ನಿನ್ನೆಯಷ್ಟೇ ಕಿಚ್ಚ ಸುದೀಪ್ ಅವರು ಅಭಿನಯಿಸಿರುವ ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸುದೀಪ್ ಅವರ ಸ್ವಾಗ್, ಅಭಿನಯ ಇದೆಲ್ಲವನ್ನು ನೋಡಿದ ಸಿನಿಪ್ರಿಯರು ಫಿದಾ ಆಗಿದ್ದಾರೆ. ಮ್ಯಾಕ್ಸ್ ಸಿನಿಮಾ ಮಾಸ್ ಫ್ಯಾನ್ಸ್ ಗೆ ಅತಿದೊಡ್ಡ ಟ್ರೀಟ್ ಆಗಿದೆ. ಸುದೀಪ್ ಅವರ ಅಭಿಮಾನಿಗಳು ಸಿನಿಮಾ ನೋಡಿ, ಇನ್ನೊಮ್ಮೆ ನೋಡಬೇಕು ಅಂದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಮ್ಯಾಕ್ಸ್ ಸಿನಿಮಾದ ಟೈಟಲ್ ಕಾರ್ಡ್ ನಲ್ಲಿ ಒಂದು ದೊಡ್ಡ ಎಡವಟ್ಟು ಆಗಿದ್ದು, ಇದರಿಂದ ಸುದೀಪ್ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಸುದೀಪ್ ಅವರ ಹೆಸರಿಗೆ ಈ ಥರ ಮಾಡಬಾರದಾಗಿತ್ತು ಎಂದು ಬೇಸರ ಹೊರ ಹಾಕಿದ್ದಾರೆ ಫ್ಯಾನ್ಸ್.

ಹೌದು, ಮ್ಯಾಕ್ಸ್ ಕನ್ನಡ ಸಿನಿಮಾ, ಸುದೀಪ್ ಅವರ ಸಿನಿಮಾ, ಸುದೀಪ್ ಅವರಿಗೆ ಕನ್ನಡದ ಬಗ್ಗೆ ಎಷ್ಟು ಪ್ರೀತಿ, ಗೌರವ ಇದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಹಲವು ಕಡೆ ಕಾರ್ಯಕ್ರಮಗಳಿಗೆ ಹೋದಾಗ, ಅಲ್ಲಿನ ನಿರೂಪಕರಿಗೆ, ಕಲಾವಿದರಿಗೆ ಕನ್ನಡ ಹೇಳಿಕೊಟ್ಟಿದ್ದಾರೆ ಕಿಚ್ಚ. ಹೊರರಾಜ್ಯಗಳಲ್ಲಿ, ಹೊರ ದೇಶದ ನೆಲದಲ್ಲಿ ನಿಂತು ಕನ್ನಡ ಮಾತನಾಡಿದ್ದಾರೆ. ಈ ಕಾರಣಕ್ಕೆ ಸುದೀಪ್ ಅವರು ಹೆಚ್ಚಿನ ಜನರಿಗೆ ಇಷ್ಟ ಆಗಿರೋದು. ಇಂಥ ಸುದೀಪ್ ಅವರ ಸಿನಿಮಾದಲ್ಲಿ, ಕನ್ನಡದ ಮೇರು ನಟನ ಸಿನಿಮಾ ಟೈಟಲ್ ಕಾರ್ಡ್ ನಲ್ಲೇ ಈ ಥರ ತಪ್ಪಾಗಿರೋದು ಜನರಿಗೆ ಬೇಸರ ಆಗಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಈ ಸಿನಿಮಾದ ಪ್ರೊಡ್ಯುಸರ್ ಹಾಗೂ ಡೈರೆಕ್ಟರ್ ಇಬ್ಬರು ಸಹ ಹೊರ ರಾಜ್ಯದವರು, ಹಾಗಾಗಿ ಈ ತಪ್ಪು ಆಗಿರಬಹುದು ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದ್ದರು, ಇದರಿಂದ ಸುದೀಪ್ ಅವರ ಅಭಿಮಾನಿಗಳಿಗೆ ಬಹಳ ಬೇಸರ ಆಗಿದೆ. ಅಷ್ಟಕ್ಕೂ ಆಗಿರುವ ತಪ್ಪು ಏನು ಎಂದರೆ, ಮ್ಯಾಕ್ಸ್ ಸಿನಿಮಾದ ಟೈಟಲ್ ಕಾರ್ಡ್ ನಲ್ಲಿ ಸುದೀಪ್ ಅವರ ಹೆಸರು ಕನ್ನಡದಲ್ಲಿ ಬಂದಾಗ, ಅವರ ಬಿರುದ್ಧು ಅಭಿನಯ ಚಕ್ರವರ್ತಿ ಎಂದು ಇರಬೇಕಿತ್ತು, ಆದರೆ ಇದರ ಬದಲಾಗಿ ಅಭಿನಯ ಚತ್ರವರ್ತಿ ಎಂದು ಬಂದಿದೆ. ಅಂಥ ಒಳ್ಳೆಯ ಬಿರುದ್ಧನ್ನೇ ತಪ್ಪಾಗಿ ಹಾಕಿದ್ದಾರೆ ಎಂದು ಅಭಿಮಾನಿಗಳಲ್ಲಿ ಶುರು ಆಗಿರುವ ಬೇಸರ ಆಗಿದೆ.

ಈ ರೀತಿ ತಪ್ಪಾಗಿ ಬರೆದಿರುವ ಟೈಟಲ್ ಕಾರ್ಡ್ ನ ಫೋಟೋಗಳು ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಲವು ಟ್ರೋಲ್ ಪೇಜ್ ಗಳು ಮತ್ತು ಮೀಮ್ ಪೇಜ್ ಗಳು ಸುದೀಪ್ ಅವರ ಹೆಸರನ್ನೇ ಈ ರೀತಿ ತಪ್ಪಾಗಿ ಹಾಕಬಾರದಿತ್ತು ಎಂದು ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಕನ್ನಡ ನಾಡಲ್ಲಿ ಕನ್ನಡ ಕಲಾವಿದರ ಪರಿಸ್ಥಿತಿ ಈ ಥರ ಆದ್ರೆ, ಮುಂದೇನು ಗತಿ ಅಂತಿದ್ದಾರೆ ನೆಟ್ಟಿಗರು. ಈ ತಪ್ಪುಗಳು ಏನೇ ಇದ್ದರೂ ಒಳ್ಳೆಯ ಕಂಟೆಂಟ್ ಇರುವ ಕಾರಣ ಜನರಿಗೆ ಮ್ಯಾಕ್ಸ್ ಸಿನಿಮಾ ತುಂಬಾ ಇಷ್ಟವಾಗಿದೆ. ಮಾಸ್ ಎಲಿಮೆಂಟ್ ಗಳು ಸುದೀಪ್ ಅವರ ಅಭಿನಯ ಜನರಿಗೆ ತುಂಬಾ ಇಷ್ಟವಾಗಿದೆ.
ಸುದೀಪ್ ಅವರ ಸಿನಿಮಾ ಗೆದ್ದಿದೆ ಎಂದು ಹೇಳಬಹುದು. ಎರಡು ವರ್ಷಗಳ ನಂತರ ಸುದೀಪ್ ಅವರ ಸಿನಿಮಾ ಒಂದು ಈಗ ತೆರೆ ಕಾಣುತ್ತಿದೆ. ಇದನ್ನು ನೋಡಿ ಅವರ ಅಭಿಮಾನಿಗಳಿಗೆ ಆಗಿರುವ ಸಂತೋಷಕ್ಕೆ ಪಾರವೇ ಇಲ್ಲ. ಮ್ಯಾಕ್ಸ್ ರೆಗ್ಯುಲರ್ ಸಿನಿಮಾ ರೀತಿಯಲ್ಲಿ ಇರದೇ, ವಿಭಿನ್ನವಾಗಿದ್ದು, ಒಂದು ರಾತ್ರಿಯಲ್ಲಿ ನಡೆಯುವ ಕಥೆ ಇದು. ಪಕ್ಕಾ ಆಕ್ಷನ್ ಸಿನಿಮಾ ಎನ್ನುವುದರ ಜೊತೆಗೆ ಕೆಲವು ಒಳ್ಳೆಯ ಅಂಶಗಳು ಸಹ ಇದೆ. ಈ ಕಾರಣಕ್ಕೆ ಜನರಿಗೆ ತುಂಬಾ ಇಷ್ಟವಾಗಿದೆ. ಮ್ಯಾಕ್ಸ್ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.