ದಕ್ಷಿಣ ಭಾರತ ಚಿತ್ರರಂಗದಲ್ಲಿ ಈ ವರ್ಷ ಅತಿಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಪೈಕಿ ಪುಷ್ಪ2 ಅಗ್ರಸ್ಥಾನದಲ್ಲಿದೆ ಎಂದರೆ ತಪ್ಪಲ್ಲ. ಈ ಸಿನಿಮಾ ಬಗ್ಗೆ ಎಲ್ಲರಿಗೂ ಭಾರಿ ನಿರೀಕ್ಷೆ ಇದೆ. ಪುಷ್ಪ2 ನಟ ಅಲ್ಲು ಅರ್ಜುನ್ ಅವರ ಕೆರಿಯರ್ ನ ಬಹುಮುಖ್ಯವಾದ ಸಿನಿಮಾ. ಕೆಲ ವರ್ಷಗಳ ಹಿಂದೆ ಮೊದಲ ಭಾಗ ತೆರೆಕಂಡು, ಭಾರಿ ಸದ್ದು ಮಾಡಿತು. ಅಲ್ಲು ಅರ್ಜುನ್ ಅವರ ಕೆರಿಯರ್ ನ ಅತಿದೊಡ್ಡ ಸಿನಿಮಾ ಎನಿಸಿಕೊಂಡಿತು. ಈ ಸಿನಿಮಾದ ಎರಡನೇ ಭಾಗ ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣುವ ಲಕ್ಷಣವಿದೆ. ಹೌದು, ಅಲ್ಲು ಅರ್ಜುನ್ ಅವರ ಪುಷ್ಪ2 ಶೀಘ್ರದಲ್ಲೇ ತೆರೆ ಕಾಣುವುದು ಪಕ್ಕಾ ಆಗಿದೆ.

ಈ ಸಿನಿಮಾವನ್ನು ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದು, ಕನ್ನಡದ ಹುಡುಗಿ ರಶ್ಮಿಕಾ ಶ್ರೀವಲ್ಲಿ ಪಾತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಎನ್ನುವುದು ಗೊತ್ತಿರುವ ವಿಷಯ. ಇನ್ನು ಪುಷ್ಪ2 ಸಿನಿಮಾದ ಪೋಸ್ಟರ್ ಗಳು ಈಗಾಗಲೇ ಕುತೂಹಲ ಮೂಡಿಸಿದ್ದು, ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಸಿನಿಮಾ ಯಾವಾಗ ತೆರೆಕಾಣುತ್ತದೆ ಎಂದು ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಒಂದು ಸ್ಪೆಷಲ್ ಸಾಂಗ್ ಸಹ ಇರುವ ವಿಷಯ ಎಲ್ಲರಿಗೂ ಗೊತ್ತಿದ್ದೂ, ಈ ಹಾಡಿನಲ್ಲಿ ಕನ್ನಡದ ಮತ್ತೊಬ್ಬ ಹುಡುಗಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ಹೌದು, ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಶ್ರೀಲೀಲಾ.
ಪುಷ್ಪ ಸಿನಿಮಾದ ಮೊದಲ ಭಾಗದಲ್ಲಿ ನಟಿ ಸಮಂತಾ ಸ್ಪೆಷಲ್ ನಲ್ಲಿ ಕಾಣಿಸಿಕೊಂಡು, ಹಾಟ್ ಲುಕ್ ನಲ್ಲಿ ಎಲ್ಲರನ್ನು ಸೆಳೆದಿದ್ದರು. ಎರಡನೇ ಭಾಗದಲ್ಲಿಯೂ ಅವರೇ ಸ್ಪೆಷಲ್ ಸಾಂಗ್ ನಲ್ಲಿ ನಟಿಸಬಹುದು ಎಂದು ಊಹಿಸಲಾಗಿತ್ತು, ಆದರೆ ಸಮಂತಾ ಅವರು ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಂಡಿಲ್ಲ. ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರು ಈ ಹಾಡಿನಲ್ಲಿ ಹೆಜ್ಜೆ ಹಾಕುತ್ತಾರೆ, ಅವರಿಗೆ 5 ಕೋಟಿ ಸಂಭಾವನೆ ಕೊಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಶ್ರದ್ಧಾ ಅವರು ಕೂಡ ಪುಷ್ಪ2 ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಂಡಿಲ್ಲ. ನಮ್ಮ ಕನ್ನಡದ ಹುಡುಗಿ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ..

ಹೌದು, ಕಿಸ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀಲೀಲಾ. ಈಗ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ತೆಲುಗಿನ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಇವರ ಡ್ಯಾನ್ಸ್ ಅಂದ್ರೆ ಎಲ್ಲರಿಗು ವಿಶೇಷವಾಗಿ ಇಷ್ಟ ಆಗುತ್ತದೆ ಎಂದರೂ ತಪ್ಪಲ್ಲ. ಇದೀಗ ಶ್ರೀಲೀಲಾ ಅವರೇ ಪುಷ್ಪ2 ಚಿತ್ರದ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಶ್ರೀಲೀಲಾ ಅವರನ್ನು ಡ್ಯಾನ್ಸಿಂಗ್ ಕ್ವೀನ್ ಎಂದು ಕರೆದಿರಿವುದು ಸಹ ವಿಶೇಷವಾಗಿದೆ.
ಇನ್ನು ಈ ಹಾಡಿನಲ್ಲಿ ಒಂದು ಕಡೆ ಶ್ರೀಲೀಲಾ ಅವರು, ಇನ್ನೊಂದು ಕಡೆ ಅಲ್ಲು ಅರ್ಜುನ್ ಅವರು, ಇಬ್ಬರು ಡ್ಯಾನ್ಸ್ ಮಾಡುವುದನ್ನು ನೋಡುವ ಅವಕಾಶ ನಮಗೆ ಸಿಗಲಿದೆ. ಈ ಹಾಡಿಗೆ ಶ್ರೀಲೀಲಾ ಅವರಿಗೆ ಬರೋಬ್ಬರಿ 2 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದ್ದು, ಮತ್ತೊಂದು ಕಡೆಯಿಂದ 3 ಕೋಟಿ ಸಂಭಾವನೆ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ಸಂಭಾವನೆ ಬಗ್ಗೆ ಅಧಿಕೃತ ಮಾಹಿತಿ ಇಲ್ಲದೇ ಹೋದರು ಸಹ, ಇವರಿಬ್ಬರು ಸ್ಟೈಲ್ ಆಗಿ ಡ್ಯಾನ್ಸ್ ಮಾಡೋದನ್ನ ನೋಡೋದಕ್ಕೆ ಅಭಿಮಾನಿಗಳು ಕಾಯುತ್ತಲಿದ್ದಾರೆ.