ನಾಯಿ ನಿಯತ್ತಿನ ಪ್ರಾಣಿ ಎಂಬುವುದು ನಮಗೆಲ್ಲಾ ಗೊತ್ತಿದ್ದ ವಿಚಾರ. ನಾಯಿಗೆ ಒಂದು ದಿನ ಊಟ ಕೊಟ್ರೆ ಸಾಕು, ಅದು ಸಾಯೋವರೆಗೂ ನೆನಪಿನಲ್ಲಿಟ್ಟುಕೊಳ್ಳುತ್ತದೆ. ನಮ್ಮ ಜೊತೆಗೆ ಇದ್ದು ನಮ್ಮ ಬಗ್ಗೆನೇ ಕೆಟ್ಟದಾಗಿ ಮಾತನಾಡುವ ಜನರಿರುವ ಈ ಸಮಾಜದಲ್ಲಿ ಪ್ರೀತಿ, ನಂಬಿಕೆ, ವಿಶ್ವಾಸಕ್ಕೆ ಇನ್ನೊಂದು ಹೆಸರೇ ನಾಯಿ ಎಂದರೆ ತಪ್ಪಾಗದು. ಹುಲುಕಡ್ಡಿಯಷ್ಟು ಪ್ರೀತಿ ಕೊಟ್ಟರೆ ಬೆಟ್ಟದಷ್ಟು ಪ್ರೀತಿ ತೋರಿಸುವ ಪ್ರಾಣಿ ನಾಯಿ ಒಂದೇ. ಇದಕ್ಕೆ ಮನುಷ್ಯನ ಮಾತು, ಚಲನ ವಲನ ಎಲ್ಲವೂ ಅರ್ಥವಾಗುತ್ತದೆ. ಅಂತಹ ಗ್ರಹಣಶಕ್ತಿ ಯನ್ನು ಹೊಂದಿರುವ ನಾಯಿ ಮನುಷ್ಯನ ಪ್ರೀತಿಗೆಂದೇ ಕಾಯುತ್ತಿರುತ್ತದೆ.

ಮನುಷ್ಯನೂ ಕೂಡಾ ತನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ನಾಯಿ ಬೇಕೆಂದು ಅಸೆ ಪಡುತ್ತಾನೆ. ಮನುಷ್ಯನ ಮಾತಿಗೆ ತಕ್ಕಂತೆ ನಡೆದುಕೊಳ್ಳುವ ನಾಯಿಯನ್ನು ನೋಡುವುದೇ ಒಂದು ಮುದ್ದಾದ ಸಂಗತಿ. ಇದೀಗ ವೈರಲ್ ಆಗಿರುವ ವಿಡಿಯೋ ದಲ್ಲಿ ನಾಯಿಯ ಓನರ್ ಇಂಗ್ಲೀಷ್ ಭಾಷೆಯಲ್ಲಿ ಬರೆದ ಕಾರ್ಡ್ ಗಳನ್ನು ಓದಿ ಅದರಂತೆಯೇ ನಡೆದುಕೊಳ್ಳುತ್ತಿದೆ. ಇದನ್ನು ನೋಡಿದ ಜನ ನಾಯಿ ಕೂಡಾ ಓದಲು ಕಲಿತಿದೆಯೇ ಎಂದು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿರುವ ಈ ವಿಡಿಯೋ ವನ್ನು 1.5ಲಕ್ಷ ಜನ ನೋಡಿ ಮೆಚ್ಚುಗೆ ಕೊಟ್ಟಿದ್ದಾರೆ. ವಿದೇಶಿ ಮೂಲದ ಹೈಡೆನ್ ಎಂಬವರು ಸಾಕಿದ ಈ ನಾಯಿಯ ಹೆಸರು ಮೆಲೆಕ್. ಹೈಡೆನ್ ಮತ್ತು ಮೆಲೆಕ್ ಹೆಸರಿನಲ್ಲಿರುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ವನ್ನು ಹರಿಯ ಬಿಟ್ಟಿದ್ದಾರೆ. ಪ್ರತಿದಿನವೂ ಮೆಲೆಕ್, ಹೈಡೆನ್ ಅವರ ಜೊತೆ ವೈವಿಹಾರಕ್ಕೆ ತೆರಳುತ್ತದೆ, ತನ್ನ ಪೋಷಕ ಹೇಳಿದಂತೆಲ್ಲಾ ಕೇಳುತ್ತದೆ. ಹೇಳಿದಂತೆ ಕೇಳುವ ನಾಯಿಯನ್ನು ನಾವೆಲ್ಲಾ ಕಂಡಿರಬಹುದು, ಆದರೆ ಇಂಗ್ಲೀಷ್ ಓದಿ ಅರ್ಥೈಸಿಕೊಳ್ಳುವ ನಾಯಿ ಬಹಳ ವಿರಳ. ಇದನ್ನು ಕಾಣಲು ಕಣ್ಣುಗಳೆರಡು ಸಾಲದು. ಕೆಲವೊಮ್ಮೆ ಇಂತಹ ಘಟನೆಗಳನ್ನು ವಿವರಿಸಲು ಶಬ್ದಗಳೇ ಇರುವುದಿಲ್ಲ.