80ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಟಿಯರಲ್ಲಿ ಖುಷ್ಬೂ ಅವರು ಸಹ ಒಬ್ಬರು. ಇವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಖುಷ್ಬೂ ಅವರಿಗೆ ಈಗ 54 ವರ್ಷ, ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ, ರಾಜಕೀಯದಲ್ಲಿ ಆಕ್ಟಿವ್ ಆಗಿದ್ದಾರೆ ಜೊತೆಗೆ ಧಾರಾವಾಹಿಯಲ್ಲಿ ಸಹ ನಟಿಸುವುದಕ್ಕೆ ಶುರು ಮಾಡಿದ್ದಾರೆ. ಈ ರೀತಿಯಾಗಿ ಸಖತ್ ಬ್ಯುಸಿ ಇರುವ ಖುಷ್ಬೂ ಅವರು ಇತ್ತೀಚೆಗೆ ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಖುಷ್ಬೂ ಅವರು ಈ ರೀತಿ ತೂಕ ಇಳಿಸಿಕೊಂಡಿರುವುದು ಇಂಜೆಕ್ಷನ್ ಇಂದ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದು, ಅದಕ್ಕೆ ಖುಷ್ಬೂ ಅವರು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಖುಷ್ಬೂ ಅವರು ಹೇಳಿದ್ದೇನು? ಇಂಥ ಚರ್ಚೆ ಬಂದಿದ್ದು ಯಾಕೆ? ಪೂರ್ತಿ ಡೀಟೇಲ್ಸ್ ಇಲ್ಲಿದೆ ನೋಡಿ..

ಖುಷ್ಬೂ ಅವರು ಮೂಲತಃ ಮುಂಬೈ ಹುಡುಗಿ, ಆದರೆ ಇವರು ಹೀರೋಯಿನ್ ಆಗಿ ಹೆಸರು ಮಾಡಿದ್ದು, ಸ್ಟಾರ್ ಆಗಿದ್ದು ಎಲ್ಲವೂ ದಕ್ಷಿಣ ಭಾರತದಲ್ಲೇ. ಖುಷ್ಬೂ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಹೀಗೆ ಎಲ್ಲಾ ಭಾಷೆಗಳಲ್ಲಿ ಸಹ ನಟಿಸಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಸಹ ಸ್ಟಾರ್ ಆಗಿ ಹೆಸರು ಮಾಡಿದ್ದಾರೆ. ತಮಿಳಿನಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿದ್ದ ನಟಿಯರಲ್ಲಿ ಇವರು ಕೂಡ ಒಬ್ಬರು. ಇನ್ನು ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆಗೆ ನಟಿಸಿದ ಸಿನಿಮಾಗಳನ್ನು ನಾವೆಲ್ಲರೂ ಮರೆಯಲು ಹೇಗೆ ಸಾಧ್ಯ ಅಲ್ವಾ? ರಣಧೀರ ಸಿನಿಮಾದ ಯಾರೇ ನೀನು ಸುಂದರ ಚೆಲುವೆ ಹಾಡನ್ನು ಇವತ್ತಿಗೂ ಯಾರು ಮರೆತಿಲ್ಲ, ಎವರ್ ಗ್ರೀನ್ ಹಾಡುಗಳಲ್ಲಿ ಈ ಹಾಡು ಅಗ್ರಸ್ಥಾನ ಗಳಿಸುತ್ತದೆ..
ಇಂಥ ಖುಷ್ಬೂ ಅವರು ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ವಿಷ್ಣುವರ್ಧನ್ ಅವರೊಡನೆ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಖುಷ್ಬೂ ಅವರು 80ರ ದಶಕ ಮತ್ತು 90ರ ದಶಕದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿ, ಸೂಪರ್ ಸ್ಟಾರ್ ಆದವರು. ಇವರು ಮದುವೆಯಾಗಿದ್ದು ತಮಿಳಿನ ಖ್ಯಾತ ನಿರ್ದೇಶಕ ಸುಂದರ್ ಸಿ ಅವರನ್ನು. ಇವರಿಬ್ಬರು ಬಹಳ ಸುಂದರವಾದ ಸಂಸಾರ, ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ. ಇವರಿಬ್ಬರಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಇದ್ದಾರೆ. ಅವರು ಚಿತ್ರರಂಗಕ್ಕೆ ಬರಲಿದ್ದಾರೆ. ಇದೆಲ್ಲದರ ನಡುವೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಖುಷ್ಬೂ ಅವರ ವೇಟ್ ಲಾಸ್ ಜರ್ನಿ. ಹೌದು, ಇತ್ತೀಚೆಗೆ ಖುಷ್ಬೂ ಅವರು ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡು ನೆಟ್ಟಿಗರಿಗೆ ಶಾಕ್ ನೀಡಿದ್ದರು.

ಬ್ಯಾಕ್ ಟು ಫಾರ್ಮ್ ಎನ್ನುವ ಅರ್ಥದಲ್ಲಿ ತೂಕ ಇಳಿಸಿಕೊಂಡ ಫೋಟೋಸ್ ಗಳನ್ನು ಶೇರ್ ಮಾಡಿದ್ದರು, ಇದನ್ನು ನೋಡಿ ಹಲವಾರು ಜನರು ಖುಷ್ಬೂ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದರು, 54ನೇ ವಯಸ್ಸಿಗೆ ಇಷ್ಟು ಹಾರ್ಡ್ ವರ್ಕ್ ಮಾಡಿ ತೂಕ ಇಳಿಸಿಕೊಂಡಿರುವುದು ನಿಜಕ್ಕೂ ಗ್ರೇಟ್ ಎಂದು ಹಲವರು ಹೇಳಿದರೆ, ಕೆಲವರು ನೆಗಟಿವ್ ಆಗಿ ಕಾಮೆಂಟ್ಸ್ ಬರೆಯುವುದಕ್ಕೆ ಟ್ವೀಟ್ ಮಾಡುವುದಕ್ಕೆ ಶುರು ಮಾಡಿದರು. ಅದಕ್ಕೆ ಖುದ್ದಾಗಿ ಖುಷ್ಬೂ ಅವರೇ ರಿಪ್ಲೈ ಮಾಡಿದ್ದಾರೆ. ವ್ಯಕ್ತಿಯೊಬ್ಬ ಖುಷ್ಬೂ ಅವರಿಗೆ, ಇದೆಲ್ಲ ಇಂಜೆಕ್ಷನ್ ಮಹಿಮೆ, ಟೈಪ್ 2 ಶುಗರ್ ಗೆ ಕೊಡುವ ಇಂಜೆಕ್ಷನ್ ಇದು, ಅದನ್ನು ತೆಗೆದುಕೊಂಡು ಖುಷ್ಬೂ ಅವರು ಸಣ್ಣ ಆಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅದಕ್ಕೆ ಖುಷ್ಬೂ ಅವರು ಉತ್ತರ ಕೊಟ್ಟಿದ್ದು ಆತನಿಗೆ ಖಡಕ್ ರಿಪ್ಲೈ ಕೊಟ್ಟಿದ್ದಾರೆ.
“ಎಂಥಾ ನೋವಿನ ಜನ ನೀವು. ನೀವುಗಳು ನಿಮ್ಮ ನಿಜವಾದ ಮುಖವನ್ನು ತೋರಿಸುವುದಿಲ್ಲ ಯಾಕಂದ್ರೆ ಒಳಗಿನಿಂದ ನೀವೆಲ್ಲಾ ಕೆಟ್ಟವರಾಗಿರುತ್ತೀರಿ. ನಿಮ್ಮ ತಂದೆ ತಾಯಿಯನ್ನ ನೆನೆದರೆ ನನಗೆ ಪಾಪ ಅನ್ನಿಸುತ್ತದೆ..” ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಈ ರೀತಿ ಸೆಲೆಬ್ರಿಟಿಗಳ ಬಗ್ಗೆ ಸುಖಾಸುಮ್ಮನೆ ಏನೇನೋ ಮಾತನಾಡುತ್ತಾರೆ.. ಇಲ್ಲ ಸಲ್ಲದನ್ನು ಬರೆಯುತ್ತಾರೆ, ಬೇಕೆಂದೇ ನೆಗಟಿವ್ ಆಗಿ ಮಾತನಾಡುತ್ತಾರೆ. ಅಂಥದ್ದಕ್ಕೆ ಸೆಲೆಬ್ರಿಟಿಗಳು ಈ ರೀತಿ ಮಾತನಾಡಿದರೆ, ಅಗ ಉತ್ತರ ಕೊಟ್ಟ ಹಾಗೆ ಆಗುತ್ತದೆ, ಅಥವಾ ನೆಟ್ಟಿಗರ ಬಾಯಿ ಮುಚ್ಚಿಸಿದ ಹಾಗೆ ಆಗುತ್ತದೆ. ಆದರೆ ಇಂಟರ್ನೆಟ್ ಇಂದ ಸೆಲೆಬ್ರಿಟಿಗಳು ನೆಗಟಿವಿಟಿ ಎದುರಿಸುವ ಹಾಗೆ ಆಗಿದೆ..

ಇನ್ನು ಖುಷ್ಬೂ ಅವರ ತೂಕ ಇಳಿಕೆ ಬಗ್ಗೆ ಹೇಳುವುದಾದರೆ, ಕೋವಿಡ್ ಸಮಯದಿಂದ ಖುಷ್ಬೂ ಅವರು ತೂಕ ಇಳಿಸುವ ಗಮನ ಕೊಡುವುದಕ್ಕೆ ಶುರು ಮಾಡಿದ್ದರು, ಆಗ ಪ್ರತಿದಿನ ಒಂದು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದರಂತೆ, 45 ನಿಮಿಷಗಳ ಕಾಲ ವಾಕಿಂಗ್ ಮಾಡುತ್ತಿದ್ದರಂತೆ. ಜೊತೆಗೆ ಆಹಾರದ ವಿಚಾರದಲ್ಲಿ ಕೂಡ ಲಿಮಿಟ್ ನಲ್ಲಿ ಇರುತ್ತಿದ್ದರಂತೆ. ಅದರಿಂದಲೇ ತೂಕ ಕಡಿಮೆ ಆಗಿದ್ದು ಎಂದು ಒಂದು ಸಂದರ್ಶನದಲ್ಲಿ ಖುಷ್ಬೂ ಅವರೇ ತಿಳಿಸಿದ್ದರು. ಇದೇ ರೀತಿಯಲ್ಲೇ ಅವರು ತೂಕ ಇಳಿಸುವ ಪ್ರಯತ್ನವನ್ನು ಮುಂದುವರೆಸಿ, ಈಗ 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಖುಷ್ಬೂ ಅವರು ಯಾವುದೇ ರೀತಿಯ ಇಂಜೆಕ್ಷನ್ ತೆಗದುಕೊಂಡಿಲ್ಲ ಎನ್ನುವುದು ಗೊತ್ತಾಗುತ್ತದೆ. ಜನರು ಈ ರೀತಿ ಅಂದುಕೊಂಡಿದ್ದಾರೆ. ತಪ್ಪಾಗಿ ಮಾತನಾಡುತ್ತಿದ್ದಾರೆ.
ಇನ್ನು ಖುಷ್ಬೂ ಅವರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ, ಒಳ್ಳೆಯ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ, ಜೊತೆಗೆ ರಾಜಕೀಯದಲ್ಲಿ ಸಹ ಆಕ್ಟಿವ್ ಆಗಿದ್ದು, ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಇವರು ಧಾರವಾಹಿಯಲ್ಲಿ ನಟಿಸುವುದಕ್ಕೆ ಕೂಡ ಶುರು ಮಾಡಿದ್ದಾರೆ, ಡಿಡಿ ತಮಿಳ್ ವಾಹಿನಿಯಲ್ಲಿ ಏಪ್ರಿಲ್ 14ರಿಂದ ಪ್ರಸಾರ ಆಗುತ್ತಿರುವ ಹೊಸ ಧಾರಾವಾಹಿ ಸರೋಜಿನಿಯಲ್ಲಿ ನಟಿಸುತ್ತಿದ್ದು, ಇದು ಎಲ್ಲಾ ಹೆಣ್ಣುಮಕ್ಕಳ ಕಥೆ ಆಗಿದೆ. ಮಧ್ಯ ವಯಸ್ಸಿನ ಹೆಣ್ಣುಮಕ್ಕಳಿಗೆ ಕನೆಕ್ಟ್ ಆಗುವ ಕಥೆಯಲ್ಲಿ ನಟಿಸುತ್ತಿದ್ದಾರೆ ಖುಷ್ಬೂ ಅವರು.