ಬಾಲಿವುಡ್ ಕ್ವೀನ್ ಕಂಗನಾ ರಾಣವತ್ ಯಾವಾಗಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಕಂಗನಾ ಬರೋಬ್ಬರಿ 3ಕೋಟಿ ಬೆಲೆಯ ತಮ್ಮ ಐಶಾರಾಮಿ ಕಾರಿನೊಂದಿಗೆ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದೆ. ಅಷ್ಟಕ್ಕೂ ಈ ಕಾರು ಖರೀದಿಸಿದ್ದು ಯಾವಾಗ?, ಈ ಕಾರಿನ ವಿಶೇಷತೆಗಳೇನು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಕಂಗನಾ ಖರೀದಿಸಿರುವ ಮರ್ಸಿಡೀಸ್ ಬೆಂಜ್ ಮೇಬ್ಯಾಕ್ ಕಾರಿನ ಒಟ್ಟು ಬೆಲೆ 3.2 ಕೋಟಿ. ಜೊತೆಗೆ ಈ ಕಾರನ್ನು ಕಸ್ಟಮೈಸ್ಡ್ ಮಾಡಲು 1 ಕೋಟಿ ಖರ್ಚು ಮಾಡಿದ್ದಾರಂತೆ. ಇತ್ತೀಚೆಗಷ್ಟೇ ವಿಮಾನ ನಿಲ್ದಾಣದಲ್ಲಿ ಕಂಗನಾ ಈ ಕಾರಿನೊಂದಿಗೆ ಕಾಣಿಸಿಕೊಂಡಿದ್ದು, ಫೋಟೋಗಳು ವೈರಲ್ ಆಗಿದೆ. ಆರಾಮದಾಯಕವಾಗಿ ಪ್ರಯಾಣ ಮಾಡಲು ಈ ಕಾರು ಹೇಳಿ ಮಾಡಿಸಿದಂತಿದೆ. ಜೊತೆಗೆ ಈ ಕಾರಿನ ಈಗಿನ ಬೆಲೆ ಬರೋಬ್ಬರಿ 4 ಕೋಟಿ.
ಈ ಅತ್ಯಾಧುನಿಕ ಕಾರಿನ ಗರಿಷ್ಟ ವೇಗ ಪ್ರತಿ ಗಂಟೆಗೆ 250 ಕಿ.ಮೀ ಇದ್ದು, ಬಿಎಸ್6, ಟ್ವಿನ್ ಟರ್ಬೋ, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, 10 ಏರ್ ಬ್ಯಾಗ್, ಇಬಿಡಿ ಸಿಸ್ಟಮ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನಗಳು ಈ ಸೂಪರ್ ಕಾರಿನಲ್ಲಿದೆ.