ಹಿಂದಿ ಸೇರಿದಂತೆ ಕನ್ನಡ, ಮಲೆಯಾಳಂ,ತಮಿಳು, ತೆಲುಗು ಹೀಗೆ ಎಲ್ಲಾ ಭಾಷೆಗಳಲ್ಲೂ ‘ಬಿಗ್ ಬಾಸ್’ ಟಿವಿ ಶೋ ಜನಪ್ರಿಯ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೆಲೆಬ್ರಿಟಿಗಳ ಜೀವನ ಶೈಲಿ, ಗಲಾಟೆ, ವೈಯಕ್ತಿಕ ವಿಚಾರಗಳನ್ನು ಇದರ ಮೂಲಕ ಕಾಣಲು ಜನ ಹಾತೊರೆಯುತ್ತಾರೆ. ಸದ್ಯ, ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಭಾಷೆಯ ‘ಬಿಗ್ ಬಾಸ್ ಓಟಿಟಿ ಸೀರಿಸ್ ಶೀಘ್ರದಲ್ಲೇ ಆರಂಭವಾಗಲಿದ್ದು, ಇದಕ್ಕೆ ನೀಲಿಚಿತ್ರ ತಾರೆಯ ಆಗಮನವಾಗಲಿದೆ ಎಂಬ ಸುದ್ದಿಯೊಂದು ಕಾಡ್ಗಿಚ್ಚಿನಂತೆ ಹಬ್ಬಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿ ಬಿಟ್ಟಿದೆ.

ಹೌದು, ಈಗಾಗಲೇ ಹಲವು ಭಾಷೆಯ ‘ಬಿಗ್ ಬಾಸ್’ ಶೋ ಗಳಲ್ಲಿ ಸಿನಿಮಾ ಹಾಗೂ ಇತರೆ ಕ್ಷೇತ್ರಗಳಲ್ಲಿ ಹೆಚ್ಚು ಸದ್ದು ಮಾಡಿದ ಹಾಗೂ ಕಾಂಟ್ರವರ್ಸಿಗೆ ಗುರಿಯಾದ ಹಲವು ಸೆಲೆಬ್ರಿಟಿಗಳು ಬಂದು ಹೋಗಿದ್ದಾರೆ. ಇದೀಗ ಹಿಂದಿ ಬಿಗ್ ಬಾಸ್ ಓಟಿಟಿ ಸೀಸನ್2 ಕಾರ್ಯಕ್ರಮಕ್ಕೆ ಮಾಜಿ ನೀಲಿ ಚಿತ್ರ ತಾರೆ ಮೀಯಾ ಖಲೀಫಾ ಆಗ ಮಿಸಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಜೊತೆಗೆ ರಾಜ್ ಕುಂದ್ರ ಅವರನ್ನು ಕೂಡ ಸಂಪರ್ಕಿಸಲಾಗಿದೆಯಂತೆ.
‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಈ ಹಿಂದೆಯೂ ನೀಲಿ ಚಿತ್ರ ತಾರೆ ಭಾಗವಹಿಸಿದ್ದರು. ಹಿಂದಿ ಬಿಗ್ ಬಾಸ್ ಸೀಸನ್ 5 ರಲ್ಲಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಭಾಗವಹಿಸಿದ್ದರು. ಈ ಶೋ ಸಾಕಷ್ಟು ಯಶಸ್ವಿಯಾಗಿತ್ತು. ಇದೇ ಕಾರಣಕ್ಕೆ ಇದೀಗ ಮತ್ತೆ ನೀಲಿ ಚಿತ್ರ ಲೋಕಕ್ಕೆ ಹಿಂದಿ ಬಿಗ್ ಬಾಸ್ ಟೀಮ್ ಗಾಳ ಹಾಕುತ್ತಿದೆ. ಇದಕ್ಕಾಗಿ ಹಲವು ವರ್ಷಗಳಿಂದ ಮೀಯಾ ಖಲೀಫಾ ಅವರನ್ನು ಸಂಪರ್ಕಿಸಿದೆಯಾದರೂ, ಆಕೆ ಯಾವ ಸೀಸನ್ನಲ್ಲೂ ಭಾಗವಹಿಸಲು ಒಪ್ಪಿಗೆ ನೀಡಿರಲಿಲ್ಲ.
ಹಿಂದಿ ಬಿಗ್ ಬಾಸ್ ಓಟಿಟಿ ಸೀಸನ್ 2 ಇದೇ ಜೂ.17 ರಿಂದ ಜಿಯೋ ಸಿನಿಮಾ ಮೂಲಕ ಪ್ರಸಾರವಾಗಲಿದೆ. ಆದರೆ ಯಾವುದೇ ಮೂಲಗಳು ಕೂಡ ಮೀಯಾ ಖಲೀಫಾ ಭಾಗವಹಿಸುತ್ತಿರುವ ವಿಚಾರವನ್ನು ದೃಢೀಕರಿಸಿಲ್ಲ. ಒಂದು ವೇಳೆ ಮೀಯಾ ಖಲೀಫಾ ಬಿಗ್ ಬಾಸ್ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದರೂ ಅಚ್ಚರಿ ಪಡಬೇಕಾಗಿಲ್ಲ ಎನ್ನಲಾಗಿದೆ.