ಯಾವುದೇ ಭಾಗದಲ್ಲೂ ರಕ್ತಸ್ರಾವವಾಗುತ್ತಿದೆ ಎಂದಾಗ, ಅದನ್ನು ನಿಲ್ಲಿಸಲು ವೈದ್ಯರ ಬಳಿ ತೆರಳುತ್ತೇವೆ. ಕೆಲವು ಬಾರಿ ಎಷ್ಟೇ ಮಾತ್ರೆ ಮತ್ತು ಮದ್ದುಗಳಿಂದ ಕಡಿಮೆಯಾಗದೇ ಇರುತ್ತದೆ. ಮೂಗಿನಿಂದ, ಕಿವಿಯಿಂದ, ಬಾಯಿಯಿಂದ ,ಗಂಟಲಿನಿಂದ ಹಲವಾರು ರೀತಿಯಲ್ಲಿ ರಕ್ತಸ್ರಾವಗಳನ್ನು ನೋಡುತ್ತೇವೆ. ಅಧಿಕ ಉಷ್ಣತೆಯಿಂದ ರಕ್ತಸ್ರಾವಗಳಾಗುತ್ತದೆ. ಅಂತಹ ಸಂದರ್ಭದಲ್ಲಿ ಹೆಚ್ಚಾಗಿ ಕಾಣಬಹುದು. ಮೂಲವ್ಯಾಧಿ ರಕ್ತ ಸ್ರಾವಗಳಾಗುವುದು ಹೆಚ್ಚಿನ ಉಷ್ಣಾಂಶಗಳಿಂದಾಗಿ, ಇದು ಇಡೀ ದೇಹದ ರಕ್ತ ಉಷ್ಣತೆಯನ್ನು ಹೆಚ್ಚಿಸುತ್ತದೆ.
ರಕ್ತದಲ್ಲಿ ಒತ್ತಡ ಹೆಚ್ಚಿದಾಗ ದೇಹ ಒಂದು ಭಾಗಕ್ಕೆ ಹೆಚ್ಚಿನ ತೊಂದರೆ ಕಾಣುತ್ತದೆ. ಇದರಿಂದಾಗಿ ದೇಹದ ಒಂದು ಭಾಗದಿಂದ ದೇಹ ರಕ್ತವನ್ನು ಹೊರಹಾಕಲು ಪ್ರಯತ್ನ ಪಡುತ್ತದೆ. ಇದೇ ರಕ್ತಸ್ರಾವವಾಗಿದೆ ಹೆಚ್ಚಿನ ರಕ್ತಸ್ರಾವ ಯಿಂದ ನಿಶಕ್ತಿಗೆ ಒಳಗಾಗುತ್ತೀರಿ. ದೇಹವನ್ನು ಶುದ್ಧತೆಯಿಂದ ಮತ್ತು ತಂಪಿನಿಂದ ಇಟ್ಟುಕೊಳ್ಳುವುದರಿಂದ ಈ ಸಮಸ್ಯೆಯಿಂದ ಹೊರಬರಲು ಸಹಾಯವಾಗುತ್ತದೆ.
ಯಾರು ಉಷ್ಣದಾಯಕ ಆಹಾರ ಬಳಸುವುದು, ನೀರನ್ನು ಕಡಿಮೆ ಬಳಸುವುದು ಯಾರೆಲ್ಲ ಖಾರದ ತಿನಿಸುಗಳನ್ನು ಹೆಚ್ಚಾಗಿ ತಿನ್ನುವುದು, ನಿದ್ರೆ ಕಡಿಮೆ, ಉಪವಾಸ ಮಾಡುವುದು, ಇವೆಲ್ಲದರಿಂದ ರಕ್ತಸ್ರಾವಗಳು ಹೆಚ್ಚಾಗಿ ಕಂಡುಬರುತ್ತದೆ. ಇದರಿಂದಾಗಿ ಪಿತ್ತವಾಂತಿ, ರಕ್ತವಾಂತಿ ಇವೆಲ್ಲವನ್ನು ನೋಡಬಹುದು. ಇಂತಹ ಸಮಸ್ಯೆಗಳಿಗೆ ಮನೆಮದ್ದುಗಳನ್ನು ಮಾಡಿಕೊಂಡರೆ ವೈದ್ಯರ ಅವಶ್ಯಕತೆ ಇರುವುದಿಲ್ಲ. ನಂತರ ಜೀವನ ಶೈಲಿಯಲ್ಲಿ ಏನು ತಪ್ಪು ಮಾಡಿಕೊಂಡಿದ್ದೀರಿ ಎಂದರೆ, ಆಹಾರ ವಿಚಾರಗಳಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಬೇಕು.
ಶ್ರೀಗಂಧವನ್ನು ನೀರಿನಲ್ಲಿ ಬೆರೆಸಿ ಆ ಶ್ರೀ ಗಂಧದ ನೀರನ್ನು ಆಗಾಗ ಸೇವನೆ ಮಾಡುವುದರಿಂದ ನಿಮ್ಮ ದೇಹ ತಂಪಾಗುತ್ತದೆ. ಇದರಿಂದ ರಕ್ತಸ್ರಾವ ಕಮ್ಮಿಯಾಗುತ್ತದೆ. ಯಾವುದೇ ಭಾಗದಲ್ಲೂ ರಕ್ತಸ್ರಾವವಾದರೂ ಮುಟ್ಟಿದರೆ ಮುನಿ ಸೊಪ್ಪನ್ನು ಗಿಡ ಸಮೇತ ತೊಳೆದು ಅದರ ರಸವನ್ನು ಕುಡಿಯುವುದರಿಂದ ಪ್ರತಿ ಗಂಟೆಗೆ 12 ಎಂಎಲ್ ನಷ್ಟು ತೆಗೆದುಕೊಳ್ಳುವುದರಿಂದ ತಕ್ಷಣ ರಕ್ತ ಸ್ರಾವ ಕಡಿಮೆಯಾಗುತ್ತದೆ.
ಐಸ್ ಕ್ಯೂಬ್ಗಳಿಂದ ಮಸಾಜ್ ಮಾಡುವುದರಿಂದ ರಕ್ತಸ್ರಾವವನ್ನು ನಿಲ್ಲಿಸಬಹುದು. ಚಕ್ಕೆಯ ರಸವನ್ನು ಮಾಡಿ ಕುಡಿಯುವುದರಿಂದ, ದೇಹದಲ್ಲಿ ಜೀರ್ಣಶಕ್ತಿ ಹೆಚ್ಚಿಸಿಕೊಳ್ಳುವುದರಿಂದ, ರಕ್ತಸ್ರಾವ ಕಡಿಮೆಯಾಗುತ್ತದೆ. ಬಾಳೆ ಹಣ್ಣಿನ ಹೂವಿನ ಪಲ್ಯದಿಂದಲೂ ಕಡಿಮೆಯಾಗುತ್ತದೆ. ದೇಹವನ್ನು ತಂಪಾಗಿಟ್ಟುಕೊಳ್ಳುವುದು ಅತಿ ಮುಖ್ಯ ದೇಹವನ್ನು ಶುದ್ಧಿಯಾಗಿರಿಸಿಕೊಳ್ಳಬೇಕು, ನಿದ್ರೆಯನ್ನು ಸರಿಯಾಗಿ ಮಾಡುವುದರಿಂದ, ಆರೋಗ್ಯವಾಗಿರಲು ಸಹಾಯಕವಾಗುತ್ತದೆ.