ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 714ರ ಎಪಿಸೋಡ್ ಕಥೆ ಇಲ್ಲಿದೆ. ಸೊಸೆಯನ್ನು ಕೆಲಸದಿಂದ ತೆಗೆದ ವಿಚಾರವಾಗಿ ನ್ಯಾಯ ಕೇಳಲು ಕುಸುಮಾ ಹಾಗೂ ಧರ್ಮರಾಜ್ ಇಬ್ಬರೂ ಕನ್ನಿಕಾ ಆಫೀಸಿಗೆ ಬರುತ್ತಾರೆ. ಆದರೆ ಅಲ್ಲಿ ಕನ್ನಿಕಾ ಬೇಕಂತಲೇ ತನ್ನ ಚೇಂಬರ್ನಲ್ಲಿದ್ದ ಕುರ್ಚಿಗಳನ್ನು ತೆಗೆಸಿ ಇಬ್ಬರಿಗೂ ಅವಮಾನ ಮಾಡುತ್ತಾಳೆ. ಕುಸುಮಾಳನ್ನು ಆಫೀಸಿನಿಂದ ಹೊರಗೆ ತಳ್ಳಲು ಪ್ರಯತ್ನಿಸುವಾಗ ಭಾಗ್ಯಲಕ್ಷ್ಮೀ ಧಾರಾವಾಹಿಯ ಪ್ರಮುಖ ಪಾತ್ರ ಭಾಗ್ಯಾ ಬಂದು ಅತ್ತೆಯನ್ನು ಹಿಡಿದುಕೊಳ್ಳುತ್ತಾಳೆ…
ಅತ್ತೆ ಹಾಗೂ ಮಾವನನ್ನು ಅವಮಾನ ಮಾಡಿದ ಕನ್ನಿಕಾಗೆ ಭಾಗ್ಯಾ ಎಚ್ಚರಿಕೆ ನೀಡುತ್ತಾಳೆ. ನೀವು ಗತಿಗೆಟ್ಟವರು, ಮಾನಗೆಟ್ಟವರು ಎಂದು ಕನ್ನಿಕಾ ಹೇಳುವ ಮಾತಿಗೆ ಕೋಪಗೊಳ್ಳುವ ಭಾಗ್ಯಾ, ಅವಳ ಕೆನ್ನೆಗೆ ಬಾರಿಸುತ್ತಾಳೆ. ಅವಮಾನ ಮಾಡಲು ಪ್ರಯತ್ನಿಸಿದ ಕನ್ನಿಕಾಗೆ ಭಾಗ್ಯಾಳಿಂದ ಎಲ್ಲರೆದುರು ಅವಮಾನವಾಗುತ್ತದೆ. ಎಲ್ಲರೆದುರು ಭಾಗ್ಯಾ ತನ್ನ ಕೆನ್ನೆಗೆ ಹೊಡೆದದ್ದಕ್ಕೆ ಕನ್ನಿಕಾ ಕೋಪಗೊಳ್ಳುತ್ತಾಳೆ. ಆದರೆ ಭಾಗ್ಯಾ, ಕನ್ನಿಕಾಗೆ ಎಚ್ಚರಿಸುತ್ತಾಳೆ. ಮತ್ತೊಮ್ಮೆ ತನ್ನ ವಿಚಾರಕ್ಕೆ ಬರದಂತೆ ಹೇಳುತ್ತಾಳೆ. ಅಲ್ಲಿ ನಡೆಯುತ್ತಿದ್ದನ್ನೆಲ್ಲಾ ನೋಡುತ್ತಾ ನಿಂತಿದ್ದ ಸಿಬ್ಬಂದಿಯನ್ನು ಉದ್ದೇಶಿಸಿ ಭಾಗ್ಯಾ, ಇಷ್ಟು ಹೊತ್ತು ನಮ್ಮ ಅತ್ತೆ ಮಾವನಿಗೆ ಅವಮಾನ ಮಾಡುವುದನ್ನು ನೋಡುತ್ತಾ ನಿಂತಿರುವ ನಿಮಗೆಲ್ಲಾ ಮಾನವೀಯತೆ ಇಲ್ಲವಾ? ಈ ಕನ್ನಿಕಾ ಎಲ್ಲರಿಗೂ ಒಳ್ಳೆಯದು ಮಾಡುತ್ತಾಳೆ ಎಂದು ನೀವು ತಪ್ಪು ತಿಳಿದಿದ್ದೀರಿ, ನಿಮ್ಮೆಲ್ಲರನ್ನೂ ತನ್ನ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾಳೆ. ಇಂದು ನಾನು, ನಾಳೆ ನಿಮ್ಮೆಲ್ಲರ ಸರದಿ ಎಂದು ತಿಳಿ ಹೇಳುತ್ತಾಳೆ.
ಭಾಗ್ಯಲಕ್ಷ್ಮೀ ಧಾರಾವಾಹಿಯ ಹೊಸ ಎಪಿಸೋಡಿನಲ್ಲಿ ಕನ್ನಿಕಾ ಭಾಗ್ಯಾಳ ಮೇಲೆ ಕೋಪದಿಂದ ಆಕ್ರೋಶ ವ್ಯಕ್ತಪಡಿಸುತ್ತಾಳೆ. “ನನ್ನ ಆಫೀಸಿಗೆ ಬಂದು ನನ್ನ ಮೇಲೆ ಕೈ ಮಾಡುತ್ತೀಯ, ಇನ್ಮುಂದೆ ನಿನಗೆ ಎಲ್ಲೂ ಕೆಲಸ ಸಿಗದಂತೆ ಮಾಡುತ್ತೇನೆ” ಎಂದು ಕನ್ನಿಕಾ ಆವಾಜ್ ಹಾಕುತ್ತಾಳೆ. ಆದರೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಮುಖ್ಯ ಪಾತ್ರ ಭಾಗ್ಯಾ ಇದಕ್ಕೆ ಹೆದರದೆಯೇ “ನಿನ್ನಿಂದ ಸಾಧ್ಯವೇ ಇಲ್ಲ, ನಾನು ಸೋತಿದ್ದೇನೆ, ಸತ್ತಿಲ್ಲ. ಆದಷ್ಟು ಬೇಗ ನಾನು ಎದ್ದು ನಿಲ್ಲುತ್ತೇನೆ, ನೋಡುತ್ತಿರು!” ಎಂದು ಸವಾಲು ಹಾಕುತ್ತಾಳೆ. ಅದರ ಜೊತೆಗೆ ಕುಸುಮಾ ಕೂಡಾ “ನನ್ನ ಸೊಸೆ ಭಾಗ್ಯಾ ಮುಂದೆ ನೀನೂ ಕೂಡಾ ತಲೆ ತಗ್ಗಿಸಿ ನಿಲ್ಲುತ್ತೀಯ, ಆ ದಿನ ಹತ್ತಿರದಲ್ಲೇ ಇದೆ” ಎಂದು ಕನ್ನಿಕಾಗೆ ಚಾಲೆಂಜ್ ಮಾಡುತ್ತಾಳೆ!
ಮನೆಯಲ್ಲಿ ತನ್ವಿ, ತನ್ನ ಫ್ರೆಂಡ್ಸ್ ಹೇಳಿದ್ದನ್ನೇ ನೆನಪಿಸಿಕೊಂಡು ಕಣ್ಣೀರಿಡುತ್ತಾಳೆ. ಅಕ್ಕನನ್ನು ನೋಡಿ, ಗುಂಡ ಏನಾಯ್ತು ಎಂದು ಕೇಳುತ್ತಾನೆ, ಆದರೆ ತನ್ವಿ ಏನೂ ಹೇಳುವುದಿಲ್ಲ. ಮಕ್ಕಳಿಬ್ಬರನ್ನೂ ಭಾಗ್ಯಾ ಊಟಕ್ಕೆ ಕರೆಯಲು ಬರುತ್ತಾಳೆ. ಆಗ ತನ್ವಿಯನ್ನು ನೋಡಿ ಏಕೆ ಅಳುತ್ತಿರುವೆ ಎಂದು ಕೇಳುತ್ತಾಳೆ. ತನ್ವಿ, ತನಗೆ ಅವಮಾನ ಆದ ವಿಚಾರವನ್ನು ಅಮ್ಮನ ಬಳಿ ಹೇಳಿಕೊಳ್ಳುತ್ತಾಳೆ. ಇಷ್ಟು ಚಿಕ್ಕ ವಿಚಾರಕ್ಕೆ ಅಳಬೇಡ, ನಾಳೆಯೇ ನಿನ್ನ ಬರ್ತ್ಡೇ ತಾನೇ? ನಿನ್ನ ಎಲ್ಲಾ ಫ್ರೆಂಡ್ಸ್ ಮನೆಗೆ ಕರೆದು ಪಾರ್ಟಿ ಕೊಡುತ್ತೇನೆ, ಅವರಿಗೆ ಬರಲು ಹೇಳು, ಜೊತೆಗೆ ನಿನಗೊಂದು ಗಿಫ್ಟ್ ಕೂಡಾ ನೀಡುತ್ತೇನೆ ಎಂದು ಹೇಳುತ್ತಾಳೆ. ಅದನ್ನು ಕೇಳಿ ತನ್ವಿ ಖುಷಿಯಾಗುತ್ತಾಳೆ.
ಮರುದಿನ ಎಲ್ಲರೂ ತನ್ವಿ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಾರೆ. ಪಾರ್ಟಿ ಅರೇಂಜ್ ಮಾಡುವಷ್ಟು ಭಾಗ್ಯಾ ಬಳಿ ದುಡ್ಡು ಇರುವುದಿಲ್ಲ. ಏನು ಮಾಡುವುದು, ಕೆಲಸ ಕೂಡಾ ಇಲ್ಲ, ಕೈಯಲ್ಲಿ ದುಡ್ಡು ಕೂಡಾ ಇಲ್ಲ ಎಂದು ಯೋಚಿಸುತ್ತಾಳೆ. ಪೂಜಾ, ತನ್ನ ಅಕ್ಕನನ್ನು ಸಮಾಧಾನ ಮಾಡುತ್ತಾಳೆ. ಮಕ್ಕಳ ಆಸೆಯನ್ನು ನೆರವೇರಿಸಬೇಕು, ಅದಕ್ಕಾಗಿ ನಾನು ಕೆಲಸ ಹುಡುಕಲೇಬೇಕು ಎಂದು ಭಾಗ್ಯಾ ನಿರ್ಧರಿಸಿ ಕೆಲಸ ಹುಡುಕಲು ಹೊರಡುತ್ತಾಳೆ.
ಮತ್ತೊಂದೆಡೆ ತಾಂಡವ್ಗೆ ಇಂದು ತನ್ವಿ ಬರ್ತ್ಡೇ ಎಂದು ನೆನಪಾಗುತ್ತದೆ. ಈಗಾಗಲೇ ಭಾಗ್ಯಲಕ್ಷ್ಮೀ ಧಾರಾವಾಹಿನಲ್ಲಿ ಭಾಗ್ಯಾ ಅವಳಿಗೆ ವಿಶ್ ಮಾಡಿರುತ್ತಾಳೆ. ನಾನೂ ವಿಶ್ ಮಾಡಬೇಕು ಎಂದು ಮೊಬೈಲ್ ತೆಗೆಯುವಷ್ಟರಲ್ಲಿ ಶ್ರೇಷ್ಠಾ ಬಂದು ಮೊಬೈಲನ್ನು ಕಸಿದುಕೊಳ್ಳುತ್ತಾಳೆ. ಇಂದು ತನ್ವಿ ಬರ್ತ್ಡೇ ಅಂತ ನನಗೆ ಚೆನ್ನಾಗಿ ಗೊತ್ತು. ಅದಕ್ಕೆ ನಾನು ಎಲ್ಲಾ ಪ್ಲ್ಯಾನ್ ಮಾಡಿದ್ದೇನೆ. ಮನೆಗೆ ಹೋಗೋಣ, ಇವತ್ತು ತನ್ವಿ ನನಗೆ ಅಮ್ಮ ಬೇಡ, ಅಪ್ಪನೇ ಬೇಕು ಎಂದು ನಿನ್ನ ಕಡೆ ಬಂದೇ ಬರುತ್ತಾಳೆ ಎನ್ನುತ್ತಾಳೆ. ಅದನ್ನು ಕೇಳಿ ತಾಂಡವ್ ಖುಷಿಯಾಗುತ್ತಾನೆ.
ಭಾಗ್ಯಾಗೆ ಕೆಲಸ ಸಿಗುತ್ತಾ? ತಾಂಡವ್ ಮಗಳ ಬರ್ತ್ಡೇ ಆಚರಿಸುತ್ತಾನಾ? ತನ್ವಿ ನಿಜಕ್ಕೂ ಅಪ್ಪನ ಕಡೆ ಬರುತ್ತಾಳಾ? ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.