ಮಾರ್ಚ್ 1ನೇ ತಾರೀಕಿನಿಂದ ಬೆಂಗಳೂರಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ಈ ವಿಶೇಷ ಕಾರ್ಯಕ್ರಮ ಕಳೆದ ಕೆಲವು ವರ್ಷಗಳಿಂದ ಅದ್ಧೂರಿಯಾಗಿ ನಡೆಯುತ್ತಿದೆ. ಪ್ರತಿ ವರ್ಷವೂ ಚಿತ್ರರಂಗದವರಿಗಾಗಿ ಸರ್ಕಾರವೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಅಯೋಜಿಸುತ್ತಿದೆ. ವರ್ಷ ವರ್ಷವೂ ಬಹಳಷ್ಟು ಕಲಾವಿದರು ಬಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಈ ವರ್ಷ ಆಹ್ವಾನ ಕೊಟ್ಟಿರುವಂಥ ಎಲ್ಲಾ ಕಲಾವಿದರು ಸಹ ಬಂದಿಲ್ಲ, ಮುಖ್ಯ ಕಲಾವಿದರೇ ಬಂದಿಲ್ಲ ಎನ್ನುವ ಕಾರಣಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮತ್ತು ಇನ್ನು ಕೆಲವು ರಾಜಕಾರಣಿಗಳು ಚಿತ್ರರಂಗದ ನಟ ನಟಿಯರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಡಿಕೆಶಿ ಅವರು ಮಾತನಾಡಿರುವ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಚಲನಚಿತ್ರೋತ್ಸವ ಎಂದರೆ ವಿಶೇಷವಾಗಿ ಇದನ್ನು ಚಿತ್ರರಂಗದ ಗಣ್ಯರಿಗಾಗಿಯೇ ಅರೇಂಜ್ ಮಾಡುತ್ತಾರೆ. ವಿಶ್ವ ಮಟ್ಟದ ಸಿನಿಮಾಗಳನ್ನು ಸಹ ಇಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗಕ್ಕಾಗಿ ನಡೆಯುತ್ತಿರುವ ಕಾರ್ಯಕ್ರಮ ಎಂದಾಗ ಕನ್ನಡದ ಕಲಾವಿದರು ಬಂದು, ಸಪೋರ್ಟ್ ಮಾಡಬೇಕು, ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ಎಲ್ಲರ ನಿರೀಕ್ಷೆ ಮತ್ತು ಆಶಯ ಆಗಿರುತ್ತದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಚಂದನವನದ ಸ್ಟಾರ್ ನಟ ಶಿವ ರಾಜ್ ಕುಮಾರ್, ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ಮೂಲದ ನಟಿ ಪ್ರಿಯಾಂಕ ಮೋಹನ್ ಸೇರಿದಂತೆ ಇನ್ನು ಕೆಲವು ಕಲಾವಿದರು ತಂತ್ರಜ್ಞರು ಹಾಜರಿದ್ದರು, ಸಾಧು ಕೋಕಿಲ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ.
ಹಿರಿಯ ನಿರ್ದೇಶಕ ಟಿ. ಎಸ್ ನಾಗಾಭರಣ ಅವರು ಸೇರಿದಂತೆ ಇನ್ನು ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಬಂದು ಪಾಲ್ಗೊಂಡಿದ್ದಾರೆ. ಆದರೆ ಹಲವು ಸ್ಟಾರ್ ನಟರು ಈ ಕಾರ್ಯಕ್ರಮಕ್ಕೆ ಬಂದಿಲ್ಲ, ಈ ಬಗ್ಗೆ ಡಿಸಿಎಂ ಡಿಕೆ ಶಿವ ಕುಮಾರ್ ಅವರು ಈ ವಿಷಯವಾಗಿ ಮಾತನಾಡಿರುವ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಡಿಕೆಶಿ ಅವರಿಗೆ ಚಿತ್ರರಂಗದವರು ಹೆಚ್ಚಾಗಿ ಬಂದಿಲ್ಲ ಎನ್ನುವ ಕಾರಣಕ್ಕೆ ಕೋಪ ಬಂದಿದ್ದು, “ಚಿತ್ರರಂಗದವರು ಪರ್ಮಿಶನ್ ಬೇಕು, ಶೂಟಿಂಗ್ ಮಾಡೋಕೆ ಪರ್ಮಿಶನ್ ಕೊಡಿ ಅಂತ ಕೇಳೋಕೆ ಬರ್ತಾರೆ. ಬೇರೆ ಬೇರೆ ಕಾರ್ಯಕ್ರಮಕ್ಕೆ ಕರೆಯೋಕೆ ಬರ್ತಾರೆ, ಇದು ಅವರುಗಳಿಗಾಗಿ ಮಾಡಿರೋ ಕಾರ್ಯಕ್ರಮ ಇದಕ್ಕೆ ಬರೋದಿಲ್ಲ. ಯಾರ್ಯಾರಿಗೆ ಎಲ್ಲೆಲ್ಲಿ ಏನು ಮಾಡಬೇಕು ಅಂತ ನನಗೂ ಚೆನ್ನಾಗಿ ಗೊತ್ತಿದೆ. ನಟನಟಿಯರ ನಟ್ಟು ಬೋಲ್ಟ್ ಟೈಟ್ ಮಾಡೋದು ಹೇಗೆ ಅಂತ ಗೊತ್ತಿದೆ..
ದೊಡ್ಡಮನೆಯವರನ್ನ ನೋಡಿ ಎಲ್ಲರೂ ಕಳಿತುಕೊಳ್ಳಬೇಕು.” ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಈ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಡಿಕೆಶಿ ಅವರು ಹೇಳಿದ ಮಾತಲ್ಲಿ ಪೂರ್ತಿಯಾಗಿ ಸುಳ್ಳಿಲ್ಲ, ನಟ ನಟಿಯರು ಬರಬೇಕಿತ್ತು, ಹಾಗೆಂದ ಮಾತ್ರಕ್ಕೆ ಇವರು ತಮಗೆ ಅನ್ನಿಸಿದ್ದನ್ನ ಹೇಳುವುದು ಸರಿಯಲ್ಲ, ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಅನ್ನೋ ಮಾತು ಅಸಂಬದ್ಧವಾಗಿದೆ ಎನ್ನುವ ಮಾತುಗಳು ಇನ್ನಷ್ಟು ಜನರ ಬಾಯಲ್ಲಿ ಕೇಳಿಬರುತ್ತಿದೆ. ಒಟ್ಟಿನಲ್ಲಿ ಡಿಕೆಶಿ ಅವರು ಹೇಳಿರುವ ಮಾತುಗಳು ವೈರಲ್ ಆಗಿದ್ದು, ತಮ್ಮ ಸರ್ಕಾರದಲ್ಲಿ ಇರುವ ಅಧಿಕಾರಿಗಳು, ಸಂಸದರು ಎಲ್ಲರೂ ಜನರ ಸಂಪರ್ಕಕ್ಕೆ ಸಿಗುವ ಹಾಗೆ, ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾಡುವ ಹಾಗೆ ಮೊದಲು ಅವರ ನಟ್ಟು ಬೋಲ್ಟ್ ಗಳನ್ನು ಟೈಟ್ ಮಾಡಬೇಕು ಎನ್ನುತ್ತಿದ್ದಾರೆ ಜನರು.

ಇನ್ನು ಮತ್ತೊಬ್ಬ ರಾಜಕಾರಣಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಮತ್ತು ಸುದೀಪ್ ಅವರ ಬಗ್ಗೆ ಕಿಡಿ ಕಾರಿದ್ದಾರೆ. ಕಳೆದ ವರ್ಷ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬನ್ನಿ ಎಂದು ಹಲವು ಸಾರಿ ಭೇಟಿ ಮಾಡಿ, ಆಹ್ವಾನ ನೀಡಿ, ಕರೆ ಮಾಡಿದರೆ ನನ್ನ ಮನೆ ಹೈದರಾಬಾದ್ ನಲ್ಲಿದೆ ಕರ್ನಾಟಕ ಎಲ್ಲಿದೆ ಅಂತ ನನಗೆ ಗೊತ್ತಿಲ್ಲ ಎಂದು ರಶ್ಮಿಕಾ ಅವರು ಹೇಳಿದರಂತೆ, ಬಳಿಕ ಶೂಟಿಂಗ್ ಇದೆ ಬರೋದಕ್ಕೆ ಟೈಮ್ ಇಲ್ಲ ಎಂದು ಕಾರಣ ಕೊಟ್ಟರಂತೆ. ಇಂಥವರಿಗೆ ಬುದ್ಧಿ ಕಲಿಸಬೇಕು ಅಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಸುದೀಪ್ ಅವರ ಬಗ್ಗೆ ಪರೋಕ್ಷವಾಗಿ ಮಾತನಾಡಿ, ಅವಾರ್ಡ್ ಕೊಟ್ಟರೆ ರಿಜೆಕ್ಟ್ ಮಾಡ್ತಾರೆ ಏನೇನೋ ಕಾರಣ ಕೊಡ್ತಾರೆ ಅದೇ ಹಿಂದಿಯಲ್ಲಿ ಅವಾರ್ಡ್ ಕೊಟ್ಟಾಗ ಸಂತೋಷದಿಂದ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ಈ ರೀತಿ ಇರುವ ಎಲ್ಲಾ ಕಲಾವಿದರಿಗೆ ಬುದ್ಧಿ ಕಲಿಸಬೇಕು ಎಂದು ಹೇಳಿದ್ದಾರೆ. ಇನ್ನು ಸಾಧು ಕೋಕಿಲ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಕಲಾವಿದರಿಗೆ ಆಹ್ವಾನ ಕೊಟ್ಟಿಲ್ಲವಾ, ಯಾರು ಯಾಕೆ ಬಂದಿಲ್ಲ ಎಂದು ಕೇಳಿದ್ದರ ಬಗ್ಗೆ ಮಾತನಾಡಿರುವ ಸಾಧು ಕೋಕಿಲ ಅವರು, ಎಲ್ಲಾ ಕಲಾವಿದರ ಹೆಸರು ಇರುವ ಲಿಸ್ಟ್ ತೋರಿಸಿದ್ದಾರೆ. ಎಲ್ಲರಿಗೂ ಕಾಲ್ ಮಾಡಿ, ಅಥವಾ ಭೇಟಿ ಮಾಡಿ, ಅಥವಾ ಅವರ ಮನೆಗಳಿಗೆ ಆಹ್ವಾನ ಪತ್ರಿಕೆ ತಲುಪಿದೆ. ಕೆಲವರು ಆಹ್ವಾನ ಪತ್ರಿಕೆಯನ್ನ ರಿಸೀವ್ ಮಾಡಿದ್ದಾರೆ, ಇನ್ನು ಕೆಲವರು ಬ್ಯುಸಿ ಇರೋದಾಗಿ ತಿಳಿಸಿದ್ದಾರೆ. ಇನ್ನು ಕೆಲವರ ಮನೆಯಲ್ಲಿ ಅವರುಗಳ ನಾಯಿ ಆಹ್ವಾನ ಪತ್ರಿಕೆಯನ್ನು ಬರಮಾಡಿಕೊಂಡಿದೆ, ನಾವು ಎಲ್ಲರಿಗೂ ಆಹ್ವಾನ ಕಳಿಸಿದ್ದೀವಿ, ಯಾರು ಕೂಡ ಬಂದಿಲ್ಲ ಎಂದು ಹೇಳಿದ್ದಾರೆ ಸಾಧು ಕೋಕಿಲ ಅವರು.
ಇನ್ನು ಜಗ್ಗೇಶ್ ಅವರು ಸಹ ಈ ವಿಚಾರಕ್ಕೆ ರಿಯಾಕ್ಟ್ ಮಾಡಿ, ಸ್ಟಾರ್ ಕಲಾವಿದರನ್ನ ಕರೆಸಬೇಕು ಅಂದ್ರೆ 40 ಲಕ್ಷ ಖರ್ಚಾಗುತ್ತದೆ ಎಂದಿದ್ದರು. ಅದಕ್ಕೆ ಕೂಡ ಸಾಧು ಕೋಕಿಲ ಅವರು ಉತ್ತರ ಕೊಟ್ಟಿದ್ದು, ಅದು ನಿಜ ಬೌನ್ಸರ್ ಗಳ ಜೊತೆಗೆ ಬರುತ್ತಾರೆ, ಜನರನ್ನು ಕಂಟ್ರೋಲ್ ಮಾಡಬೇಕಾಗುತ್ತದೆ. ಇದೆಲ್ಲವೂ ಸ್ವಲ್ಪ ರಿಸ್ಕಿ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಜನರಿಗೆ ಹಾಗೂ ಚಿತ್ರರಂಗದ ಕಲಾವಿದರಿಗೆ ಉಪಯುಕ್ತವಾಗಲಿ ಎಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಆದರೆ ಕಲಾವಿದರು ಬರದೇ ಇರುವುದು, ಒಂದು ರೀತಿ ಬೇಸರದ ವಿಷಯ ಕೂಡ ಹೌದು. ಆದಷ್ಟು ಎಲ್ಲಾ ಕಲಾವಿದರು ಕಾರ್ಯಕ್ರಮಕ್ಕೆ ಬಂದು, ಭಾಗವಹಿಸಿದರೆ ಎಲ್ಲರಿಗೂ ಒಳಿತು, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದೊಡ್ಡ ಮಟ್ಟದಲ್ಲಿ ಹೆಸರು ಪಡೆಯುತ್ತದೆ ಎಂದರೆ ತಪ್ಪಲ್ಲ.