ಕಿರುತೆರೆ ಕ್ರೇಜ್ ಈಗ ಸಿನಿಮಾ ಕ್ರೇಜ್ ಗಿಂತ ಹೆಚ್ಚಿದೆ ಎಂದು ಹೇಳಿದರು ತಪ್ಪಲ್ಲ. ಎಲ್ಲಾ ವಾಹಿನಿಗಳಲ್ಲಿ ಹಲವು ಧಾರಾವಾಹಿಗಳು ಮೂಡಿ ಬರುತ್ತಲಿದೆ. ಸಾಕಷ್ಟು ಹೊಸ ಧಾರಾವಾಹಿಗಳು ಕೂಡ ಶುರುವಾಗುತ್ತಲಿದೆ. ಇದರಿಂದ ನಟನೆಯಲ್ಲಿ ಆಸಕ್ತಿ ಇರುವ ಸಾಕಷ್ಟು ಜನರಿಗೆ ಒಂದು ಒಳ್ಳೆಯ ಅವಕಾಶ ಸಿಕ್ಕ ಹಾಗೆ ಎಂದು ಹೇಳಿದರು ತಪ್ಪಲ್ಲ. ಸಾಕಷ್ಟು ಕಲಾವಿದರ ಪ್ರತಿಭೆ ಧಾರಾವಾಹಿಗಳಿಂದ ಬೆಳಕಿಗೆ ಬೆಳ್ಳಿತೆರೆಯಲ್ಲಿ ಅವರಿಗೆ ಒಂದಷ್ಟು ಒಳ್ಳೆಯ ಅವಕಾಶಗಳನ್ನು ಸಹ ತಂದುಕೊಟ್ಟಿದೆ. ತಮಗೆ ಸಿಗುತ್ತಿರುವ ಅವಕಾಶವನ್ನು ಕಲಾವಿದರು ಕಲಾವಿದರು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಇದು ಡಿಪೆಂಡ್ ಆಗಿದೆ ಎಂದು ಹೇಳಬಹುದು. ಯಶ್ ಅವರು, ರಾಧಿಕಾ ಪಂಡಿತ್ ಅವರು ಸೀರಿಯಲ್ ಇಂದಲೇ ಕೆರಿಯರ್ ಶುರು ಮಾಡಿ, ಚಿತ್ರರಂಗದಲ್ಲಿ ಅಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಹಾಗಾಗಿ ಕಿರುತೆರೆ ಅನ್ನೋದು ಈಗ ದೊಡ್ಡ ಇಂಡಸ್ಟ್ರಿ.

ಕನ್ನಡ ಮಾತ್ರವಲ್ಲ ಈಗ ಎಲ್ಲಾ ಭಾಷೆಗಳಲ್ಲಿ ಕಿರುತೆರೆಯ ಪ್ರಾಧಾನ್ಯತೆ ಹೆಚ್ಚು. ಸಾಮಾನ್ಯವಾಗಿ ಸಿನಿಮಾಗಳು ಅಂದ್ರೆ ಥಿಯೇಟರ್ ನಲ್ಲಿ ನೋಡಿ ಖುಷಿ ಪಡ್ತೀವಿ. ಸಿನಿಮಾಗಳಿಗೆ ಇರುವ ಕ್ರೇಜ್ ಬೇರೆ. ಆದರೆ ಧಾರಾವಾಹಿಗಳು ಅಂದ್ರೆ ಅದಕ್ಕಿರುವ ಕ್ರೇಜ್ ಬೇರೆ ರೀತಿ. ಜನರು ಪ್ರತಿದಿನ ಮನೆಯಲ್ಲಿ ನೋಡೋ ಕಾರ್ಯಕ್ರಮ ಇದು. ಪ್ರತಿದಿನ ಧಾರಾವಾಹಿಯನ್ನ ಕಲಾವಿದರನ್ನ ನೋಡಿ, ಅವರ ಪಾತ್ರವನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳುವ ವೀಕ್ಷಕರು, ಧಾರಾವಾಹಿ ಕಥೆಗಳನ್ನ ತಮ್ಮ ಕಥೆ ಎಂದು ರಿಲೇಟ್ ಮಾಡಿಕೊಳ್ಳುತ್ತಾರೆ. ಪಾತ್ರಗಳನ್ನು ತಮ್ಮ ಫ್ಯಾಮಿಲಿ ಎನ್ನುವಂತೆ ಟ್ರೀಟ್ ಮಾಡುತ್ತಾರೆ. ಹಾಗಾಗಿ ಕಿರುತೆರೆಯ ಪಾತ್ರಗಳು ಜನರ ಜೊತೆಗೆ ಹೆಚ್ಚಾಗಿ ಕನೆಕ್ಟ್ ಆಗುತ್ತದೆ. ಈ ಕಾರಣಕ್ಕೆ ಕಿರುತೆರೆ ಕಲಾವಿದರಿಗೆ ಹೆಚ್ಚು ಬೇಡಿಕೆ ಕೂಡ ಇರುತ್ತದೆ..
ಹಾಗಾಗಿ ಹೆಚ್ಚು ಧಾರಾವಾಹಿಗಳು ಕೂಡ ಶುರುವಾಗುತ್ತದೆ. ಇದೇ ನಿಟ್ಟಿನಲ್ಲಿ ಇತ್ತೀಚೆಗೆ ಶುರುವಾಗಿರುವ ಹೊಸ ಕಥೆ ಭಾರ್ಗವಿ ಎಲ್.ಎಲ್.ಬಿ. ಇದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಿರುವ ಹೊಸ ಕಥೆ. ಸ್ವಾಭಿಮಾನಿ ಹುಡುಗಿ ಭಾರ್ಗವಿಯ ಕಥೆ. ಈ ಧಾರಾವಾಹಿಯಲ್ಲಿ ನಾಯಕಿ ಭಾರ್ಗವಿ ಪಾತ್ರದಲ್ಲಿ ಅಮೃತಧಾರೆ ಧಾರವಾಹಿಯಲ್ಲಿ ಮೊದಲು ಮಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದ ರಾಧಾ ಭಗವತಿ ಅವರು ನಟಿಸುತ್ತಿದ್ದಾರೆ. ಇನ್ನು ಅರುಣಾ ಬಾಲರಾಜ್ ಅವರು ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಂದೆಯ ಪಾತ್ರದಲ್ಲಿ ಅಮೃತಧಾರೆಯಲ್ಲಿ ವಿಲ್ಲನ್ ರಾಜೇಂದ್ರ ಭೂಪತಿ ಪಾತ್ರದಲ್ಲಿ ನಟಿಸುತ್ತಿರುವವರು ನಟಿಸುತ್ತಿದ್ದಾರೆ. ಇನ್ನು ವಿಲ್ಲನ್ ಆಗಿ ಲಕ್ಷಣ ಧಾರಾವಾಹಿಯಲ್ಲಿ ನಟಿಸಿದ್ದ ಭಾನು ಅವರು ನಟಿಸುತ್ತಿದ್ದಾರೆ.

ಈ ಧಾರಾವಾಹಿಯಲ್ಲಿ ಭಾರ್ಗವಿಗೆ ನಾಯಕನಾಗಿರುವ ಹೀರೋ, ವಿಲ್ಲನ್ ಮಗ. ಹೀರೋ ತಂದೆಯೇ ಭಾರ್ಗವಿ ಲೈಫ್ ನಲ್ಲಿ ವಿಲ್ಲನ್ ಲಾಯರ್. ಭಾರ್ಗವಿಯ ತಂದೆಗೆ ಈ ಹಿರಿಯ ಲಾಯರ್ ಕೋರ್ಟ್ ನಲ್ಲಿ ಅವಮಾನ ಮಾಡಿರುತ್ತಾರೆ. ತನ್ನ ತಂದೆಗೆ ಅವಮಾನ ಆದ ಕಡೆಯಲ್ಲೇ ಮತ್ತೆ ಅವರು ತಲೆ ಎತ್ತಿ ನಿಲ್ಲುವ ಹಾಗೆ ಮಾಡಬೇಕು ಎನ್ನುವುದು ಭಾರ್ಗವಿಯ ಕನಸು. ಅದಕ್ಕಾಗಿ ತಾನು ಲಾಯರ್ ಆಗಿದ್ದಾಳೆ. ಈಗ ಅವಳಿಗೆ ಸಿಕ್ಕಿರುವ ಮೊದಲ ಕೇಸ್ ವಿಲ್ಲನ್ ಆಗಿರುವ ಹಿರಿಯ ಲಾಯರ್ ವಿರುದ್ಧ ಆಗಿದೆ. ಇತ್ತ ಹೀರೊಗೆ ತನ್ನ ತಂದೆಯೇ ಹೀರೋ, ತಂದೆಯ ಶತ್ರುಗಳೆಲ್ಲ ತನಗೂ ಶತ್ರುಗಳು ಎಂದುಕೊಂಡಿದ್ದಾನೆ. ಆದರೆ ಗೊತ್ತಿಲ್ಲದೇ, ತನ್ನ ತಂದೆ ವಿರುದ್ಧ ವಾದ ಮಾಡಲಿರುವ ಭಾರ್ಗವಿಯ ಪ್ರೀತಿಯಲ್ಲಿ ಬಿಡಿದ್ದಾನೆ. ಈ ರೀತಿಯಾಗಿ ಶುರುವಾಗಿರುವ ಇವರ ಲವ್ ಸ್ಟೋರಿ ಹೇಗೆ ಸಾಗುತ್ತದೆ ಎಂದು ಕಾದು ನೋಡಬೇಕಿದೆ.

ಭಾರ್ಗವಿ ಎಲ್.ಎಲ್.ಬಿ ಧಾರಾವಾಹಿ ಶುರುವಿನಿಂದ ಚೆನ್ನಾಗಿ ಸಾಗುತ್ತಿದೆ. ಸ್ವಾಭಿಮಾನಿ ಹುಡುಗಿಯ ಕಥೆ ಎನ್ನುವುದರ ಜೊತೆಗೆ, ನಾಯಕಿಯ ಪಾತ್ರ ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಹೀರೋ ಪಾತ್ರ ಕೂಡ ಅಷ್ಟೇ ಚೆನ್ನಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರಿಗೆ ಒಳ್ಳೆಯ ಸಪೋರ್ಟ್ ಸಿಗುತ್ತಿದೆ. ಈ ಧಾರಾವಾಹಿಯ ಹೀರೋ ಪಾತ್ರದಲ್ಲಿ ನಟಿಸುತ್ತಿರುವುದು ಮನೋಜ್ ಕುಮಾರ್. ಇವರು ಅಪ್ಪಟ ಕನ್ನಡದ ಹುಡುಗ, ಈಗಾಗಲೇ ಒಂದೆರಡು ಧಾರಾವಾಹಿ ಗಳಲ್ಲಿ ನಟಿಸಿದ್ದಾರೆ, ಆದರೆ ಕನ್ನಡದಲ್ಲಿ ಇದೇ ಇವರ ಮೊದಲ ಧಾರಾವಾಹಿ. ನೋಡಲು ಹ್ಯಾಂಡ್ಸಮ್ ಆಗಿರುವ ಮನೋಜ್ ಅವರ ಬಗ್ಗೆ ಹೇಳುವುದಾದರೆ, ಇವರು ಓದಿರುವುದು ಫಾರ್ಮಸಿಟಿಕಲ್ ಸೈನ್ಸ್..
ಅದೇ ಫೀಲ್ಡ್ ನಲ್ಲಿ ಕೆಲಸಕ್ಕೆ ಸೇರಿದ್ದರಂತೆ. ಆದರೆ ಇವರು ಕೆಲಸಕ್ಕೆ ಸ್ಟೈಲಿಶ್ ಆಗಿ ಡ್ರೆಸ್ ಮಾಡಿಕೊಂಡು ಹೋಗುವ ಹಾಗಿರಲಿಲ್ಲ. ಆ ರೀತಿ ಹೋದರೆ, ಹೀಗೆಲ್ಲಾ ಇರಬೇಡಿ ಎಂದು ಸಹ ಹೇಳುತ್ತಿದ್ದರಂತೆ. ಹಾಗಾಗಿ ಕೆಲಸಕ್ಕೆ ಹೋಗುವುದಕ್ಕೆ ಬೇಸರವಾಗಿ, ಕಂಪನಿ ಕೆಲಸ ಬಿಟ್ಟು, ನಟನೆ ಶುರು ಮಾಡಿದರು. ತೆಲುಗಿನಲ್ಲಿ ಕಾರ್ತಿಕ ದೀಪಮ್ ಧಾರವಾಹಿಯಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಮನೋಜ್ ಕುಮಾರ್ ಪರಿಚಯ ಎಲ್ಲರಿಗೂ ಇಷ್ಟು. ಎರಡು ಧಾರಾವಾಹಿಗಳ ಮೂಲಕ ಒಳ್ಳೆಯ ಫ್ಯಾನ್ ಬೇಸ್ ಕೂಡ ಹೊಂದಿದ್ದಾರೆ. ಇನ್ನು ಕನ್ನಡದಲ್ಲಿ ಇವರು ಹೆಚ್ಚು ಫೇಮಸ್ ಆಗಿದ್ದು, ಮಲ್ಲಮ್ಮ ಟ್ಯಾಕ್ಸ್ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ. ಇವರ ಮಾತುಗಳು ಎಲ್ಲರಿಗೂ ಸಹ ಸಖತ್ ಇಷ್ಟವಾಗಿತ್ತು. ಇದೀಗ ಕನ್ನಡ ಕಿರುತೆರೆಗೆ ಭಾರ್ಗವಿ ಎಲ್.ಎಲ್.ಬಿ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

ಮೊದಲ ಧಾರಾವಾಹಿ ಶುರುವಾಗಿ ಕೆಲವು ದಿನಗಳಲ್ಲೇ ಜನರಿಗೆ ಇವರು ತುಂಬಾ ಇಷ್ಟವಾಗಿದ್ದಾರೆ. ಮನೋಜ್ ಕುಮಾರ್ ಅವರ ಪಾತ್ರ ಮುಂದಿನ ದಿನಗಳಲ್ಲಿ ಹೇಗೆ ಇಷ್ಟವಾಗುತ್ತದೆ, ಭಾರ್ಗವಿ ಜೊತೆಗೆ ಇವರ ಲವ್ ಸ್ಟೋರಿ ಹೇಗೆ ಮುಂದುವರೆಯುತ್ತದೆ ಎಂದು ಕಾದು ನೋಡಬೇಕಿದೆ. ಇನ್ನು ಭಾರ್ಗವಿ ಪಾತ್ರದಲ್ಲಿ ನಟಿಸುತ್ತಿರುವ ರಾಧಾ ಭಗವತಿ ಅವರು ನಾಯಕಿಯಾಗಿ ನಟಿಸುತ್ತಿರುವ ಮೊದಲ ಧಾರಾವಾಹಿ ಇದು. ಮೊದಲಿಗೆ ರಾಮಾಚಾರಿ ಧಾರಾವಾಹಿಯಲ್ಲಿ ಹೀರೋ ತಂಗಿ ಶ್ರುತಿ ಪಾತ್ರ, ನಂತರ ಅಮೃತಧಾರೆಯಲ್ಲಿ ಮಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದರು, ಮಲ್ಲಿ ಪಾತ್ರ ಕೂಡ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು, ಭಾರ್ಗವಿ ಆಗಿ ಇವರ ಮುಂದಿನ ಜರ್ನಿ ಹೇಗೆ ಸಾಗುತ್ತದೆ ಎಂದು ಕಾದು ನೋಡಬೇಕಿದೆ.