ಟಿಕ್ ಟಾಕ್, ರೀಲ್ಸ್ ಗಳಿಂದ ವೈರಲ್ ಆಗಿ ಅನಂತರ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿ ಕೆಲವೊಂದು ಕಾಂಟ್ರವರ್ಸಿಗಳಿಂದ ಸುದ್ದಿಯಾಗಿದ್ದ ಸೋನು ಗೌಡ ಇದೀಗ ಸುದ್ದಿಯಲ್ಲಿದ್ದಾಳೆ. ಈಕೆಯ ಬಗ್ಗೆ ಯೂಟ್ಯೂಬ್ ನಲ್ಲಿ ಸಾಕಷ್ಟು ಟ್ರೋಲ್ ವಿಡಿಯೋಗಳು ಹರಿದಾಡುತ್ತಿದ್ದು, ಇದರಿಂದ ಕಂಗಾಲಾದ ಸೋನು ವಿಡಿಯೋವೊಂದನ್ನು ಹಂಚಿಕೊಂಡಿದ್ದಾಳೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಗೊತ್ತಾ?
ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಸೋನು ಗೌಡ, ಯೂಟ್ಯೂಬ್ ಇನ್ಸ್ಟಾಗ್ರಾಂನಲ್ಲಿ ನನ್ನಬಗ್ಗೆ ಕೆಟ್ಟ ಕಾಮೆಂಟ್ಗಳು ಬರುತ್ತಿದೆ. ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿದೆ ನಾನು ಯಾರೊಟ್ಟಿಗೂ ಶೇರ್ ಮಾಡಿಕೊಳ್ಳುವುದಿಲ್ಲ. ಒಂದು ಲಿಮಿಟ್ ವರೆಗೂ ಓಕೆ, ಆದರೆ ಅದನ್ನೂ ಮೀರಿ ನನ್ನ ಬಗ್ಗೆ ಮಾತನಾಡಿದರೆ ಹೇಗೆ ಸಹಿಸಿಕೊಳ್ಳುವುದು’ ಎಂದಿದ್ದಾಳೆ.
ಇತ್ತೀಚೆಗೆ ನನ್ನ ತಾಯಿ ಯುಟ್ಯೂಬ್ ಚಾನೆಲ್ ಹೆಚ್ಚು ನೋಡುತ್ತಾರೆ. ನನ್ನ ಬಗ್ಗೆ ಒಂದೆರಡು ಟ್ರೋಲ್ ವಿಡಿಯೋ ನೋಡುತ್ತಿದ್ದರು. ಕೆಟ್ಟ ಕಾಮೆಂಟ್ ಮತ್ತು ಕೆಟ್ಟ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಮಾತಿಗೆ ಮುಂಚೆ ಬೀಪ್ ಪದಗಳನ್ನು ಬಳಸಿದ್ದಾರೆ. ಆ ವಿಡಿಯೋ ನಾನು ಕೇಳಿಸಿಕೊಂಡರೆ ಬೇಸರ ಆಗುತ್ತದೆ ಅಂತ ಸೌಂಡ್ ಕಡಿಮೆ ಮಾಡಿಕೊಂಡು ನೋಡುತ್ತಾ ಅಳುತ್ತಾರೆ’ ಎಂದಿದ್ದಾಳೆ.
ಇದೆಲ್ಲ ನನಗೆ ಕೇಳಿಸುತ್ತಿದ್ದರೂ ಸುಮ್ಮನಿದ್ದೆ. ನನ್ನಿಂದ ನನ್ನ ಕುಟುಂಬ ನೋವು ಪಡುತ್ತಿದೆ. ದಯವಿಟ್ಟು ಹೀಗೆ ಮಾಡಬೇಡಿ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ, ನಾನು 20 ವರ್ಷದ ಹುಡುಗಿ ಇದ್ದಾಗ ಮಾಡಿದ ತಪ್ಪಿಗೆ ಈಗಲೂ ಯಾಕೆ ಶಿಕ್ಷೆ ಕೊಡುತ್ತಿದ್ದೀರಾ?’ ಎನ್ನುತ್ತಾ ಸೋನು ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.