ಸಧ್ಯಕ್ಕೆ ಸೌತ್ ಇಂಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರೋ ಜೋಡಿ ಅಂದ್ರೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ. ಇವರಿಬ್ಬರ ಬಗ್ಗೆ ನಾವು ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಸಿನಿಮಾಗಿಂತ ಹೆಚ್ಚಾಗಿ ಇವರಿಬ್ಬರು ಸುದ್ದಿಯಾಗೋದೆ ಡೇಟಿಂಗ್ ಕಾರಣಕ್ಕೆ. ಇತ್ತೀಚೆಗೆ ವಿಜಯ್ ದೇವರಕೊಂಡ ಅವರು ಸಂದರ್ಶನ ಒಂದರಲ್ಲಿ ತಾವು ಸಿಂಗಲ್ ಅಲ್ಲ ಎಂದು ಹೇಳಿ ಡೇಟಿಂಗ್ ಮಾಡಿತ್ತಿರುವುದಾಗಿ ರಿವೀಲ್ ಮಾಡಿದ್ದರು. ಈ ರೀತಿ ಹೇಳಿಕೆ ಕೊಟ್ಟ ಬೆನ್ನಲ್ಲೇ ಇದೀಗ ವಿಜಯ್ ಹಾಗೂ ರಶ್ಮಿಕಾ ಇಬ್ಬರು ಲಂಚ್ ಡೇಟ್ ಗೆ ಹೋಗಿರುವ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಹೌದು, ವಿಜಯ್ ಹಾಗೂ ರಶ್ಮಿಕಾ ಬಗ್ಗೆ ಆಗಾಗ ಹೊಸ ಹೊಸ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ. ಇವರಿಬ್ಬರ ರಿಲೇಶನ್ಷಿಪ್, ಡೇಟಿಂಗ್ ಇದೆಲ್ಲದರ ಬಗ್ಗೆ ಆಗಾಗ ಅಭಿಮಾನಿಗಳು ಸಹ ಅಪ್ಡೇಟ್ ನೀಡುತ್ತಾರೆ. ಜೊತೆಗೆ ಹಲವು ಬಾರಿ ಇವರಿಬ್ಬರು ಹಂಚಿಕೊಳ್ಳುವ ಫೋಟೋಗಳಲ್ಲಿ ಸಾಮ್ಯತೆ ಇರುವುದನ್ನು ಸಹ ನಾವು ಗಮನಿಸಿದ್ದೇವೆ. ಇದನ್ನೆಲ್ಲ ನೋಡಿ ನೆಟ್ಟಿಗರು ಈ ಜೋಡಿ ಬೇಗ ಒಂದಾಗಲಿ, ಮದುವೆ ಬಗ್ಗೆ ಹೊಸ ಅಪ್ಡೇಟ್ ಕೊಡಲಿ ಎಂದು ಕಾಯುತ್ತಿದ್ದಾರೆ. ರಶ್ಮಿಕಾ ಅವರು ತಮ್ಮ ರಿಲೇಶನ್ಷಿಪ್ ಸ್ಟೇಟಸ್ ಬಗ್ಗೆ ಇದುವರೆಗೂ ಏನು ಹೇಳಿಕೊಂಡಿಲ್ಲ. ಆದರೆ ವಿಜಯ್ ದೇವರಕೊಂಡ ಮಾತ್ರ ತಾವು ಸಿಂಗಲ್ ಅಲ್ಲ ಎಂದಿದ್ದಾರೆ.

ಇತ್ತೀಚೆಗೆ ಕರ್ಲಿ ಟೇಲ್ಸ್ ಇಂಟರ್ವ್ಯೂನಲ್ಲಿ ವಿಜಯ್ ದೇವರಕೊಂಡ ಭಾಗವಹಿಸಿದ್ದರು. ಆಗ ಅನೇಕ ವಿಚಾರಗಳು ಚರ್ಚೆಗೆ ಒಳಗಾದಾಗ, ನೀವಿನ್ನು ಸಿಂಗಲ್ ಆಗಿದ್ದೀರಾ ಎನ್ನುವ ಪ್ರಶ್ನೆ ಬಂದಾಗ ವಿಜಯ್ ದೇವರಕೊಂಡ ತಮಗೆ 34 ವರ್ಷವಾಗಿದೆ, ಇನ್ನು ಸಿಂಗಲ್ ಅಂತ ಹೇಳಿದ್ರೆ ಯಾರು ನಂಬಲ್ಲ ಎಂದಿದ್ದರು. ಜೊತೆಗೆ ತಾವು ಸಹನಟಿ ಜೊತೆಗೆ ಡೇಟಿಂಗ್ ಮಾಡುತ್ತಿರುವುದಾಗಿ ಕೂಡ ಹೇಳಿಕೊಂಡರು. ಆದರೆ ಆ ನಟಿ ಯಾರು ಎನ್ನುವುದನ್ನು ಮಾತ್ರ ರಿವೀಲ್ ಮಾಡಲಿಲ್ಲ. ನೆಟ್ಟಿಗರಿಗೆ ಈಗಾಗಲೇ ರಶ್ಮಿಕಾ ಜೊತೆಗೆ ವಿಜಯ್ ಡೇಟಿಂಗ್ ಮಾಡುತ್ತಿರುವ ವಿಚಾರ ಗೊತ್ತೇ ಇದೆ. ಹಾಗಾಗಿ ಎಲ್ಲರೂ ಅದು ರಶ್ಮಿಕಾ ಮಂದಣ್ಣ ಎಂದು ಗೆಸ್ ಮಾಡಿದ್ದಾರೆ.

ವಿಜಯ್ ಈ ರೀತಿ ಹೇಳಿಕೆ ಕೊಟ್ಟ ಬೆನ್ನಲ್ಲೇ ಇದೀಗ ಈ ಜೋಡಿ ಲಂಚ್ ಡೇಟ್ ಗೆ ಹೋಗಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಹೌದು, ವಿಜಯ್ ಹಾಗೂ ರಶ್ಮಿಕಾ ಒಂದು ರೆಸ್ಟೋರೆಂಟ್ ನಲ್ಲಿ ಮಧ್ಯಾಹ್ನದ ಊಟಕ್ಕೆ ಹೋಗಿದ್ದು, ಅಲ್ಲಿದ್ದ ಒಬ್ಬ ವ್ಯಕ್ತಿ ಇಬ್ಬರು ಊಟ ಮಾಡುತ್ತಿರುವ ಫೋಟೋ ಕ್ಲಿಕ್ಕಿಸಿ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ರಶ್ಮಿಕಾ ಅವರು ಬ್ಲೂ ಬಣ್ಣದ ಕ್ರಾಪ್ ಟಾಪ್ ಧರಿಸಿದ್ದಾರೆ, ಇನ್ನು ವಿಜಯ್ ಕ್ಯಾಶುವಲ್ ವೇರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಡೇಟಿಂಗ್ ರಿವೀಲ್ ಆಗುತ್ತಿದ್ದ ಹಾಗೆ ಇವರಿಬ್ಬರು ಈ ರೀತಿ ಲಂಚ್ ಮಾಡುತ್ತಿರುವುದು ನೆಟ್ಟಿಗರಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಇವರಿಬ್ಬರು ಭೇಟಿ ಆಗಿದ್ದು, ಗೀತಾ ಗೋವಿಂದಮ್ ಸಿನಿಮಾ ವೇಳೆ. ಇಬ್ಬರು ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಅದು. ಆಗಿನಿಂದ ಈಗಿನವರೆಗೂ ವಿಜಯ್ ಹಾಗೂ ರಶ್ಮಿಕಾ ಇಬ್ಬರು ಸಹ ಜೊತೆಯಾಗಿದ್ದಾರೆ, ಇವರಿಬ್ಬರ ಹಲವು ಫೋಟೋಗಳನ್ನು ನೋಡಿದರೆ, ರಶ್ಮಿಕಾ ಅವರು ವಿಜಯ್ ದೇವರಕೊಂಡ ಮನೆಯಲ್ಲೇ ಹಲವು ಸಾರಿ ಹಬ್ಬಗಳ ಆಚರಣೆ ಮಾಡುವುದು, ವಿದೇಶಕ್ಕೆ ಹಾಲಿಡೇ ಗಾಗಿ ಇಬ್ಬರು ಜೊತೆಯಾಗಿ ಹೋಗುವುದು ಇದೆಲ್ಲವನ್ನು ಜನರು ಗಮನಿಸಿದ್ದಾರೆ. ಅಧಿಕೃತವಾಗಿ ತಮ್ಮ ಪ್ರೀತಿ ಬಗ್ಗೆ ಹೇಳಿ, ಮದುವೆ ಆಗುವುದು ಮಾತ್ರ ಬಾಕಿ ಇದೆ. ಈ ಜೋಡಿ ಯಾವಾಗ ಗುಡ್ ನ್ಯೂಸ್ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ.



