ಸುರಕ್ಷಿತ ತಂಪುಪಾನೀಯ ಎಳನೀರು
ಎಳನೀರು ವಿಶ್ವದ ಸುರಕ್ಷಿತ ತಂಪು ಪಾನೀಯ ಎಂದು ಹೇಳಲಾಗುತ್ತದೆ. ಎಳನೀರು ಸೇವನೆ ದೇಹಕ್ಕೆ ಬಹಳ ಆರೋಗ್ಯಕರ. ಇದರಲ್ಲಿ ವಿಟಮಿನ್, ಫಾಸ್ಪರಸ್, ಪೊಟ್ಯಾಷಿಯಂ, ಮೆಗ್ನೇಷಿಯಂ, ಸೋಡಿಯಂ ಇರುವುದರಿಂದ ದೇಹದ ನಿರ್ಜಲೀಕರಣದಿಂದ ನಮ್ಮನ್ನು ರಕ್ಷಿಸುತ್ತದೆ. ಇದು ಶೀತ ಪ್ರಕೃತಿ ಹಾಗು ಮಧುರ ಗುಣಗಳಿಂದ ಕೂಡಿರುವುದರಿಂದ ಜೀರ್ಣಕಾರಿ ಹಾಗೂ ಹೃದಯಕ್ಕೆ ಒಳ್ಳೆಯದು.
ಎಳನೀರ ಸೇವನೆ ಪ್ರಯೋಜನ.
1. ದಿವಸಕ್ಕೆ ಎರಡು ಗ್ಲಾಸ್ ಎಳೆನೀರು ಕುಡಿಯುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ .
2. ಇದರಲ್ಲಿ ಕ್ಯಾಲ್ಷಿಯಂ ಹಾಗೂ ಮೆಗ್ನೀಶಿಯಂ ಇರುವುದರಿಂದ ನಮ್ಮ ಎಲುಬನ್ನು ಗಟ್ಟಿಗೊಳಿಸುತ್ತದೆ.
3. ಕೊಬ್ಬನ್ನು ಕರಗಿಸುವುದರಿಂದ ನಮ್ಮ ದೇಹದ ತೂಕವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ .
4. ನಮ್ಮ ದೇಹದಲ್ಲಿ ಇರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ .
5. ಇದು ಪಿತ್ತ ಪ್ರಕೃತಿ ಮನುಷ್ಯರಿಗೆ ಒಳ್ಳೆಯದು. ಇದು ಪಿತ್ತದೋಷವನ್ನು ಕಡಿಮೆಗೊಳಿಸುತ್ತದೆ. ಬಿಕ್ಕಳಿಕೆ ಹಾಗೂ ಆಸಿಡಿಟಿಯನ್ನು ಕಡಿಮೆಮಾಡುತ್ತದೆ. ಕಣ್ಣು, ಕೈ ಕಾಲು ಉರಿಯನ್ನು ಶಮನಗೊಳಿಸುತ್ತದೆ. ದೇಹವನ್ನು ತಂಪು ಗೊಳಿಸುತ್ತದೆ.
6. ಇದರಲ್ಲಿರುವ ಪೋಟಾಷಿಯಂ ನಿಂದ ಹಾರ್ಟ್ ಅಟ್ಯಾಕ್ ಬರುವ ಸಾಧ್ಯತೆ ಕಡಿಮೆ. ಬಿಪಿ ಹಾಗೂ ಕೊಲೆಸ್ಟ್ರಾಲನ್ನು ಕಡಿಮೆಗೊಳಿಸುತ್ತದೆ. ಯಕೃತ್ತಿ ಹಾಗೂ ಕಿಡ್ನಿ ಸ್ಟೋನ್ ಇರುವವರಿಗೆ ಕೂಡ ಇದು ಬೆಸ್ಟ
ಎಳನೀರು ಸೇವನೆಯ ಪ್ರಯೋಜನ

Leave a Comment
Leave a Comment