ನಟ ದರ್ಶನ್ ಅವರು ಒಳ್ಳೆಯ ವ್ಯಕ್ತಿಯೇ, ಆದರೆ ಅವರ ಸಹವಾಸಗಳು ಸರಿ ಇರಲಿಲ್ಲ ಅದೇ ಕಾರಣಕ್ಕೆ ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸುವ ಹಾಗೆ ಆಯಿತು ಎನ್ನುವುದು ಎಲ್ಲರ ಅಭಿಪ್ರಾಯ. ಇದುವರೆಗೂ ಆಗಿದ್ದು ಆಗಿ ಹೋಗಿದೆ, ಆದರೆ ಇನ್ನುಮುಂದೆ ಆಗಬೇಕಿರುವುದು ಒಳ್ಳೆಯದಾಗಬೇಕು ಎನ್ನುವುದು ಅಭಿಮಾನಿಗಳ ಆಶಯ. ದರ್ಶನ್ ಅವರು ಮೊದಲೆಲ್ಲ ಇರುತ್ತಿದ್ದ ರೀತಿಯೇ ಬೇರೆ, ಆದರೆ ಈ ಎಲ್ಲಾ ಘಟನೆಗಳು ನಡೆದು, ವಾಪಸ್ ಮನೆಗೆ ಬಂದ ನಂತರ ಇರುವ ರೀತಿಯೇ ಬೇರೆ. ದರ್ಶನ್ ಅವರ ಪೂರ್ತಿ ಜವಾಬ್ದಾರಿಯನ್ನು ಈಗ ಅವರ ಪತ್ನಿ ವಿಜಯಲಕ್ಷ್ಮೀ ಅವರೆ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ. ಈಗ ಎಲ್ಲಾ ರಿಪೇರಿ ಕೆಲಸವನ್ನು ಕೂಡ ವಿಜಯಲಕ್ಷ್ಮೀ ಅವರೇ ಮಾಡುತ್ತಾ ಬಂದಿದ್ದಾರೆ. ಈ ಬಗ್ಗೆ ನಿನ್ನೆಯಿಂದ ಕೆಲವು ಸುದ್ದಿಗಳು ಹರಿದಾಡುತ್ತಿದ್ದು, ಇನ್ನುಮುಂದೆ ದರ್ಶನ್ ಅವರನ್ನು ಕಾಂಟ್ಯಾಕ್ಟ್ ಮಾಡುವುದು ಮೊದಲಿನ ಹಾಗೆ ಸುಲಭ ಆಗಿರುವುದಿಲ್ಲ ಎನ್ನಲಾಗಿದೆ.

ಹೌದು, ಕಳೆದ ವರ್ಷ ಅದೊಂದು ಘಟನೆ ಆಗಿ ರೇಣುಕಾಸ್ವಾಮಿ ಕೇಸ್ ನಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಒಂದಷ್ಟು ಜನರು ಜೈಲು ಸೇರಿದರು. ಒಂದಷ್ಟು ದಿವಸಗಳ ಕಾಲ ಅಲ್ಲಿಯೇ ಇರಬೇಕಾಯಿತು. ಕಳೆದ ವರ್ಷಾಂತ್ಯದಲ್ಲಿ ಎಲ್ಲರಿಗೂ ಜಾಮೀನು ಸಿಕ್ಕಿ ಹೊರಗಡೆ ಬಂದರು. ಹೊರಗಡೆ ಬಂದ ನಂತರ ದರ್ಶನ್ ಅವರು ಒಂದಷ್ಟು ದಿವಸಗಳ ಕಾಲ ಹೊರಗಡೆ ಎಲ್ಲಿಯು ಕಾಣಿಸಿಕೊಳ್ಳುತ್ತಿರಲಿಲ್ಲ, ನಿಧಾನವಾಗಿ ದೇವಸ್ಥಾನಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದರು. ಇತ್ತೀಚೆಗೆ ಕೆಲವು ಕಾರ್ಯಕ್ರಮಗಳಲ್ಲಿ ಕೂಡ ದರ್ಶನ್ ಅವರು ಕಾಣಿಸಿಕೊಂಡಿದ್ದಾರೆ. ಹಾಗೆಯೇ ಇತ್ತೀಚಿನ ಕೋರ್ಟ್ ತೀರ್ಪಿನಲ್ಲಿ ದರ್ಶನ್ ಅವರಿಗೆ ಉಪಯೋಗ ಆಗುವ ಹಾಗೆಯೇ ಕೋರ್ಟ್ ನಿರ್ಧಾರ ನೀಡಿದೆ. ಅದೇನು ಎಂದರೆ ದರ್ಶನ್ ಅವರು ಇನ್ನುಮುಂದೆ ದೇಶದ ಎಲ್ಲಿ ಬೇಕಾದರೂ ಓಡಾಡಬಹುದು.
ಹೌದು, ಇಷ್ಟು ದಿವಸಗಳ ಕಾಲ ಬೆಂಗಳೂರಿನಿಂದ ಎಲ್ಲೇ ಹೊರಗಡೆ ಹೋಗಬೇಕಾದರು ಸಹ ದರ್ಶನ್ ಅವರು ಕೋರ್ಟ್ ಇಂದ ಪ್ರಮಿಶನ್ ಪಡೆದು ಹೋಗಬೇಕಿತ್ತು. ಆದರೆ ಈಗ ದರ್ಶನ್ ಅವರಿಗೆ ಭಾರತದ ಎಲ್ಲೆಡೆ ಓಡಾಡುವುದಕ್ಕೆ ಅವಕಾಶ ಸಿಕ್ಕಿದೆ. ಆದರೆ ವಿದೇಶಕ್ಕೆ ಹೋಗುವ ಸಂದರ್ಭ ಬಂದರೆ ಮಾತ್ರ ಅವರು ಕೋರ್ಟ್ ಇಂದ ಅನುಮತಿ ಪಡೆಯಬೇಕಾಗುತ್ತದೆ. ಇದು ದರ್ಶನ್ ಅವರಿಗೆ ಸಿಕ್ಕಿರುವ ಒಳ್ಳೆಯ ತೀರ್ಪು. ಇದೆಲ್ಲವೂ ಒಂದು ಕಡೆಯಾದರೆ ಮತ್ತೊಂದು ಕಡೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಗಂಡನ ವಿಷಯದಲ್ಲಿ ಫುಲ್ ಚಾರ್ಜ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು, ದರ್ಶನ್ ಅವರ ಫುಲ್ ಕಂಟ್ರೋಲ್ ಈಗ ವಿಜಯಲಕ್ಷ್ಮಿ ಅವರ ಕೈಯಲ್ಲಿದೆ, ದರ್ಶನ್ ಅವರ ಸುತ್ತ ಇರುವ ಬೇಡದ ಅಂಶಗಳನ್ನು ಇವರು ಕ್ಲೀನ್ ಮಾಡಿಕೊಂಡು ಬರುತ್ತಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ಹೌದು, ಈ ಹಿಂದೆ ಹಲವು ಕಲಾವಿದರು ಮತ್ತು ಜನರು ಕೂಡ ದರ್ಶನ್ ಅವರ ಸಹವಾಸದ ಬಗ್ಗೆ ಮಾತನಾಡಿದ್ದರು, ಅವರ ಸಹವಾಸವೇ ಸರಿ ಇಲ್ಲ, ಸಹವಾಸದಿಂದ ಸನ್ಯಾಸಿ ಕೆಟ್ಟ ಎನ್ನುವ ಗಾದೆಯ ಹಾಗೆ ದರ್ಶನ್ ಅವರ ಲೈಫ್ ಆಗಿದೆ ಎಂದು ಮಾತುಗಳು ಕೇಳಿ ಬಂದಿತ್ತು. ಸಾರಥಿ ಸಿನಿಮಾ ಮುಗಿದ ನಂತರ ದರ್ಶನ್ ಅವರ ಸಹವಾಸಗಳು ಸಂಪೂರ್ಣವಾಗಿ ಬದಲಾಯಿತು, ಅಲ್ಲಿಂದಲೇ ಈ ಘಟನೆಗಳೆಲ್ಲವು ನಡೆಯುವುದಕ್ಕೆ ಶುರುವಾಯಿತು ಎನ್ನುವ ಅಭಿಪ್ರಾಯ ಹಲವರದ್ದು. ರೇಣುಕಾಸ್ವಾಮಿ ಪ್ರಕರಣ ಆಗುವುದಕ್ಕೆ ಕಾರಣ ಕೂಡ ಅದೇ, ದರ್ಶನ್ ಅವರ ಸಹವಾಸ ಸರಿ ಇಲ್ಲದ ಕಾರಣಕ್ಕೆ ಅವರು ಇಂಥ ಕಷ್ಟಗಳಿಗೆ ಸಿಲುಕಿಕೊಂಡರು ಎನ್ನುವ ಮಾತು ಕೇಳಿಬಂದಿತ್ತು. ಅವೆಲ್ಲವನ್ನೂ ಸರಿಪಡಿಸುವ ಕೆಲಸವನ್ನು ಈಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ವಹಿಸಿಕೊಂಡಿದ್ದು, ಒಂದು ಕಡೆಯಿಂದ ಎಲ್ಲವನ್ನು ಸರಿಪಡಿಕೊಂಡು ಬರುತ್ತಿದ್ದಾರೆ.
ಈ ಕೆಲಸದ ಮೊದಲ ಹಂತದಲ್ಲಿ ದರ್ಶನ್ ಅವರ ಕಾರ್ ಡ್ರೈವರ್ ಮತ್ತು ಅವರ ಮ್ಯಾನೇಜರ್ ನಾಗರಾಜು ಇವರಿಬ್ಬರಿಗೆ ತಮ್ಮ ಮನೆಯಿಂದ ಗೇಟ್ ಪಾಸ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್ ಅವರ ದಿನ ಹೇಗಿರುತ್ತದೆ, ಒಂದು ದಿನದಲ್ಲಿ ಏನೆನೆಲ್ಲಾ ನಡೆಯುತ್ತದೆ ಎನ್ನುವುದನ್ನು ಅವರ ಮ್ಯಾನೇಜರ್ ನಾಗರಾಜು ಅವರು ಪ್ಲಾನ್ ಮಾಡುತ್ತಿದ್ದರು, ಅದರ ಪ್ರಕಾರವೇ ಎಲ್ಲವೂ ನಡೆಯುತ್ತಿತ್ತು. ಇನ್ನು ದರ್ಶನ್ ಅವರ ಡ್ರೈವರ್ ಎಲ್ಲಾ ಕಡೆಗೂ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಆ ರೀತಿ ಇಲ್ಲ. ಇವರಿಬ್ಬರನ್ನು ವಿಜಯಲಕ್ಷ್ಮಿ ಅವರು ಕೆಲಸದಿಂದ ಬಿಡಿಸಿ, ಮನೆಯಿಂದ ಹೊರ ಹಾಕಿದ್ದಾರೆ. ದರ್ಶನ್ ಅವರಿಗೆ ಮತ್ತೆ ಶೂಟಿಂಗ್ ಶುರುವಾಗುವ ವರೆಗು ಕೂಡ ಅವರಿಗೆ ಮ್ಯಾನೇಜರ್ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.

ಎಲ್ಲವನ್ನು ವಿಜಯಲಕ್ಷ್ಮೀ ಅವರೇ ಮುಂದೆ ನಿಂತು ನೋಡಿಕೊಳ್ಳಲಿದ್ದಾರೆ. ಇನ್ನು ವಿಜಯಲಕ್ಷ್ಮೀ ಅವರಿಗೆ ಸಾಥ್ ಕೊಡುವುದಕ್ಕೆ ದರ್ಶನ್ ಅವರ ತಮ್ಮ ದಿನಕರ್ ಕೂಡ ಇದ್ದಾರೆ. ದಿನಕರ್ ಅವರು ಈ ವಿಷಯದ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದು, ಸಿನಿಮಾ ಚಿತ್ರೀಕರಣ ಎಲ್ಲವು ಶುರುವಾಗುವ ವರೆಗು ದರ್ಶನ್ ಅವರಿಗೆ ಮ್ಯಾನೇಜರ್ ಇರುವುದಿಲ್ಲ, ಆಮೇಲೆ ಎಲ್ಲರೂ ಬರುತ್ತಾರೆ ಎಂದು ತಿಳಿಸಿದ್ದಾರೆ. ಹಾಗೆಯೇ ಇನ್ನುಮುಂದೆ ದರ್ಶನ್ ಅವರು ಎಲ್ಲರ ಕೈಗೆ ಸುಲಭವಾಗಿ ಸಿಗುವುದಿಲ್ಲ. ಅವರನ್ನು ಭೇಟಿ ಮಾಡಬೇಕು ಎಂದರೆ, ವಿಜಯಲಕ್ಷ್ಮಿ ಅವರು ಅಥವಾ ದಿನಕರ್ ಅವರ ಮೂಲಕವೇ ಭೇಟಿ ಮಾಡಬೇಕು ಎಂದು ಕೂಡ ಹೇಳಲಾಗುತ್ತಿದೆ..ಒಟ್ಟಿನಲ್ಲಿ ದರ್ಶನ್ ಅವರ ಲೈಫ್ ಈಗ ಸಂಪೂರ್ಣವಾಗಿ ಬದಲಾಗಿದೆ. ಎಲ್ಲಾ ಕಂಟ್ರೋಲ್ ಈಗ ಅವರ ಪತ್ನಿಯ ಕೈಯಲ್ಲಿದೆ.
ಬಹುಶಃ ವಿಜಯಲಕ್ಷ್ಮೀ ಅವರು ಕೆಲವು ವರ್ಷಗಳ ಹಿಂದೆಯೇ ಈ ರೀತಿಯ ಒಂದು ಕೆಲಸವನ್ನು ಮಾಡಿದ್ದರೆ ಈ ರೀತಿಯ ಸಮಸ್ಯೆಗಳು ಆಗುತ್ತಿರಲಿಲ್ಲ. ದರ್ಶನ್ ಅವರು ಇಂಥ ಯಾವುದೇ ಪ್ರಕರಣಗಳಲ್ಲಿ ಕೂಡ ಸಿಲುಕಿಕೊಳ್ಳುತ್ತಿರಲಿಲ್ಲ. ಆದರೆ ಕೆಟ್ಟ ಘಳಿಗೆ ಎನ್ನುವ ಹಾಗೆ ಎಲ್ಲವೂ ನಡೆದು ಹೋಯಿತು. ಈಗಲಾದರೂ ದರ್ಶನ್ ಅವರು ಸತ್ಯವನ್ನು ಅರ್ಥ ಮಾಡಿಕೊಂಡು, ಪತ್ನಿ ಮತ್ತು ಕುಟುಂಬದವರು ಹೇಳಿದ ಹಾಗೆ ಕೇಳುತ್ತಿರುವುದು ಅದೇ ನಿಟ್ಟಿನಲ್ಲಿ ಸಾಗುತ್ತಿರುವುದು ಒಳ್ಳೆಯ ವಿಷಯ. ಇನ್ನುಮುಂದೆ ಇವರು ಮನೆಯವರ ಜೊತೆಗೆ ಸಮಯ ಕಳೆದು, ಫ್ಯಾಮಿಲಿ ಮ್ಯಾನ್ ಆಗಿ ಎಲ್ಲರ ಜೊತೆಗೂ ಚೆನ್ನಾಗಿದ್ದರೆ, ಅಭಿಮಾನಿಗಳಿಗೆ ಕೂಡ ಅದೇ ಸಂತೋಷ. ಇನ್ನು ಶೀಘ್ರದಲ್ಲೇ ದರ್ಶನ್ ಅವರ ಸಿನಿಮಾ ಚಿತ್ರೀಕರಣ ಕೂಡ ಶುರುವಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.



