮಾಡಬೇಕು ಎನ್ನುವುದಕ್ಕೆ ಉತ್ತರ ಇಲ್ಲಿದೆ.
ಸಾಮಾನ್ಯವಾಗಿ ನಾವು ಹೊರ ಪ್ರದೇಶಗಳಲ್ಲಿ ಓಡಾಡುವಾಗ ನೆತ್ತಿ ಹಾಗೂ ಪಾದಗಳು ಹೆಚ್ಚು ಉಷ್ಣವನ್ನು ಎಳೆದುಕೊಳ್ಳುವಂತ ಒಂದು ದೇಹದ ಭಾಗವಾಗಿರುತ್ತೆ, ಅಷ್ಟೇ ಅಲ್ಲದೆ ನಮ್ಮ ದೇಹಕ್ಕೆ ಅತೀ ಹೆಚ್ಚು ಉಷ್ಣ ನೀಡುವ ಭಾಗ ಪಾದ ಆಗಿರುವುದರಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರ ಕಡಿಮೆಯಾಗುವುದರಿಂದ ಹಲವಾರು ಅಂಗಗಳಿಗೆ ಸೋಂಕು ತಗಲುತ್ತದೆ. ಅಜೀರ್ಣ ಸಮಸ್ಯೆ, ರಕ್ತದೋಷ, ಬಿಪಿ ಹೆಚ್ಚಳ, ಹೃದಯ ಸಂಬಂಧ ಸಮಸ್ಯೆ, ಮೆದುಳಿನ ಸಮಸ್ಯೆ, ನರದೌರ್ಬಲ್ಯ ತಂದೊಡ್ಡುವಂತ ಹೆಚ್ಚಿನ ಸಮಸ್ಯೆ ಪಾದದ ಉರಿ, ಚರ್ಮದ ಅಲರ್ಜಿ ಇಂತಹ ಅನೇಕ ಸಮಸ್ಯೆಗಳು ಕಾಡಲಾರಂಭಿಸುತ್ತದೆ.
ಇವೆಲ್ಲ ಸಮಸ್ಯೆಗಳಿಗೂ ಪ್ರಮುಖ ಕಾರಣ ಪಾದದಲ್ಲಿ ಕಾಣಿಸಿಕೊಳ್ಳುವ ಉಷ್ಣತೆಯಿಂದ ಎನ್ನಬಹುದು. ಇಂತಹ ಸಮಸ್ಯೆ ನಿಮ್ಮಲ್ಲಿ ಬರಬಾರದು ಎನ್ನುವುದಾದರೆ ಪ್ರತಿದಿನ ರಾತ್ರಿ ಕಾಲಿಗೆ ಹರಳೆಣ್ಣೆ ಲೇಪ ಮಾಡಿ ಮೃದುವಾಗಿ ಮಸಾಜ್ ಮಾಡುವುದರಿಂದ ರಕ್ತ ಸಂಚಲನ ಚೆನ್ನಾಗಿರುತ್ತೆ, ಹಾಗೇ ನಿಮ್ಮ ಪಾದಗಳಿಂದ ದೇಹದ ಉಷ್ಣತೆಯನ್ನು ಹೊರಹಾಕಲಿಕ್ಕೆ ಸಹಕಾರವಾಗುತ್ತೆ. ಈ ಕಾರಣಕ್ಕೆ ಪಾದಗಳಿಗೆ ಹರಳೆಣ್ಣೆ ಲೇಪದಿಂದ ಪ್ರತಿನಿತ್ಯ ಮಸಾಜ್ ಮಾಡುವುದರಿಂದ ಕಣ್ಣು ಮತ್ತು ನರದೌರ್ಬಲ್ಯಗಳು, ದೇಹದ ಉಷ್ಣತೆಯನ್ನು ಹೊರಹಾಕಬಹುದಾಗಿದೆ.
ಹಾಗೇ ಹರಳೆಣ್ಣೆಯನ್ನು ನೆತ್ತಿಯ ಭಾಗಕ್ಕೂ ಮಸಾಜ್ ಮಾಡುವುದರಿಂದ ತಮ್ಮ ದೇಹದ ಉಷ್ಣತೆಯನ್ನು ಹೊರ ಹಾಕಲು ಸಹಾಯವಾಗುತ್ತದೆ. ಈ ರೀತಿ ಪ್ರತಿದಿನ ಪಾದ ಹಾಗೂ ನೆತ್ತಿಗಳಿಗೆ ಮಸಾಜ್ ಮಾಡುವುದು ಹಾಗೂ ವಾರಕ್ಕೊಂದು ಬಾರಿ ದೇಹಕ್ಕೆ ಅಭ್ಯಂಗ ಮಾಡುವುದರಿಂದ ಸಾಕಷ್ಟು ತೊಂದರೆಗಳಿಂದ ದೇಹವನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ರೀತಿಯ ಪದ್ಧತಿಯನ್ನು ಅನುಸರಿಸಿ ನಿಮ್ಮ ಆಹಾರ ಪದ್ಧತಿ, ದೇಹದಲ್ಲಿ ನೀರಿನ ಅಂಶವನ್ನು ಸರಿಯಾಗಿ ಅನುಸರಿಸಿದ್ರೆ ಯಾವುದೇ ಆರೋಗ್ಯ ಸಂಬಂಧ ಕಾಯಿಲೆಗಳಿಂದ ದೂರವಿರಬಹುದು.
ಈ ರೀತಿಯ ಮನೆ ಮದ್ದುಗಳನ್ನು ನೀವು ಸಾಕಷ್ಟು ಕಲಿಬೇಕು ಸಾಕಷ್ಟು ಕಾಯಿಲೆಗಳನ್ನ ಮನೆಯಲ್ಲಿ ಗುಣಪಡಿಸಿಕೊಳ್ಳಬಹುದಾಗಿದೆ. ಮನೆಯ ಮದ್ದುಗಳನ್ನು ತಿಳಿದುಕೊಂಡು ವೈದ್ಯರಾಗಬೇಕು ಎನ್ನುವ ಆಸೆ ಇದ್ದರೆ 108 ಕಾಯಿಲೆಗಳಿಗೆ ನಾವೇ ವೈದ್ಯರು ಎನ್ನುವ ಪುಸ್ತಕವನ್ನು ಖರೀದಿಸಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.