ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗ್ತಾ ಇದೆ ಅನ್ನೋ ಪ್ರಶ್ನೆ ಎದ್ದಿದೆ. ಗಾಂಧಿ ಕುಡುಂಬದ ಕಟ್ಟಾಳು ಎಂದೆನಿಸು ರೀತಿ ನಡೆದುಕೊಂಡಿದ್ದ ಡಿಕೆ ಶಿವಕುಮಾರ್ ಈಗ ಸಾಫ್ಟ್ ಹಿಂದುತ್ವ ತಾಳಿದ್ದಾರೆ. ಅದರಲ್ಲೂ ದೆಹಲಿಗೆ ಹೋಗಿ ಬಂದ ನಂತರವಂತೂ ಅವರ ಮಾತಿನ ದಾಟಿಯೇ ಬದಲಾಗಿ ಹೋಗಿದೆ. ಡಿಕೆ ಶಿವಕುಮಾರ್ ತಲೆಯಲ್ಲಿ ಏನು ಓಡುತ್ತಿದೆ ಅನ್ನೋದೇ ಪ್ರಶ್ನೆ. ಅಷ್ಟೆ ಅಲ್ಲ ಅನೇಕರು ಡಿಕೆ ಶಿವಕುಮಾರ್ ಬದಲಾವಣೆಗೆ ತಲೆಯಲ್ಲಿ ಹುಳ ಬಿಟ್ಟುಕೊಂಡವರಂತೆ ಆಡ್ತಿದ್ದಾರೆ.
ಹೌದು ಸಹಜವಾಗಿ ಕಾಂಗ್ರೆಸ್ ಕಟ್ಟಾಳು ಎಂದು ಇಷ್ಟು ಸುದೀರ್ಘ ವರ್ಷದಲ್ಲಿ ಬಿಂಬಿಸಿಕೊಂಡಿದ್ದ ಡಿಕೆ ಶಿವಕುಮಾರ್, ಈಗ ಬದಲಾವಣೆ ಆಗ್ತಾ ಇರೋದು ಎಲ್ಲರಿಗೂ ಆಶ್ಚರ್ಯ. ನಾನು ಹುಟ್ಟು ಕಾಂಗ್ರೆಸ್ಸಿಗ ಅಂತಿದ್ದ ಡಿಕೆ ಹೀಗೆ ಆಡ್ತಾ ಇರೋದು ಕೇವಲ ರಾಜ್ಯ ನಾಯಕರಿಗೆ ಅಷ್ಟೆ ಅಲ್ಲ ಕೇಂದ್ರದ ನಾಯಕರಿಗೂ ಪ್ರಶ್ನೆ ಉದ್ಭವವಾಗುವಂತೆ ಮಾಡಿದೆ. ನಿಜಕ್ಕೂ ಡಿಕೆಗ ಸಿಎಂ ಸ್ಥಾನ ಸಿಗಲ್ಲ ಅಂತ ಹೀಗೆ ಮಾಡ್ತಾ ಇದ್ದಾರಾ ಅನ್ನೋದೆ ಹಲವರ ಪ್ರಶ್ನೆ.

ಕುಂಭಮೇಳಕ್ಕೆ ಹೋಗಿ ಬಂದ ಬಳಿಕ ಮುಂದುವರೆದ ಭಾಗದಂತೆ ಈಶಾ ಫೌಂಡೇಶನ್ ನ ಶಿವರಾತ್ರಿ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು. ಅದು ಕೇಂದ್ರ ಸಚಿವ ಅಮಿತ್ ಷಾ ಜೊತೆ ವೇದಿಕೆ ಹಂಚಿಕೊಂಡಿದ್ದರು. ಈ ಬೆಳವಣಿಗೆ ಕಾಂಗ್ರೆಸ್ ನಾಯಕರ ವಿರೋಧಕ್ಕೆ ಕಾರಣ ಆಗಿತ್ತು. ಬಹಿರಂಗವಾಗಿಯೇ ಕಾಂಗ್ರೆಸ್ ನಾಯಕರು ಡಿಕೆ ಶಿವಕುಮಾರ್ ವಿರುದ್ಧ ಸಿಡಿದೆದ್ದಿದ್ದಾರೆ. ರಾಹುಲ್ ಗಾಂಧಿ ಯಾರು ಅಂತ ಗೊತ್ತಿಲ್ಲದೇ ಇರುವ ವ್ಯಕ್ತಿಯ ಕಾರ್ಯಕ್ರಮಕ್ಕೆ ಹೋಗಿದ್ದು ಸರಿಯಲ್ಲ ಅಂತ ಟೀಕೆ ಮಾಡ್ತಾ ಇದ್ದಾರೆ. ಇದ್ಯಾವುದೂ ಗೊತ್ತೇ ಇಲ್ಲ ಎಂಬಂತೆ ಡಿಕೆ ಶಿವಕುಮಾರ್ ನಡೆದುಕೊಳ್ತಿದ್ದಾರೆ.
ಈಗ ಮತ್ತೊಂದು ಎಡವಟ್ಟು ಎಂಬಂತೆ ವೇದಿಕೆ ಮೇಲೆ ಡಿಕೆ ಶಿವಕುಮಾರ್ ಗೆ ಅವಮಾನ ಆದರೂ ಡಿಕೆ ನೋ ರಿಯಾಕ್ಷನ್ ಎನ್ನುವಂತೆ ಇದ್ದಾರೆ. ಶಿವರಾತ್ರಿ ಸಂಭ್ರಮದ ರಾತ್ರಿಯಲ್ಲಿ ಜಗ್ಗಿ ವಾಸುದೇವ್ ವೇದಿಕೆ ಮೇಲೆಯೇ ಕೇಂದ್ರ ಸರ್ಕಾರವನ್ನ ಹಾಡಿ ಹೊಗಳಿದ್ದಾರೆ. ಕೇಂದ್ರ ಸರ್ಕಾರವನ್ನ ಪದೇ ಪದೇ ಟೀಕೆ ಮಾಡಿ ಬೈತಾ ಇದ್ದ ಡಿಕೆಶಿಗೆ ಇದ್ಯಾವುದೂ ಕೇಳಿಸಲೇ ಇಲ್ವಾ ಅನ್ನೋದೇ ಚರ್ಚೆ.

ವೇದಿಕೆ ಮೇಲೆ ಮಾತನಾಡಿರುವ ಜಗ್ಗಿ ವಾಸುದೇವ್, ಈ ಮೊದಲು ಪ್ರತಿ ತಿಂಗಳು ದೇಶದಲ್ಲಿ ಬಾಂಬ್ ಸ್ಪೋಟ ಆಗ್ತಾ ಇದ್ವು. ಆದರೆ ನಿಧಾನವಾಗಿ ಇದೆಲ್ಲವೂ ಬದಲಾಗ್ತಾ ಇದೆ. ಹಿಂದೆ ಯಾವ ಸ್ಥಳದಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತೋ ಗೊತ್ತಿಲ್ಲ. ನಿತ್ಯವೂ ಈ ಶಬ್ದ ಕೇಳಬೇಕಿತ್ತು. ಹೈದರಾಬಾದ್, ಮುಂಬೈ, ಪುಣೆಯಲ್ಲಿ ಹೀಗೆ ಅನೇಕ ಕಡೆ ಸ್ಪೋಟ ಆಗ್ತಾ ಇದ್ವು. ಆದರೆ ಕಳೆದ ಹತ್ತು ವರ್ಷದಲ್ಲಿ ಯಾವುದೇ ಬಾಂಬ್ ಸ್ಪೋಟದ ಶಬ್ದ ಕೇಳಿಲ್ಲ. ಇದಕ್ಕಾಗಿ ನಮ್ಮ ಏಜನ್ಸಿಗಳು ಹಾಗೂ ಕೇಂದ್ರ ಗೃಹ ಸಚಿವರಿಗೆ ಧನ್ಯವಾದ ಹೇಳಬೇಕು ಎಂದು ಹೇಳಿದ್ದಾರೆ. ಇದನ್ನ ಹೇಳುವಾಗ ಡಿಕೆ ಶಿವಕುಮಾರ್ ನಗುತ್ತಾ ಕೂತಿದ್ದಾರೆ.
ಇದನ್ನ ಹೇಳಬೇಕಾದರೆ ಯಾವುದೂ ತಮಗೆ ಗೊತ್ತಿಲ್ಲ ಎಂಬುವಂತೆ ಇದ್ದರು. ಇಷ್ಟಾದರೂ ಕೂಡ ಯಾವುದೇ ರೀತಿಯಾಗಿ ವಿರೋಧ ವ್ಯಕ್ತಪಡಿಸಿಲ್ಲ. ಅವರು ಹೇಳುವ ಮಾತನ್ನ ಕೇಳಿ ಸುಮ್ಮನೆ ಕೂತುಕೊಂಡಿದ್ದರು. ಅವರ ನಗು, ಮುಖದ ಭಾವನೆ ಎಲ್ಲವೂ ತಮಗೆ ಸಂಬಂಧ ಇಲ್ಲ ಅನ್ನೋ ರೀತಿ ಇತ್ತು ಅನ್ನೋದಕ್ಕೆ ವಿಡಿಯೋನೇ ಸಾಕ್ಷಿ ಹೇಳ್ತಾ ಇದೆ. ಈ ಬೆಳವಣಿಗೆ ಮತ್ತಷ್ಟು ವಿರೋಧಕ್ಕೆ ಕಾರಣವಾಗಿದೆ. ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಕಾರಣವಾಗಿದೆ.
ಈಶಾ ಫೌಂಡೇಶನ್ ಗೆ ಹೋಗಿ ಬಂದ ನಂತರವೂ ಇದನ್ನ ಸಮರ್ಥನೆ ಮಾಡಿಕೊಂಡಿದ್ದಾರೆ ಡಿಕೆ ಶಿವಕುಮಾರ್. ಇದು ನನ್ನ ವೈಯಕ್ತಿಕ, ಅವರು ಅನೇಕ ಅಭಿಯಾನ ಮಾಡಿದ ವ್ಯಕ್ತಿ. ಅಂತವರು ಬಂದು ಕರೆದಾಗ ನಾನು ಹೋಗಲ್ಲ ಎನ್ನಲು ಸಾಧ್ಯವಿಲ್ಲ. ಹೀಗಾಗಿ ಹೋಗಿದ್ದೆ ಅಂತ ಹೇಳಿದ್ದಾರೆ.