‘ಪೇಟಾ’ ಸಿನಿಮಾದ ನಂತರ ಎರಡು ವರ್ಷಗಳ ಬಳಿಕ ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್ ‘ಜೈಲರ್’ ಅವತಾರದಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾಗಿ 7ದಿನ ಕಳೆದಿದ್ದರೂ ಕೂಡ ಜೈಲರ್ ತನ್ನ ನಾಗಟಲೋಟ ಮುಂದುವರೆಸಿದೆ. ಜೈಲರ್ ಚಿತ್ರ ಬರೋಬ್ಬರಿ 400 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದ್ದು, ದಾಖಲೆಗಳ ಸರದಾರ ಎನಿಸಿಕೊಂಡಿದೆ.

ಸಿನಿ ಪಂಡಿತರ ಪ್ರಕಾರ ತಮಿಳು ಸಿನಿ ಚರಿತ್ರೆಯಲ್ಲಿ ಕೇವಲ 4 ಸಿನಿಮಾಗಳು ಮಾತ್ರ ಈವರೆಗೆ 400 ಕೋಟಿ ಕಲೆಕ್ಷನ್ ಮಾಡಿದೆ. ಈ ಹಿಂದೆ ರಜನಿಕಾಂತ್ ನಟನೆಯ 2.0, ಕಬಾಲಿ, ಪೊನ್ನಿಯನ್ ಸೆಲ್ವನ್ ಹಾಗೂ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾಗಳು 400 ಕೋಟಿ ಗಡಿ ದಾಟಿದೆ. ಇದೀಗ ಈ ಸಾಲಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಮೂರನೇ ಚಿತ್ರ ‘ಜೈಲರ್’ ಸೇರಿಕೊಂಡಿದೆ. ಕೇವಲ ತಮಿಳುನಾಡು ಮಾತ್ರವಲ್ಲದೇ ವಿಶ್ವದಾದ್ಯಂತ ರಜನಿಕಾಂತ್ ಅವರಿಗೆ ಅಭಿಮಾನಿಗಳಿದ್ದು, ಎಲ್ಲೆಡ ಜೈಲರ್ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಇನ್ನು ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಅನಿರುದ್ಧ್ ಸಂಗೀತ ನೀಡಿದ್ದಾರೆ. ತಮನ್ನಾ, ಮೋಹನ್ ಲಾಲ್, ಶಿವರಾಜ್ ಕುಮಾರ್, ಜಾಕಿ ಶ್ರಾಫ್, ನಾಗೇಂದ್ರ ಬಾಬು, ರಮ್ಯಾ ಕೃಷ್ಣ, ಸುನೀಲ್, ವಸಂತ ರವಿ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸಿದ್ದು, ಎಲ್ಲೆಡೆ ಅದ್ಭುತ ರೆಸ್ಪಾನ್ಸ್ ಬರುತ್ತಿದೆ.