ಮೊನ್ನೆಯಷ್ಟೇ ಹಾಸನಾಂಬೆಯ ದರ್ಶನ ಪಡೆದಿದ್ದ ಬ್ರಹ್ಮಾಂಡ ಗುರೂಜಿ, ಇಂದು ಶುಕ್ರವಾರವಾದ ಕಾರಣ ಎರಡನೇಯ ಬಾರಿಗೆ ಮತ್ತೆ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಈ ಬಳಿಕ ಮಾತನಾಡಿದ ಗುರೂಜಿ, ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ರಾಜ್ಯ ರಾಜಕಾರಣದ ಬಗ್ಗೆ ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸರ್ಕಾರ ನಡೆಸುತ್ತೆ ಎಂದು ಹೇಳಿದ್ದಾರೆ.
ಈ ಬಗ್ಗೆ ಹಾಸನಾಂಬೆ ದರ್ಶನ ಪಡೆದ ಬಳಿಕ ಮಾತನಾಡಿದ ಬ್ರಹ್ಮಾಂಡ ಗುರೂಜಿ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಹಳ ಮುಖ್ಯವಾದ ಪಾತ್ರ ವಹಿಸುತ್ತೆ, ಸರ್ಕಾರ ನಡೆಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ರೇವಣ್ಣ ಅವರು ಮೊದಲಿನಿಂದಲೂ ಬಹಳ ಆಸ್ತಿವಹಿಸಿದವರು. ಅವರ ತಂದೆಯವರ ಆರೋಗ್ಯ ಸುಧಾರಿಸುವುದಕ್ಕೊಸ್ಕರ ಏನು ಮಾಡಬಹುದು ಎಂದು ಪರಿಹಾರ ಹೇಳಿ ಎಂದರು.ಅವರ ಆರೋಗ್ಯ ಬಹಳ ಚೆನ್ನಾಗಿರಲಿ ಎಂದಿದ್ದಾರೆ.