ಚೈತ್ರಾ ಕುಂದಾಪುರ, ಈ ಹೆಸರು ಮೊದಲೆಲ್ಲಾ ಅಷ್ಟೇನು ಚಾಲ್ತಿಯಲ್ಲಿ ಇರಲಿಲ್ಲ. ಆದರೆ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಚೈತ್ರಾ ಕುಂದಾಪುರ ಅನ್ನೋ ಹೆಸರು ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಉಡುಪಿ ಕಡೆಯ ಚೈತ್ರಾ ಕುಂದಾಪುರ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದವರು. ಇವರ ಕನ್ನಡ ಭಾಷಣ ಜನರಿಗೆ ನೆನಪಿತ್ತು, ಹಾಗೆಯೇ ರಾಜಕೀಯ ಕ್ಷೇತ್ರದ ಬಗ್ಗೆ ಇವರು ಆಡಿರುವ ಮಾತುಗಳಿಂದ ವೈರಲ್ ಆಗುತ್ತಿದ್ದರು. ಆದರೆ ಇದೀಗ ಚೈತ್ರಾ ಅವರು ಎಂಟರ್ಟೈನ್ಮೆಂಟ್, ಫೋಟೋಶೂಟ್ ಈ ಕಾರಣಗಳಿಗೆ ವೈರಲ್ ಆಗಿದ್ದಾರೆ, ಸುದ್ದಿಯಾಗಿದ್ದಾರೆ. ಇವರ ಫೋಟೋಶೂಟ್ ಈಗ ಜನರ ಗಮನ ಸೆಳೆಯುತ್ತಿದೆ. ಮಹಾರಾಷ್ಟ್ರ ಶೈಲಿಯಲ್ಲಿ ಸೀರೆ ಧರಿಸಿ ಮಿಂಚಿದ್ದಾರೆ ಚೈತ್ರಾ ಕುಂದಾಪುರ.. ಈ ಫೋಟೋಸ್ ಗಳು ವೈರಲ್ ಆಗಿದ್ದು, ಚೈತ್ರಾ ಗೆ ಸಿಗುತ್ತಿದೆ ಅಭಿಮಾನಿಗಳಿಂದ ಮೆಚ್ಚುಗೆ.
ಬಿಗ್ ಬಾಸ್ ಶೋ ಅನ್ನೋದೇ ಹೀಗೆ. ಈ ಶೋಗೆ ಬರುವ ಮುಂಚೆ ಯಾರು ಏನಾಗಿದ್ದರೋ, ಎಷ್ಟು ಸಾಧನೆ ಮಾಡಿದ್ದರೋ, ಆದರೆ ಈ ಶೋಗೆ ಒಂದು ಸಾರಿ ಬಂದುಬಿಟ್ಟರೆ, ಅವರಿಗೆ ಇರುವ ಜನಪ್ರಿಯತೆಯ ಲೆವೆಲ್ ಡಬಲ್ ಆಗುತ್ತದೆ. ಚೈತ್ರಾ ಅವರ ಕೇಸ್ ನಲ್ಲಿ ಆಗಿದ್ದು ಕೂಡ ಅದೇ ರೀತಿ. ಬಿಗ್ ಬಾಸ್ ಗಿಂತ ಮೊದಲು ಬೇರೆ ರೀತಿಯ ವಿವಾದಗಳಿಗೆ ಚೈತ್ರಾ ಕುಂದಾಪುರ ಸುದ್ದಿಯಾಗಿದ್ದರು. ಹಲವು ವಿಚಾರಗಳ ಬಗ್ಗೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿ, ಆ ಕಾರಣಕ್ಕೆ ಹೆಚ್ಚು ಸುದ್ದಿಯಾಗಿದ್ದರು. ಇವರು ಬಿಗ್ ಬಾಸ್ ಶೋಗೆ ಬಂದಿದ್ದಾರೆ ಎನ್ನುವುದೇ ಹೆಚ್ಚು ಜನರಿಗೆ ಶಾಕ್ ನೀಡಿತ್ತು, ಈ ಮನೆಯಲ್ಲಿ ಕೂಡ ಇವರು ಹೆಚ್ಚು ದಿವಸಗಳ ಕಾಲ ಇರುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ. ಆದರೆ ಬಿಗ್ ಬಾಸ್ಮನೆಯ ಒಳಗೆ ಫಿನಾಲೆ ವೀಕ್ ವರೆಗು ತಲುಪಿದರು.

ಇವರ ಜರ್ನಿಯನ್ನು ಕೂಡ ಯಾರು ಮರೆಯುವ ಹಾಗಿಲ್ಲ. ಬಿಗ್ ಬಾಸ್ ಮನೆಯ ಒಳಗೆ ಅತಿಯಾದ ಮಾತು ಮತ್ತು ಜಗಳದ ಕಾರಣಕ್ಕೆ ಚೈತ್ರಾ ಅವರು ಹೆಚ್ಚು ಸುದ್ದಿಯಾಗಿದ್ದು. ಮನೆಯ ಎಲ್ಲಾ ಸ್ಪರ್ಧಿಗಳ ಜೊತೆಗೆ ಚೈತ್ರ ಜಗಳ ಆಡುತ್ತಿದ್ದರು. ಜೋರಾಗಿ ಕಿರಿಚುತ್ತಿದ್ದರು. ಈ ಕಾರಣಕ್ಕೆ ಜಾಸ್ತಿ ಸುದ್ದಿಯಾಗುತ್ತಿದ್ದರು. ಟಾಸ್ಕ್ ಗಳಲ್ಲಿ ಉಸ್ತುವಾರಿ ವಹಿಸಿ, ಅದರಲ್ಲಿ ಕೂಡ ತಪ್ಪು ಮಾಡಿ ಸುದೀಪ್ ಸರ್ ಇಂದ ಬೈಸಿಕೊಂಡಿದ್ದು ಇದೆ. ಹುಷಾರಿಲ್ಲ ಎಂದು ಹೊರಗಡೆ ಹೋಗಿ, ಅಲ್ಲಿ ವೈದ್ಯಕೀಯ ಸಿಬ್ಬಂದಿಗಳ ಜೊತೆಗೆ ಬಿಗ್ ಬಾಸ್ ಬಗ್ಗೆ ಮಾತನಾಡಿ, ಆ ಕಾರಣಕ್ಕೆ ಸುದೀಪ್ ಅವರು ಚೈತ್ರಾ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಇದಷ್ಟೇ ಅಲ್ಲ, ನಾಮಿನೇಷನ್ ಮಾಡುವ ವೇಳೆಗೆ ಹುಷಾರು ತಪ್ಪುತ್ತಾರೆ, ಬೇಕು ಎಂದೇ ಇದನ್ನೆಲ್ಲಾ ಮಾಡುತ್ತಾರೆ ಎನ್ನುವ ವಿಚಾರಕ್ಕೆ ಕೂಡ ಸುದ್ದಿಯಾಗಿದ್ದರು.
ಇವರ ಮಾತನ್ನ ಕೇಳಿ ಕೇಳಿ ಸುದೀಪ್ ಅವರಿಗೆ ಮತ್ತು ಮನೆಯ ಒಳಗಿದ್ದ ಸ್ಪರ್ಧಿಗಳಿಗೆ ಸಾಕಾಗಿ ಹೋಗಿತ್ತು. ಅಷ್ಟರ ಮಟ್ಟಿಗೆ ಇರುತ್ತಿತ್ತು ಚೈತ್ರಾ ಅವರ ಮಾತುಗಳು. ಯಾರು ಎಷ್ಟೇ ಹೇಳಿದರೂ ಚೈತ್ರ ಅವರ ಮಾತು ಮಾತ್ರ ನಿಲ್ಲುತ್ತಲೇ ಇರಲಿಲ್ಲ. ಇನ್ನು ಬಿಗ್ ಬಾಸ್ ಮನೆಯ ಒಳಗೆ ಇರುವಾಗ ಚೈತ್ರಾ ಹಾಗೂ ರಜತ್ ಜೋಡಿ ಎಲ್ಲರಿಗೂ ಭಾರಿ ಮನರಂಜನೆ ಕೊಟ್ಟಿತ್ತು. ರಜತ್ ಚೈತ್ರಾ ಅವರನ್ನು ನಮ್ಮ ಬಾಸ್ ಎಂದು ಕರೆದು ತಮಾಷೆ ಮಾಡುತ್ತಿದ್ದರು. ಹಾಗೆಯೇ ಇವರಿಬ್ಬರ ನಡುವೆ ನಡೆಯುವ ಕೋಳಿ ಜಗಳ ಜನರಿಗೆ ಸಖತ್ ಇಷ್ಟವಾಗಿತ್ತು. ರಜತ್ ಬಹಳಷ್ಟು ಸಾರಿ ಚೈತ್ರಾ ಅವರ ಕಾಲೆಳೆಯುತ್ತಿದ್ದರು. ವೀಕ್ಷಕರಿಗೆ ಇದೆಲ್ಲವೂ ಕೂಡ ಸಿಕ್ಕಾಪಟ್ಟೆ ಮಜಾ ಕೊಡುತ್ತಿತ್ತು. ಬಿಗ್ ಬಾಸ್ ಶೋ ಇಂದ ಹೊರಗಡೆ ಬಂದಮೇಲೆ ಕೂಡ ಚೈತ್ರಾ ರಜತ್ ಜಗಳ ನಿಂತಿಲ್ಲ .
ಹೌದು, ಇವರಿಬ್ಬರು ಕಲರ್ಸ್ ಕನ್ನಡ ವಾಹಿನಿಯ ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಬಂದಿದ್ದಾರೆ. ಮೊದಲಿಗೆ ಈ ಶೋಗೆ ಆಯ್ಕೆಯಾಗಿದ್ದು ಭವ್ಯ ಗೌಡ. ಆದರೆ ಭವ್ಯ ಅವರು ಕೊನೆಯ ಕ್ಷಣದಲ್ಲಿ ಶೋ ಇಂದ ಹೊರಗುಳಿದ ಕಾರಣ ಚೈತ್ರಾ ಅವರನ್ನು ಈ ಶೋಗೆ ಕರೆತರಲಾಯಿತು. ಶೋನಲ್ಲಿ ಚೈತ್ರಾ ಅವರಿಂದ ಭರ್ಜರಿ ಮನರಂಜನೆ ಅಂತೂ ಸಿಗುತ್ತಿದೆ. ಚೈತ್ರಾ ರಜತ್ ಕಾಂಬಿನೇಷನ್ ಅವರಿಬ್ಬರ ಜಗಳ, ಕೌಂಟರ್ ಡೈಲಾಗ್ ಗಳು ಇದೆಲ್ಲವು ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಚೆನ್ನಾಗಿ ವರ್ಕ್ ಆಗುತ್ತಿದೆ. ಇವುಗಳ ಜೊತೆಗೆ ಚೈತ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ. ಹೊಸ ಫೋಟೋಶೂಟ್ ಗಳು, ಬ್ರ್ಯಾಂಡ್ ಕೋಲ್ಯಾಬೊರೇಷನ್ ಗಳು ಇದೆಲ್ಲದರ ಮೂಲಕ ಚೈತ್ರಾ ಅವರು ವೈರಲ್ ಆಗಿದ್ದಾರೆ..

ಚೈತ್ರಾ ಕುಂದಾಪುರ ಅವರಿಗೆ ಬಿಗ್ ಬಾಸ್ ಶೋ ಇಂದ ಹೊರಬಂದ ನಂತರ ಹಲವು ಬ್ರ್ಯಾಂಡ್ ಕೋಲ್ಯಾಬೊರೇಷನ್ ಗಳು ಬಂದಿದೆ. ಅದೆಲ್ಲದರಲ್ಲೂ ಮಿಂಚುತ್ತಿದ್ದಾರೆ. ಮೈಸೂರ್ ಸಿಲ್ಕ್ ಸೀರೆ ಧರಿಸಿ ಇತ್ತೀಚೆಗೆ ಫೋಟೋಶೂಟ್ ಗಳಲ್ಲಿ ಮಿಂಚಿದ್ದರು. ಇದೀಗ ಅಪ್ಪಟ ಮಹಾರಾಷ್ಟ್ರ ಶೈಲಿಯಲ್ಲಿ ಸೀರೆ ಧರಿಸಿ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಮಹಾರಾಷ್ಟ್ರದ ಮಹಾರಾಣಿ ಹಾಗೆ ಫೋಟೋಸ್ ಗಳಲ್ಲಿ ಕಾಣಿಸಿದ್ದಾರೆ ಎಂದರೂ ತಪ್ಪಲ್ಲ. ಕೆಂಪು ಬಣ್ಣದ ಸೀರೆ ಅದಕ್ಕೆ ತಕ್ಕಂಥ ಮೇಕಪ್ ಇದೆಲ್ಲವೂ ಕೂಡ ಚೈತ್ರಾ ಕುಂದಾಪುರ ಅವರಿಗೆ ಬಹಳ ಚೆನ್ನಾಗಿ ಒಪ್ಪುತ್ತಿದೆ. ನೆಟ್ಟಿಗರು ಕೂಡ ಚೈತ್ರಾ ಅವರು ಸುಂದರವಾಗಿ ಕಾಣುತ್ತಿದ್ದಾರೆ, ಮೇಕಪ್ ಅವರಿಗೆ ಚೆನ್ನಾಗಿ ಕಾಣಿಸುತ್ತಿದೆ ಎಂದು ಹೇಳುತ್ತಿದ್ದಾರೆ..
ಇನ್ನು ಚೈತ್ರಾ ಅವರ ಬಗ್ಗೆ ಹೊಗಳುವುದಕ್ಕೆ, ಮೆಚ್ಚಿ ಮಾತಾನಾಡುವುದಕ್ಕೆ ಮತ್ತೊಂದು ಮುಖ್ಯವಾದ ವಿಚಾರ ಇದೆ. ಅದು ಏನು ಎಂದರೆ, ಬೇರೆಯವರು ಮಾಡರ್ನ್ ಡ್ರೆಸ್ ಗಳಲ್ಲಿ ಹೆಚ್ಚಾಗಿ ಮಿಂಚಿದರೆ, ಚೈತ್ರಾ ಅವರು ಸೀರೆಯಲ್ಲಿ ಕಾಣಿಸಿಕೊಂಡು, ಸೀರೆಗಳ ಕೋಲ್ಯಾಬೊರೇಶನ್ ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವುದು ಕೂಡ ಜನರಿಗೆ ತುಂಬಾ ಇಷ್ಟವಾಗಿದೆ. ಸನಾತನ ಧರ್ಮವನ್ನ ಚೈತ್ರಾ ಅವರು ಎತ್ತಿ ಹಿಡಿಯುತ್ತಿದ್ದಾರೆ ಎಂದು ಅವರ ಬಗ್ಗೆ ಸಂತೋಷ ಆಗುತ್ತದೆ ಎನ್ನುತ್ತಿದ್ದಾರೆ ನೆಟ್ಟಿಗರು. ಚೈತ್ರಾ ಅವರಿಗೆ ಬಿಗ್ ಬಾಸ್ ಶೋ ಇಂದ ಹೆಸರು, ಬೇಡಿಕೆ ಎಲ್ಲವು ಜಾಸ್ತಿ ಆಗಿದ್ದು, ಇದು ಹೀಗೆಯೇ ಮುಂದುವರೆದು, ಅವರಿಗೆ ಒಳ್ಳೆಯ ಅವಕಾಶಗಳು ಇನ್ನಷ್ಟು ಸಿಗಲಿ.