ಅತಿ ಹೆಚ್ಚು ಹೆಸರು ಪಡೆದಿರುವ ಸೆಲಬ್ರೆಟಿಗಳು ಇತ್ತೀಚೆಗೆ ತಮ್ಮ ವಯಕ್ತಿಕ ವಿಚಾರಗಳಲ್ಲಿ ಕಿರಿಕ್ ಮಾಡಿಕೊಳ್ಳುವ ಮುಕಾಂತರ ಸಮಾಜದಲ್ಲಿ ಬಹಳ ಸುದ್ದಿ ಮಾಡುತ್ತಿದ್ದಾರೆ.ಸೆಲಬ್ರೆಟಿ ಎಂದ ಕೊಡಲೆ ಸಮಾಜದಲ್ಲಿ ಬೇರೆ ತರದ ಹೆಸರಿರುತ್ತದೆ.ತಮ್ಮ ಹೆಸರಿನಿಂದಲೇ ದೊಡ್ಡ ಮಟ್ಟದ ಗೌರವ ಕೂಡ ಪಡೆದುಕೊಂಡಿದ್ದಾರೆ.ಆದರೆ ಇದೀಗ ಅದರಿಂದ ಉಪಯೋಗ ಪಡೆದುಕೊಳ್ಳುವ ಬದಲು ಅದ್ರಿಂದ ದೂರುಪಯೋಗ ಪಡೆದುಕೊಳ್ಳುವವರೆ ಹೆಚ್ಚು ಎನ್ನುವಂತಾಗಿದೆ.ಇದೀಗ ಅದೇ ಸಾಲಿಗೆ ಖ್ಯಾತ ನಟ ಹಾಗೂ ಗಾಯಕ ಸೇರಿಕೊಂಡಿದ್ದಾರೆ.

ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಸೆಲಬ್ರೆಟಿ ಎಂದರೆ ಬಾಲಿವುಡ್ನ ಖ್ಯಾತ ಗಾಯಕ ಹಾಗೂ ನಟ “ಲಕ್ಕಿ ಅಲಿ” ಹಾಗೂ ಐಎಎಸ್ ಅಧಿಕಾರಿ “ರೋಹಿಣಿ ಸಿಂಧೂರಿ” ಮತ್ತು ಅವರ ಪತಿ.ಲಕ್ಕಿ ಅಲಿ ಅವರು ಬೆಚ್ಚಿ ಬಿಳಿಸುವ ಆರೋಪವನ್ನು ರೋಹಿಣಿ ಸಿಂದೋರಿ ಅವರ ಪತಿಯ ವಿರುದ್ಧ ಹೊರಸಿದ್ದಾರೆ.ಇನ್ನು ಅಲಿ ಅವರು ಹೇಳಿರುವ ಪ್ರಕಾರ ಅಕ್ರಮ ಜಮೀನು ಅತಿಕ್ರಮಣದ ಆರೋಪವನ್ನು ರೋಹಿಣಿ ಸಿಂದೋರಿ ಅವರ ಪತಿಯ ಮೇಲೆ ಹೊರಿಸಿದ್ದಾರೆ.ಬಾಲಿವುಡ್ನ ದಂತಕತೆ “ಮೆಹಮೂದ್ ಖಾನ್”ರ ಪುತ್ರರಾಗಿರುವ ಲಕ್ಕಿ ಅಲಿ ಬೆಂಗಳೂರಿನ ಹೊರವಲಯದಲ್ಲಿ ತಮ್ಮ ಫಾರಂ ಹೌಸ್ನಲ್ಲಿ ಬಹಳ ವರ್ಷಗಳಿಂದಲೂ ವಾಸವಿದ್ದರು.
ಅವರ ಹೆಸರಿನಲ್ಲಿರುವ ಜಮೀನನ್ನು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಅವರ ಪತಿ “ಸುಧೀರ್ ರೆಡ್ಡಿ” ಅವರು ಕಬಳಿಸಿದ್ದಾರೆ ಎಂದು ದೂರಿದ್ದಾರೆ.ಈ ವಿಚಾರವನ್ನು ಗಾಯಕ ಅಲಿ ಅವರು ಟ್ವೀಟ್ ಮಾಡಿದ್ದಾರೆ.ಇದೀಗ ಈ ಟ್ವೀಟ್ ಸಾಕಷ್ಟು ಹೈಪ್ ಪಡೆದುಕೊಂಡಿದೆ.ನಟ ಲಕ್ಕಿ ಅಲಿ ತಮ್ಮ ಟ್ವಿಟ್ ನಲ್ಲಿ, ”ನಾನು ಮಕ್ಸೂದ್ ಮೊಹಮ್ಮದ್ ಅಲಿ ಅಲಿಯಾಸ್ ಲಕ್ಕಿ ಅಲಿ, ಖ್ಯಾತ ನಟ ಮೆಹಮೂದ್ ಅಲಿಯ ಮಗ. ಪ್ರಸ್ತುತ ನಾನು ಕೆಲಸದ ನಿಮಿತ್ತ ದುಬೈನಲ್ಲಿ ಇದ್ದೇನೆ. ಆದರೆ ಇದು ತುರ್ತಿನ ವಿಚಾರವಾಗಿರುವ ಕಾರಣ ಟ್ವೀಟ್ ಮೂಲಕ ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ” ಎಂದು ಡಿಜಿಪಿ ಕರ್ನಾಟಕ ಅವರಿಗೆ ಟ್ವೀಟ್ ಮಾಡಿದ್ದಾರೆ ಗಾಯಕ ಲಕ್ಕಿ ಅಲಿ.
”ನನ್ನ ಅಧಿಕೃತ ಫಾರಂ ಯಲಹಂಕದ ಕೆಂಚೇನಹಳ್ಳಿಯಲ್ಲಿ ಸ್ಥಿತವಾಗಿದ್ದು, ಈ ನನ್ನ ಜಮೀನನ್ನು ಅಕ್ರಮವಾಗಿ ಸುಧೀರ್ ರೆಡ್ಡಿ ಹಾಗೂ ಮಧು ರೆಡ್ಡಿ ಎಂಬುವರು ಬೆಂಗಳೂರಿನ ಲ್ಯಾಂಡ್ ಮಾಫಿಯಾ ಸಹಾಯದೊಂದಿಗೆ ಕಬಳಿಸಿದ್ದಾರೆ. ಇದಕ್ಕೆ ಸುಧೀರ್ ರೆಡ್ಡಿಯ ಪತ್ನಿ ಐಎಎಸ್ ಅಧಿಕಾರಿಯಾದ ರೋಹಿಣಿ ಸಿಂಧೂರಿ ನೆರವು ನೀಡಿದ್ದಾರೆ ” ಎಂದು ಟ್ವೀಟ್ ಮಾಡುವ ಮುಕಾಂತರ ಈ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ ಗಾಯಕ ಲಕ್ಕಿ ಅಲಿ.ಇದೀಗ ಈ ಟ್ವಿಟ್ ಸಮಾಜದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
ನಾನು ದುಬೈಗೆ ಹೊರಟುಬರುವ ಮುನ್ನ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಲು ಪ್ರಯತ್ನ ಮಾಡಿದ್ದೆ ಆದರೆ ನನಗೆ ಅದು ಸಾಧ್ಯವಾಗಲಿಲ್ಲ. ನಾನು ಎಸಿಪಿ ಬಳಿ ದೂರನ್ನು ಈಗಾಗಲೇ ದಾಖಲಿಸಿದ್ದೇನೆ ಆದರೆ ಅಲ್ಲಿಂದಾಗಲಿ ಯಾವ ಅಧಿಕೃಗಳಿಂದಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಸ್ಥಳೀಯ ಪೊಲೀಸರನ್ನು ಕೊಡ ನಾನು ಬೆಟಿಯಾಗಿದ್ದೇನೆ. ಅವರಿಂದ ಯಾವುದೇ ಸಹಾಯ ಹಸ್ತ ಸಿಕ್ಕಿಲ್ಲ. ಬದಲಿಗೆ ಅವರು ಅತಿಕ್ರಮಣ ಮಾಡಿದವರಿಗೇ ಬೆಂಬಲ ನೀಡುತ್ತಿದ್ದಾರೆ” ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ ಲಕ್ಕಿ ಅಲಿ.ಈ ಪ್ರಕರಣ ಮುಂದೆ ಯಾವ ರೊಪ ಪಡೆದುಕೊಳ್ಳುತ್ತದೆ ಎಂದು ನಾವು ಕಾದುನೋಡಬೇಕಿದೆ.