ಜಗತ್ತಿನಲ್ಲಿ ಇಂದು ಕ್ರಿಕೆಟ್ ಆಟಕ್ಕೆ ಇರುವಷ್ಟು ಕ್ರೇಜ್ ಮತ್ಯಾವ ಕ್ರೀಡೆಗೂ ಇಲ್ಲ. ಗಲ್ಲಿಗಳಿಂದ ಹಿಡಿದು, ದಿಲ್ಲಿಯ ವರೆಗೂ ಕ್ರಿಕೆಟ್ ಚಿರಪರಿಚಿತ. ಇತ್ತೀಚಿನ ದಿನಗಳಲ್ಲಿ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಕ್ರಿಕೆಟ್ ಲೋಕದಲ್ಲಿ ಈ ವರಗೂ ಸಾವಿರಾರು ದಾಖಲೆಗಳು ನಿರ್ಮಾಣವಾಗಿವೆ. ಆದರೆ ಇತ್ತೀಚೆಗೆ ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಒಬ್ಬ ಬೌಲರ್ 1 ಎಸೆತಕ್ಕೆ 18 ರನ್ ಬಿಟ್ಟು ಕೊಟ್ಟು ಕ್ರಿಕೆಟ್ ಜಗತ್ತಿನಲ್ಲೊಂದು ಕೆಟ್ಟ ದಾಖಲೆ ನಿರ್ಮಿಸಿದ್ದು, ಆ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಆ ಬಗೆಗಿನ ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ.
ಕೇವಲ ಮೂರು ತಿಂಗಳು ನಡೆದರೂ ಲಕ್ಷಾಂತರ ಕೋಟಿ ವ್ಯವಾಹನಡೆಸುವ ವಿಶ್ವದ ಅತ್ಯಂತ ಶ್ರೀಮಂತ ಲೀಗ್ ಎಂಬ ಹಿರಿಮೆಗೆ ಪಾತ್ರವಾಗಿರುವ IPL ರೀತಿಯಲ್ಲೇ ತಮಿಳುನಾಡಿನಲ್ಲೂ ಲೀಗ್ ಮಾದರಿಯ ಪಂದ್ಯಾಟವೊಂದು ನಡೆಯುತ್ತದೆ.ಇತ್ತೀಚೆಗೆ ಆ ಲೀಗಿನ ಚೆಪಾಕ್ ಸೂಪರ್ ಗಿಲ್ಲಿಸ್ ಹಾಗೂ ಸೇಲಂ ಸ್ಪಾರ್ಟನ್ ನಡುವೆ ರೋಚಕ ಪಂದ್ಯ ಏರ್ಪಟ್ಟಿತ್ತು. ಇದೇ ಪಂದ್ಯದಲ್ಲಿ ಬೌಲರ್ ಒಬ್ಬು ಕೇವಲ 1 ಎಸೆತದಲ್ಲಿ ಬರೋಬ್ಬರಿ 18 ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿಕೊಂಡ.
TPL ಲೀಗಿನ ಎರಡು ಬಲಿಷ್ಠ ತಂಡಗಳಾದ ಚೆಪಾಕ್ ಹಾಗೂ ಸೇಲಂ ನಡುವಿನ ಪಂದ್ಯದಲ್ಲಿ. ಸೇಲಂ ತಂಡದ ಪ್ರತಿಭಾನ್ವಿತ ಬೌಲರ್ ಅಭಿಷೇಕ್ ಕೊನೆಯ ಓವರ್ನಲ್ಲಿ ಎಸೆದ ಆ ಒಂದು ಎಸೆತ ಕ್ರೀಡಾಂಗಣವನ್ನು ಹುಚ್ಚೆಬ್ಬಿಸಿತ್ತು. ಈ ಬೌಲರ್ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದರೂ ಕೂಡ ದುರಾದೃಷ್ಟವಶಾತ್ ಅದು ನೋ ಬಾಲ್ ಆಯಿತು. ಅನಂತರ ನಡೆದದ್ದೆಲ್ಲವೂ ವಿಚಿತ್ರ!.
ಅಭಿಷೇಕ್ ಎಸೆದ ಕೊನೆಯ ಎಸೆತ ನೋ ಬಾಲ್ ಆದ ಕಾರಣ ಎದುರಾಳಿ ತಂಡ 1 ಅಂಕ ಗಳಿಸಿತು. ವಿಚಿತ್ರ ಎಂದರೆ ಮುಂದಿನ ಎಸೆತವೂ ನೋ ಬಾಲ್ ಆಯಿತು. ಮತ್ತಿನ ಎಸೆತ ವೈಡ್. ಹೀಗೆ ಅಭಿಷೇಕ್ ಕೊನೆಯ ಒಂದು ಎಸೆತ ಬಾಕಿ ಇರುವಂತೆ 12 ರನ್ ಬಿಟ್ಟುಕೊಟ್ಟರು. ನಂತರ ಕೊನೆಯ ಬಾರಿಗೆ ಬೌಲರ್ ಉತ್ತಮವಾಗಿಯೇ ಎಸೆದರೂ ಕೂಡ ಆ ಕೊನೆಯ ಎಸೆತದಲ್ಲಿ ಸಿಕ್ಸರ್ ದಾಖಲಾಯಿತು.ಹೀಗೆ ಒಟ್ಟಾರೆಯಾಗಿ ಅಭಿಷೇಕ್ ಕೊನೆಯ ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟು ಕ್ರಿಕೆಟ್ ಇತಿಹಾಸ ಎಂದಿಗೂ ಮರೆಯದಂತ ಒಂದು ಕೆಟ್ಟ ದಾಖಲೆಗೆ ಕಾರಣರಾದರು. ಸದ್ಯ ಈ ಒಂದು ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.