ಸೀಟ್ ಬೆಲ್ಟ್ ಕಡ್ಡಾಯಗೊಳಿಸಿ ದಂಡ ಪರಿಷ್ಕರಣೆಗೊಂಡ ಬೆನ್ನಲ್ಲೇ ಕಳಪೆ ಗುಣಮಟ್ಟ ಹೆಲ್ಮೆಟ್ ಮುಂದಾಗಿರುವ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು, ಇನ್ಮುಂದೆ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುವವರ ಮೇಲೆ ದಂಡ ಪ್ರಯೋಗಕ್ಕೆ ನಿರ್ಧರಿಸಿದ್ದಾರೆ.
ಐಎಸ್ಐ ಮುದ್ರೆ ಹೊಂದಿರುವ ಗುಣಮಟ್ಟದ ಹೆಲ್ಮೆಟ್ಗಳನ್ನೇ ಜನರು ಬಳಸಬೇಕು. ಕಳಪೆ ಅಥವಾ ಹಾಫ್ ಹೆಲ್ಮೆಟ್ ಬಗ್ಗೆ ಜಾಗೃತಿ ಅಭಿಯಾನ ಮುಗಿದ ಬಳಿಕ ತಪ್ಪು ಮಾಡಿದವರಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಹಾಫ್ ಅಥವಾ ಕಳಪೆ ಹೆಲ್ಮೆಟ್ ಧರಿಸಿದರೆ ಅಂಥವರಿಗೆ ಹೆಲ್ಮೆಟ್ ಧರಿಸಿಲ್ಲ ಎಂದು ಪರಿಗಣಿಸಿ ಪೊಲೀಸರು 500 ದಂಡ ವಿಧಿಸಲು ಮುಂದಾಗಿದ್ದಾರೆ.
ಮೋಟಾರು ಕಾಯ್ದೆ 129 ಐಎಂಎ ಪ್ರಕಾರ ಬೈಕ್ ಸವಾರ ಹೆಲ್ಮೆಟ್ ಧರಿಸದಿರುವುದು ತಪ್ಪು ಎಂದು ಹೇಳುತ್ತದೆ. ಈ ತಪ್ಪಿಗೆ ಸೆಕ್ಷನ್ 194ಡಿ ಅನ್ವಯ .500 ದಂಡ ವಿಧಿಸಲಾಗುತ್ತದೆ. ಅದೇ ರೀತಿ ಹಿಂಬದಿ ಸವಾರನಿಗೆ ಕರ್ನಾಟಕ ಮೋಟಾರು ವಾಹನ ನಿಯಮ-1 ಅನ್ವಯ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.