ನಮ್ಮ ಸ್ಯಾಂಡಲ್ವುಡ್ ನಲ್ಲಿ ಬಹಳ ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ ನಟ ಎಂದರೆ ಅದು “ಡಾಲಿ ಧನಂಜಯ್” ಎಂದರೆ ತಪ್ಪಾಗಲಾರದು. ಈ ನಟ ಯಾರ ಸಹಾಯ ಇಲ್ಲದೆ ಇಂದು ನಟ ನಿರ್ದೇಶಕ ಹಾಗೂ ನಿರ್ಮಾಪಕ ನಾಗಿಯೂ ಗುರುತಿಸಿಕೊಂಡಿದ್ದಾರೆ. ಇನ್ನು ಈ ನಟ ಸ್ಯಾಂಡಲ್ವುಡ್ ನಲ್ಲಿ ಅಲ್ಲದೆ ಟಾಲಿವುಡ್ ನಲ್ಲೂ ಕೂಡ ದೊಡ್ಡ ಮಟ್ಟದ ಹೆಸರು ಗಳಿಸಿದ್ದಾರೆ.ಇನ್ನು ಈ ನಟ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಈ ನಟ ಎಲ್ಲರ ತಲೆಗೂ ಹುಳ ಬಿಟ್ಟಿದ್ದಾರೆ.ಇವರು ಹಂಚಿಕೊಂಡಿರುವ ಆ ಗೊಂದಲ ಮೂಡಿಸುವ ಪೋಸ್ಟ್ ಎಲ್ಲರ ತಲೆ ಕೆಡಿಸುತ್ತಿದೆ.

ಡಾಲಿ ಪರಿಚಯಿಸಿಕೊಂಡಿದ್ದು “ಬಾಕ್ಸರ್” ಸಿನಿಮಾ ಮುಕಾಂತರ.ಇದೊಂದು ಸಿನಿಮಾ ಇಂದ ತಮ್ಮ ನಟನೆಯನ್ನು ಎಲ್ಲರಿಗೂ ಮೆಚ್ಚುಗೆ ಪಡಿಸಿ ತಮ್ಮ ಸಿನಿ ಗ್ರಾಫ್ ನನ್ನು ದಿನದಿಂದ ದಿನಕ್ಕೆ ಮೇಲಕ್ಕೆ ಏರಿಸುತ್ತಲೇ ಬಂದಿದ್ದಾರೆ.ಇನ್ನು ಕಳೆದ ವರ್ಷ ತೆರೆಕಂಡ ಬಡವಾ ರಸ್ಕಾಲ್ ಸಿನಿಮಾ ಮೂಲಕ ನಿರ್ಮಾಪಕ ನಾಗಿ ಕೂಡ ಪರಿಚಯಿಸಿಕೊಂಡು ತನ್ನ ಮೊದಲ ಪ್ರಯತ್ನ ದಲ್ಲಿ ಗೆಲ್ಲುತ್ತಾರೆ. ಅದರೊಟ್ಟಿಗೆ ಪ್ಯಾನ್ ಇಂಡಿಯಾ ಸಿನಿಮಾ ಆದ “ಪುಷ್ಪ 1” ನಲ್ಲಿ ಖಳನಾಯಕ ನಾಗಿ ಆ ಸಿನಿಮಾದ ಜಾಲಿ ರೆಡ್ಡಿಯಾಗಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ.ಇದಾದ ಬಳಿಕ ಈ ಹುಡುಗನಿಗೆ ಟಾಲಿವುಡ್ ನಲ್ಲಿ ಕೂಡ ಕ್ರೇಜ್ ಹೆಚ್ಚಾಗಿದೆ.
ಇತ್ತೀಚೆಗೆ ಧನಂಜಯ ನಟನೆಯ ‘ತೋತಾಪುರಿ’, ‘ಮಾನ್ಸೂನ್ ರಾಗ’ ಹಾಗೂ ‘ಹೆಡ್ಬುಷ್’ ಸಿನಿಮಾಗಳು ಅದ್ದೋರಿಯಾಗಿ ಬಿಡುಗಡೆಯಾಗಿತ್ತು.ಈ ಎರಡು ಚಿತ್ರದಲ್ಲಿ ನಟನಾಗಿಯೂ ಹಾಗೂ ನಿರ್ಮಾಪಕ ನಾಗಿಯೂ ಡಾಲಿ ಧನಂಜಯ್ ಗೆದ್ದಿದ್ದಾರೆ.ಇನ್ನು ಇವರ ನಟನೆಯ ‘ಜಮಾಲಿಗುಡ್ಡ’ ರಿಲೀಸ್ಗೆ ಎಲ್ಲಾ ತಯಾರಿ ನಡೆಸುತ್ತಿದೆ. ಈಗಾಗಲೇ ನಮ್ಮ ಸ್ಯಾಂಡಲ್ವುಡ್ ನ ಡಾಲಿ ತಮಿಳಿನ ಒಂದು ಚಿತ್ರದಲ್ಲಿ ಕೂಡ ನಟಿಸಿ ಬಂದಿದ್ದಾರೆ. ‘ಹೊಯ್ಸಳ’ ಹಾಗೂ ‘ಉತ್ತರಕಾಂಡ’ ಸಿನಿಮಾಗಳ ಚಿತ್ರೀಕರಣದ ಹಂತದಲ್ಲಿದೆ. ಈಗಾಗಲೇ ‘ಪುಷ್ಪ’- 2 ಚಿತ್ರೀಕರಣ ಶುರುವಾಗಿದ್ದು, ಶೀಘ್ರದಲ್ಲೇ ನಮ್ಮ ಡಾಲಿ ಟಾಲಿವುಡ್ ಗೆ ಜಾಲಿ ರೆಡ್ಡಿಯಾಗಿ ಸೆಟ್ಗೆ ಎಂಟ್ರಿ ಕೊಡಲಿದ್ದಾರೆ.
ಇದೀಗ ಒಂದು ಸ್ಪೆಷಲ್ ವಿಡಿಯೋ ಬಿಡುಗಡೆ ಮಾಡಿ ಧನು ಎಲ್ಲಾರಲ್ಲೂ ಕುತೂಹಲ ಮೂಡಿಸಿದ್ದಾರೆ.ಇನ್ನು ಆ ವಿಡಿಯೋದಲ್ಲಿ 12 – 1 = 23 ಎನ್ ಇರ್ಬೋದು ? ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರ ಏನು? ಎಂದು ಅಭಿಮಾನಿಗಳು ತಲೆಗೆ ಹುಳ ಬಿಟ್ಟಿಕೊಂಡಿದ್ದಾರೆ.ಈಗ ಸಾಮಾಜಿಕ ಜಾಲತಾಣಗಳಲ್ಲಿ ಡಾಲಿ ಅಭಿಮಾನಿಗಳು ಒಬ್ಬಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಯಾರೊಬ್ಬರು ಆ ರಹಸ್ಯ ಏನು ಎಂದು ಭೇದಿಸಲು ಸಾಧ್ಯವಾಗುತ್ತಿಲ್ಲ. ಏನೇನೋ ಫಾರ್ಮುಲಾಗಳನ್ನೆಲ್ಲಾ ಬರೆದು ಕೊನೆಗೆ ಮಧ್ಯದಲ್ಲಿ ಫೈನಲ್ 12 – 1 = 23 ಎಂದು ಬರೆದಿದ್ದಾರೆ.
ಇವರ ಈ ಮಾತಿನ ಅರ್ಥ ಏನಿರಬಹುದು ಎಂದು ಎಲ್ಲರೂ ಅವರ ಮುಂದಿನ ಸಿನಿಮಾ ಹೆಸರಿರಬಹುದು ಅಥವಾ ಶೂನ್ಯ ಡೈರೆಕ್ಷನ್ ನಲ್ಲಿ ಡಾಲಿ ಕಾಣಿಸಿಕೊಳ್ಳಬಹುದು ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.ಇತ್ತ ನಮ್ಮ ಸ್ಯಾಂಡಲ್ವುಡ್ ನ “ಮೋಹಕ ತಾರೆ ರಮ್ಯಾ” ಡಾಲಿ ಅವರ ಮದುವೆಯ ದಿನಾಂಕ ಎಂದು ಕಾಮೆಂಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಇವರ ಮುಂದಿನ ಸಿನಿಮಾ ಡೈರೆಕ್ಷನ್ ಎನ್ನುತ್ತಿದ್ದ ಅಭಿಮನಿಗಳಿಗೆ ಡಾಲಿ ಅವರ ಮದುವೇನಾ ಎಂದು ಎಲ್ಲರೂ ತಮ್ಮ ತಲೆಗೆ ಮತ್ತಷ್ಟು ಹುಳ ಬಿಟ್ಟಿಕೊಂಡಿದ್ದಾರೆ.ಆದರೆ ಇಷ್ಟೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಡಾಲಿ ಅವರ ಬಗ್ಗೆ ಸದ್ದು ಮಾಡುತ್ತಿದ್ದರು.ಡಾಲಿ ಧನಂಜಯ್ ಮೌನ ದರಿಸಿದ್ದಾರೆ.