ಇನ್ನೇನು ಎರಡು ದಿನಗಳಲ್ಲಿ ದೊಡ್ಮನೆ ಮಗ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟಿದ ಹಬ್ಬ. ಒಂದೆಡೆ ಇದಕ್ಕೆ ಬೇಕಾದ ಸಿದ್ದತೆಗಳು ನಡೆಯುತ್ತಿದೆ. ಇನ್ನೊಂದೆಡೆ ಶಿವಣ್ಣ ನಟನೆಯ “ಘೋಸ್ಟ್ ” ಸಿನಿಮಾದ ಹೊಸ ಪೋಸ್ಟರ್ ಒಂದು ಬಿಡುಗಡೆಯಾಗಿದೆ. ಜುಲೈ 9ರಂದು ಈ ಚಿತ್ರದ ನಿರ್ದೇಶಕ ಎಂ. ಜಿ ಶ್ರೀನಿವಾಸ್ ಅವರ ಹುಟ್ಟುಹಬ್ಬ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ “ಬಿಗ್ ಡ್ಯಾಡಿ “ಪೋಸ್ಟರ್ ಬಿಡುಗಡೆಯಾಗಿದೆ. ಈಗ ಅಭಿಮಾನಿಗಳಲ್ಲಿ ಈ ವಿಷಯದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಘೋಸ್ಟ್ ಸಿನಿಮಾದಲ್ಲಿ ಏನಿದು ಬಿಗ್ ಡ್ಯಾಡಿ ಕಾನ್ಸೆಪ್ಟ್? ಇದರ ಹಿಂದಿನ ಕಥೆ ಏನು? ಎಂಬುದೆಲ್ಲದರ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.

ಅಭಿಮಾನಿ ಗಳ ಈ ಪ್ರಶ್ನೆಗಳಿಗೆ ಶಿವಣ್ಣನ ಹುಟ್ಟಿದ ಹಬ್ಬದ ದಿನ ಅಂದರೆ ಜುಲೈ 12ರಂದು ಉತ್ತರ ಸಿಗಲಿದೆ. ಶಿವಣ್ಣ ನ ಹುಟ್ಟಿದ ಹಬ್ಬದ ದಿನ ಬಿಗ್ ಡ್ಯಾಡಿ ಟೀಸರ್ ಬಿಡುಗಡೆಯಾಗಲಿದೆ. ಟೀಸರ್ ರಿಲೀಸ್ ಗೂ ಮುನ್ನ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಟೀಸರ್ ವೀಕ್ಷಿಸುವ ಕೌತುಕದಲ್ಲಿ ಅಭಿಮಾನಿಗಳಿದ್ದಾರೆ. ಈ ಪೋಸ್ಟರ್ ನಲ್ಲಿ ಶಿವಣ್ಣ ಗನ್ ಹಿಡಿದು ಖಡಕ್ ಲುಕ್ ಕೊಟ್ಟಿದ್ದಾರೆ. ಇವರ ಈ ಲುಕ್ ಅಭಿಮಾನಿಗಳಲ್ಲಿ ಇನ್ನೂ ಕುತೂಹಲ ಕೆರಳಿಸಿದೆ.
ಶಿವಣ್ಣನ ಹುಟ್ಟಿದ ಹಬ್ಬದ ಅದ್ಧೂರಿ ಆಚರಣೆಗೆ ಅಭಿಮಾನಿಗಳೆಲ್ಲಾ ಸಿದ್ಧರಾಗಿರಬೇಕಾದರೆ, ಬಿಗ್ ಡ್ಯಾಡಿ ಟೀಸರ್ ಮೂಲಕ ಅಭಿಮಾನಿಗಳ ಮುಖದಲ್ಲಿ ಖುಷಿ ತರಿಸಲು ಶಿವಣ್ಣ ಇದೀಗ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಘೋಸ್ಟ್ ಸಿನಿಮಾವನ್ನು ಸಂದೇಶ್ ಎನ್ ನಿರ್ಮಾಣ ಮಾಡಿದ್ದಾರೆ. ಹತ್ತಾರು ಅದ್ಭುತ ಕನ್ನಡ ನಟರು ಇದರಲ್ಲಿ ನಟಿಸಿದ್ದಾರೆ. ಅಭಿಮಾನಿಗಳಂತೂ ಈ ಸಿನಿಮಾ ತೆರೆ ಮೇಲೆ ಬರಲು ಕೌತುಕದಿಂದ ಕಾಯುತ್ತಿದ್ದಾರೆ