ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿರುವ ಸ್ಪರ್ಧಿ ಐಶ್ವರ್ಯ ಸಿಂಧೋಗಿ ಅವರು. ಈ ಎಲಿಮಿನೇಷನ್ ಬಹಳ ನೋವು ನೀಡಿತು ಎಂದರೆ ತಪ್ಪಲ್ಲ. ಏಕೆಂದರೆ ಐಶ್ವರ್ಯ ಬಹಳ ಒಳ್ಳೆಯ ಸ್ಪರ್ಧಿ ಆಗಿದ್ದರು. ಹಾಗೆಯೇ ಇವರ ಜೀವನ ಕಷ್ಟಗಳು, ಯಾರು ಇಲ್ಲದೆಯೇ, ಯಾರ ಸಹಾಯವನ್ನು ಪಡೆಯದೆಯೇ ಇಲ್ಲಿಯವರೆಗೂ ಐಶ್ವರ್ಯ ಬೆಳೆದು ನಡೆದು ಬಂದಿರುವುದು ನಿಜಕ್ಕೂ ಬಹಳ ಹೆಮ್ಮೆ ಪಡುವಂಥ ವಿಷಯ. ಐಶ್ವರ್ಯ ಹೊರಗರೆ ಕೂಡ ಎಲ್ಲರಿಗೂ ಇಷ್ಟವಾಗಿದ್ದ ಸ್ಪರ್ಧಿ. ಇವರು ಫಿನಾಲೆ ತಲುಪಬೇಕು, ಗೆಲ್ಲಬೇಕು ಎಂದು ಅಭಿಮಾನಿಗಳು ಬಯಸಿದ್ದರು.

ಆದರೆ 90 ದಿನಗಳ ಅವಧಿಗೆ ಐಶ್ವರ್ಯ ಸಿಂಧೋಗಿ ಅವರ ಪ್ರಯಾಣ ಮುಗಿದಿದೆ. ಐಶ್ವರ್ಯ ಅವರು ಭಾವುಕರಾಗಿ ಹೊರಬಂದ ಸನ್ನಿವೇಶ ಎಲ್ಲರಿಗೂ ಕಣ್ಣಲ್ಲಿ ನೀರು ತರಿಸಿತ್ತು. ಇನ್ನು ಸ್ವತಃ ಬಿಗ್ ಬಾಸ್ ಗೆ ಕೂಡ ಬಹಳ ನೋವಾಗಿತ್ತು. ಬಿಗ್ ಬಾಸ್ ಸಹ ಹಿಂದೆ ಯಾರಿಗೂ ಹೇಳದ ಹಾಗೆ ವಿಶೇಷವಾದ ರೀತಿಯಲ್ಲಿ ಐಶ್ವರ್ಯ ಅವರನ್ನು ಬೀಳ್ಕೊಟ್ಟರು, ಐಶ್ವರ್ಯ ಅವರಿಗಾಗಿ ವಿಶೇಷ ಪತ್ರವನ್ನು ಕಳಿಸಿ, ಜೊತೆಗೆ ಅವರನ್ನು ತವರುಮನೆಯಿಂದ ಕಳಿಸಿಕೊಡುವ ಹಾಗೆ, ಹೋಗಿ ಬಾ ಮಗಳೇ ಎಂದು ಹೇಳಿ ಕಳಿಸಿಕೊಟ್ಟರು. ಈ ಕ್ಷಣ ಭಾವುಕವಾಗಿತ್ತು. ಐಶ್ವರ್ಯ ಅವರಿಗೆ ಬಿಗ್ ಬಾಸ್ ಬರೆದ ಪತ್ರದಲ್ಲಿ ಏನಿತ್ತು ಎಂದರೆ..
“ಪ್ರೀತಿಯ ಐಶ್ವರ್ಯಾ 13 ವಾರಗಳ ಕಾಲ ಬಿಗ್ಬಾಸ್ ಮನೆಯ ಸ್ಪರ್ಧಿಯಾಗಿ ಈ ಮನೆಯಲ್ಲಿ ಜೀವಿಸಿರುವುದು ಸಂತೋಷದ ವಿಷಯ. ತುಸು ಬೇಸರವಿದ್ದರೂ, ನಗು, ದುಃಖ, ಕೋಪ, ತುಂಟಾಟ ಹೀಗೆ ನಿಮ್ಮ ಎಲ್ಲ ಭಾವನೆಗಳಿಗೆ ಸಾಕ್ಷಿಯಾದ ಮನೆಯಿಂದ ಕಳಿಸಿಕೊಡುವುದು ಬೇಕಾಗಿದೆ..” ಎಂದು ಐಶ್ವರ್ಯ ಅವರಿಗಾಗಿ ವಿಶೇಷವಾರ ಪತ್ರವನ್ನು ಬರೆದು ಕಳಿಸಿಕೊಟ್ಟಿದ್ದರು ಬಿಗ್ ಬಾಸ್. ಈ ಪತ್ರ ಓದಿದ ಐಶ್ವರ್ಯ ಬಹಳ ಭಾವುಕರಾಗಿ ಕಣ್ಣೀರು ಹಾಕಿದರು. ಮನೆಯ ಸ್ಪರ್ಧಿಗಳು ಸಹ ಐಶ್ವರ್ಯ ಅವರನ್ನು ಕಳಿಸಿಕೊಡುವಾಗ ಬಹಳ ಭಾವುಕರಾದರು. ಬಳಿಕ ಬಿಗ್ ಬಾಸ್ ಹೇಳಿದ ಮಾತುಗಳು, ಐಶ್ವರ್ಯ ಅವರಿಗೆ ಇನ್ನಷ್ಟು ಧೈರ್ಯವನ್ನು ತಂದಿತು..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
“ಜೀವನದ ಪಯಣದಲ್ಲಿ ಒಂದು ದ್ವಾರ ಮುಚ್ಚಿಕೊಂಡರೇ ಮತ್ತೊಂದು ತೆರೆದುಕೊಳ್ಳುತ್ತದೆ. ಕೆಲವನ್ನು ದಾಟಿ ಬದುಕು ಕಟ್ಟಿಕೊಳ್ಳುತ್ತೇವೆ. ಮತ್ತೆ ಕೆಲವನ್ನು ದಾಟಿ ಅನುಭವ ಕಟ್ಟಿಕೊಳ್ಳುತ್ತದೆ. ಐಶ್ವರ್ಯಾ ಈ ಮನೆಯಲ್ಲಿನ ಆಟ ಇಂದಿಗೆ ಮುಗಿದಿರಬಹುದು. ಆದ್ರೆ, ಈ ದ್ವಾರ ತೆರೆದುಕೊಳ್ಳುವುದು ಆಟದಿಂದ ಹೊರ ಕಳುಹಿಸಲ್ಪಟ್ಟ ಐಶ್ವರ್ಯಾಗೆ ಅಲ್ಲ. ತನ್ನ ತವರಿಂದ ಹೊರಟು ಹೊಸ ಜೀವನದತ್ತ ಹೆಜ್ಜೆ ಇಡುತ್ತಿರುವ ಈ ಮನೆಯ ಮಗಳು ಐಶ್ವರ್ಯಾಗೆ. ಐಶ್ವರ್ಯಾ ಹೋಗಿ ಬಾ ಮಗಳೇ..” ಎಂದು ಹೇಳಿ ಐಶ್ವರ್ಯ ಅವರನ್ನು ಬೀಳ್ಕೊಟ್ಟಿದ್ದಾರೆ. ತನಗೆ ಯಾರು ಇಲ್ಲ ಎಂದು ನೋವಲ್ಲಿದ್ದ ಐಶ್ವರ್ಯ ಅವರಿಗೆ ಬಿಗ್ ಬಾಸ್ ಇಂದ ಒಂದು ಕುಟುಂಬ ಸಿಕ್ಕ ಹಾಗೆ ಆಗಿದೆ.

ಬಿಗ್ ಬಾಸ್ ಹೇಳಿದ ಮಾತು ಕೇಳಿ ಭಾವುಕರಾಗಿ ಕಣ್ಣೀರು ಹಾಕಿದರು ಐಶ್ವರ್ಯ. ವೇದಿಕೆಗೆ ಬಂದ ಮೇಲೆ, ಸುದೀಪ್ ಅವರೊಡನೆ ಮಾತನಾಡಿ, ಬಿಗ್ ಬಾಸ್ ನನಗೆ ಗುಡಿ ಇದ್ದ ಹಾಗೆ, ನೀವು ದೇವರಿದ್ದ ಹಾಗೆ ಎಂದು ಹೇಳಿದರು. ಐಶ್ವರ್ಯ ಅವರಂಥ ಒಳ್ಳೆಯ ಹುಡುಗಿಗೆ ಇನ್ನು ಯಶಸ್ಸು, ಅವಕಾಶ, ಗೌರವ, ಪ್ರೀತಿ ಎಲ್ಲವೂ ಸಿಗಬೇಕು ಅನ್ನೋದು ಎಲ್ಲರ ಆಸೆ. ಬಿಗ್ ಬಾಸ್ ನಲ್ಲಿ ಈವರೆಗೂ ಆದ ಎಲ್ಲಾ ಎಲಿಮಿನೇಷನ್ ಗಳ ಪೈಕಿ ಐಶ್ವರ್ಯ ಅವರ ಎಲಿಮಿನೇಶನ್ ಎಲ್ಲರಿಗೂ ತುಂಬಾ ಬೇಸರ ಉಂಟು ಮಾಡಿತು ಎಂದರೆ ಖಂಡಿತ ತಪ್ಪಲ್ಲ.