ದಕ್ಷಿಣ ಭಾರತ ಸಿನಿಮಾ ಲೋಕದ ಹಾಟ್ ಹಾಗೂ ಗ್ಲಾಮರಸ್ ನಟಿ ಸಮಂತಾ ವಿಚಾರ ಮತ್ತೆ ಸುದ್ದಿಯಾಗುತ್ತಿದೆ. ಹೌದು ಈ ಹಿಂದೆ ಮದುವೆಯಾಗಿ ನಾಗ ಚೈತನ್ಯಗೆ ಡಿವೋರ್ಸ್ ನೀಡಿದ ಬಳಿಕ ಸಿನಿಮಾ ಲೋಕದಲ್ಲಿ ಬ್ಯುಸಿ ಆಗಿದ್ದ ಸಮಂತಾ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಅನೇಕ ಕಹಿ ಘಟನೆ ಮರೆತು ಚಿತ್ರರಂಗದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಇದೀಗ ಸಮಂತಾ ತಮ್ಮ ಸಿನಿಮಾ ರಂಗದ ಸ್ನೇಹಿತೆಯಿಂದ ದೂರವಾಗಿದ್ದಾರೆ. ಹೌದು ಸಮಂತಾಗೆ ಸಿನಿ ಲೋಕದಲ್ಲಿ ಅನೇಕ ಸ್ನೇಹಿತರಿದ್ದು ನಾಗ ಚೈತನ್ಯ ಬ್ರೇಕಪ್ ಬಳಿಕವು ಸಮಂತಾ ನಡುವಿನ ಅನೇಕ ವಿಚಾರಗಳು ಒಂದಲ್ಲ ಒಂದು ರೀತಿಯಲ್ಲಿ ಅನೇಕ ಚರ್ಚೆಗೆ ಕಾರಣವಾಗಿತ್ತು. ಕೆಲವರು ಸಮಂತಾ ಜಗಳ ಆಡುತ್ತಾರೆ ಎಂದರೆ ಇನ್ನೂ ಕೆಲವರು ಆಕೆಗೆ ಮುಂಗೋಪ ಎಂದು ಟೀಕೆ ಮಾಡುತಿದ್ದರು.

ನಿಜ ಜೀವನದಲ್ಲಿ ಸಾಕಷ್ಟು ಏಳು ಬೀಳು ಅನುಭವಿಸಿದ ಸಮಂತಾ ಚಿತ್ರರಂಗದಲ್ಲಿ ಅಥವಾ ಶೂಟಿಂಗ್ ವೇಳೆ ಯಾವತ್ತು ಕಿರಿಕ್ ಮಾಡಿಕೊಂಡವರಲ್ಲ. ವೃತ್ತಿಯ ಮೇಲೆ ಸಾಕಷ್ಟು ನಂಬಿಕೆ ಗೌರವವನ್ನಿಟ್ಟುಕೊಂಡ ಸಮಂತಾ ತಮ್ಮ ಜೀವನದ ಸಂಪೂರ್ಣ ಸಮಯವನ್ನು ಚಿತ್ರರಂಗಕ್ಕಾಗಿ ತೊಡಗಿಸಿಕೊಂಡಿದ್ದು,ವಯಕ್ತಿಕ ಜೀವನ ಏಳು ಬೀಳುಗಳನ್ನು ಕಂಡ ಸಮಂತಾ ಸಿನಿಮಾ ಲೋಕದಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದು ಸಾಲು ಸಾಲು ಚಿತ್ರಗಳನ್ನು ಮಾಡುತ್ತಿದ್ದಾರೆ.
ಎ ಮಾಯೆ ಚೇಸಾವೇ ಚಿತ್ರದ ಮೂಲಕ ಟಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಹಾಟ್ ಸುಂದರಿ ಸಮಂತಾ ಒಂದಲ್ಲ ಒಂದು ಸಿನಿಮಾ ಮಾಡುತ್ತಾ ಇದೀಗ ಟಾಲಿವುಡ್ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ. ಕೆಲ ನಟಿಯರಿಗೆ ಡಬ್ಬಿಂಗ್ ಕೊಡಬೇಕಾದ ಅನಿವಾರ್ಯತೆ ಇರುತ್ತೆ ಹಾಗೇ ಸಮಂತಾಳ ಚಿತ್ರಕ್ಕೂ ಕೂಡ ಡಬ್ಬಿಂಗ್ ಆರ್ಟಿಸ್ಟ್ ಆಗಿ ಚಿನ್ಮಯಿ ಶ್ರೀಪಾದ ಡಬ್ಬಿಂಗ್ ಮಾಡುತ್ತಿದ್ದರು. ಸಮಂತಾಳ ಪ್ರತಿ ಚಿತ್ರದಲ್ಲೂ ಅವರಿಗೆ ಧ್ವನಿ ನೀಡುವ ಕೆಲಸವನ್ನು ಚಿನ್ಮಯಿ ಶ್ರೀಪಾದ ಮಾಡುತ್ತಿದ್ದು, ಸಮಂತಾ ಹಾಗೂ ಚಿನ್ಮಯ್ ಶ್ರೀಪಾದ ನಡುವೆ ಉತ್ತಮ ಸ್ನೇಹವಿತ್ತು.
ಇದೀಗ ಆ ಸ್ನೇಹದಲ್ಲಿ ಬಿರುಕು ಬಿದಿದ್ದೆ ಎನ್ನುವ ಅನೇಕ ಗಾಸಿಪ್ ಗಳು ಟಾಲಿವುಡ್ ಅಂಗಳದಲ್ಲಿ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಈ ವಿಚಾರಕ್ಕೆ ಕೋಪಗೊಂಡ ಸಮಂತಾ ತಮ್ಮ ಚಿತ್ರದ ವಾಯ್ಸ್ ಡಬ್ಬಿಂಗ್ ಪ್ರಕ್ರಿಯೆಗೆ ಯಶೋಧ ಎನ್ನುವವರಿಗೆ ಡಬ್ಬಿಂಗ್ ನೀಡಲು ಹೇಳಿದ್ದು, ನಿರ್ದೇಶಕರು ಮಾತ್ರ ಸಮಂತಾಗೆ ಚಿನ್ಮಯಿ ಶ್ರೀಪಾದ ಡಬ್ಬಿಂಗ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅನೇಕ ವರ್ಷದಿಂದ ತನ್ನ ಪಾತ್ರಕ್ಕೆ ಧ್ವನಿ ಮೂಲಕ ಜೀವ ತುಂಬುತ್ತಿದ್ದ ಚಿನ್ಮಯಿ ಶ್ರೀಪಾದಳನ್ನ ಬಿಟ್ಟು ಏಕಾ – ಏಕಿ ಯಶೋಧರವರಿಗೆ ಡಬ್ಬಿಂಗ್ ಮಾಡಿ ಎಂದು ಹಟ ಮಾಡುತ್ತಿರುವುದು ಅನೇಕ ಸಂಶಯಕ್ಕೆ ಕಾರಣವಾಗುತ್ತಿದೆ.
ಒಟ್ಟಾರೆ ಪದೇ ಪದೇ ಒಂದಲ್ಲ ಒಂದು ಗಾಸಿಪ್ ಮೂಲಕ ಸುದ್ದಿಯಾಗುವ ಸಮಂತಾ ಈ ಬಾರಿ ಮಾತ್ರ ಸಾಕಷ್ಟು ವಿಚಾರಕ್ಕೆ ತಮ್ಮ ವಯಕ್ತಿಕ ಜೀವನದ ವರ್ಚಸ್ಸನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ನಾಗ ಚೈತನ್ಯ ಬ್ರೇಕ್ ಅಪ್ ಬಳಿಕ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದ ಸಮಂತಾ ಇದೀಗ ಮತ್ತೆ ತನ್ನ ಕೋಪ ಹಾಗೂ ಹಠದಿಂದ ಇನ್ನಷ್ಟು ಸುದ್ದಿಯಾಗಿದ್ದಾರೆ. ಟಾಲಿವುಡ್ ಸುಂದರಿ ಸಮಂತಾ ತನ್ನ ಸ್ನೇಹಿತೆ ಜೊತೆ ಬ್ರೇಕ್ ಅಪ್ ಮಾಡಿಕೊಂಡು ಮತ್ತೆ ತನ್ನ ಕಿರಿಕ್ ಶುರು ಮಾಡಿದ್ದಾರೆ.



