ಪಬ್ಜಿ ಗೇಮ್ ಮೂಲಕ ಪರಿಚಯವಾದ ಭಾರತ ಮೂಲದ ಯುವಕನನ್ನು ಅರಸಿ ಭಾರತಕ್ಕೆ ಬಂದು ಭಾರೀ ಸುದ್ದಿಯಾಗಿದ್ದ ಪಾಕ್ ಮಹಿಳೆ ಸೀಮಾ ಹೈದರ್ ಇದೀಗ ಸಿನಿಮಾ ನಟನೆಯತ್ತ ಮುಖ ಮಾಡಿದ್ದಾಳೆ. ಬಾಲಿವುಡ್ನಿಂದ ಈಕೆಗೆ ಸಿನಿಮಾ ಆಫರ್ ಬಂದಿದೆ. ಪಾಕಿಸ್ತಾನದ ಬೇಹುಗಾರಿಕಾ ಏಜೆಂಟ್ ಎಂಬ ಆರೋಪ ಹೊತ್ತಿರುವ ಈಕೆಗೆ ಸಿನಿಮಾವೊಂದರಲ್ಲಿ ಖಡಕ್ ಅಧಿಕಾರಿಯ ಪಾತ್ರ ಲಭ್ಯವಾಗಿದೆ.

ಇತ್ತೀಚೆತೆ ನಡೆದ ‘ಎ ಟೇಲರ್ ಮರ್ಡರ್ ಸ್ಟೋರಿ’ ಚಿತ್ರದ ಆಡಿಷನ್ ನಲ್ಲಿ ಭಾಗಿಯಾದ ಸೀಮಾಳಿಗೆ ಸಿನಿಮಾ ಅವಕಾಶ ಲಭಿಸಿದೆಯಂತೆ. ಚಿತ್ರವು ಉದಯಪುರದಲ್ಲಿ ಭಯೋತ್ಪಾದಕರಿಂದ ಹತ್ಯೆಗೀಡಾದ ಟೇಲರ್ ಕನ್ಹಯ್ಯ ಲಾಲ್ ಹತ್ಯೆ ಸಂಬಂಧಿಸಿದ್ದಾಗಿದೆ ಎಂದು ತಿಳಿದು ಬಂದಿದೆ. ಚಿತ್ರವನ್ನು ಜಾನಿ ಫೈರ್ಫಾಕ್ಸ್ ನಿರ್ಮಿಸುತ್ತಿದ್ದಾರೆ. ನಿರ್ದೇಶಕರಾದ ಜಯಂತ್ ಸಿನ್ಹಾ ಮತ್ತು ಭರತ್ ಸಿಂಗ್ ಆಡಿಷನ್ ನಡೆಸಿದ್ದರು.
ಈಗಾಗಕೇ ಸೀಮಾ ಹೈದರ್ ಆಡಿಷನ್ ನೀಡಿದ್ದು ಚಿತ್ರ ತಂಡ ಆಕೆಯ ನಟನಾ ಕೌಶಲ್ಯವನ್ನು ಮೆಚ್ಚಿಕೊಂಡು ರಾ ಅಧಿಕಾರಿಯ ಪಾತ್ರವೊಂದರಲ್ಲಿ ನಟಿಸುವಂತೆ ಒತ್ತಾಯಿಸಿದ್ದು, 6 ಲಕ್ಷ ಸಂಬಾವನೆ ನೀಡುವುದಾಗಿ ಹೇಳಿದೆ ಎನ್ನಲಾಗಿದೆ. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದಿಂದ ಕ್ಲೀನ್ ಚಿಟ್ ಸಿಕ್ಕ ನಂತರವಷ್ಟೇ ಸೀಮಾ ಸಿನಿಮಾದಲ್ಲಿ ನಟಿಸಲು ಸಾಧ್ಯವಿದೆ. ಈ ಸಿನಿಮಾ 30 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದ್ದು, ಟ್ರೇಲರ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.