ನಟಿ ಕೀರ್ತಿ ಸುರೇಶ್ ಅವರ ಮದುವೆ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ನಿನ್ನೆ ಕೀರ್ತಿ ಸುರೇಶ್ ಅವರ ಮದುವೆ ನಡೆದಿದ್ದು, ಇಂದು ಕೀರ್ತಿ ಸುರೇಶ್ ಅವರು ತಮ್ಮ ಮದುವೆಯ ಸುಂದರವಾದ ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕೀರ್ತಿ ಸುರೇಶ್ ಅವರ ಮದುವೆಯ ಫೋಟೋಸ್ ಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಲ್ಲಾ ಸೆಲೆಬ್ರಿಟಿಗಳು ಸಹ ಕೀರ್ತಿ ಹಾಗೂ ಆಂಟೋನಿ ತಟ್ಟಿಲ್ ಇಬ್ಬರಿಗೂ ಸಂತೋಷದಿಂದ ವಿಶ್ ಮಾಡಿದ್ದಾರೆ. ಮದುವೆಯ ಸುಂದರವಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೀರ್ತಿ ಸುರೇಶ್ ಹಾಗೂ ಆಂಟೋನಿ ತಟ್ಟಿಲ್ ಇಬ್ಬರದ್ದು 15 ವರ್ಷಗಳ ಲವ್. ಇಬ್ಬರು ಅಷ್ಟು ವರ್ಷಗಳಿಂದ ರಿಲೇಶನ್ಷಿಪ್ ನಲ್ಲಿ ಇದ್ದರೂ ಸಹ ಈ ವಿಚಾರದ ಬಗ್ಗೆ ಎಲ್ಲಿಯೂ ಕೂಡ ಹೇಳಿಕೊಂಡಿರಲಿಲ್ಲ. ಮದುವೆ ಫಿಕ್ಸ್ ಆಗಿ, ಮದುವೆಯ ತಯಾರಿ ಎಲ್ಲವೂ ನಡೆಯುತ್ತಿದ್ದ ಹಾಗೆಯೇ ಮದುವೆಯ ವಿಷಯ ವೈರಲ್ ಆಗಿತ್ತು. ಇತ್ತೀಚೆಗೆ ತಿರುಪತಿಗೆ ತಂದೆ ತಾಯಿಯ ಜೊತೆಗೆ ಭೇಟಿ ನೀಡಿದ್ದ ಕೀರ್ತಿ ಸುರೇಶ್ ಅವರು ಮುಂದಿನ ತಿಂಗಳು ನನ್ನ ಮದುವೆ, ದೇವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಹೇಳಿದ್ದರು. ಇವರ ಮದುವೆಯ ಇನ್ವಿಟೇಶನ್ ಕಾರ್ಡ್ ಫೋಟೋ ಸಹ ವೈರಲ್ ಆಗಿತ್ತು.
ಗೋವಾದಲ್ಲಿ ಕೀರ್ತಿ ಸುರೇಶ್ ಹಾಗೂ ಆಂಟೋನಿ ತಟ್ಟಿಲ್ ಅವರ ಮದುವೆ ನಡೆಯಲಿದೆ ಎನ್ನುವ ವಿಷಯ ತಿಳಿದುಬಂದಿತ್ತು. 3 ದಿನಗಳ ಹಿಂದೆ ಕೀರ್ತಿ ಸುರೇಶ್ ಅವರು ಗೋವಾಗೆ ಹೋಗುತ್ತಿರುವ ಫ್ಲೈಟ್ ಟಿಕೆಟ್ ಗಳ ಫೋಟೋ ಹಂಚಿಕೊಂಡಿದ್ದರು. ನಿನ್ನೆ ಈ ಜೋಡಿಯ ಮದುವೆ ನಡೆದಿದೆ. ಇಂದು ಕೀರ್ತಿ ಸುರೇಶ್ ಅವರು ತಮ್ಮ ಮದುವೆಯ ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದು, ಅಪ್ಪಟ ಹಿಂದೂ ಸಂಪ್ರದಾಯದ ಅನುಸಾರ, ಕೀರ್ತಿ ಸುರೇಶ್ ಹಾಗೂ ಆಂಟೋನಿ ತಟ್ಟಿಲ್ ಅವರ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿದೆ. ಮದುವೆಯ ಸುಂದರವಾದ ಫೋಟೋಗಳು ವೈರಲ್ ಆಗಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಕೀರ್ತಿ ಸುರೇಶ್ ಅವರ ಮದುವೆಯು ಬಹಳ ಸುಂದರವಾಗಿ ಒಂದು ಕನಸಿನಂತೆ ನಡೆದಿದೆ. ಈ ಮದುವೆಯ ಫೋಟೋಸ್ ಗಳನ್ನು ನೋಡಿ ಎಲ್ಲಾ ವೀಕ್ಷಕರು ಸಹ ವೈರಲ್ ಆಗಿದ್ದು, ಸಮಂತಾ, ಐಶ್ವರ್ಯ ಲಕ್ಷ್ಮೀ ಸೇರಿದಂತೆ ಎಲ್ಲಾ ಸೆಲೆಬ್ರಿಟಿಗಳು ಕೂಡ ಈ ಫೋಟೋಸ್ ಗಳನ್ನು ಸ್ಟೋರಿಯಲ್ಲಿ ಶೇರ್ ಮಾಡಿ, ಹೊಸ ಜೋಡಿಗೆ ವಿಶ್ ಮಾಡುತ್ತಿದ್ದಾರೆ. ಇನ್ನು ಕೀರ್ತಿ ಸುರೇಶ್ ಅವರು ಮದುವೆ ಆಗಿರುವ ವ್ಯಕ್ತಿ ಆಂಟೋನಿ ತಟ್ಟಿಲ್. ಇವರು ದೊಡ್ಡ ಉದ್ಯಮಿ ಆಗಿದ್ದಾರೆ. ದುಬೈನಲ್ಲಿ ದೊಡ್ಡ ಬ್ಯುಸಿನೆಸ್ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಕೊಚ್ಚಿಯಲ್ಲಿ ರೆಸಾರ್ಟ್ ಗಳನ್ನು ಸಹ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ..
ಒಳ್ಳೆಯ ಹುಡುಗನ ಜೊತೆಗೆ ಇವರ ಮದುವೆ ನಡೆದಿದೆ. ಇವರಿಬ್ಬರದ್ದು ಬಹಳ ಹಳೆಯ ಲವ್ ಸ್ಟೋರಿ. ಕೀರ್ತಿ ಸುರೇಶ್ ಅವರ ಬಳಿ ಮುದ್ದಾದ ಶ್ವಾನ ಇದೆ. ಅದಕ್ಕೆ NyKe ಎಂದು ಹೆಸರು ಇಟ್ಟಿದ್ದಾರೆ. ಈ ಹೆಸರನ್ನು ಅವರಿಬ್ಬರ ಹೆಸರನ್ನು ಸೇರಿಸಿ ಇಡಲಾಗಿದೆ, ಆಂಟೋನಿ ಹೆಸರಿನಿಂದ Ny, ಕೀರ್ತಿ ಹೆಸರಿನಿಂದ Ke ಈ ನಾಲ್ಕು ಅಕ್ಷರಗಳನ್ನು ತೆಗೆದುಕೊಂಡು, ಅವರ ಮುದ್ದಿನ ಶ್ವಾನಕ್ಕೆ NyKe ಎಂದು ಹೆಸರು ಇಟ್ಟಿದ್ದಾರೆ. ಈ ಹೊಸ ಜೋಡಿಯ ಪ್ರೀತಿ ಯಾವಾಗಲೂ ಹೀಗೆ ಇರಲಿ ಎನ್ನುವುದೇ ಎಲ್ಲರ ಹಾರೈಕೆ ಆಗಿದೆ. ನಾವು ಕೂಡ ಕೀರ್ತಿ ಸುರೇಶ್ ಹಾಗೂ ಆಂಟೋನಿ ತಟ್ಟಿಲ್ ಜೋಡಿಗೆ ಶುಭ ಹಾರೈಸೋಣ.