ಸಿಎಂ ಡಿಸಿಎಂ ನಡುವಿನ ಶೀತಲ ಸಮರ ಇಷ್ಟು ದಿನ ತೆರೆ ಮರೆಯಲ್ಲಿ ನಡೆಯುತ್ತಿತ್ತು. ಆದರೆ ಈಗ ಈ ಗಲಾಟೆ ಬಹಿರಂಗವಾಗಿದೆ. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಗುದ್ದಾಟ ಬೀದಿಗೆ ಬಿದ್ದಿದ್ದು, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಡಿಕೆ ಶಿವಕುಮಾರ್. ಸಿಎಂ ಡಿಸಿಎಂ ನಡುವೆ ಎಲ್ಲವೂ ಸರಿ ಇಲ್ಲ ಅಂತ ಬಿಜೆಪಿ ಆರೋಪಿಸುತ್ತಲೇ ಇತ್ತು. ಆದರೆ ಈಗ ಇದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ.
ಯಾವಾಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತೋ ಅಂದಿನಿಂದಲೇ ಸಿಎಂ ಹಾಗೂ ಡಿಸಿಎಂ ನಡುವೆ ಸಂಘರ್ಷ ಇದ್ದೇ ಇದೆ. ಪೂರ್ಣ ಪ್ರಮಾಣದ ಸರ್ಕಾರದ ಅಧಿಕಾರಕ್ಕೆ ಬಂದರೂ ಆಡಳಿತ ಸುಲಲಿತಾವಾಗಿ ನಡೆಸಲು ಸಾಧ್ಯವಾಗೇ ಇಲ್ಲ. ಒಂದಲ್ಲ ಒಂದು ವಿಚಾರವಾಗಿ ಈ ಇಬ್ಬರ ನಡುವೆ ಗದ್ದಲ ತೆರೆ ಮೆರೆಯಲ್ಲಿ ನಡೆಯುತ್ತಲೇ ಇತ್ತು. ಹಾಸನ ಸಮಾವೇಶ, ಡಿನ್ನರ್ ಮೀಟಿಂಗ್, ರಹಸ್ಯ ಸಭೆ ಹೀಗೆ ಹತ್ತು ಹಲವು ವಿಚಾರದಲ್ಲೂ ಕೂಡ ಸಂಘರ್ಷ ಆಗ್ತಾ ಇತ್ತು. ಆದರೆ ಮೊದಲ ಬಾರಿಗೆ ಈ ಸಂಘರ್ಷ ಬಹಿರಂವಾಗಿದೆ. ಈ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಮಗದೊಮ್ಮೆ ಸ್ಪಷ್ಟ ಆಗ್ತಾ ಇದೆ.

ಹೌದು, ಪಿಎಬ್ಲ್ಯುಡಿ ಇಲಾಖೆಗೆ ಮುಖ್ಯ ಎಂಜಿನಿಯರ್ಗಳ ಏಕಾಏಕಿ ವರ್ಗಾವಣೆ ಮಾಡಿರುವ ಡಿಪಿಎಆರ್ ಕ್ರಮಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಪೂರ್ವಾನುಮತಿ ಇಲ್ಲದೇ ವರ್ಗಾವಣೆ, ಸ್ಥಳ ನಿಗದಿ ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅಸಮಾಧಾನ ಹೊರ ಹಾಕಿರುವ ಅವರು, ನನ್ನ ಇಲಾಖೆಗೆ ಸಂಬಂಧಿಸಿದ ವರ್ಗಾವಣೆ, ನೇಮಕಾತಿ ಮುಂತಾದ ವಿಚಾರಗಳ ಬಗ್ಗೆ ಯಾವುದೇ ಆದೇಶ ಹೊರಡಿಸುವ ಮುನ್ನ ಪೂರ್ವಾನುಮತಿ ಪಡೆಯಲೇಬೇಕು. ಈ ವಿಚಾರ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿಯೇ ಹೇಳಲಾಗಿದೆ. ಈಗ ಆ ಸೂಚನೆಯನ್ನು ಉಲ್ಲಂಘಿಸಿ ಆದೇಶ ಹೊರಡಿಸಿರುವುದ್ದೀರ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಮೇಲ್ಮಟ್ಟದಲ್ಲಿ ಹೀಗೆ ವರ್ಗಾವಣೆ ಮಾಡಬಹುದು. ಆದರೆ
ಮೊದಲೇ ನೀರಾವರಿ ಕೆಲಸ ಮಾಡೋಕೆ ಯಾವ ಇಂಜಿನಿಯರು ಬರಲ್ಲ. ಶಾಸಕರು ಒತ್ತಡ ಅಂತ ರಿಲೀವ್ ಮಾಡಿದ್ದಾರೆ. ಆದರೆ ನಾನು ಸೂಚನೆ ಕೊಟ್ಟಿದ್ದೇನೆ ಯಾರನ್ನು ರಿವೀಲ್ ಮಾಡಬೇಡಿ ಅಂತಾ ಹೇಳಿದರು.

ಹಲವು ತಿಂಗಳಿಂದ ಹುದ್ದೆ ನಿರೀಕ್ಷೆಯಲ್ಲಿದ್ದ ಲೋಕೋಪಯೋಗಿ ಇಲಾಖೆಯ ಐವರು ಮುಖ್ಯ ಎಂಜಿನಿಯರ್ ವೃಂದದ ಅಧಿಕಾರಿಗಳನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದ್ದಾರೆ. ಸಿಎಂ ಅನುಮೋದನೆ ಬಳಿಕವೇ ಐವರು ಮುಖ್ಯ ಎಂಜಿನಿಯರ್ ಗಳನ್ನ ಮೇ 9ರಂದು ವರ್ಗಾವಣೆ ಮಾಡಲಾಗಿದೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸ್ಥಳ ನಿಯುಕ್ತಿಗೆ ಸಂಬಂಧಿಸಿದ ಕಡತವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಿತ್ತು. ಮುಖ್ಯಮಂತ್ರಿ ಅನುಮೋದನೆ ಬಳಿಕ ವರ್ಗಾವಣೆ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ. ಇನ್ನು ಈ ವಿಚಾರ ವಿಪಕ್ಷಕ್ಕೆ ಅಸ್ತ್ರವಾಗಿದೆ. ಈ ಬಗ್ಗೆ ಮಾತನಾಡಿರುವ ವಿಜಯೇಂದ್ರ, ಇದೆಲ್ಲವೂ ನೆಪ ಮಾತ್ರ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣಕ್ಕೆ ಮಹತ್ತರ ತಿರುವು ಸಿಗಲಿದೆ. ಕ್ಲೈಮ್ಯಾಕ್ಸ್ ಗೆ ಬರುವ ಮುಂಚಿತವಾಗಿ ಇವೆಲ್ಲ ಬೆಳವಣಿಗೆ ನಡೀತಿದೆ. ಸ್ವತಃ ಸಿಎಂ ಅವರೇ ಇಂದು ಹರಿಪ್ರಸಾದ್ ಮನೆಗೆ ಭೇಟಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನೋಡ್ತಿರಿ ಇನ್ನೇನೆಲ್ಲ ಬೆಳವಣಿಗೆ ಆಗುತ್ತೆ ಅಂತ ಭವಿಷ್ಯ ನುಡಿದಿದ್ದಾರೆ.

ಶ್ಯಾಲಿನಿ ರಜಿನೀಶ್ ಡಿಕೆ ಪತ್ರಕ್ಕೆ ಉತ್ತ ರ ಕೊಟ್ಟಿದ್ದಾರೆ. ಸಿಎಂ ಸೂಚನೆ ಮೇರೆಗೇ ವರ್ಗಾವಣೆ ಅಂತ. ಈ ವಿಚಾರದಲ್ಲಿ ಸಿಎಂ ಹಾಗೂ ಡಿಸಿಎಂ ನಡುವೆ ಸಂಘರ್ಷ ಏರ್ಪಟ್ಟಂತಾಗಿದೆ. ಇಷ್ಟು ದಿನ ತೆರೆ ಮರೆಯಲ್ಲಿ ಉಂಟಾಗಿದ್ದ ಗುದ್ದಾಟ ಬೀದಿಗೆ ಬಿದ್ದರೋದು ಇಬ್ಬರಿಗೂ ಡ್ಯಾಮೇಜ್ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.



