ರಾಜ್ಯ ರಾಜಕಾರಣದಲ್ಲಿ ಸದ್ಯದಲ್ಲೇ ಕ್ಷಿಪ್ರಕ್ರಾಂತಿ ಆಗೋ ಮುನ್ಸೂಚನೆ ಕಾಣಿಸುತ್ತಿದೆ. ಕಾಂಗ್ರೆಸ್ ನ ಪ್ರಭಾವಿ ನಾಯಕರೊಬ್ಬರು ಬಿಜೆಪಿ ಸೇರ್ತಾರೆ ಅನ್ನೋ ಸುದ್ದಿ, ಎಲ್ಲೆಲ್ಲೂ ಸಂಚಲನ ಉಂಟು ಮಾಡ್ತಿದೆ. ಬೇರೆ ಪಕ್ಷದಿಂದ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂತಿದ್ದ ನಾಯಕನೇ ಈಗ ಬಿಜೆಪಿ ಕಡೆ ಮುಖ ಮಾಡ್ತಿದ್ದಾರೆ ಅನ್ನೋ ಸುದ್ದಿ ನಿಜಕ್ಕೂ ಆಶ್ಚರ್ಯಕರ ಸಂಗತಿಯೇ. ಬೇರೆ ಶಾಸಕರನ್ನ ಕರೆದು ತರೋದ್ರಲ್ಲಿ ಬ್ಯುಸಿಯಾಗಿದ್ದಾರೆ ಈ ನಾಯಕ ಅಂತ ಇಡೀ ಪಕ್ಷ ಅಂದುಕೊಳ್ತಿರೋ ಹೊತ್ತಲ್ಲೇ ಈ ದಿಢೀರ್ ಬೆಳವಣಿಗೆ ಇಡೀ ರಾಜ್ಯ ಚರ್ಚೆ ಮಾಡುವಂತಾಗಿದೆ.
ನಾವು ಹೇಳ್ತಾ ಇರೋ ಆ ಪ್ರಭಾವಿ ನಾಯಕ ಬೇರಾರು ಅಲ್ಲ. ಕನಕಪುರ ಬಂಡೆ ಡಿಕೆ ಶಿವಕುಮಾರ್. ಇತ್ತೀಚೆಗೆ ಡಿಕೆ ಶಿವಕುಮಾರ್, ಹಿಂದುತ್ವ ಜಪದಲ್ಲಿ ಮುಳುಗಿಹೋಗಿದ್ದಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಅಷ್ಟೆ ಅಲ್ಲ ಬಿಜೆಪಿ ಹೈಕಮಾಂಡ್ ಗೂ ಹತ್ತಿರವಾಗ್ತಿದ್ದಾರೆ ಅನ್ನೋದಕ್ಕೆ ಹಲವಾರು ಸಾಕ್ಷಿ ಗುಡ್ಡೆಗಳಿವೆ. ನಿತ್ಯವೂ ಇಂತದೊಂದು ಸಾಕ್ಷಿಯನ್ನ ಜನ ನೋಡ್ತಾನೇ ಇದ್ದಾರೆ. ಹಾಗಾದ್ರೆ ನಿಜಕ್ಕೂ ಡಿಕೆ ಶಿವಕುಮಾರ್ ಬಿಜೆಪಿ ಸೇರ್ತಾರಾ..? ಗೊತ್ತಿಲ್ಲ. ಅಥವಾ ರಾಜಕೀಯ ಸ್ರ್ಟಾಟಜಿಯನ್ನೇನಾದ್ರೂ ಮಾಡ್ತಾ ಇದ್ದಾರಾ ಅದೂ ಗೊತ್ತಿಲ್ಲ.
ರಾಜಕಾರಣ ನಿಂತ ನೀರಲ್ಲ. ರಾಜಕಾರಣಿಗಳು ಯಾರೂ ಸನ್ಯಾಸಿಗಳಲ್ಲ. ಅಧಿಕಾರಕ್ಕಾಗಿ ಯಾವುದೇ ಸಂದರ್ಭದಲ್ಲಿ ಏನೇ ನಿರ್ಧಾರ ತೆಗೆದುಕೊಳ್ಳೋಕೆ ಹಿಂಜರಿಯಲ್ಲ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು. ಅದಕ್ಕೆ ಈ ಹಿಂದೆ ಸಾಕಷ್ಟು ಉದಾಹರಣೆಗಳು ಇವೆ. ಈಗ ಡಿಕೆ ಶಿವಕುಮಾರ್ ವಿಚಾರದಲ್ಲೂ ಅದೇ ಆಗ್ತಾ ಇದೆ. ರಾಜ್ಯ ರಾಜಕಾರಣದಲ್ಲಿ ಅಂಥದ್ದೊಂದು ಸಮಯ, ಸಂದರ್ಭ ಬಂದೇ ಬಿಟ್ಟಿದೆ ಅನಿಸುತ್ತಿದೆ. ಕಾಂಗ್ರೆಸ್ ಟ್ರಬಲ್ ನ ಶೂಟರ್, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್ ಈ ವಿಚಾರವಾಗಿ ನಿಜವಾಗುತ್ತಾ ಅನ್ನೋದೆ ಚರ್ಚೆ.

ಹೌದು. ಇದು ನಿಮಗೆ ಊಹಾಪೋಹ ಅನಿಸಿದ್ರೂ, ಸದ್ಯದ ರಾಜಕೀಯ ಸನ್ನಿವೇಶಗಳು ಇದಕ್ಕೆ ಪೂರಕವಾಗಿವೆ. ಬಿಜೆಪಿ ಕಡೆ ಡಿ ಕೆ ಶಿವಕುಮಾರ್ ಹತ್ತಿರವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಕಮಲದ ಜೊತೆ ಸೇರಿಕೊಳ್ತಾರೆ. ಮುಂದೆ ಸರ್ಕಾರ ರಚಿಸುವ ಸಿದ್ಧತೆಯಲ್ಲೂ ತೊಡಗಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಡಿ.ಕೆ ಶಿವಕುಮಾರ್ ನಡೆ ಕೂಡ ಅದೇ ರೀತಿ ಇದೆ. ಡಿ.ಕೆ ಶಿವಕುಮಾರ್ ಗೆ ಕಾಂಗ್ರೆಸ್ ನಲ್ಲಿ ಹೆಜ್ಜೆ ಹೆಜ್ಜೆಗೂ ಮುಳ್ಳುಗಳೇ ಎದುರಾಗ್ತಿವೆ.. ಕೆಪಿಸಿಸಿ ಅಧ್ಯಕ್ಷರಾಗಿ, ಪಕ್ಷ ಸಂಘಟಿಸಿ, ಅಧಿಕಾರಕ್ಕೆ ತಂದಿದ್ರು. ಆದ್ರೆ ಈಗ ಅದೇ ಸ್ಥಾನವನ್ನ ಕಿತ್ತುಕೊಳ್ಳಲು ಸಪಕ್ಷೀಯರೆಲ್ಲಾ ಡಿಕೆ ಶಿವಕುಮಾರ್ ವಿರುದ್ದ ಒಂದಾಗಿದ್ದಾರೆ. ಮುಂದಿನ ಮುಖ್ಯಮಂತ್ರಿ ಅಂತಾ ಬಿಂಬಿಸಿಕೊಳ್ತಿದ್ರೂ, ವಿರೋಧಿಗಳ ತಂತ್ರಗಾರಿಕೆಗಳಿಂದ ಸಚಿವರು, ಶಾಸಕರ ಸಪೋರ್ಟ್ ಸಿಗ್ತಾ ಇಲ್ಲ. ಈ ಅಸಮಧಾನ ಡಿ.ಕೆ ಶಿವಕುಮಾರ್ ಗೆ ಸದಾ ಕಾಡ್ತಿದೆ. ಇದನ್ನ ಹೇಳಿಕೊಳ್ಳೋಕೆ ಆಗದೇ ವಿಷಕಂಠನಂತೆ ನುಂಗಿಕೊಂಡೇ ಇದ್ದಾರೆ. ಆದ್ರೆ ಈಗ ರಾಜಕೀಯ ಪರಿಸ್ಥಿತಿಗಳು ಬದಲಾಗ್ತಿದ್ದು, ಡಿ.ಕೆ ಶಿವಕುಮಾರ್ ಅವ್ರು ಬಿಜೆಪಿ ಸೇರಿದ್ರೂ ಅಚ್ಚರಿಯಿಲ್ಲ ಅನ್ನೋ ಚರ್ಚೆಗಳು ಶುರುವಾಗಿದೆ.
ಅದಕ್ಕೆ ಪೂರವಾಗಿ ಒಂದೊಂದೇ ಸನ್ನಿವೇಶಗಳು ನಡೆಯುತ್ತಿವೆ. ಇಲ್ಲಿಯವರೆಗೆ ಹಿಂದುತ್ವ ವಿಚಾರದಲ್ಲಿ ಪಕ್ಷದ ನಿಲುವಿನಂತೆ ನಡೆದುಕೊಳ್ತಾ ಇದ್ದ ಡಿಕೆಶಿ ಈಗ ಸಾಫ್ಟ್ ಹಿಂದುತ್ವದ ಮೂಲಕ ವಿರೋಧಿಗಳಿಗೆ ಮಾತ್ರವಲ್ಲ, ಹೈಕಮಾಂಡ್ ಗೂ ಡಿಕೆಶಿ ದೊಡ್ಡ ಸಂದೇಶ ಕೊಡ್ತಿದ್ದಾರೆ ಎಂದೆನಿಸುತ್ತಿದೆ. ಮೊದಲನೇದಾಗಿ ಅವರು ನರೇಂದ್ರ ಮೋದಿ ಭೇಟಿ ಮಾಡಿದ್ದು. ಇದು ಎಐಸಿಸಿ ನಾಯಕರಿಗೂ ಗೊತ್ತಿರಲಿಲ್ಲ ಅಂತ ಚರ್ಚೆ ಆಗಿ ವಿರೋಧವೂ ವ್ಯಕ್ತವಾಗಿತ್ತು. ಬಳಿಕ ಎಐಸಿಸಿ ನಾಯಕರ ವಿರೋಧದ ನಡುವೆಯೂ ಡಿ.ಕೆ ಶಿವಕುಮಾರ್ ಕುಂಭಮೇಳಕ್ಕೆ ಹೋಗಿ ಪುಣ್ಯ ಸ್ನಾನ ಮಾಡಿದ್ರು. ಇದಾದ ಬಳಿಕವಂತೂ ಡಿ.ಕೆ ಶಿವಕುಮಾರ್ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎಂದು ನಾನಾ ರೀತಿಯಲ್ಲಿ ಚರ್ಚೆ ಆಗ್ತಿತ್ತು. ಈಗ ಮತ್ತೊಂದು ನಿದರ್ಶನ ಎಂಬಂತೆ ಈಶಾ ಫೌಂಡೇಶನ್ ಆಯೋಜಿಸಿದ್ದ ಮಹಾಶಿವರಾತ್ರಿ ಕಾರ್ಯಕ್ರಮದಲ್ಲೂ ಡಿ.ಕೆ ಶಿವಕುಮಾರ್ ಇಡೀ ದಿನ ಭಾಗಿಯಾಗಿದ್ದಾರೆ. ಅದ್ರಲ್ಲೂ ಅಮಿತ್ ಶಾ ಇದ್ದ ವೇದಿಕೆಯನ್ನೇ ಹಂಚಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸದ್ಗುರು ಮಧ್ಯದಲ್ಲಿ ಕೂತಿದ್ರೆ ಆ ಕಡೆ ಈ ಕಡೆ ಅಮಿತ್ ಶಾ, ಡಿ.ಕೆ ಶಿವಕುಮಾರ್ ಕೂತಿದ್ರು.
ಇದು ರಾಜ್ಯ ಕಾಂಗ್ರೆಸ್ ನಲ್ಲಿ ಮಾತ್ರವಲ್ಲ.. ರಾಷ್ಟ್ರ ರಾಜಕಾರಣದಲ್ಲೂ ಚರ್ಚಗೆ ಗ್ರಾಸವಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಂತೂ ಭಾರೀ ಚರ್ಚೆ ಅಗ್ತಿದೆ. ಕೆಲವರಂತೂ ಅಮಿತ್ ಶಾ ಜೊತೆ ಇರುವ ಫೋಟೋ ಹಂಚಿಕೊಂಡು ಡಿ.ಕೆ ಶಿವಕುಮಾರ್ ಅವ್ರ ಕಾಲೆಳೆಯುತ್ತಿದ್ದಾರೆ. ಎಐಸಿಸಿ ಕಾರ್ಯದರ್ಶಿ ಪಿ.ವಿ ಮೋಹನ್ ಸಾಮಾಜಿಕ ಜಾಲತಾಣದಲ್ಲಿ ಅಸಮಧಾನ ಹೊರಹಾಕಿದ್ದಾರೆ. ರಾಹುಲ್ ಗಾಂಧಿ ಯಾರು ಎಂದು ಗೊತ್ತೇ ಇಲ್ಲ ಅಂತಾ ಸದ್ಗುರು ಜಗ್ಗಿ ವಾಸುದೇವ್ ಅಣಕಿಸಿದ್ರು. ಅವರು ಆರ್ ಎಸ್ ಎಸ್ ದೃಷ್ಟಿಕೋನ ಹೊಂದಿರುವ ವ್ಯಕ್ತಿ. ಅಂಥಹವರ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗ್ತಿದೆ. ಆರ್ ಎಸ್ ಎಸ್ ಮುಖಂಡರು, ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಳ್ಳುವುದು ಸರಿಯಲ್ಲ ಅಸಮಧಾನ ಹೊರಹಾಕಿದ್ದಾರೆ.
ಇದೆಲ್ಲದರ ಮಧ್ಯೆ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಕೆಪಿಸಿಸಿ ಗದ್ದುಗೆಗಾಗಿ ಕಿತ್ತಾಟ ಶುರುವಾಗಿದೆ. ಸದ್ಯದಲ್ಲೇ ಕ್ಷಿಪ್ರಕ್ರಾಂತಿ ಆಗುತ್ತೆ ನೋಡ್ತಿರಿ ಅಂತಾ ಹೇಳಿರೋದು ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಮುಂದಿನ ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್, ಇತ್ತೀಚಿಗೆ ಸಾಫ್ಟ್ ಹಿಂದುತ್ವ ಅನುಸರಿಸುತ್ತಿರೋದ್ರ ಜೊತೆಗೆ ದೇಶಾದ್ಯಂತ ಟೆಂಪಲ್ ರನ್ ಕೂಡ ನಡೆಸ್ತಿದ್ದಾರೆ. ಡಿಕೆಶಿಯ ಹಿಂದೂ ಪರ ನಿಲುವು ಹಾಗೂ ಬಿಜೆಪಿ ಪರ ಮೃಧು ಧೋರಣೆ ರಾಜಕೀಯ ಪಡಸಾಲೆಯಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದೆ. ಇನ್ನು ಈ ಮೂಲಕ ಸಿಎಂ ಸ್ಥಾನ ಸಿಗದೇ ಹೋದ್ರೆ ಏನು ಬೇಕಾದ್ರೂ ಮಾಡಲು ನಾನು ರೆಡಿ ಅನ್ನೋ ಸಂದೇಶವನ್ನ ಹೈ ಕಮಾಂಡ್ ಗೆ ಡಿಕೆ ನೀಡಿದ್ರಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ. ಈ ಮೂಲಕ ಪೊಲಿಟಿಕಲ್ ಗೇಮ್ ಆಡ್ತಾ ಇದ್ದಾರಾ ಡಿಕೆಶಿ ಅಂತಲೂ ಅನುಮಾನ ಶುರುವಾಗಿದೆ.