ಇಂದು 30 ಏಪ್ರಿಲ್ 2025 ಬುಧವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ತೃತೀಯ. ಮಧ್ಯಾಹ್ನ 12:21 ರಿಂದ 01:55 ವರೆಗೆ ರಾಹುಕಾಲವಿರುತ್ತದೆ. ಈ ದಿನ ಅಕ್ಷಯ ತೃತೀಯ ಹಾಗೂ ಬಸವ ಜಯಂತಿಯನ್ನು ಆಚರಿಸಲಾಗುತ್ತಿದೆ. ಮೇಷ ರಾಶಿಯವರು ಇಂದು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಮೀನ ರಾಶಿಯವರಿಗೆ ಹಿತಶತ್ರುಗಳ ಕಾಟ ಇರುತ್ತದೆ, ಎಚ್ಚರಿಕೆಯಿಂದ ಇರಬೇಕು.
ಮೇಷ ರಾಶಿ
ಇಂದು ನೀವು ಉತ್ಸಾಹದಿಂದ ಇರುತ್ತೀರಿ. ಆರೋಗ್ಯವೂ ಕ್ಷೀಣಿಸಲಿದೆ, ಆದ್ದರಿಂದ ಆರೋಗ್ಯದ ಕಡೆ ಗಮನ ಹರಿಸಿ, ಸರಿಯಾದ ಸಮಯಕ್ಕೆ ಊಟ, ನಿದ್ರೆ ಮಾಡಿ. ಇದರಿಂದ ಮಾನಸಿಕ, ದೈಹಿಕ ಆರೋಗ್ಯ ಸುಧಾರಿಸುತ್ತದೆ. ಇಲ್ಲದಿದ್ದರೆ ಸಮಸ್ಯೆಯ ಸುಳಿಯಲ್ಲಿ ಸಿಲುಕುವಿರಿ, ಆತ್ಮೀಯರನ್ನು ಭೇಟಿ ಮಾಡುವುದರಿಂದ ಮನಸ್ಸಿಗೆ ಸಮಾಧಾನ ದೊರೆಯುತ್ತದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಅವಕಾಶಗಳು ನಿಮ್ಮನ್ನು ಹುಡುಕಿ ಬರುತ್ತದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಲಾಭದಾಯಕ ದಿನ. ಆಟೋ ಚಾಲಕರಿಗೆ ಇಂದು ಎರಡು ಪಟ್ಟು ಲಾಭ ದೊರೆಯಲಿದೆ. ಸಾಲದ ಸುಳಿಯಿಂದ ಹೊರ ಬರುವಿರಿ. ಕೃಷಿಕರಿಗೆ ಕೂಡಾ ಮಾಡುವ ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ. ಮನಸ್ಸಿಗೆ ಖುಷಿ ಇರಲಿದೆ. ದೂರದ ಪ್ರಯಾಣ ಮಾಡುವವರು ಜಾಗ್ರತೆಯಿಂದ ಇರಿ. ಇಷ್ಟ ದೇವರ ಪ್ರಾರ್ಥನೆ ಮಾಡಿ ಪ್ರಯಾಣ ಮುಂದುವರೆಸಿ. ಇಲ್ಲದಿದ್ದರೆ ಬಹಳ ಅಡೆತಡೆಗಳು ಉಂಟಾಗುತ್ತದೆ.
ಮಿಥುನ ರಾಶಿ
ಅಧಿಕವಾದ ಖರ್ಚು ಇರುತ್ತದೆ. ಹಣ ಖರ್ಚು ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಮುಂದಿನ ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆ ಅನುಭವಿಸುವಿರಿ. ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ, ವ್ಯಾಪಾರ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿನ ಲಾಭ ದೊರೆಯಲಿದೆ, ಚಿನ್ನದ ವ್ಯಾಪಾರಿಗಳಿಗೆ ದ್ವಿಗುಣ ಲಾಭವಿರುತ್ತದೆ.
ಕಟಕ ರಾಶಿ:
ಭೂಮಿಯನ್ನು ಖರೀದಿಸಬೇಕು ಎಂದುಕೊಂಡಿರುವವರು ಇಂದು ಮುಂದುವರೆಯಬಹುದು, ಇದರಿಂದ ನಿಮಗೆ ಯಥೇಚ್ಛ ಲಾಭ ದೊರೆಯಲಿದೆ. ಇಷ್ಟಮಿತ್ರರ ವಿರೋಧಗಳನ್ನು ಎದುರಿಸಬೇಕಾಗಬಹುದು. ಇದನ್ನು ನೀವೇ ತಾಳ್ಮೆಯಿಂದ ನೀವೇ ನಿಭಾಯಿಸಬೇಕು. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಹೊಸ ಜನರ ಸಂಪರ್ಕದಿಂದ ಭವಿಷ್ಯಕ್ಕೆ ಒಳಿತಾಗುತ್ತದೆ. ಆತ್ಮಸ್ಥೈರ್ಯ ಉಂಟಾಗುತ್ತದೆ.
ಸಿಂಹ ರಾಶಿ
ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯಲಿದೆ. ಮನೆ ಕಟ್ಟಿಸಬೇಕು ಎಂಬ ಆಸೆ ಇದ್ದವರಿಗೆ ಆಸೆ ನೆರವೇರುತ್ತದೆ, ಆರೋಗ್ಯ ಸಮಸ್ಯೆಗಳಿಂದ ಹೊರ ಬರುವಿರಿ, ನಿಮ್ಮ ಮನಸ್ಸಿಗೆ ಇಷ್ಟವಾಗುವ ಹೊಸ ಜನರ ಸಹವಾಸ ನಿಮಗೆ ಖುಷಿ ನೀಡಲಿದೆ.
ಕನ್ಯಾ ರಾಶಿ
ಇವತ್ತು ಕೈಗೊಳ್ಳುವ ಎಲ್ಲಾ ಕೆಲಸಗಳಲ್ಲೂ ಯಥೇಚ್ಛ ಲಾಭ ದೊರೆಯಲಿದೆ. ಬಹುತೇಕ ಸಮಸ್ಯೆಗಳಿಂದ ಹೊರ ಬರುವಿರಿ. ಆರೋಗ್ಯ ಚೇತರಿಕೆ ಆಗಲಿದೆ. ಹೊಸ ಕೆಲಸ ಆರಂಭಿಸಬಹುದು, ಕ್ರೀಡಾ ಕ್ಷೇತ್ರದಲ್ಲಿರುವವರು ಅಭ್ಯಾಸದ ಸಮಯದಲ್ಲಿ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಬಿದ್ದು ಪೆಟ್ಟಾಗುವ ಸಾಧ್ಯತೆ ಇದೆ.
ತುಲಾ ರಾಶಿ
ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಮುಖ್ಯ. ಸಹೋದ್ಯೋಗಿಗಳು ಅಥವಾ ಹಿರಿಯ ಅಧಿಕಾರಿಗಳು ಕೆಲಸದ ಸ್ಥಳದಲ್ಲಿ ನಿಮಗೆ ಕಿರಿಕಿರಿ ನೀಡಲಿದ್ದಾರೆ. ಇದರಿಂದ ಕೆಲಸಗಳು ಅರ್ಧಕ್ಕೆ ನಿಲ್ಲಲಿದೆ. ಬಟ್ಟೆ ವ್ಯಾಪಾರಿಗಳು, ಗಿಡಗಳನ್ನು ಮಾರುವವರು, ಮಂಗಳದ್ರವ್ಯ ತಯಾರಿಕರಿಗೆ ಇಂದು ಒಳ್ಳೆ ಲಾಭ ದೊರೆಯಲಿದೆ.
ವೃಶ್ಚಿಕ ರಾಶಿ
ಮನಸ್ಸಿಗೆ ಇಷ್ಟವಾಗುವ ಭೋಜನ ಸವಿಲಿದ್ದೀರಿ, ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ, ವ್ಯಾಪಾರ ವ್ಯವಹಾರದಲ್ಲಿ ಲಾಭ ಇರಲಿದೆ. ಪಾಲುದಾರಿಕೆಯಲ್ಲಿ ಹೊಸ ಕೆಲಸ ಆರಂಭಿಸಬಹುದು, ನಿಮ್ಮ ಕೆಲಸಗಳಲ್ಲಿ ನೀವು ಹೆಚ್ಚಿನ ಲಾಭ ಪಡೆಯುವಿರಿ.
ಧನು ರಾಶಿ
ಇಷ್ಟ ಮಿತ್ರರನ್ನು ಭೇಟಿ ಆಗುವುದರಿಂದ ನೀವು ಮಾಡುವ ಕೆಲಸದಲ್ಲಿ ಯಶಸ್ಸು ದೊರೆಯಲಿದೆ, ಮನಸ್ಸಿನ ಗೊಂದಲಗಳು ದೂರಾಗಲಿದೆ. ಹೈನುಗಾರಿಕೆ ಮಾಡುವವರು ಬಹಳ ಜಾಗರೂಕರಾಗಿರಬೇಕು, ಪ್ರಾಣಿಗಳಿಗೆ ಆರೋಗ್ಯ ಸಮಸ್ಯೆಯಾಗಿ ನಿಮಗೆ ನಷ್ಟ ಉಂಟಾಗಬಹುದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡಿರುವವರು ಇಂದು ಹೂಡಿಕೆ ಮಾಡದಿರಿ, ಇಲ್ಲದಿದ್ದರೆ ಹಣ ನಷ್ಟವಾಗುತ್ತದೆ. ಪುಣ್ಯಕ್ಷೇತ್ರಗಳ ದರ್ಶನ ಮಾಡುವಿರಿ.
ಮಕರ ರಾಶಿ
ಮಾಡುವ ಎಲ್ಲಾ ಕೆಲಸಗಳಲ್ಲಿ ಅಭಿವೃದ್ಧಿ ಹೊಂದಲಿದ್ದೀರಿ, ಟ್ರಾವೆಲ್ ಬಿಸ್ನೆಸ್, ಪಿಜಿ ನಡೆಸುವವರಿಗೆ ಇಂದು ದ್ವಿಗುಣ ಲಾಭವಾಗಲಿದೆ. ಬಹಳ ದಿನಗಳಿಂದ ಭೂಮಿ ಖರೀದಿಸಬೇಕು ಎಂಬ ಆಸೆ ಇದ್ದವರಿಗೆ ಇಂದು ಶುಭದಿನವಾಗಿದೆ. ಹೊಸ ಕಟ್ಟಡ ಕಟ್ಟಲು ಭೂಮಿಯನ್ನು ಖರೀದಿಸಲಿದ್ದೀರಿ, ಗೃಹಿಣಿಯರಿಗೆ ಸಂತೋಷದ ದಿನ, ಕುಟುಂಬದೊಂದಿಗೆ ನೀವು ಸಂತೋಷದ ಸಮಯ ಕಳೆಯಲಿದ್ದೀರಿ.
ಕುಂಭ ರಾಶಿ
ಹೊಸ ವ್ಯಾಪಾರ, ವ್ಯವಹಾರ ಪ್ರಾರಂಭಿಸಬೇಕು ಎಂದುಕೊಂಡಿರುವವರಿಗೆ ಇಂದು ಒಳ್ಳೆ ದಿನ. ದಾಯಾದಿಗಳೊಂದಿಗೆ ಕಲಹ ಉಂಟಾಗಲಿದೆ. ಸಭೆ, ಸಮಾರಂಭಗಳಿಗೆ ಹೋಗಿ ಖುಷಿಯ ಸಮಯ ಕಳೆಯುವಿರಿ, ನೀವು ಮಾಡುವ ಕೆಲಸಗಳಲ್ಲಿ ಏಕಾಗ್ರತೆಯಿಂದ ತೊಡಗಿಸಿಕೊಳ್ಳಿ. ಖಂಡಿತ ಮನಸ್ಸಿಗೆ ಸಮಾಧಾನ ಇರುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಫಲ ದೊರೆಯಲಿದೆ.
ಮೀನ ರಾಶಿ
ಚಿನ್ನ, ಬೆಳ್ಳಿ ಖರೀದಿಸಲಿದ್ದೀರಿ. ಹಣಕಾಸಿನ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಪರಿಹಾರವಾಗಲಿದೆ. ಕೆಲಸದಲ್ಲಿ ಒತ್ತಡ ಇರುತ್ತದೆ. ಎಷ್ಟೇ ಕೆಲಸ ಇದ್ದರೂ ಖುಷಿಯಿಂದ ಮಾಡುವಿರಿ, ಹಿತಶತ್ರುಗಳ ಕಾಟ ಇರಲಿದೆ, ಎಚ್ಚರಿಕೆಯಿಂದ ಇರಿ. ಮರದ ಬಿಸ್ನೆಸ್ ಮಾಡುವವರಿಗೆ ಇಂದು ಉತ್ತಮ ಲಾಭ ದೊರೆಯಲಿದೆ.
ಶ್ರೀ ದರ್ಶನ್ ದೀಕ್ಷಿತ್ ಗುರೂಜಿಯನ್ನು ನೇರವಾಗಿ ಭೇಟಿ ಮಾಡಲು 9902595318, 9041874187 ಮೊಬೈಲ್ ನಂಬರನ್ನು ಸಂಪರ್ಕಿಸಿ



