ಕನ್ನಡ ರಾಪರ್ ಚಂದನ್ ಶೆಟ್ಟಿ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇವರು ಇತ್ತೀಚೆಗೆ ವಿಚ್ಛೇದನದ ಕಾರಣಕ್ಕೆ ಹೆಚ್ಚು ಸುದ್ದಿಯಾಗಿದ್ದಾರೆ. ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಚಂದನ್ ಶೆಟ್ಟಿ, ಕಳೆದ ವರ್ಷ ವಿಚ್ಛೇದನ ನೀಡಿದರು. ಇಬ್ಬರು ಒಪ್ಪಿಕೊಂಡು, ಜೊತೆಯಲ್ಲಿ ಇರೋದಕ್ಕೆ ಸಾಧ್ಯ ಆಗೋದಿಲ್ಲ ಎಂದು ನಿರ್ಧಾರ ಮಾಡಿದ ನಂತರವೇ ವಿಚ್ಛೇದನ ಪಡೆದಿದ್ದು. ಆದರೆ ಕೆಲವು ದಿನಗಳಿಂದ ಈ ಜೋಡಿ ಬಗ್ಗೆ ಬೇರೆಯದೇ ಸುದ್ದಿ ಕೇಳಿಬರುತ್ತಿದೆ. ಚಂದನ್ ಹಾಗೂ ನಿವೇದಿತಾ ದೂರ ಆಗಿದ್ದಾಯ್ತು, ಚಂದನ್ ಶೆಟ್ಟಿ ಸಂಜನಾ ಆನಂದ್ ಮದುವೆ ಆಗ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಈಗ ಮತ್ತೊಬ್ಬ ನಟಿಯ ಜೊತೆ ಚಂದನ್ ಶೆಟ್ಟಿ ಮದುವೆ ಆಗ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು, ಅಷ್ಟಕ್ಕೂ ಈ ಹೊಸ ನಟಿ ಯಾರು? ಚಂದನ್ ಮನಸ್ಸಲ್ಲಿ ನಿಜಕ್ಕೂ ಇರೋದು ಯಾರು? ಈ ಎಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ..
ಈಗಿನ ಸೋಷಿಯಲ್ ಮೀಡಿಯಾ ಯುಗ ಈ ರೀತಿ ಆಗಿದೆ. ಒಂದು ಸೆಲೆಬ್ರಿಟಿ ಜೋಡಿ ವಿಚ್ಛೇದನ ಪಡೆಯುತ್ತಾರೆ ಅಂದ್ರೆ, ಅವರ ಬಗ್ಗೆ ಇಲ್ಲ ಸಲ್ಲದ ವಿಚಾರಗಳನ್ನು ಹಬ್ಬಿಸುವುದು, ಇನ್ಯಾರದ್ದೋ ಜೊತೆಗೆ ಸಂಬಂಧ ಇದೆ ಅವರಿಬ್ಬರು ಮದುವೆ ಆಗುತ್ತಾರೆ ಎಂದು ಹೇಳುವುದು ಇದೆಲ್ಲವೂ ತುಂಬಾ ಕಾಮನ್ ಆಗಿದೆ. ಕೆಲವು ಸೆಲೆಬ್ರಿಟಿಗಳಿಗೆ ಇದರಿಂದ ತೊಂದರೆ ಆಗುತ್ತಿರುವುದು ನಿಜ. ಜನರು ಸುಮ್ಮನೆ ಗಾಸಿಪ್ ಹಬ್ಬಿಸಿ ಬಿಡುತ್ತಾರೆ. ಆದರೆ ಅವರ ಫ್ಯಾಮಿಲಿ ವಲಯದಲ್ಲಿ, ಸ್ನೇಹಿತರ ವಲಯದಲ್ಲಿ ಎಲ್ಲಾ ಕಡೆ ಇದೇ ವಿಚಾರ ಚರ್ಚೆ ಆಗೋ ಮೂಲಕ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವ ಸೂಕ್ಷ್ಮ ವಿಚಾರ ಈ ರೀತಿಯ ಸುದ್ದಿಗಳನ್ನು ಹಬ್ಬಿಸುವವರಿಗೆ ಗೊತ್ತಿರುವುದಿಲ್ಲ. ಚಂದನ್ ಶೆಟ್ಟಿ ಹಾಗೂ ಸಂಜನಾ ಆನಂದ್ ಅವರ ವಿಚಾರದಲ್ಲಿ ಸಹ ಹೀಗೆ ಆಗಿತ್ತು.

ಆ ಗಾಸಿಪ್ ಎಲ್ಲದಕ್ಕೂ ಸ್ವತಃ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದರು. ತಾವಿಬ್ಬರು ಒಂದು ಹಾಡಿನಲ್ಲಿ ನಟಿಸಿದ್ದು ಅಷ್ಟೇ, ಇನ್ನೇನು ಇಲ್ಲ ಎಂದಿದ್ದರು. ಸಂಜನಾ ಆನಂದ್ ಸಹ ಈ ವಿಚಾರಕ್ಕೆ ಸ್ಪಷ್ಟನೆ ಕೊಟ್ಟರು. ಅಲ್ಲಿಗೆ ಎಲ್ಲವು ಸರಿ ಹೋಯಿತು ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಹೊಸ ಗಾಸಿಪ್ ಶುರುವಾಗಿದೆ. ಖ್ಯಾತ ಕಿರುತೆರೆ ನಟಿ ಸುಪ್ರೀತಾ ಸತ್ಯನಾರಾಯಣ ಅವರೊಡನೆ ಚಂದನ್ ಶೆಟ್ಟಿ ಮದುವೆ ಆಗುತ್ತಾರೆ ಎನ್ನುವ ವಿಚಾರ ಒಂದು ಸಖತ್ ವೈರಲ್ ಆಗಿದೆ. ಹೌದು, ಸುಪ್ರೀತಾ ಸತ್ಯನಾರಾಯಣ ಅವರು ಮದುವೆ ಆಗುತ್ತಿರುವ ಬಗ್ಗೆ ಸುದ್ದಿ ಶೇರ್ ಮಾಡಿ, ಹುಡುಗನ ಹೆಸರು ಚಂದನ್ ಶೆಟ್ಟಿ ಎಂದು ತಿಳಿಸಿದ್ದರು. ಆಗ ಎಲ್ಲರಿಗೂ ಇವರು ಮದುವೆ ಆಗುತ್ತಿರುವುದು ಕನ್ನಡ ರಾಪರ್ ಚಂದನ್ ಶೆಟ್ಟಿ ಅವರನ್ನೇ ಎನ್ನುವ ಅನುಮಾನ ಶುರುವಾಗಿತ್ತು. ಅದೇ ವಿಚಾರ ವೈರಲ್ ಸಹ ಆಯಿತು.
ಆದರೆ ಸುಪ್ರೀತಾ ಅವರು ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿದ ಮೇಲೆ ಎಲ್ಲಾ ಗಾಸಿಪ್ ಗಳಿಗೆ ತೆರೆ ಬಿದ್ದಿದೆ. ಸುಪ್ರೀತಾ ಸತ್ಯನಾರಾಯಣ ಅವರು ಮದುವೆ ಆಗುತ್ತಿರುವ ಹುಡುಗನ ಹೆಸರು ಕೂಡ ಚಂದನ್ ಶೆಟ್ಟಿ. ಆದರೆ ಆ ಹುಡುಗ ಬೇರೆ ಕನ್ನಡ ರಾಪರ್ ಚಂದನ್ ಶೆಟ್ಟಿ ಅವರೇ ಬೇರೆ. ಸುಪ್ರೀತಾ ಅವರು ಮದುವೆ ಆಗುತ್ತಿರುವ ಚಂದನ್ ಶೆಟ್ಟಿ ಅವರ ಗೆಳೆಯ ಆಗಿದ್ದಾರೆ. ಈ ರೀತಿಯಾಗಿ ಸುಪ್ರೀತಾ ಹಾಗೂ ಚಂದನ್ ಶೆಟ್ಟಿ ಗಾಸಿಪ್ ಗೆ ತೆರೆ ಬಿದ್ದಿದೆ. ಇದರಿಂದ ತಿಳಿದು ಬರುವುದು ಏನೆಂದರೆ, ಒಳ್ಳೆಯ ವಿಚಾರಗಳು ಎಲ್ಲಿಯೂ ಬೇಗ ಹರಡುವುದಿಲ್ಲ. ಆದರೆ ಗಾಸಿಪ್ ಗಳು ಬಹಳ ಬೇಗ ಎಲ್ಲಾ ಕಡೆ ಪ್ರಯಾಣ ಮಾಡುತ್ತದೆ. ಚಂದನ್ ಶೆಟ್ಟಿ ಅವರ ವಿಚಾರದಲ್ಲಿ ಆಗುತ್ತಿರುವುದು ಕೂಡ ಅದೇ ಆಗಿದೆ.

ಇನ್ನು ಚಂದನ್ ಶೆಟ್ಟಿ ಅವರು ಕೆಲವು ದಿನಗಳ ಹಿಂದೆಯೇ ಈ ಎಲ್ಲಾ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದರು. ನಿವೇದಿತಾ ಹಾಗೂ ತಾವು ಪ್ರೀತಿಸಿ ಮದುವೆಯಾದ ಜೋಡಿ.. ಶುರುವಿನಲ್ಲಿ ಇವರ ಸಂಸಾರ ಚೆನ್ನಾಗಿಯೇ ನಡೆದುಕೊಂಡು ಹೋದರೂ ಸಹ, ನಂತರ ಇಬ್ಬರಿಗೆ ಬೇಕಿದ್ದು ಬೇರೆಯೇ ಆಯಿತು. ಇಬ್ಬರಿಗು ತಮ್ಮ ಕೆರಿಯರ್ ಬಗ್ಗೆ ಗಮನ ಹರಿಸಬೇಕು ಎನ್ನುವ ಆಸಕ್ತಿ ಶುರುವಾಯಿತು. ಅದರಲ್ಲೂ ನಿವೇದಿತಾ ಅವರಿಗೆ ಈ ಆಸಕ್ತಿ ಹೆಚ್ಚಾಗಿದ್ದ ಕಾರಣ, ಚಂದನ್ ಅವರಿಗೂ ತಾವು ತಮ್ಮ ಕೆರಿಯರ್ ನಲ್ಲಿ ಬೆಳೀಬೇಕು ಎಂದು ಕನಸು ಇದ್ದ ಕಾರಣ ಇಬ್ಬರೂ ಕೂತು ಮಾತನಾಡಿ, ಬೇರೆ ಆಗುವ ನಿರ್ಧಾರ ಮಾಡಿದರಂತೆ. ದೂರ ಆಗೋದಕ್ಕೆ ಆರೋಪಗಳೇ ಬೇಕಿಲ್ಲ, ಕಾರಣ ಇದ್ದರೆ ಸಾಕು ಎನ್ನುತ್ತಾರೆ ಚಂದನ್ ಶೆಟ್ಟಿ. ಈ ರೀತಿಯಲ್ಲಿ ಈ ಜೋಡಿ ಬೇರೆ ಆಗಿದ್ದಾರೆ.
ತಮ್ಮ ನಡುವೆ ಮುನಿಸು ಇಲ್ಲದ ಕಾರಣಕ್ಕೆ ಇಬ್ಬರೂ ಕೂಡ, ಫ್ರೆಂಡ್ಲಿ ಆಗಿ ಕೈಕೈ ಹಿಡಿದು ಕೋರ್ಟ್ ಇಂದ ಹೊರಗಡೆ ಹೋದರು. ಇನ್ನು ನಿವೇದಿತಾ ಎಲ್ಲೇ ಇದ್ರು ಚೆನ್ನಾಗಿರಲಿ ಅನ್ನೋದೇ ಚಂದನ್ ಶೆಟ್ಟಿ ಆಸೆ. ಇದನ್ನ ಕೇಳಿದ್ರೆ ಚಂದನ್ ಅವರ ಮನಸ್ಸಲ್ಲಿ ಇನ್ನೂ ಆ ಪ್ರೀತಿ ಇದೆ ಅನ್ನೋದು ಗೊತ್ತಾಗುತ್ತದೆ. ದೂರ ಆಗಿದ್ರು ಚಂದನ್ ಮನಸ್ಸಲ್ಲಿ ಇರೋದು ನಿವೇದಿತಾ ಮಾತ್ರ ಎನ್ನುವಂತೆ ಆಗಿದೆ. ಇನ್ನು ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾದರು. ಇಬ್ಬರು ಬಿಗ್ ಬಾಸ್ ನಲ್ಲಿ ಭೇಟಿಯಾಗಿ, ಅಲ್ಲಿಂದಲೇ ಇಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಅಲ್ಲಿಂದ ಹೊರಗಡೆ ಬಂದ ನಂತರ ಇಬ್ಬರು ಭೇಟಿ ಮಾಡುವುದಕ್ಕೆ ಶುರು ಮಾಡಿ, ಇಬ್ಬರ ನಡುವೆ ಪ್ರೀತಿ ಶುರು ಮಾಡಿ, ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾದರು.

ಈ ಜೋಡಿ ಬಹಳ ಚೆನ್ನಾಗಿಯು ಇದ್ದರು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಸಹ ಆಗಿತ್ತು.ಎಲ್ಲಾ ಚೆನ್ನಾಗಿದೆ, ಇಬ್ಬರು ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡುತ್ತಾರೆ ಎಂದು ಎಲ್ಲರೂ ಅಂದುಕೊಳ್ಳುವ ವೇಳೆಗೆ ಇಬ್ಬರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಯಿತು. ಕೊನೆಗೆ ಇಬ್ಬರು ಕೂಡ ಜೊತೆಯಾಗಿಯೇ ಬಂದು ವಿಚ್ಛೇದನ ಪಡೆದರು. ಇತ್ತೀಚೆಗೆ ಶೂಟಿಂಗ್ ನಲ್ಲಿ ಸಹ ಜೊತಯಾಗಿ ಭಾಗಿಯಾದರು. ಶೂಟಿಂಗ್ ವಿಡಿಯೋಗಳು ವೈರಲ್ ಆಗಿ, ಇಬ್ಬರು ಮತ್ತೆ ಜೊತೆಯಾಗಿದ್ದಾರೆ ಎನ್ನುವ ಸುದ್ದಿ ಕೂಡ ವೈರಲ್ ಆಯಿತು. ಆದರೆ ಇಬ್ಬರು ಒಂದಾಗುವ ಸೂಚನೆ ಇಲ್ಲ, ಇದು ಶೂಟಿಂಗ್ ಅಷ್ಟೇ. ಇಬ್ಬರು ಶೂಟಿಂಗ್ ನಲ್ಲಿ ಮಾತ್ರ ಇದ್ದಿದ್ದು, ಮತ್ತೆ ಒಂದಾಗುವುದಿಲ್ಲ ಎಂದು ಶೂಟಿಂಗ್ ನಂತರ ನಡೆದ ಪ್ರೆಸ್ ಮೀಟ್ ನಲ್ಲಿ ನಿವೇದಿತಾ ಸ್ಪಷ್ಟನೆ ಕೊಟ್ಟರು.