ಇಂದು 24 ಏಪ್ರಿಲ್ 2025 ಗುರುವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ. ಮಧ್ಯಾಹ್ನ 01:55 ರಿಂದ 03:29 ವರೆಗೆ ರಾಹುಕಾಲವಿರುತ್ತದೆ. ಈ ದಿನ ವಿಷ್ಣುವನ್ನು ಆರಾಧಿಸುವವರು ಕಷ್ಟಗಳಿಂದ ಪರಿಹಾರ ಪಡೆಯುತ್ತಾರೆ. ಮೇಷ ರಾಶಿಯವರಿಗೆ ಕೆಲಸದಲ್ಲಿ ಕಿರಿಕಿರಿ ಉಂಟಾಗಲಿದೆ. ಮೀನ ರಾಶಿಯವರಿಗೆ ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿಸಿದಷ್ಟು ಲಾಭ ದೊರೆಯುವುದಿಲ್ಲ.
ಮೇಷ ರಾಶಿ
ಇಂದು ನೀವು ಮಾಡುವ ಕೆಲಸಗಳಲ್ಲಿ ಕಿರಿಕಿರಿ ಉಂಟಾಗಲಿದೆ. ಜಾಗ್ರತೆಯಿಂದ ದಿನವನ್ನು ಆರಂಭಿಸಿ, ವ್ಯಾಪಾರ ವ್ಯವಹಾರದಲ್ಲಿ ಸ್ವಲ್ಪ ಲಾಭವಿರುತ್ತದೆ. ಹೈನುಗಾರಿಕೆ ಮಾಡುವವರಿಗೆ ಲಾಭ ದೊರೆಯುತ್ತದೆ. ಅಗ್ನಿ ಅವಘಡದಿಂದ ಅಪಾಯ ಸಂಭವಿಸಬಹುದು, ಆದ್ದರಿಂದ ಮೇಷ ರಾಶಿಯವರು ಇಂದು ಬಹಳ ಜಾಗ್ರತೆಯಿಂದ ಇರಬೇಕಾಗುತ್ತದೆ.
ವೃಷಭ ರಾಶಿ
ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಅಪನಿಂದನೆ ಕೇಳುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಮನಸ್ಸಿಗೆ ಬೇಸರ ಉಂಟಾಗುತ್ತದೆ. ಬಹಳ ವರ್ಷಗಳ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ. ವ್ಯಾಪಾರಸ್ಥರಿಗೆ ಇಂದು ಮಿಶ್ರ ಫಲ ದೊರೆಯಲಿದೆ. ಬಟ್ಟೆ, ಔಷಧ ವ್ಯಾಪಾರಿಗಳಿಗೆ ಲಾಭದಾಯಕ ದಿನವಾಗಿದೆ.
ಮಿಥುನ ರಾಶಿ
ವ್ಯಾಪಾರಿಗಳಿಗೆ ಯಥೇಚ್ಛ ಲಾಭವಿರುತ್ತದೆ. ಭೂಮಿಯನ್ನು ಕೊಳ್ಳುವ, ಮಾರಾಟ ಮಾಡುವ ಸಾಧ್ಯತೆ ಇದೆ. ಕೌಟುಂಬಿಕ ಕಲಹ ಇರುತ್ತದೆ, ಆದ್ದರಿಂದ ಯಾರೊಂದಿಗಾದರೂ ಮಾತಾಡುವಾಗ ಎಚ್ಚರಿಕೆಯಿಂದ ಇರಿ.
ಕಟಕ ರಾಶಿ:
ಈ ದಿನ ಆರ್ಥಿಕ ಲಾಭವಿದೆ. ಮನೆಯವರ ಸಹಾಯದಿಂದ ಹೊಸ ಕೆಲಸ ಆರಂಭಿಸುವಿರಿ, ಜವಾಬ್ದಾರಿಗಳು ಹೆಚ್ಚಾಗಲಿದೆ, ಎಲ್ಲವನ್ನೂ ನಿಭಾಯಿಸಲು ಮಾನಸಿಕವಾಗಿ ಸಿದ್ಧರಾಗಿರಿ. ಇಲ್ಲದಿದ್ದರೆ ಸಮಸ್ಯೆಯ ಸುಳಿಯಲ್ಲಿ ಸಿಲುಕುವಿರಿ.
ಸಿಂಹ ರಾಶಿ
ಇವೆಂಟ್ ಮ್ಯಾನೇಜ್ಮೆಂಟ್, ಸೌಂದರ್ಯ ಸಾಧನ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಒತ್ತಡದ ದಿನವಾದರೂ ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಇರುತ್ತ
ಕನ್ಯಾ ರಾಶಿ
ನೀವು ಮಾಡುವ ಕೆಲಸಗಳಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ. ಆರ್ಥಿಕ ಲಾಭ ದೊರೆಯುತ್ತದೆ. ಕುಟುಂಬದ ಸದಸ್ಯರೊಂದಿಗೆ ಸಂಬಂಧ ಚೆನ್ನಾಗಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಬಹಳ ಎಚ್ಚರಿಕೆಯಿಂದ ಇರಬೇಕು. ತಾಳ್ಮೆ ಕಳೆದುಕೊಳ್ಳದೆ ಜಾಗ್ರತೆಯಿಂದ ಕೆಲಸ ಮಾಡಿ. ವಿದ್ಯಾರ್ಥಿಗಳಿಗೆ ಇಂದು ಶುಭ ದಿನವಾಗಿರುತ್ತದೆ.
ತುಲಾ ರಾಶಿ
ಮಾಡುವ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಲಿದೆ. ಸ್ನೇಹಿತರ ಸಹಾಯದಿಂದ ಹೊಸ ಕೆಲಸ ಆರಂಭಿಸುವಿರಿ, ಕುಟುಂಬದ ಸದಸ್ಯರು ಕೂಡಾ ನಿಮ್ಮ ಕೆಲಸಕ್ಕೆ ಸಹಕಾರ ನೀಡಲಿದ್ದಾರೆ. ಹಿತಶತ್ರುಗಳ ಕಾಟದಿಂದ ಕಿರಿಕಿರಿ ಅನುಭವಿಸುವಿರಿ.
ವೃಶ್ಚಿಕ ರಾಶಿ
ನೀವು ಮಾಡುವ ಕೆಲಸಗಳಲ್ಲಿ ಯಥೇಚ್ಛ ಲಾಭ ದೊರೆಯುತ್ತದೆ. ಬಟ್ಟೆ ವ್ಯಾಪಾರಿಗಳಿಗೆ ಅಧಿಕ ಲಾಭವಿರುತ್ತದೆ. ಕುಟುಂಬದಲ್ಲಿ ಸಣ್ಣ ಪುಟ್ಟ ಮನಸ್ತಾಪ ಇರಲಿದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವವರು ಜಾಗ್ರತೆಯಿಂದ ಇರಬೇಕು. ಇಲ್ಲದಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೊಸ ಕೆಲಸ ಆರಂಭಿಸುವುದನ್ನು ಮುಂದೂಡಿ.
ಧನು ರಾಶಿ
ಬಹಳ ದಿನಗಳಿಂದ ನೀವು ಆರಂಭಿಸಬೇಕೆಂದುಕೊಂಡಿದ್ದ ಕೆಲವನ್ನು ಇಂದು ಆರಂಭಿಸುವಿರಿ. ಲಕ್ಷ್ಮೀ ಅನುಗ್ರಹವಾಗಲಿದೆ. ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿದೆ. ವೈದ್ಯಕೀಯ ಪರೀಕ್ಷಾ ಕೇಂದ್ರ ಆರಂಭಿಸುವವರಿಗೆ ಲಾಭ ಇರಲಿದೆ. ಮನಸ್ಸಿಗೆ ಸಂತೋಷ ಇರಲಿದೆ.
ಮಕರ ರಾಶಿ
ಆರ್ಥಿಕ ನಷ್ಟ ಉಂಟಾಗುತ್ತದೆ. ಜಾಗ್ರತೆಯಿಂದ ಹಣಕಾಸಿನ ವ್ಯವಹಾರ ಮಾಡಿ. ಬೇಕರಿ ವ್ಯಾಪಾರ, ಚಾಟ್ ಸೆಂಟರ್ ನಡೆಸುತ್ತಿರುವವರಿಗೆ ಲಾಭವಾಗಲಿದೆ. ಹೊಸ ವ್ಯಾಪಾರ ಮಾಡುವವರು ಪಾಲುದಾರಿಯಿಂದ ದೂರ ಇದ್ದರೆ ಒಳಿತು.
ಕುಂಭ ರಾಶಿ
ಮಾಡುವ ಎಲ್ಲಾ ಕೆಲಸದಲ್ಲೂ ಇಂದು ಒತ್ತಡದ ದಿನವಾಗಿರುತ್ತದೆ. ಮನಸ್ಸಿಗೆ ಬಹಳ ಕಸಿವಿಸಿಯುಂಟಾಗುತ್ತದೆ. ಜಾಗ್ರತೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ. ಲಕ್ಷ್ಮೀ ಅನುಗ್ರಹವಾಗಲಿದೆ, ಮುಂದಿನ ಭವಿಷ್ಯಕ್ಕೆ ಹಣ ಉಳಿತಾಯ ಮಾಡಿ..
ಮೀನ ರಾಶಿ
ವ್ಯಾಪಾರ ವ್ಯವಹಾರದಲ್ಲಿ ಲಾಭ ಕಡಿಮೆ ಇರುತ್ತದೆ. ಹೊಸ ಕೆಲಸದಲ್ಲಿ ಉತ್ಸಾಹ ಹೆಚ್ಚಾಗಿರುತ್ತದೆ. ಆದಷ್ಟು ಬೇಗ ಸಾಲದ ಸುಳಿಯಿಂದ ಹೊರ ಬರಲು ಪ್ರಯತ್ನ ಮಾಡುವಿರಿ. ಸ್ನೇಹಿತರ ಸಹಕಾರ ದೊರೆಯಲಿದೆ. ಹಿತಶತ್ರುಗಳು ಸಮಸ್ಯೆ ನೀಡಲಿದ್ದಾರೆ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳದಿರಿ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.



