ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ತಮ್ಮದೇ ಆದ ಸ್ಟೈಲ್ ನಲ್ಲಿ ಹವಾ ಎಬ್ಬಿಸಿ, ಸ್ಟಾರ್ ಆಗಿದ್ದ ಸ್ಪರ್ಧಿ ರಜತ್. ಇವರ ಹವಾ ಸಿಕ್ಕಾಪಟ್ಟೆ ಇತ್ತು. ರಜತ್ ಇಲ್ಲದೇ ಶೋ ಅಷ್ಟು ಮನರಂಜನೆ ಪಡೆಯುತ್ತಿರಲಿಲ್ಲ ಎನ್ನುವುದು ಜನರ ಅಭಿಪ್ರಾಯ ಆಗಿತ್ತು. ಬಿಗ್ ಬಾಸ್ ಗೆ ರಜತ್ ಬಂದಿದ್ದು ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯಾಗಿ. 50 ದಿನಗಳ ನಂತರ ಬಂದ ರಜತ್, ಫಿನಾಲೆ ತಲುಪಿ ಟಾಪ್ 3ನೇ ಸ್ಪರ್ಧಿಯಾಗಿ, ಎರಡನೇ ರನ್ನರ್ ಅಪ್ ಆಗಿ ಹೊರಬಂದರು. ಒಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ ಇಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದು, ಶೋನಲ್ಲಿ ಇದ್ದು, ಫಿನಾಲೆ ತಲುಪಿದ್ದು ಇದೇ ಮೊದಲು ಎಂದು ಹೇಳಿದರು ತಪ್ಪಲ್ಲ. ರಜತ್ ಹವಾ ಅಷ್ಟು ಜೋರಾಗಿತ್ತು. ಇದೆಲ್ಲ ಒಂದು ಕಡೆಯಾದರೆ ರಜತ್ ಜನರಿಗೆ ಹೆಚ್ಚು ಇಷ್ಟವಾಗಿದ್ದು ಅವರು ಡಿಬಾಸ್ ಫ್ಯಾನ್ ಅನ್ನೋ ಕಾರಣಕ್ಕೆ. ದರ್ಶನ್ ಅವರ ಫ್ಯಾನ್ಸ್ ರಜತ್ ಅವರಿಗೆ ಸಪೋರ್ಟ್ ಮಾಡುತ್ತಿದ್ದರು.

ರಜತ್ ಅವರು ಬಿಗ್ ಬಾಸ್ ಮನೆಯ ಒಳಗೆ ಇದ್ದಾಗ ಕೂಡ ತಾವು ದರ್ಶನ್ ಅವರ ಫ್ಯಾನ್ ಎಂದು ಹೇಳಿಕೊಂಡಿದ್ದರು. ಬಿಗ್ ಬಾಸ್ ಮನೆಯ ಒಳಗೆ ದರ್ಶನ್ ಅವರ ಹಾಡನ್ನು ಕೂಡ ಹಾಡಿದ್ದು ವಿಶೇಷ. ಅಭಿಮಾನಿಗಳಿಗೆ ಇದು ಬಹಳ ಇಷ್ಟವಾಗಿತ್ತು. ಅಷ್ಟೇ ಅಲ್ಲ ರಜತ್ ಹಲವು ಬಾರಿ ತಾವು ಪಕ್ಕಾ ಡಿಬಾಸ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ದರ್ಶನ್ ಅವರಿಗೆ ಸದಾ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ದರ್ಶನ್ ಅವರಿಗೆ ಕಳೆದ ವರ್ಷ ತೊಂದರೆ ಆದಾಗಲೂ ಸಹ ಅವರ ಜೊತೆಗೆ ನಿಂತಿದ್ದರು ರಜತ್. ಇಂಥ ರಜತ್ ಅವರು ಇದೀಗ ಡಿಬಾಸ್ ಫ್ಯಾನ್ಸ್ ಇಂದ ಬೈಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಡಿಬಾಸ್ ಫ್ಯಾನ್ಸ್ ಹಿಗ್ಗಾಮುಗ್ಗಾ ಬಯ್ಯುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..
ರಜತ್ ಅವರು ಮೊನ್ನೆಯಷ್ಟೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಒಂದು ರೀಲ್ಸ್ ಶೇರ್ ಮಾಡಿದ್ದಾರೆ, ಅದರಲ್ಲಿ ರಜತ್ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಇಬ್ಬರು ಕೂಡ ಇದ್ದಾರೆ. ಇವರಿಬ್ಬರು ಖಡಕ್ ಆಗಿ ವಾಕ್ ಮಾಡಿಕೊಂಡು ಬರುತ್ತಿದ್ದು, ವಿನಯ್ ತಮ್ಮ ಕೈಯಲ್ಲಿರುವ ಲಾಂಗ್ ಅನ್ನು ರಜತ್ ಅವರ ಕೈಗೆ ಕೊಡುತ್ತಾರೆ, ಅದನ್ನು ಹಿಡಿದು ರಜತ್ ಮುಂದೆ ನಡೆಯುತ್ತಾರೆ. ಇದು ರೀಲ್ಸ್. ಆದರೆ ಇಲ್ಲಿ ಹೆಚ್ಚು ಸುದ್ದಿ ಆಗುತ್ತಿರುವುದು ರಜತ್ ಅವರು ಧರಿಸಿರುವ ಬಟ್ಟೆ. ದರ್ಶನ್ ಅವರು ಕರಿಯ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸ್ಟೈಲ್ ನಲ್ಲಿ ರಜತ್ ಅವರ ಬಟ್ಟೆ ಇದೆ. ರಜತ್ ಅವರು ಶರ್ಟ್ ಪ್ಯಾಂಟ್ ಹಾಗೂ ಶೂ ಧರಿಸಿದ್ದು, ಇದನ್ನು ದರ್ಶನ್ ಅವರ ಫ್ಯಾನ್ ಎಂದು ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ಷರ್ಟ್ ಮೇಲೆ ಡಿಬಾಸ್ ಎಂದು ಬರೆಯಲಾಗಿದೆ.

ಪ್ಯಾಂಟ್ ಮೇಲೆ ದರ್ಶನ್ ಅವರ ಸಿನಿಮಾಗಳ ಹೆಸರನ್ನು ಬರೆಯಲಾಗಿದೆ. ಮಂಡ್ಯ, ಅಯ್ಯ, ಶಾಸ್ತ್ರಿ, ಲಂಕೇಶ್ ಪತ್ರಿಕೆ, ಹೀಗೆ ಅನೇಕ ಸಿನಿಮಾಗಳ ಹೆಸರುಗಳನ್ನು ಬರೆಯಲಾಗಿದೆ. ಇದೆಲ್ಲವೂ ಅಭಿಮಾನ ಎಂದುಕೊಂಡರೆ, ಮತ್ತೊಂದು ದೊಡ್ಡ ತಪ್ಪು ನಡೆದು ಹೋಗಿದೆ. ರಜತ್ ಅವರ ಪ್ಯಾಂಟ್ ಕೆಳಗಿನ ಭಾಗದಲ್ಲಿ ದರ್ಶನ್ ಎಂದು ಬರೆಯಲಾಗಿದೆ, ಅದು ಶೂ ಇರುವ ಜಾಗದಲ್ಲಿದ್ದು, ನೋಡಿದರೆ ದರ್ಶನ್ ಎಂದು ಶೂ ಮೇಲೆ ಬರೆದಿರುವ ಹಾಗೆ ತೋರುತ್ತದೆ. ಇದನ್ನು ನೋಡಿ ದರ್ಶನ್ ಅವರ ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಕೋಪ ಬಂದಿದೆ. ದರ್ಶನ್ ಅಭಿಮಾನಿ ಅನ್ನೋದು, ಅವರ ಬಗ್ಗೆ ಸಂತೋಷದಿಂದ ಮಾತಾಡೋದು ಎಲ್ಲವೂ ಸರಿ. ಆದರೆ ಶೂ ಹತ್ತಿತ ದರ್ಶನ್ ಅವರ ಹೆಸರು ಬರಬಾರದಿತ್ತು, ಇದನ್ನೆಲ್ಲ ಗಮನಿಸಿಕೊಳ್ಳಬೇಕು ಅಂತಿದ್ದಾರೆ ಡಿಬಾಸ್ ಫ್ಯಾನ್ಸ್..

ರಜತ್ ಅವರನ್ನು ತರಾಟೆಗೆ ತೆಗೆದುಕೊಂಡು, ಅಭಿಮಾನ ವ್ಯಕ್ತಪಡಿಸೋಕೆ ಸಾಕಷ್ಟು ವಿಧಾನ ಇದೆ. ಅಭಿಮಾನದ ಹೆಸರಲ್ಲಿ ದರ್ಶನ್ ಅವರಿಗೆ ಅವಮಾನ ಮಾಡೋ ಕೆಲಸ ಮಾಡಬೇಡಿ ಎಂದು ರಜತ್ ಅವರಿಗೆ ಹೇಳಲಾಗಿದೆ. ರಜತ್ ಇದಕ್ಕೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಏನೋ ಮಾಡಲು ಹೋಗಿ, ಇನ್ನೇನೋ ಆದ ಹಾಗೆ ತೋರುತ್ತಿದೆ. ರಜತ್ ಡಿಬಾಸ್ ಫ್ಯಾನ್ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಈ ವಿಚಾರದಲ್ಲಿ ಸ್ವಲ್ಪ ಹುಷಾರಾಗಿ ಇರಬೇಕಿತ್ತು ಅನ್ನೋದು ಎಲ್ಲರ ಅಭಿಪ್ರಾಯ ಆಗಿದೆ. ಇನ್ನು ರಜತ್ ಮೊನ್ನೆಯಷ್ಟೇ ಮೈಸೂರಿನಲ್ಲಿ ನಡೆದ ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ಸಹ ಕಾಣಿಸಿಕೊಂಡಿದ್ದರು. ರಜತ್ ಜೊತೆಗೆ ವಿನಯ್ ಕೂಡ ಇದ್ದರು. ಇಬ್ಬರಿಗೂ ದರ್ಶನ್ ಅವರ ಜೊತೆಗೆ ಒಳ್ಳೆಯ ಆತ್ಮೀಯತೆ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇನ್ನು ರಜತ್ ಅವರ ಬಗ್ಗೆ ಹೇಳೋದಾದರೆ ಬಿಗ್ ಬಾಸ್ ನಲ್ಲಿ ಜನರಿಗೆ ಬಹಳ ಇಷ್ಟವಾಗಿದ್ದರು. ನೇರ ನುಡಿ, ಜಗಳಗಳು ಇದೆಲ್ಲವನ್ನು ವೀಕ್ಷಕರು ಎಂಜಾಯ್ ಮಾಡಿದ್ದಾರೆ. ಇನ್ನು ಚೈತ್ರ ಕುಂದಾಪುರ ಹಾಗೂ ರಜತ್ ಕಾಂಬಿನೇಷನ್ ಯಾರಿಗೆ ತಾನೇ ಇಷ್ಟ ಆಗ್ಲಿಲ್ಲ ಹೇಳಿ. ಬಾಸ್ ಬಾಸ್ ಎಂದು ಚೈತ್ರಾ ಅವರಿಗೆ ಕರೆದು, ಅವರನ್ನು ರೇಗಿಸುವುದು ಇದೆಲ್ಲವನ್ನು ಜನರು ಸಿಕ್ಕಾಪಟ್ಟೆ ಎಂಜಾಯ್ ಮಾಡಿದರು. ಚೈತ್ರಾ ರಜತ್ ಕೋಳಿ ಜಗಳ ಎಲ್ಲರ ಫೇವರೆಟ್ ಆಗಿತ್ತು ಎಂದು ಹೇಳಿದರೆ ತಪ್ಪಲ್ಲ. ಹೊರಗಡೆ ಬಂದ ಮೇಲೆ ಕೂಡ ಇಬ್ಬರಿಗು ಈ ವಿಷಯದ ಬಗ್ಗೆ ಇಂಟರ್ವ್ಯೂ ಗಳಲ್ಲಿ ಪ್ರಶ್ನೆ ಕೇಳಲಾಗಿತ್ತು, ಆಗ ರಜತ್ ತಾವು ತಮ್ಮ ಫ್ರೆಂಡ್ಸ್ ಜೊತೆಗೆ ಇರುವುದು ಈ ರೀತಿ, ಬಿಗ್ ಬಾಸ್ ಮನೆಯ ಒಳಗೆ ಕೂಡ ಹಾಗೆ ಇದ್ದಿದ್ದು, ಹೊಸದಾಗಿ ಏನನ್ನು ಮಾಡಿಲ್ಲ ಎಂದಿದ್ದರು.

ಇನ್ನು ಬಿಗ್ ಬಾಸ್ ನಂತರ ರಜತ್ ಕಲರ್ಸ್ ಕನ್ನಡ ವಾಹಿನಿಯ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಬಂದಿದ್ದಾರೆ. ಇಲ್ಲಿ ವಿನಯ್ ಕ್ಯಾಪ್ಟನ್ ಆಗಿರುವ ಹುಡುಗರ ತಂಡದಲ್ಲಿ ಇದ್ದಾರೆ ರಜತ್. ಇಲ್ಲಿ ಕೂಡ ಬಿಗ್ ಬಾಸ್ ರೀತಿಯಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಇಲ್ಲೂ ಕೂಡ ರಜತ್ ಜೊತೆಗೆ ಚೈತ್ರಾ ಇದ್ದರೆ. ಚೈತ್ರಾ ರಜತ್ ಜಗಳ ಈ ಶೋನಲ್ಲಿ ಕೂಡ ಮುಂದುವರೆದಿದ್ದು, ಅಭಿಮಾನಿಗಳಿಗೆ ಮಸ್ತ್ ಮನರಂಜನೆ ಕೊಡುತ್ತಿದೆ. ಒಟ್ಟಿನಲ್ಲಿ ರಜತ್ ಅವರು ಎಲ್ಲೇ ಇದ್ದರೂ, ಯಾವ ಶೋಗೆ ಬಂದರು ಅದರಿಂದ ವೀಕ್ಷಕರನ್ನು ನಕ್ಕು ನಗಿಸುವುದು ಗ್ಯಾರೆಂಟಿ. ಸುದೀಪ್ ಅವರಿಗೂ ಸಹ ರಜತ್ ಮಾತುಗಳು ಎಷ್ಟು ಇಷ್ಟ ಆಗ್ತಿತ್ತು ಎಂದು ನಮಗೆಲ್ಲಾ ಗೊತ್ತೇ ಇದೆ. ಈ ಶೋ ನಲ್ಲಿ ಸಹ ಅದು ಮುಂದುವರೆದಿದೆ.