ಬಿಗ್ ಬಾಸ್ ಸೀಸನ್ 9 ಕನ್ನಡ ಈಗಾಗಲೇ ಪ್ರಾರಂಭವಾಗಿದ್ದು, ದಿನೇ ದಿನೇ ಒಂದಲ್ಲ ಒಂದು ವಿಷಯಕ್ಕೆ ದೊಡ್ಮನೆ ಸಾಕಷ್ಟು ಸುದ್ದಿ ಆಗುತ್ತಿದೆ. ನಂಬರ್ ಅಂದ್ರೆ ನಾನು, ನಾನು ಅಂದ್ರೆ ನಂಬರ್ ಎನ್ನುವ ಡೈಲಾಗ್ ಮೂಲಕ ಸಾಕಷ್ಟು ಸುದ್ದಿಯಾಗಿದ್ದ ಆರ್ಯವರ್ಧನ್ ಗುರೂಜಿ ಇದೀಗ ಬಿಗ್ ಬಾಸ್ ಓಟಿಟಿಗೆ ಎಂಟ್ರಿ ಕೊಟ್ಟು ಅಲ್ಲಿನ ಟಾಪ್ ಸ್ಪರ್ಧಿಯಾಗಿ ಬಿಗ್ ಬಾಸ್ ಸೀಸನ್ 9 ಗೆ ಆಯ್ಕೆಯಾಗಿದ್ದು, ಸಂಖ್ಯಾಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದೇನೆ ಎನ್ನುತ್ತಿದ್ದ ಗುರೂಜಿ ಇದೀಗ ವಿಭಿನ್ನ ರೀತಿಯಲ್ಲಿ ಭವಿಷ್ಯ ಹೇಳುತ್ತಿದ್ದಾರೆ ಕೆಲ ವಾರದ ಹಿಂದೆ ಹಲ್ಲು, ತುಟಿ ಹಾಗೂ ಮೂಗು ನೋಡಿ ಭವಿಷ್ಯ ಹೇಳಲು ಆರಂಭಸಿದ ಆರ್ಯವರ್ದನ್ ಗುರೂಜಿ ಇದೀಗ ಮಚ್ಚೆ ನೋಡಿ ಭವಿಷ್ಯ ಹೇಳಲು ಪ್ರಾರಂಭಿಸಿದ್ದಾರೆ. ಇದೀಗ ಕಾವ್ಯಶ್ರೀ ಮುಖದ ಮೇಲಿನ ಮಚ್ಚೆ ನೋಡಿ ಭವಿಷ್ಯ ಹೇಳಲು ಪ್ರಾರಂಭಿಸಿದ್ದಾರೆ.

ಬಿಗ್ ಬಾಸ್ ನಲ್ಲಿ ಅಡುಗೆ ಮನೆ ಟಾಸ್ಕ್ ನಲ್ಲಿ ತನ್ನದೇಯಾದ ಶೈಲಿಯಲ್ಲಿ ಕಾಮಿಡಿ ಮಾಡುವ ಆರ್ಯವರ್ಧನ್ ಗುರೂಜಿ ಕೆಲವೊಮ್ಮೆ ಭವಿಷ್ಯ ಕೂಡ ಹೇಳುವ ಮೂಲಕ ಉತ್ತಮ ಮನೋರಂಜನೆ ನೀಡುತ್ತಿದ್ದಾರೆ. ಕಳೆದ ಬಾರಿ ಅಮೂಲ್ಯ ಗೌಡಗೆ ತುಟಿ ನೋಡಿ ಭವಿಷ್ಯ ನುಡಿದಿರುವ ಆರ್ಯವರ್ಧನ್ ಗುರೂಜಿ ಇದೀಗ ಕಾವ್ಯಶ್ರೀ ಅವರಿಗೆ ಮಚ್ಚೆ ನೋಡಿ ಭವಿಷ್ಯ ಹೇಳುತ್ತಿದ್ದಾರೆ.ಬಿಗ್ ಬಾಸ್ ಹೌಸ್ ನಲ್ಲಿ ಮಚ್ಚೆ ವಿಚಾರವಾಗಿ ಅನೇಕ ಚರ್ಚೆಗಳು ನಡೆದಿದ್ದು ಗುರೂಜಿ ಹಾಗೂ ಕಾವ್ಯಶ್ರೀ ನಡುವೆ ಮಾತುಕತೆ ನಡೆದಿದ್ದು, ನನ್ನ ಮುಖದ ಮೇಲೆ ಮಚ್ಚೆ ಇದೆ ಎನ್ನುವ ವಿಚಾರ ಹೇಳಿದಕ್ಕೆ ನಿಮಗೆ ಲೈಫ್ ನಲ್ಲಿ ತುಂಬಾ ಜನ ಲೈನ್ ಹೊಡೆಯುತ್ತಾರೆ ಎನ್ನುವ ಭವಿಷ್ಯ ನುಡಿಯನ್ನಾಡಿದ್ದಾರೆ.
ಎಷ್ಟು ಜನಕ್ಕಾದರೂ ನೀನು ಬೀಳಬಹುದು ಅಥವಾ ನೀನೆ ತುಂಬಾ ಜನರನ್ನು ಬೀಳಿಸಿಕೊಳ್ಳಬಹುದು ಅದು ನಿನ್ನ ವಯಕ್ತಿಕ ವಿಚಾರ ಎಂದಿದ್ದಾರೆ ಆರ್ಯವರ್ಧನ್ ಗುರೂಜಿ. ಹೌದ ಗುರೂಜಿ ಹಾಗಾದ್ರೆ ನಾನು ಚೆನ್ನಾಗಿರೋರನ್ನ ನೋಡಿ ಮದುವೆಯಾಗುತ್ತೇನೆ ಎಂದು ಕಾವ್ಯಶ್ರೀ ಭವಿಷ್ಯ ನುಡಿದಿದ್ದು, ಗುರೂಜಿಯ ಮಚ್ಚೆ ಭವಿಷ್ಯಕ್ಕೆ ಕಾವ್ಯಶ್ರೀ ಸಂತೋಷದಿಂದ ಪ್ರತಿಕ್ರಿಯಿಸಿದ್ದಾರೆ. ಸದಾ ಓದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ಆರ್ಯವರ್ಧನ್ ಗುರೂಜಿ ಇದೀಗ ಮಚ್ಚೆ ವಿಚಾರವಾಗಿ ಮತ್ತೆ ಮುನ್ನಲೆಗೆ ಬಂದಿದ್ದಾರೆ.
ದಿನೇ ದಿನೇ ಕನ್ನಡ ಬಿಗ್ ಬಾಸ್ ಸೀಸನ್ 9 ನಲ್ಲಿ ತೀವ್ರ ಪೈಪೋಟಿ ಏರ್ಪಡುತ್ತಿದ್ದು, ಸ್ಪರ್ಧಾಳುಗಳು ಸಾಕಷ್ಟು ಉತ್ಸಾಹದಿಂದ ಆಟವಾಡುತ್ತಿದ್ದಾರೆ. ಹಾಗೇ ಈ ಬಾರಿಯ ಟಾಸ್ಕ್ ನಲ್ಲಿ ನಿಧಿ ಶೋಧ ಮಾಡಬೇಕಾದ ಟಾಸ್ಕ್ ಎದುರಾಗಿದ್ದು, ಕಾವ್ಯಶ್ರೀ ಟಾಪ್ 3 ಸ್ಪರ್ಧಾಳುವಾಗಿ ಹೊರ ಹೊಮ್ಮಿದ್ದರು. ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಸಾನಿಯಾ ರೂಪೇಶ್ ಜೋಡಿಯ ಲವ್ವಿ ಡವ್ವಿ ಸಾಕಷ್ಟು ಸದ್ದು ಮಾಡುತ್ತಿದ್ದು, ಅರುಣ್ ಸಾಗರ್ ಉತ್ತಮ ಮನೋರಂಜನೆ ನೀಡಿದರೆ, ಆರ್ಯವರ್ಧನ್ ಗುರೂಜಿಯವರು ವಿಭಿನ್ನ ಶೈಲಿಯಲ್ಲಿ ಭವಿಷ್ಯ ನುಡಿಯುವ ಮೂಲಕ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 9 ನಲ್ಲಿ ಹಿಂದಿನ ವಾರ ವಿಚಿತ್ರವಾಗಿ ಫಿಲಂ ರಿವಿವ್ ಕೊಡುತ್ತಿದ್ದ ನವಾಜ್ ಹೊರಬಂದಿದ್ದು, ದಿನೇ ದಿನೇ ಸಾಕಷ್ಟು ಜಗಳ,ಮನೋರಂಜನೆ, ಹಾಸ್ಯ ಜೊತೆ ಜೊತೆಗೆ ಒಂದಿಷ್ಟು ಎಮೋಷನಲ್ ಮೂಮೆಂಟ್ ಗಳಿಗೆ ಕಾರಣವಾಗುತ್ತಿದ್ದು, ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.