ಜಗತ್ತಿನ ನಂ.1 ಶ್ರೀಮಂತ ವ್ಯಕ್ತಿ ಎಲನ್ ಮಸ್ಕ್ ಜೀವನ ಹೇಗಿರಬಹುದು. ಆದ್ರೆ ನಿಮ್ಮ ಕಲ್ಪನೆ ತಪ್ಪು. ಎಲನ್ ಮಸ್ಕ್ ಟೆಸ್ಲಾ, ಸ್ಪೇಸ್ ಎಕ್ಸ್ ಹಾಗೂ ಟ್ವಿಟ್ಟರ್ ಸಿಇಒ ಆಗಿದ್ದರೂ ಕೂಡ ಬದುಕುತ್ತಿರುವುದು ಅತ್ಯಂತ ಸರಳವಾಗಿ. ತಮ್ಮ ಎಲ್ಲ ಮನೆಗಳನ್ನು ಮಾರಾಟ ಮಾಡಿರುವ ಮಸ್ಕ್ ಇದೀಗ ಟೆಕ್ಸಾಸ್ ನಲ್ಲಿ ಪುಟ್ಟ ಮನೆ ಖರೀರಿಸಿ ವಾಸಿಸುತ್ತಿದ್ದಾರೆ. ಅಷ್ಟಕ್ಕೂ ಜಗತ್ತಿನ ಶ್ರೀಮಂತ ವ್ಯಕ್ತಿ ಇಷ್ಟು ಚಿಕ್ಕ ಮನೆಯಲ್ಲಿ ಯಾಕೆ ಬದುಕುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೊಂದು ಕಾರಣ ಇದೆ!


ಜಗತ್ತಿನ ನಂ.1 ಶ್ರೀಮಂತ ಎನಿಸಿಕೊಂಡಿರುವ ಎಲನ್ ಮಸ್ಕ್ ತಮ್ಮಲ್ಲಿರುವ ಎಲ್ಲ ಮನೆಗಳನ್ನು ಮಾರಾಟ ಮಾಡಿದ್ದಾರೆ. ತಮ್ಮ ರಾಕೆಟ್, ಎಲೆಕ್ಟ್ರಿಕ್ ಕಾರು ಹಾಗೂ ಇತರೆ ಉದ್ಯಮದ ಮೇಲೆ ನಿಗಾ ವಹಿಸಲು ಟೆಕ್ಸಾಸ್ ನಲ್ಲಿ ಒಂದು ಸಣ್ಣ ಮನೆ ಖರೀದಿಸಿದ್ದಾರೆ. ಮಸ್ಕ್ ಅವರ ಜೀವನ ಚರಿತ್ರೆಕಾರ ವಾಲ್ಟರ್ ಐಸಾಕ್ಸನ್ ಈ ಚಿಕ್ಕ ಮನೆಯ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಸ್ಪೇಸ್ ಎಕ್ಸ್ ಹಾಗೂ ಪರೀಕ್ಷಾ ಸೈಟ್ ಟೆಕ್ಸಾಸ್ ನಲ್ಲಿ ಇರುವುದರಿಂದ ಮಸ್ಕ್ ಈ ನಿರ್ಧಾರ ಕೈಗೊಂಡಿದ್ದಾರೆ.
ಸದ್ಯ, ವಾಲ್ಟರ್ ಹಂಚಿಕೊಂಡಿರುವ ಫೋಟೋದಲ್ಲಿ ಅಡಿಮೆ ಮನೆ ಮತ್ತು ಮರದ ಟೇಬಲ್ ಹೊಂದಿರುವ ಲಿವಿಂಗ್ ರೂಮಿನ ಭಾಗವನ್ನು ತೋರಿಸುತ್ತದೆ. ಈ ಮನೆ ಅಚ್ಚುಕಟ್ಟಾಗಿದ್ದರೂ ಅಸ್ತವ್ಯಸ್ತವಾಗಿರುವಂತೆ ಕಾಣುತ್ತದೆ. ಜಾಕೆಟನ್ನು ಕುರ್ಚಿಯ ಮೇಲೆ ನೇತು ಹಾಕಲಾಗಿದೆ. ಮೇಜಿನ ಮೇಲೆ ಇಡಲಾದ ರಾಕೆಟ್ ಆಕೃತಿಯ ಜೊತೆಗೆ ಜಪಾನಿನ ಕತ್ತಿಯನ್ನು ಕಾಣವಹುದಾಗಿದೆ.