ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಇನ್ನೇನು ಮುಕ್ತಾಯ ಹಂತ ತಲುಪಿದೆ. ಬಿಗ್ ಬಾಸ್ ಸ್ಪರ್ಧಿಗಳು 90 ದಿನಗಳ ಪ್ರಯಾಣ ಮುಗಿಸಿದ್ದಾರೆ. ಇನ್ನೇನು ಒಂದೆರಡು ವಾರಗಳಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಬಿಗ್ ಬಾಸ್ ಶೋ ಭಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕಳೆದ ವಾರದ ವೀಕೆಂಡ್ ಎಪಿಸೋಡ್ ನಲ್ಲಿ ಎಲಿಮಿನೇಟ್ ಆಗಿ ಹೊರಬಂದಿರುವುದು ನಟಿ ಐಶ್ವರ್ಯ ಸಿಂಧೋಗಿ. ಹೊರಗಡೆ ಬಂದ ನಂತರ ಐಶ್ವರ್ಯ ಅವರಿಗೆ ಜನರಿಂದ ಬಹಳಷ್ಟು ಪ್ರೀತಿ ಸಿಕ್ಕಿದೆ. ಹೊರಗಿನ ಜನರ ರೆಸ್ಪಾನ್ಸ್ ನೋಡಿ, ಐಶ್ವರ್ಯ ಅವರು ಕೂಡ ಭಾವುಕರಾಗಿದ್ದಾರೆ. ಈ ವಿಚಾರದ ಜೊತೆಗೆ ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರಿಂದ ಇನ್ನಿಬ್ಬರು ಸ್ಪರ್ಧಿಗೆ ಗಿಫ್ಟ್ ಸಿಕ್ಕಿದೆ.
ಈ ವಾರದ ವೀಕೆಂಡ್ ಎಪಿಸೋಡ್ ನಲ್ಲಿ, ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ನ್ಯೂ ಇಯರ್ ಬಗ್ಗೆ ವಿಚಾರ ಶುರು ಮಾಡಿ, ಕಳೆದ ವರ್ಷ ಎಲ್ಲರೂ ಹೇಗೆ ಹೊಸ ವರ್ಷ ಆಚರಣೆ ಮಾಡಿದರು ಎಂದು ಕೇಳಿದರು. ಎಲ್ಲಾ ಸ್ಪರ್ಧಿಗಳು ಹೇಗೆ ಹೊಸ ವರ್ಷ ಆಚರಣೆ ಮಾಡಿದ್ದಾರೆ ಎನ್ನುವುದು ಗೊತ್ತಾಗಿ, ಸುದೀಪ್ ಅವರು ಬಹಳಷ್ಟು ತಮಾಷೆ ಸಹ ಮಾಡಿದರು. ಹಾಗೆಯೇ ಮನೆಯೊಳಗೆ ಇರುವ ಸ್ಪರ್ಧಿಗಳು ತಮಗೆ ಇಷ್ಟವಾದ ಮತ್ತೊಬ್ಬ ಸ್ಪರ್ಧಿಗೆ ತಮಗೆ ಇಷ್ಟವಾದ ತಮ್ಮ ವಸ್ತುವನ್ನು ಕೊಡಬೇಕು ಎಂದು ಹೇಳಿದರು. ಒಬ್ಬೊಬ್ಬ ಸ್ಪರ್ಧಿ ಕೂಡ ತಮಗೆ ಇಷ್ಟವಾದ ವಸ್ತುವನ್ನು ಒಬ್ಬೊಬ್ಬರಿಗೆ ಕೊಟ್ಟರು..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಚೈತ್ರಾ ಅವರು ಮತ್ತು ಮೋಕ್ಷಿತಾ ಇಬ್ಬರು ಸಹ ಐಶ್ವರ್ಯ ಅವರಿಗೆ ಗಿಫ್ಟ್ ಕೊಟ್ಟರು, ಗೌತಮಿ ಅವರು ಉಗ್ರಂ ಮಂಜು ಅವರಿಗೆ ಗಿಫ್ಟ್ ಕೊಟ್ಟರು, ಉಗ್ರಂ ಮಂಜು ಅವರು ಗೌತಮಿ ಅವರು ಗಿಫ್ಟ್ ಕೊಟ್ಟರು. ಇನ್ನು ಭವ್ಯ ಗೌಡ ತ್ರಿವಿಕ್ರಂ ಗೆ ಗಿಫ್ಟ್ ಕೊಟ್ಟರೆ, ತ್ರಿವಿಕ್ರಂ ಭವ್ಯಗೆ ಗಿಫ್ಟ್ ಕೊಟ್ಟರು. ಇನ್ನು ರಜತ್ ಧನರಾಜ್ ಗೆ ಗಿಫ್ಟ್ ಕೊಟ್ಟರು. ಇನ್ನು ಧನರಾಜ್ ಹನುಮಂತನಿಗೆ ಗಿಫ್ಟ್ ಕೊಟ್ಟರೆ, ಹನುಮಂತ ಧನರಾಜ್ ಗೆ ಗಿಫ್ಟ್ ಕೊಟ್ಟರು. ಆದರೆ ಚೈತ್ರಾ ಕುಂದಾಪುರ ಮತ್ತು ರಜತ್ ಇಬ್ಬರಿಗೂ ಯಾರು ಕೂಡ ಗಿಫ್ಟ್ ಕೊಡಲಿಲ್ಲ. ಆದರೆ ಇವರಿಬ್ಬರಿಗೆ ಕಿಚ್ಚ ಸುದೀಪ್ ಅವರಿಂದ ಸ್ಪೆಷಲ್ ಗಿಫ್ಟ್ ಸಿಕ್ಕಿತು. ಇದರಿಂದ ಇಬ್ಬರಿಗೂ ಬಹಳ ಸಂತೋಷ ಆಯಿತು.
ಅವರಿಬ್ಬರು ಯಾವುದೇ ಗಿಫ್ಟ್ ಸಿಗದೇ ಇದ್ದಿದ್ದನ್ನು ನೋಡಿದ ಸುದೀಪ್ ಅವರು, ನಿಮ್ಮಿಬ್ಬರಿಗೆ ನಮ್ಮ ಕಡೆಯಿಂದ ಗಿಫ್ಟ್ ಇದೆ ಎಂದು ಹೇಳಿ, ತಮ್ಮ ಕಿವಿಯಲ್ಲಿ ಧರಿಸಿದ್ದ ಬೆಲೆ ಬಾಳುವ ಓಲೆಗಳನ್ನು ಅಲ್ಲಿಯೇ ಬಿಚ್ಚಿ ಅವರಿಬ್ಬರಿಗೂ ಗಿಫ್ಟ್ ಆಗಿ ಕಳಿಸಿಕೊಟ್ಟರು. ಸುದೀಪ್ ಅವರಿಂದ ಗಿಫ್ಟ್ ಪಡೆದ ಚೈತ್ರಾ ಮತ್ತು ರಜತ್ ಇಬ್ಬರು ಸಹ ಬಹಳ ಸಂತೋಷಗೊಂಡರು. ಇದು ತಮ್ಮಿಬ್ಬರಿಗೂ ಸಿಕ್ಕ ಅತ್ಯಮೂಲ್ಯವಾದ ಗಿಫ್ಟ್ ಎಂದು ಆನಂದಬಾಷ್ಪ ಸಹ ಸುರಿಸಿದರು. ತಮಾಷೆ ಮಾಡುವುದಕ್ಕೆ ಸುದೀಪ್ ಅವರು ಅದು ಒರಿಜಿನಲ್ ಚೈತ್ರಾ ಅವರೇ ಎಂದು ಹೇಳಿದರು, ಆಗ ಚೈತ್ರಾ ನಿಮ್ಮ ಪ್ರೀತಿ ಬಹಳ ಅಮೂಲ್ಯವಾದದ್ದು ಅದಕ್ಕೆ ಪರೀಕ್ಷೆ ಮಾಡೋಕಾಗಲ್ಲ ಎಂದು ಹೇಳಿದರು..
ಒಟ್ಟಿನಲ್ಲಿ ಸುದೀಪ್ ಅವರು ಇವರಿಬ್ಬರಿಗೂ ಗಿಫ್ಟ್ ಆಗಿ, ತಮ್ಮ ಓಲೆಯನ್ನು ಕೊಟ್ಟಿದ್ದು, ಒಳಗಿರುವ ಸ್ಪರ್ಧಿಗಳಿಗೆ ಮಾತ್ರವಲ್ಲ, ಹೊರಗಿನ ಅಭಿಮಾನಿಗಳಿಗೆ ಸಹ ಬಹಳ ಇಷ್ಟವಾಗಿದೆ. ಸುದೀಪ್ ಅವರ ಈ ಗುಣ ಜನರಿಗೆ ಬಹಳ ಇಷ್ಟ. ಸುದೀಪ್ ಅವರು ಒಂದು ಸಾರಿ ಯಾರನ್ನಾದರೂ ತಮ್ಮ ಕುಟುಂಬ ಎಂದು ಪರಿಗಣಿಸಿದರೆ, ಅವರನ್ನು ಖುಷಿ ಪಡಿಸುವುದಕ್ಕೆ ಏನನ್ನಾದರೂ ಮಾಡುತ್ತಾರೆ. ಕಿಚ್ಚ ಸುದೀಪ್ ಅವರಲ್ಲಿ ಇರುವ ಈ ಒಳ್ಳೇತನ, ಒಳ್ಳೆಯ ಗುಣ ಅಭಿಮಾನಿಗಳಿಗೆ ಬಹಳ ಇಷ್ಟವಾಗುತ್ತದೆ. ಇನ್ನು ಮ್ಯಾಕ್ಸ್ ಸಿನಿಮಾ ಸಕ್ಸಸ್ ಅನ್ನು ಸಹ ಸುದೀಪ್ ಅವರು ಎಂಜಾಯ್ ಮಾಡುತ್ತಿದ್ದಾರೆ.