ನಟಿ ಮೋಕ್ಷಿತಾ ಪೈ ಅವರು ಈಗ ಬಿಗ್ ಬಾಸ್ ಶೋ ಇಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಎಲ್ಲಾ ಕಡೆ ಇವರ ಬಗ್ಗೆ, ಇವರ ವ್ಯಕ್ತಿತ್ವದ ಬಗ್ಗೆ ಬಹಳ ಚರ್ಚೆ ಆಗುತ್ತಿದೆ ಎಂದು ಹೇಳಿದರು ಕೂಡ ತಪ್ಪಿಲ್ಲ. ಮೋಕ್ಷಿತಾ ಅವರು ಮೊದಲಿಗೆ ನಟಿಸಿದ್ದು ಜೀಕನ್ನಡ ವಾಹಿನಿಯ ಪಾರು ಧಾರಾವಾಹಿ ಮೂಲಕ. ಈ ಒಂದು ಧಾರವಾಹಿ ಇವರಿಗೆ ಬಹಳಷ್ಟು ಜನಪ್ರಿಯತೆ ಮತ್ತು ಹೆಸರು ಎರಡನ್ನು ಕೂಡ ತಂದುಕೊಟ್ಟಿತು. ಬಳಿಕ ಬಿಗ್ ಬಾಸ್ ಗೆ ಮೋಕ್ಷಿತಾ ಬಂದಿದ್ದಾರೆ, ಶುರುನಲ್ಲಿ ಬಹಳ ಸೈಲೆಂಟ್ ಆಗಿದ್ದ ಮೋಕ್ಷಿತಾ ಅವರು ಈಗ ವರವೆ ಬದಲಾಯಿಸಿ, ವೈಲೆಂಟ್ ಹಾಗೂ ರೆಬೆಲ್ ಆಗಿದ್ದಾರೆ. ಈಗ ಅವರ ನಿರ್ಧಾರಗಳ ಬಗ್ಗೆ ಕೂಡ ಬಹಳ ಚರ್ಚೆ ಆಗ್ತಿದೆ..

ಮೋಕ್ಷಿತಾ ಅವರ ಕನ್ನಡದ ಮೊದಲ ಧಾರವಾಹಿ ಪಾರು ಮುಗಿದು ಒಂದು ವರ್ಷ ಆಗಿದೆ. ಇದು ಮೋಕ್ಷಿತಾ ಅವರಿಗೆ ಮೊದಲ ಧಾರವಾಹಿ, ಸಾಕಷ್ಟು ರೆಕಾರ್ಡ್ ಸೃಷ್ಟಿ ಮಾಡಿದ್ದ ಧಾರಾವಾಹಿ ಇದು. ಹಿರಿಯ ನಟಿ ವಿನಯ ಪ್ರಸಾದ್ ಅವರು ಪಾರು ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರದಲ್ಲಿ ನಟಿಸಿದ್ದರು. ಪಾರು ಪಾತ್ರದಲ್ಲಿ ಮೋಕ್ಷಿತಾ ನಟಿಸಿದ್ದರು. ಬಹಳ ಮುಗ್ದವಾಗಿ ನೈಜವಾಗಿ ಅಭಿನಯಿಸಿದ್ದ ಮೋಕ್ಷಿತಾ ಅವರ ನಟನೆ ವೀಕ್ಷಕರಿಗೆ ಬಹಳ ಮೆಚ್ಚುಗೆಯಾಗಿ, ಧಾರಾವಾಹಿ ನಡೆಯುತ್ತಿದ್ದ ವೇಳೆ ಮೋಕ್ಷಿತಾ ಅವರಿಗೆ ಬಹಳ ದೊಡ್ಡ ಅಭಿಮಾನಿ ಬಳಗವೇ ಶುರುವಾಯಿತು. ಪಾರು ಇಂದ ಹೆಸರು, ಅಭಿಮಾನ, ಪ್ರೀತಿ ಎಲ್ಲವೂ ಇವರಿಗೆ ಸಿಕ್ಕಿದೆ..
ಮೋಕ್ಷಿತಾ ಪೈ ಅವರ ಪಾರು ಧಾರಾವಾಹಿ ಟಿಆರ್ಪಿ ಲಿಸ್ಟ್ ನಲ್ಲಿ ಸಹ ಹಲವು ಅಗ್ರಸ್ಥಾನದಲ್ಲಿತ್ತು, ಈ ಧಾರಾವಾಹಿಯು ಕರ್ನಾಟಕದ ನಂಬರ್ 1 ಸೀರಿಯಲ್ ಸಹ ಆಗಿತ್ತು. ಇಷ್ಟೆಲ್ಲಾ ಕ್ರೇಜ್ ಹಾಗೂ ಜನಪ್ರಿಯತೆ ಪಾರು ಮುಗಿದ ಬಳಿಕ ಮೋಕ್ಷಿತಾ ಅವರು ಕನ್ನಡದ ಇನ್ಯಾವುದೇ ಧಾರಾವಾಹಿಯಲ್ಲಿ ನಟಿಸಿಲ್ಲ, ಮುಂದಿನ ದಿನಗಳಲ್ಲಿ ಇವರಿಗೆ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಒಳ್ಳೆಯ ಅವಕಾಶ ಸಿಕ್ಕರೆ ಸಿನಿಮಾದಲ್ಲಿ ಖಂಡಿತವಾಗಿ ನಟಿಸುತ್ತಾರಂತೆ ನಟಿ ಮೊಕ್ಷಿತ್ತಾ ಪೈ. ಅದರ ನಡುವೆ ಈಗ ಬಿಗ್ ಬಾಸ್ ಜರ್ನಿ ಕೂಡ ಚೆನ್ನಾಗಿಯೇ ಸಾಗುತ್ತಿದೆ. ಕೆಲವರು ಮೋಕ್ಷಿತಾ ಅವರ ಆಟದ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದರೆ, ಇನ್ನು ಕೆಲವರು ನೆಗಟಿವ್ ಆಗಿ ಮಾತನಾಡುತ್ತಾರೆ. ಆದರೆ ಮೋಕ್ಷಿತಾ ಅವರು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ತಮ್ಮ ಆಟವನ್ನು ತಾವು ಚೆನ್ನಾಗಿ ಆಡುತ್ತಾ ಹೋಗುತ್ತಿದ್ದಾರೆ. ಕನ್ನಡದಲ್ಲಿ ಇವರಿಗೆ ರಿಯಾಲಿಟಿ ಶೋ ಇಂದ, ಧಾರಾವಾಹಿ ಇಂದ ಮೋಕ್ಷಿತಾ ಅವರು ಫೇಮಸ್ ಆಗಿದ್ದರು. ಆದರೆ ಇವರು ತಮಿಳಿನಲ್ಲಿ ಕೂಡ ಒಂದು ಧಾರಾವಾಹಿಯಲ್ಲಿ ನಟಿಸಿದ್ದಾರೆ, ಈ ವಿಷಯ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಮೋಕ್ಷಿತಾ ಅಭಿನಯದ ತಮಿಳು ಧಾರಾವಾಹಿಯ ಹೆಸರು ಮೀನಾಕ್ಷಿ ಪೊಣ್ಣುಂಗ, ಇದು ಕನ್ನಡದ ಸೂಪರ್ ಹಿಟ್ ಧಾರಾವಾಹಿ ಆಗಿರುವ ಪುಟ್ಟಕ್ಕನ ಮಕ್ಕಳು ನ ತಮಿಳು ರಿಮೇಕ್ ಆಗಿದೆ. ಕನ್ನಡದಲ್ಲಿ ಉಮಾಶ್ರೀ ಅವರು ನಿರ್ವಹಿಸಿರುವ ಪಾತ್ರವನ್ನ ತಮಿಳು ಧಾರಾವಾಹಿಯಲ್ಲಿ ಹಿರಿಯನಟಿ ಅರ್ಚನಾ ಅವರು ನಿರ್ವಹಿಸುತ್ತಿದ್ದಾರೆ.

ಕನ್ನಡದಲ್ಲಿ ಸಹನಾ ಪಾತ್ರ, ಪುಟ್ಟಕ್ಕನ ಮೊದಲ ಮಗಳ ಪಾತ್ರ, ಈ ಪಾತ್ರವನ್ನ ತಮಿಳಿನಲ್ಲಿ ನಟಿ ಮೋಕ್ಷಿತಾ ಅವರು ನಿರ್ವಹಿಸಿದ್ದರು. ಮೋಕ್ಷಿತಾ ಅವರು ಆರಂಭದಲ್ಲಿ ತಮಿಳು ಬರದೇ ಬೇರೆಯವರು ಇವರ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದರು, ನಂತರ ತಮಿಳು ಭಾಷೆಯನ್ನು ಕಲಿತು ಅನೇಕ ತಮಿಳು ಸಂದರ್ಶನಗಳನ್ನು ಸಹ ನೀಡಿದ್ದಾರೆ ಮೋಕ್ಷಿತಾ. ಮೀನಾಕ್ಷಿ ಪೊಣ್ಣುಂಗ ಧಾರಾವಾಹಿ ಕೂಡ ಯಶಸ್ಸು ಕಂಡರು, ಮೋಕ್ಷಿತಾ ಅವರು ಹೆಚ್ಚು ದಿನಗಳ ಕಾಲ ಈ ಧಾರವಾಹಿಯಲ್ಲಿ ಉಳಿಯಲಿಲ್ಲ, ಅರ್ಧಕ್ಕೆ ಹೊರಗಡೆ ಬರಬೇಕಾಯಿತು. ಸಧ್ಯಕ್ಕೆ ಇವರು ಬಿಗ್ ಬಾಸ್ ನಲ್ಲಿದ್ದು, ಮುಂದೆ ಯಾವ ಸಿನಿಮಾ ಅಥವ ಧಾರಾವಾಹಿಯಲ್ಲಿ ನಟಿಸುತ್ತಾರೆ ಎಂದು ಕಾದು ನೋಡಬೇಕೆಡದೆ.