ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ ಆಗ್ತಿದೆ ಅಂದರೆ ಆ ರಕ್ತಸ್ರಾವ ನಿಲ್ಲಿಸಲು ನಾವು ತಕ್ಷಣ ವೈದ್ಯರ ಮೊರೆ ಹೋಗ್ತಿವಿ. ಈ ಸಂದರ್ಭದಲ್ಲಿ ದೇಹದಲ್ಲಿ ಅಧಿಕವಾಗಿ ರಕ್ತಸ್ರಾವ ಆಗುತ್ತಿದ್ದರೆ ಎಲ್ಲಿ ಜೀವಕ್ಕೆ ಅಪಾಯ ಆಗುತ್ತೋ ಎನ್ನುವ ಆತಂಕ ನಮ್ಮಲ್ಲಿ ಮೂಡುತ್ತದೆ. ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ಪರಿಹಾರ ಸಿಗದೇ ಇದ್ದರು ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತೆ. ದೇಹದ ಹಲವಾರು ಭಾಗಗಳಲ್ಲಿ ರಕ್ತಸ್ರಾವ ಕಾಡುತ್ತೆ ಉದಾಹರಣೆಗೆ ಮೂಗು, ಬಾಯಿ, ಕಿವಿ, ಗುದದ್ವಾರಾ, ಹೆಣ್ಣು ಮಕ್ಕಳ ಋತು ಸಂದರ್ಭದಲ್ಲಿ ಇಂತಹ ಅಧಿಕ ರಕ್ತಸ್ರಾವಗಳು ಕಂಡು ಬರುತ್ತೆ.
ಹಾಗೇ ರಕ್ತಸ್ರಾವಕ್ಕೆ ಮೂಲ ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳುವುದಾದ್ರೆ, ಮುಖ್ಯವಾಗಿ ಅಧಿಕ ರಕ್ತಸ್ರಾವ ಯಾವುದೇ ಭಾಗದಲ್ಲಿ ಆಗ್ತಿದೆ ಅಂತಾ ಆದ್ರೆ ಅದಕ್ಕೆ ಕಾರಣ ಅಧಿಕ ಉಷ್ಣಾಂಶ, ಉಷ್ಣತೆ ದೇಹದಲ್ಲಿ ಹೆಚ್ಚಾದ್ರೆ ಮಾತ್ರ ರಕ್ತಸ್ರಾವ ಎನ್ನೋದು ಹೆಚ್ಚಿಗೆ ಕಾಡುತ್ತೆ. ಈ ಸಂದರ್ಭದಲ್ಲಿ ನಾವು ಯಾವುದೆಲ್ಲ ತಪ್ಪುಗಳನ್ನು ಮಾಡಿದ್ದೀವಿ ಅನ್ನೋದನ್ನ ಹೆಚ್ಚಾಗಿ ಗಮನಿಸಿಕೊಳ್ಳಬೇಕು. ಒಂದು ಮಲದ್ವಾರಾದಲ್ಲಿ ಮೂಲವ್ಯಾದಿಯಿಂದ ಆಗುವ ರಕ್ತಸ್ರಾವಕ್ಕೆ ದೇಹದಲ್ಲಿ ಉಷ್ಣತೆ ಜಾಸ್ತಿ ಆಗಿದ್ದರೆ ಈ ಸಮಸ್ಯೆ ಬರುತ್ತೆ ಎಂದು ಯೋಚನೆ ಮಾಡುತ್ತೀರಿ.
ದೇಹದಲ್ಲಿ ಉಷ್ಣತೆ ಜಾಸ್ತಿ ಆದರೆ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಾಣಸಿಗುತ್ತದೆ. ಈ ಮಲಬದ್ಧತೆ ಗುದದ್ವಾರಕ್ಕೆ ಮಾತ್ರವಲ್ಲದೆ ಇಡೀ ದೇಹಕ್ಕೆ ರಕ್ತದ ಉಷ್ಣತೆ ಹಾಗೂ ರಕ್ತದ ಒತ್ತಡವನ್ನ ಜಾಸ್ತಿ ಮಾಡುತ್ತದೆ. ರಕ್ತದಲ್ಲಿ ಒತ್ತಡ ಜಾಸ್ತಿಯಾದಾಗ ದೇಹದಿಂದ ಹೊರಗೆ ಬರಲಿಕ್ಕೆ ರಕ್ತ ಪ್ರಯತ್ನ ಪಡಬೇಕಾಗುತ್ತೆ, ಇಲ್ಲಾ ಅಂದ್ರೆ ದೇಹದ ಒಳಭಾಗದ ಯಾವುದೊ ಒಂದು ಅಂಗಾಗಕ್ಕೆ ತೊಂದರೆ ಆಗುತ್ತೆ ಎನ್ನುವ ಕಾರಣಕ್ಕೆ ದೇಹ ತನ್ನನ್ನ ತಾನು ರಕ್ಷಿಸಿಕೊಳ್ಳುವುದಕ್ಕೆ, ದೇಹದ ಒತ್ತಡದಿಂದ ಪಾರಾಗಲು ಆ ರಕ್ತವನ್ನ ಹೊರಗೆ ಚಿಮ್ಮವ ಕೆಲಸವನ್ನ ಮಾಡುತ್ತೆ.
ಇದನ್ನೇ ನಾವು ರಕ್ತಸ್ರಾವ ಎಂದು ಕರೆಯುತ್ತೇವೆ. ಹಾಗಂತ ನಿಮ್ಮ ದೇಹದಲ್ಲಿ ಇರುವ ರಕ್ತವನ್ನ ಹೋಗಲಿಕ್ಕೆ ಬಿಡುವಂತದಲ್ಲಾ ರಕ್ತ ದೇಹದಿಂದ ಹೊರಬಂದರೆ ಅಧಿಕ ರಕ್ತಸ್ರಾವವಾದರೆ ದೇಹದಲ್ಲಿ ಸುಸ್ತು ಹಾಗೂ ನಿಶಕ್ತಿ ಎದುರಾಗುತ್ತೆ. ಹಾಗಾದ್ರೆ ಇದಕ್ಕೆ ಪರಿಹಾರ ಏನು ಎನ್ನುವುದನ್ನು ನೋಡುವುದಾದ್ರೆ ದೇಹವನ್ನು ಸ್ವಚ್ಛತೆ ಹಾಗೂ ತಂಪಿನಿಂದ ಇಟ್ಟುಕೊಳ್ಳುವುದು, ಈ ಕಾಯಿಲೆ ಅಥವಾ ಸಮಸ್ಯೆ ಹೊರಬರಲು ಮುಖ್ಯ ಔಷಧಿಯಾಗಿದೆ.
ಯಾರೆಲ್ಲ ಉಷ್ಣದಾಯಕವಾದ ಆಹಾರವನ್ನು ಬಳಸುತ್ತಿದ್ದೀರಾ, ಯಾರೆಲ್ಲ ನೀರು ಕಡಿಮೆ ಬಳಸುತ್ತಿದ್ದೀರಿ, ಮಸಾಲಾಯುಕ್ತ ಆಹಾರ, ಅತಿಯಾದ ಖಾರ ಹೆಚ್ಚು ನಿದ್ದೆಗೇಡುತ್ತಿದ್ದೀರಾ, ಉಪವಾಸವನ್ನ ಮಾಡುವುದು, ಇವೆಲ್ಲದರಿಂದ ರಕ್ತಸ್ರಾವದ ಸಮಸ್ಯೆ ಉಲ್ಬಣಿಸುತ್ತದೆ. ಅಧಿಕ ರಕ್ತ ಸ್ರಾವ ಮೂಗು ಬೆಚ್ಚುವಂತದ್ದು, ಪಿತ್ತವಾಂತಿ ಹೀಗೆ ಅನೇಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ರಕ್ತಸ್ರಾವಕ್ಕೆ ಯಾವುದಲ್ಲ ಮನೆ ಮದ್ದು ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳೋಣ.
ಶ್ರೀಗಂಧದ ನೀರು ಒಂದು ಒಳ್ಳೆಯ ಮನೆ ಮದ್ದು ಎಂದೇ ಹೇಳಬಹುದು, ಶ್ರೀಗಂಧವನ್ನು ತೆಯ್ದು ನೀರಲ್ಲಿ ಬೆರೆಸಿ ಆಗಾಗ ಸೇವನೆ ಮಾಡುವುದರಿಂದ ದೇಹವು ತಂಪಾಗಿರಲು ಸಹಾಯ ಮಾಡುತ್ತದೆ. ಇನ್ನೂ ಗುದದ್ವಾರದಲ್ಲಿ ರಕ್ತಸ್ರಾವವಾಗುತ್ತಿದ್ದರೆ ಹಸಿ ಹಾಲಿಗೆ ನಿಂಬೆರಸವನ್ನು ಸೇವಿಸಿ ಖಾಲಿ ಹೊಟ್ಟೆಗೆ ಆ ಹಾಲನ್ನು ಕುಡಿಯುವುದರಿಂದ ಗುದದ್ವಾರದ ರಕ್ತಸ್ರಾವವನ್ನು ನೀವು ನಿಲ್ಲಿಸಬಹುದು.
ಇನ್ನೂ ಯಾವುದೇ ಭಾಗದ ರಕ್ತಸ್ರಾವಕ್ಕೂ ಹೊಂದುವಂತ ಮನೆಮದ್ದು ಏನಂದ್ರೆ ಮುಟ್ಟಿದ್ರೆ ಮುನಿ ಸೊಪ್ಪನ್ನು ಕಡ್ಡಿ ಸಮೇತ ತಗೆದುಕೊಂಡು ಬಂದು ರುಬ್ಬಿ ಆ ರಸವನ್ನು ಪ್ರತಿ ಘಂಟೆಗೆ 100 ಎಂಎಲ್ ನಷ್ಟು ಸೇವನೆ ಮಾಡಿದ್ರೆ ನಿಮ್ಮ ರಕ್ತಸ್ರಾವ ಸಮಸ್ಯೆ ಕಡಿಮೆಯಾಗುತ್ತೆ. ಇವೆಲ್ಲ ಮದ್ದುಗಳನ್ನು ಮನೆಯಲ್ಲಿ ತಯಾರಿಸಿ ಸೇವಿಸುವುದರಿಂದ ನಿಮ್ಮ ರಕ್ತಸ್ರಾವದ ಸಮಸ್ಯೆಯನ್ನು ಸುಲಭವಾಗಿ ನಿವಾರಣೆ ಮಾಡಬಹುದು.