“ಚಾಲೆಂಜಿಂಗ್ ಸ್ಟಾರ್ ದರ್ಶನ್” ಅವರು ಎಂದ ಕೂಡಲೇ ನೆನಪಾಗುವ ವಿಚಾರ ಎಂದರೆ ನೇರ ನುಡಿ. ಡಿ ಬಾಸ್ ಮಾತು ಎಂದಿಗೂ ಖಡಕ್ ಆಗಿಯೇ ಇರುತ್ತದೆ ಯಾವ ಫಿಲ್ಟ್ರ್ಸ್ ಎಲ್ಲದೆ ಯಾರಾದರೂ ಕೂಡ ಮುಖಕ್ಕೆ ಹೊಡದಂತೆ ಹೇಳುವವರೆ ನಮ್ಮ ಚಾಲೆಂಜಿಂಗ್ ಸ್ಟಾರ್. ಇತ್ತೀಚೆಗೆ ಇವರ ಹೆಸರಿನ ಮೇಲೆ ಸಾಕಷ್ಟು ಏರಿಳಿತಗಳು ನೋಡುತ್ತಿದ್ದಾರೆ ಮಾದ್ಯಮದವರೆ ಇವರ ಎದುರು ತಿರುಗಿ ಬಿದ್ದಿದ್ದರು. ಈಗ ಯಾವ ಮಾಧ್ಯಮದವರು ಕೂಡ ದರ್ಶನ್ ಅವರ ಸಿನಿಮಾಗಳನ್ನು ಬೆಂಬಲ ನೀಡುತ್ತಿಲ್ಲ. ಇದೆಲ್ಲದುರ ನಡುವೆ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆ ಮುನ್ನವೇ ಬಹಳಷ್ಟು ಸದ್ದು ಮಾಡುತ್ತಿದೆ.

ದರ್ಶನ್ ಅವರ ಸಿನಿಮಾ ಎಂದರೆ ನಮ್ಮ ಬಿಟೌನ್ ನಲ್ಲಿ ಬಾರಿ ಕ್ರೇಜ್ ಇದೆ ಎಂದರೆ ತಪ್ಪಾಗಲಾರದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ದಶಕಗಳೇ ಕಳೆದಿವೆ ಮೆಜೆಸ್ಟಿಕ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈ ನಟ ಇಂದಿನಿ ವರೆಗೂ ತಮ್ಮ ಗ್ರಾಫ್ ಎಂದಿಗೂ ಕೂಡ ಕಡಿಮೆ ಮಾಡಿಕೊಂಡಿಲ್ಲ.ಇವರ ಕ್ರಾಂತಿ ಸಿನಿಮಾ ಗಾಗಿ ಯಾವ ಪ್ರಚಾರ ಎಲ್ಲದೆ ಯಾರ ಬೆಂಬಲ ಇಲ್ಲದೆ ಕೊಂಚ ಭಯವೂ ಇಲ್ಲದೆ ತನ್ನ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿದೆ.
ಹೀಗಿರುವಾಗ ದರ್ಶನ್ ತಮ್ಮ “ಕ್ರಾಂತಿ” ಸಿನಿಮಾ ಬಿಡುಗಡೆ ಸಮಯದಲ್ಲಿ ವಿವಾದಗಳ ಮಾತುಗಳನ್ನು ಹೇಳಿ ಎಲ್ಲರ ಉಬ್ಬೇರಿಸುವಂತೆ ಮಾಡಿದ್ದಾರೆ.ದರ್ಶನ್ ಅವರ ಮಾತು ನೇರ ನುಡಿಯಾಗಿದ್ದರು ಕೊಡ ಅವರ ಮಾತಿನಲ್ಲಿ ಸಾಕಷ್ಟು ಸತ್ಯಗಳು ಕೂಡ ಅಡಗಿರುತ್ತದೆ.ಆದರೆ ಕಾರ ಮಾತುಗಳು ಮಾತ್ರ ಯಾವಾಗಲೂ ಎಲ್ಲರ ಮುನಿಸು ಕೆಡಕುಗಳಿಗೂ ಕೊಡ ಕಾರಣವಾಗುತ್ತದೆ. ಈಗ ದರ್ಶನ್ ಅವರಿಗೆ ಕ್ಲಿಷ್ಟಕರವಾದ ಸಮಯ ಎಂದರೆ ತಪ್ಪಾಗಲಾರದು. ಆದರೆ ಈ ಸಮಯ ಅವರಿಗೆ ಯಾವ ಹಾನಿಯನ್ನು ಉಂಟಾಡುವುದಿಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಕೆಲ ಮಂದಿ ಇವರ ವಿರುದ್ದ ನಿಂತರೆ ಕೋಟ್ಯಾಂತರ ಮಂದಿ ಇವರ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ.
ಈಗ ದರ್ಶನ್ ಅವರ ಮಾತು ಹೇಳಿದ್ದೇನೆಂದರೆ ಕ್ರಾಂತಿ ಚಿತ್ರದ ನಿರ್ದೇಶಕರು ಕ್ರಾಂತಿ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂಚಿತವಾಗಿ ತಿಳಿಸುವುದು ಬೇಡ ಎಂದು ತಿಳಿಸಿದ್ದರು.ಆದರೆ ನಿರ್ದೇಶಕ ಮಾತನ್ನು ದರ್ಶನ್ ತಿರಸ್ಕರಿಸುತ್ತಾ ಬಂದಿದ್ದಾರೆ. ಆದರೆ ಇವರಿಬ್ಬರ ಅಲೋಚನೆಯಲ್ಲೂ ಕೊಡ ತಪ್ಪಿಲ್ಲ ಎನ್ನಬಹುದು.ನಿರ್ದೇಶಕರ ಮಾತಿನ ಪ್ರಕಾರ ಕ್ರಾಂತಿ ಸಿನಿಮಾ ಇಷ್ಟೆಲ್ಲ ವಿರೋದಗಳಿವೆ ಹಾಗಾಗಿ ಮುಂದೆಯೇ ಬಿಡುಗಡೆ ದಿನಾಂಕ ತಿಳಿಸಿದರೆ ಮತ್ತೆ ತೊಂದರೆ ಮಾಡಬಹುದು ಎಂಬ ಭಯ ನಿರ್ದೇಶಕರದು. ಈ ಕಡೆ ಡಿ ಬಾಸ್ ಅವರ ಮಾತಿನ ನಿಲುವು ಏನೆಂದರೆ ನಾವು ಮುಂಚೆಯೇ ಬಿಡುಗಡೆ ದಿನಾಂಕ ನಿಗದಿ ಪಡಿಸಿ ತಿಳಿಸಿದ್ದಾದರೆ.
ಚಿತ್ರ ಮಂದಿರಗಳು ಹಾಗೂ ನಮ್ಮ ಅಭಿಮಾನಿಗಳು ಕೂಡ ತಮ್ಮನ್ನು ಆ ದಿನಕ್ಕೆ ನಿಗದಿ ಪಡೆಸಿಕೊಂಡಿರುತ್ತಾರೆ. ಸಡನ್ ಆಗಿ ಹೇಳಿದರೆ ತೊಂದರೆಗಳು ಹೆಚ್ಚು ಎಂದಿದ್ದಾರೆ. ಇದಕ್ಕೆ ಉಧಾರಣೆ ಕೊಡ ನೀಡಿದ್ದಾರೆ.ದರ್ಶನ್ ಅವರ ನಟನೆಯ ನನ್ನ “ಪ್ರೀತಿಯ ರಾಮು,ಮೆಜೆಸ್ಟಿಕ್ ಮತ್ತು ಅಣ್ಣಾವ್ರು” ಸಿನಿಮಾ ಏಕಕಾಲದಲ್ಲಿ ಬಿಡಿಗಡೆಗೆ ರೇಡಿಯಾಗಿತ್ತು. ಮೂರು ಸಿನಿಮಾಗಳು ನಿಗದಿ ಪಡಿಸಿದ ದಿನಾಂಕದಲ್ಲಿ ಬಿಡುಗಡೆ ಮಾಡದೆ ಇದ್ದಿದ್ದರಿಂದ ಅಷ್ಟು ಒಳ್ಳೆಯ ಕತೆ ಎಲ್ಲರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ವಿಫಲವಾಯಿತು. ಆದರೆ ಅದೇ ಸಿನಿಮಾ ಟಿವಿ ಯಲ್ಲಿ ನೋಡಿ ಸಾಕಷ್ಟು ಒಳ್ಳೆ ಮಾತುಗಳನ್ನು ನಾವು ಕೇಳಿದ್ದೇವೆ ಹಾಗಾಗಿ ಅದೇ ತಪ್ಪು ನನ್ನ ಕ್ರಾಂತಿ ಸಿನಿಮಾಗೆ ಆಗುವುದು ಬೇಡ ಎಂದು ತಿಳಿಸಿದ್ದಾರೆ.