ಕನ್ನಡ ಕಿರುತೆರೆ, ಸಿನಿಮಾ ಹಾಗೂ ಬಿಗ್ಬಾಸ್ ರಿಯಾಲಿಟಿ ಶೋ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ದಿವ್ಯಾ ಉರುಡುಗ ಇದೀಗ ಗುಡ್ ನ್ಯೂಸ್ ಎನ್ನುತ್ತಾ ಅಭಿಮಾನಿಗಳ ಮುಂದೆ ಬಂದಿದ್ದಾರೆ. ರೇಷ್ಮೆ ಸೀರೆ, ಮಲ್ಲಿಗೆ ಹೂ ಮುಡಿದು ಮದುಮಗಳ ಹಾಗೆ ಕಂಗೊಳಿಸುತ್ತಾ ದಿವ್ಯಾ ಸದ್ಯದಲ್ಲೇ ಅನೌನ್ಸ್ ಮಾಡುತ್ತೀವಿ ಎನ್ನುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ, ವಿಡಿಯೋ ವೈರಲ್ ಆಗುತ್ತಿದ್ದು, ಸಿಹಿ ಸುದ್ದಿಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

https://www.instagram.com/p/CyASbq6rRb2/?utm_source=ig_web_copy_link&igshid=MzRlODBiNWFlZA==
ದಿವ್ಯಾ ಉರುಡುಗ ಅವರೊಂದಿಗೆ ಬೈಕ್ ರೇಸರ್ ಅರವಿಂದ್ ಕೆಪಿ ಕೂಡ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ದಿವ್ಯಾ ಮತ್ತು ಅರವಿಂದ್ ಮೊದಲ ಬಾರಿಗೆ ಭೇಟಿಯಾಗಿದ್ದು ಬಿಗ್ಬಾಸ್ ಶೋನಲ್ಲಿ. ಬಿಗ್ ಮನೆಯಲ್ಲಿ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದ ಈ ಜೋಡಿ ಶೋ ಮುಗಿದ ಬಳಿಕವು ಅಷ್ಟೇ ಕ್ಲೋಸ್ ಆಗಿದ್ದಾರೆ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಇವರಿಬ್ಬರ ಬಗ್ಗ ಸಾಕಷ್ಟು ದಿನದಿಂದಲೂ ಮದುವೆ ಸುದ್ದಿ ಹರಿದಾಡುತ್ತಿತ್ತು. ಇದೀಗ ದಿವ್ಯಾ ಉರುಡುಗ ಸದ್ಯದಲ್ಲೇ ಸಿಹಿ ಸುದ್ದಿ ನೀಡುತ್ತೇವೆ ಎಂದಿರುವುದು ಮದುವೆ ಬಗ್ಗೆಯೇ ಎಂಬ ಮಾತು ಹರಿದಾಡುತ್ತಿದೆ.
ಎಷ್ಟೋ ದಿನದ ಕನಸು ನನಸಾಗುವ ಸಮಯ ಬಂದಿದೆ, ನನ್ನಷ್ಟೇ ಕಾತರ ನಿಮಗೂ ಇದೆ ಎಂದು ಗೊತ್ತು’ ಎನ್ನುತ್ತಾ ಕ್ಯಾಮೆರಾಗೆ ಪೋಸ್ ನೀಡಲು ಸಜ್ಜಾಗುತ್ತಾರೆ. ‘ಸರ್ ಬರಲ್ವಾ’ ಎಂದು ಕ್ಯಾಮೆರಾಮ್ಯಾನ್ ಪ್ರಶ್ನೆ ಮಾಡುತ್ತಾರೆ. ‘ಫೋನ್ ಮಾಡಿ ಕೇಳ್ತೀನಿ’ ಎಂದು ಫೋನ್ ಮಾಡಿ ವಿಚಾರಿಸುತ್ತಾರೆ ದಿವ್ಯಾ. ‘ಇನ್ನು ಬಂದಿಲ್ವಾ, ಶಾಪಿಂಗ್ ಇನ್ನೂ ಮುಗಿದಿಲ್ವಾ, ನೀವು ಬಂದಿಲ್ಲ ಅಂದ್ರೆ ನಾನು ಒಬ್ಬಳೆ ಅನೌನ್ಸ್ ಮಾಡುತ್ತೀನಿ’ ಎನ್ನುತ್ತಾರೆ. ಇದನ್ನು ಕಂಡ ಅಭಿಮಾನಿಗಳು ಮದುವೆಯ ವಿಚಾರ ತಿಳಿಸಲು ದಿವ್ಯಾ ವಿಡಿಯೋ ಮೂಲಕ ಪೀಠಿಕೆ ಹಾಕುತ್ತಿದ್ದಾರೆ ಎಂಬ ಮಾತು ನೆಟ್ಟಿಗರಿಂದ ಕೇಳಿ ಬರುತ್ತಿದೆ.